Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Category

ಬ್ಲಾಗ್

Sri Swamiji will blog here with a live and current topic. Blog would be either spiritual or general. Pick your interest.

ರಾಜ್ಯದಿಂದ ರಾಮನವರೆಗೆ……….

ಸಲ್ಲದ ಆಸೆಯೊಂದು ಏನೆಲ್ಲ ಅನಾಹುತಗಳನ್ನು ಮಾಡಿಬಿಡಬಹುದು..!
ಸಲ್ಲದ ಆಸೆಯೊಂದು ಮನದಲ್ಲಿ ಮೂಡಿದರೆ, ಆ ವ್ಯಕ್ತಿ…
ಉಂಡ ಮನೆಗೆ ಎರಡೆಣಿಸಬಹುದು..!
ಮಮತೆಯ ಮಾತೆಯ ಮೇಲೆಯೇ ದುಂಡಾವೃತ್ತಿಗೆ ಮುಂದಾಗಬಹುದು..!
ಗೌರವದ ಗುರುವನ್ನೇ ಕೊಲ್ಲಲೆಳೆಸಬಹುದು..!
ರಕ್ಷಿಸಬೇಕಾದ ರಾಜನಾಗಿದ್ದರೂ ಚೋರನಂತೆ, ದರೋಡೆಕೋರನಂತೆ ವರ್ತಿಸಬಹುದು…!
ತಪೋಭೂಮಿಯನ್ನು ರಣಭೂಮಿಯನ್ನಾಗಿಸಬಹುದು..!
ಪ್ರೇಮದ ಗಂಗಾಧಾರೆ ಹರಿಯುವಲ್ಲಿ ದ್ವೇಷದ ವಿಷಜ್ವಾಲೆಯಾಗಿ ಉರಿಯಬಹುದು..!
ತನ್ನವರನ್ನೆಲ್ಲಾ ಸಾಲಾಗಿ ನಿಲ್ಲಿಸಿ ಬಲಿ ಕೊಡಬಹುದು.!!

ಮುನಿಮನದೊಳು ಮಾತಾಗಿ ಮೂಡಿದನೆ ರಾಮ..?!

|| ಹರೇರಾಮ || ಅಮೃತಬಿಂದುವೊಂದು ಸಿಕ್ಕರೂ ತೃಪ್ತರಾಗುವವರು ಹಲವರು.. ಬಿಂದುಲಾಭದ ನಂತರ ಸಿಂಧುವಿಗಾಗಿ ಹುಡುಕುವವರು ಕೆಲವರು.. ನಾರದರೊರೆದ ರಾಮಕಥಾ ಸಂಕ್ಷೇಪವನ್ನು ಕಿವಿದೆರೆದು ಕೇಳಿದ ವಾಲ್ಮೀಕಿಗಳು, ಅದರ ವಿಸ್ತಾರವನ್ನು ಕಣ್ಮುಚ್ಚಿ ಹುಡುಕತೊಡಗಿದರು.. ಅತ್ಮೋದ್ಧಾರಕ್ಕೆ ಬಿಂದು ಸಾಕು..ಜಗದುದ್ಧಾರಕ್ಕೆ ಸಿಂಧುವೇ ಬೇಕಲ್ಲವೇ..? ಕಣ್ಮುಚ್ಚಿ ಹುಡುಕಿದರೆಂದೆವಲ್ಲವೇ..? ನಿಜದ ನಿಜವಾದ ರಾಜಧಾನಿ ನಮ್ಮ ಹೃದಯವೇ ಆಗಿರುವಾಗ ಹೊರಗೆಲ್ಲಿ ಹುಡುಕುವುದು..!? ಇತಿಹಾಸವನ್ನು ಹರಿದ ತಾಳೆಗರಿಗಳಲ್ಲಿಯೋ, ಮುರಿದ… Continue Reading →

ಈ ಪರಿ ನೋಡುವುದೇ…ಪರಿವಾರವ..?

ಬೇಕೇ ಈ ಕೆಲಸ ?

ನಿರಂತರ ಪರಿಭ್ರಮಣ..
ದಿನಕ್ಕೊಂದು ಊರು..
ಹೊತ್ತಿಗೊಂದು ಸೂರು..
ಹತ್ತಾರು ಬಗೆಯ ನೀರು..!
ನಿನ್ನೆ ಇಲ್ಲಿರಲಿಲ್ಲ; ನಾಳೆ ಇನ್ನೆಲ್ಲಿಯೋ?….
ಇಂದು ಬಯಲುಸೀಮೆಯೆಡೆ..ನಾಳೆ ಮಲೆನಾಡ ಕಡೆ.
ಇಂದು ಆಗಸ ಹರಿದು ಬೀಳುವಂತೆ ಮಳೆ..ನಾಳೆ ಮೈಯೆಲ್ಲ ಬೆವರ ಹೊಳೆ..

ಮಾನವನ ಮೊದಲ ಬೇಕುಗಳು ಊಟ-ನಿದ್ರೆಗಳು..

ಊಟವೋ ಅದೃಷ್ಟದಾಟ..!
ಒಮ್ಮೊಮ್ಮೆ ಇಲ್ಲವೇ ಇಲ್ಲ..
ಇದ್ದರೂ ಬೇಕಾದಷ್ಟು ಇಲ್ಲದಿರಬಹುದು..
ಬೇಕಾದ ಬಗೆಯಲ್ಲಿ ಇಲ್ಲದಿರಬಹುದು..
ಇದ್ದರೂ ಪ್ರೀತಿಪೂರ್ವಕವಲ್ಲದಿರಬಹುದು..
ತಲುಪುವಾಗ ತಿನ್ನಲು ಸಮಯವೇ ಇಲ್ಲದಿರಬಹುದು..
ಇಂದು ಸೊಗಸಿಲ್ಲದ ಸಪ್ಪೆ..ನಾಳೆ ಕಿವಿಯಲ್ಲಿ ಹೊಗೆಯೇಳುವ ಖಾರ..!

ಕಾವ್ಯ-ಸೃಷ್ಟಿಕರ್ತಾ..!

ಮಹಾಕಾವ್ಯವೊಂದರ ಸೃಷ್ಟಿಗೆ ನಾಂದಿ ಹಾಡಲು ಸೃಷ್ಟಿಕರ್ತನೇ ಆಗಮಿಸಬೇಕಲ್ಲವೇ…!
ಸೃಷ್ಟಿಯ ಕಾರಕ ಶಕ್ತಿಯೇ ಕಣ್ಣೆದುರು ಬಂದು ನಿಂತಾಗ,ಕ್ಷಣಕಾಲ ಮುನಿಗೆ ಮಾತೇ ನಿಂತಿತು..ವಿಸ್ಮಯ ಮುಸುಕಿತು..!
ಮೈವೆತ್ತ ಸೃಷ್ಟಿಯನ್ನು ಮನಸಾರೆ ಭಾವಿಸಿದರು..ಪೂಜಿಸಿದರು..ವಂದಿಸಿದರು ವಾಲ್ಮೀಕಿಗಳು..ಬಳಿಕ ಬ್ರಹ್ಮನ ಆಣತಿಯಂತೆ ಬಳಿಯಲ್ಲಿಯೇ ಉಪವಿಷ್ಟರಾದರು.

ಕಾವ್ಯಸೃಷ್ಟಿಗೆ ಮೊದಲು ಸೃಷ್ಟಿಪೂಜೆ…!

ಮಡಿಲ ಮಮತೆಗೆ ಮುಡಿ ಸಮರ್ಪಿತ…

ವಿಶ್ವಕುಟುಂಬಿಯ ಕುಟುಂಬದಲ್ಲಿಯೇ ಏರ್ಪಟ್ಟಿತು ಕೋಲಾಹಲ..
ಒಂದೇ ಚಕ್ರದ ರಥ ಚಲಿಸುವದಾದರೂ ಹೇಗೆ…?
ಒಂದೇ ರೆಕ್ಕೆಯ ಹಕ್ಕಿ ಹಾರುವದಾದರೂ ಹೇಗೆ..?
ಹಂಚಿಕೊಂಡಾಗ ದು:ಖ ಅರ್ಧವಾಗುವದು.. ಸುಖ ಇಮ್ಮಡಿಸುವದು..
ಸುಖ- ದು:ಖ ಸಮಭಾಗಿನಿಯೇ ದೂರಸರಿದರೆ ಬದುಕಿನಲ್ಲಿ ರಸವೆಲ್ಲಿ..?
ಲಕ್ಷ್ಮೀಯಿಲ್ಲದ ವೈಕುಂಠ ಲಕ್ಷ್ಮೀರಮಣನಿಗೆ ಸಪ್ಪೆ ಯೆನಿಸಿತು.. ಶೂನ್ಯವೆನಿಸಿತು…!!
ಲಕ್ಷ್ಮಿಯಿರುವ ಭೂಮಿಯೇ ಆಪ್ಯಾಯಮಾನವೆನಿಸಿತು…!

ಮಾ ನಿಷಾದ…

ಸುಡುವ ಸೂರ್ಯನ ಝಳಕ್ಕೆ ಹಿಮಾಲಯವು ಕರಗಿ ಗಂಗೆಯಾಗಿ ಹರಿವಂತೆ..
ಧರೆಯ ಧಗೆಗೆ ಮೋಡ ಕರಗಿ ಮಳೆಯಾಗಿ ಇಳಿಯುವಂತೆ..
ಪಕ್ಷಿಯ ಪರಿತಾಪದ ಬಿಸಿಗೆ ಕರಗಿತು ಮುನಿಮನವೆಂಬ ಹಿಮಾಲಯ..ಹರಿಯಿತು ಕಾವ್ಯಗಂಗೆಯಾಗಿ…!
ವಾಲ್ಮೀಕಿಗಳೊಳಗೆ ಹಕ್ಕಿಗಳ ಹರುಷದಿಂದಾಗಿ ಹುಟ್ಟಿಕೊಂಡಿದ್ದ ನಾಕವು ಶೋಕವಾಗಿ ಪರಿವರ್ತಿತವಾದರೆ-
ಶೋಕವು ಶ್ಲೋಕದಲ್ಲಿ ಪರ್ಯವಸಾನಗೊಂಡಿತು…!

ನೆಗಡಿಯೆನಿಸಿದರೆ ಮೂಗು ಕೊಯ್ದುಕೊಳ್ಳಬೇಕೆ…!?

||ಹರೇರಾಮ || ಗಿಡವ ತಿದ್ದಲಿಕೆಂದು ಬುಡವ ಕೀಳ್ವುದು ಸರಿಯೆ….? ಅಸಂಖ್ಯಾತ ಸಮಯದಿಂದ ನಡೆದುಬಂದ ಸನಾತನ ವ್ಯವಸ್ಥೆಯಲ್ಲಿ ವ್ಯಕ್ತಿಗಳ ದೋಷದಿಂದಲೋ, ವ್ಯವಸ್ಠೆಯ ದೋಷದಿಂದಲೋ, ಅಥವಾ ನಮ್ಮ ದೃಷ್ಟಿದೋಷದಿಂದಲೋ, ಏರುಪೇರುಗಳಿವೆಯೆಂದೆನಿಸಿದರೆ.. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಪರಕೀಯ ವ್ಯವಸ್ಥೆ ಸೊಬಗೆನಿಸಿದರೆ.. ಆಗ ಮಾಡಬೇಕಾದುದೇನು…? ಎಂದೆಂದೂ ತನ್ನದಾದುದನ್ನು ತನ್ನದಲ್ಲವೆಂದು ಹೇಳಿ, ಇಂದಿನವರೆಗೆ ತನ್ನದಲ್ಲದುದನ್ನು ತನ್ನದೆನ್ನುವುದೆ..!? ಇಂದಿನಿಂದ ಮತಾಂತರದ ಬಗ್ಗೆ ಚರ್ಚಿಸೋಣ….. Continue Reading →

ಅಂಬೊಂದು….ಹಕ್ಕಿಯೆರಡು…!

ಪರಸ್ಪರರನ್ನು ನೋಡಿ ನಲಿಯುವ ಜೋಡಿಹಕ್ಕಿಗಳು..!
ಹಕ್ಕಿಗಳ ಜೋಡಿಯನ್ನು ನೋಡಿ ಆನಂದಿಸುವ ವಾಲ್ಮೀಕಿಗಳು..!
ಹಿನ್ನೆಲೆಯಲ್ಲಿ ಹರಿಯುವ ಹೊಳೆ..
ಹೊಳೆ-ಹೊಳೆಯುವ ಹಸಿರಿನ ಸೃಷ್ಟಿ..!
ಸುಂದರ ಸೃಷ್ಟಿಯನ್ನು ಸಂಧಿಸುವ ನಿರ್ಮಲ ದೃಷ್ಟಿ…!

ಇದು ಹೀಗೇ ಇರದು..!!

ರಾಜಧಾನಿಯ ರಾಜಮಾರ್ಗದಲ್ಲಿ, ಸಾವಿರಾರು ಜನರ ಸಂಭ್ರಮದ ಮಧ್ಯೆ ಗೆಲುವಿನ ಹೆಮ್ಮೆಯ ಹಮ್ಮಿನಲ್ಲಿ ಬೀಗುತ್ತಾ,
ಪಟ್ಟದಾನೆಯ ಮೇಲೆ ಕುಳಿತು ಸಿಂಹಾಸನದ ಕಡೆಗೆ ರಾಜ ಸಾಗುತ್ತಿದ್ದಾಗ..
ಇದ್ದಕ್ಕಿದ್ದಂತೆ ಮುದ್ರೆಯುಂಗುರ ಮತ್ತೊಮ್ಮೆ ಮಿಂಚಿತು..!

ಕಣ್ಣು ಕೋರೈಸುವ ಆ ಮಿಂಚಿನ ಬೆಳಕಿನಲ್ಲಿ ಮತ್ತೆಲ್ಲವೂ ಮರೆಯಾದವು.
ರಾಜ್ಯ-ರಾಜಧಾನಿ-ರಾಜಮಾರ್ಗಗಳು,
ಜನಗಳು-ಜಯಕಾರಗಳು,
ಆನೆ-ಅಂಬಾರಿಗಳು,
ಅರಮನೆ-ಸಿಂಹಾಸನಗಳು..
ಇವುಗಳೆಲ್ಲವೂ ಕರಗಿ…ಅಲ್ಲಿ
ಹಿಮಾಲಯದ ಗಾತ್ರದ ಅಕ್ಷರಗಳಲ್ಲಿ ಆ ಮೂರು ಪದಗಳು ಗೋಚರಿಸಿದವು…!!

“ಇದು ಹೀಗೇ ಇರದು”

ಸಿಂಧು ಕಾಣಾ..ಬಿಂದುವಿನೊಳು..!! – ಭಾಗ 2

ದೊಡ್ಡ ವರವನ್ನು ಕೊಡುವಾಗ ಸಣ್ಣ ಸೇವೆಯನ್ನಾದರೂ ಮಾಡಿಸದಿದ್ದರೆ ಕರ್ಮದ ಮರ್ಮವು ಮನಸಿಗೆ ಬರುವುದಾದರೂ ಹೇಗೆ…?

ಅಣ್ಣನಿಂದ ಅಪಹರಿಸಲ್ಪಟ್ಟಿದ್ದ ಅರಸಿಯನ್ನೂ, ಅರಸೊತ್ತಿಗೆಯನ್ನೂ ಸುಗ್ರೀವನಿಗೆ ಮರಳಿ ಕೊಡಿಸಿದ ರಾಮ, ಅವನಿಂದ ಅಪೇಕ್ಷಿಸಿದ್ದು ಸೀತಾನ್ವೇಷಣೆಯ ಸೇವೆಯನ್ನು…!

ತನ್ನ ಮದುವೆಗೆ ಮುನ್ನ ಅಹಲ್ಯಾ-ಗೌತಮರ ಮುರಿದ ಮದುವೆಯನ್ನು ಕೂಡಿಸುವಾಗ….

ಅಪಹೃತಳಾದ ತನ್ನ ಸತಿಯನ್ನು ಮರಳಿ ಪಡೆಯುವ ಮುನ್ನ ಸುಗ್ರೀವನಿಗೆ ಅವನ ಪತ್ನಿಯನ್ನು ಕೊಡಿಸುವಾಗ…

ಅಯೋಧ್ಯೆಯ ಚಕ್ರವರ್ತಿಸಿಂಹಾಸನದಲ್ಲಿ ತಾನು ಮಂಡಿಸುವ ಮುನ್ನ

ಕಿಷ್ಕಿಂಧೆಯ ಸಿಂಹಾಸನದಲ್ಲಿ ಸುಗ್ರೀವನನ್ನೂ…. ಲಂಕೆಯ ಸಿಂಹಾಸನದಲ್ಲಿ ವಿಭೀಷಣನನ್ನೂ ಕುಳ್ಳಿರಿಸುವಾಗ….

ಮರ್ಯಾದಾಪುರುಷೋತ್ತಮ ನಮಗಿತ್ತ “ಉಣಬಡಿಸಿ ಉಣ್ಣು” ಎಂಬ ಸಂದೇಶವನ್ನು ನಾವರಿಯಬೇಕಲ್ಲವೇ….!?

© 2017 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin