Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Category

ಬ್ಲಾಗ್

Sri Swamiji will blog here with a live and current topic. Blog would be either spiritual or general. Pick your interest.

ನಕಲಿಯುಗ..!!!

ಈ ಯುಗದಲ್ಲಿ ವಸ್ತುಗಳು ನಕಲಿ..!
ವ್ಯಕ್ತಿಗಳು ನಕಲಿ..!
ನಗುನಕಲಿ-ಅಳುನಕಲಿ..!
ಮಗುನಕಲಿ-ಮಾತೆಯೂ ನಕಲಿ..!
ಗುರುಗಳು ನಕಲಿ..!
ದೇವರೂ ನಕಲಿ..!
ನಕಲಿಯ ಕಲಿಕೆಯಲ್ಲಿಯೇ ಮಗ್ನವಾದ,
ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವ,
ನಿತ್ಯ ನಟನೆಯನ್ನೇ ಬದುಕಿನ ಸಹಜತೆಯಾಗಿಸಿಕೊಂಡ,
ಸಮಾಜದ ಸಂತುಲನವನ್ನೇ ಸಂಹರಿಸಿಬಿಡುವ ಕ್ಲೋನಿಂಗ್ ನಂಥಾ ಸಂಶೋಧನೆಗಳಿಗೆ ಪ್ರೋತ್ಸಾಹವಿರುವ ಈ ಯುಗವನ್ನು
ಕಲಿಯುಗವೆನ್ನುವುದಕ್ಕಿಂತ ನಕಲಿಯುಗವೆನ್ನುವುದೇ ಸರಿಯಲ್ಲವೇ..?

ರಾಮಬಾಣ:- ಸತ್ಯಮೇವ ಜಯತೇ ; ನ ಅನೃತಮ್ ||

ಕಥೆಯೊಂದ ಹೇಳುವೆನು..!

ಮಾನವತೆಯ ಇತಿಹಾಸದಲ್ಲಿ ಆಗೊಮ್ಮೆ – ಈಗೊಮ್ಮೆ, ಅಲ್ಲೊಂದು – ಇಲ್ಲೊಂದು ಎಂಬಂತೆ ಕಾಣಸಿಗುವ ಉತ್ತಮೋತ್ತಮವಾದ ಕೆಲವು ಗುಣಗಳನ್ನ ಉಲ್ಲೇಖಿಸಿ ವಾಲ್ಮೀಕಿಗಳು ನಾರದರಿಗೆ ಹೇಳಿದರು.. ಏತದಿಚ್ಛಾಮ್ಯಹಂ ಶ್ರೋತಮ್ ..| “ಅನಂತ ಜೀವರಾಶಿಗಳ ಅನಂತ ವಸ್ತುರಾಶಿಗಳ ಅನಂತ ಘಟನಾವಳಿಗಳ ಈ ಜಗದಲ್ಲಿ ನಾನು ಕೇಳಬಯಸುವುದು ಇದೊಂದೇ ಒಂದು..! ಪರಂ ಕೌತೂಹಲಂ ಹಿ ಮೇ…. || ಸಂಸಾರದಲ್ಲಿ ನಿರಾಸಕ್ತನಾದ, ನಿಸ್ಸಂಗನಾದ… Continue Reading →

ಷೋಡಶ ಕಲಾಪರಿಪೂರ್ಣ..!

ವಾಲ್ಮೀಕಿಗಳ ಪ್ರಶ್ನೆ:-

1. ಕೆಲವು ಗುಣಗಳಿರುವ ಹಲವರಿರಬಹುದು…

ಹಲವು ಗುಣಗಳಿರುವ ಕೆಲವರಿರಬಹುದು…

ಆದರೆ ಎಲ್ಲಾ ಸದ್ಗುಣಗಳನ್ನೂ ಹೊಂದಿ ಗುಣಸಾಗರ ನೆನಿಸುವ ಒಬ್ಬ ವ್ಯಕ್ತಿ ಇಂದು ಇದೇ ಲೋಕದಲ್ಲಿ ಕಾಣಸಿಗಬಹುದೇ?

2. ಆತ ಗುಣವಂತನಾದರೆ ಸಾಲದು, ಜಗದ ವೀರಾಧಿವೀರರನ್ನೆಲ್ಲಾ ಮಣಿಸಬಲ್ಲ ಮಹಾವೀರ ನಾಗಿರಬೇಕು.

3. ವಿವೇಚನೆ ಇಲ್ಲದ ವೀರತ್ವ ರಾಕ್ಷಸತ್ವದಲ್ಲಿ ಪರ್ಯಾವಸಾನಗೊಳ್ಳುತ್ತದೆ.

ಆದುದರಿಂದ ಆತ ವೀರನಾದರೆ ಸಾಲದು.

ಧರ್ಮದ ಮರ್ಮವನ್ನರಿತು ತನ್ನ ವೀರತೆಯನ್ನು ಪ್ರಕಟಿಸುವವನಾಗಿರಬೇಕು.

4. ಆತ ಕೃತಜ್ಞನೂ ಆಗಿರಬೇಕು.

ಜೀವಿಯೊಬ್ಬನಿಗೆ ಏನೂ ಲಭಿಸಿದರೂ, ಅದು ಪ್ರಕೃತಿಯಿಂದಲೇ ಲಭಿಸಬೇಕು.

ನಮ್ಮೊಡನೆ ಧರೆಯಲ್ಲಿ ಬದುಕುವ ಇತರ ಜೀವಿಗಳ ಸಹಕಾರ ಅಲ್ಲಿ ಇದ್ದಿರಲೇಬೇಕು.

ದೇವ ದೇವನ ಕರುಣೆಯ ಕರವಂತೂ ಎಲ್ಲಕ್ಕಿಂತ ಮೊದಲು ಇರಲೇಬೇಕು.

ಇವೆಲ್ಲವನ್ನೂ ಮರೆತು ಬದುಕುವವನ ಬದುಕಿಗೆ ಅರ್ಥವೇ ಇಲ್ಲ..!

ರಾಮಾಯಣದ ಸಿದ್ಧತೆಯೆಂದರೆ………………

ಹುಳಿಪಾತ್ರದಲ್ಲಿಟ್ಟ ಹಾಲು ಹಾಳೆನಿಸಿದರೆ…
ಮೆಣಸಿನ ಪಾತ್ರದಲ್ಲಿಟ್ಟ ಹಾಲು ಖಾರವೆನಿಸಿದರೆ…
ಅದು ಹಾಲಿನ ತಪ್ಪಲ್ಲ…!
ಹಾಗೆಯೇ ಪೂರ್ವಾಗ್ರಹಗಳಿಂದ ಕಲುಷಿತವಾದ ನಮ್ಮ ಮನಸ್ಸಿಗೆ ರಾಮಾಯಣ ಏನೇನೋ ಆಗಿ ತೋರಿದರೆ…
ಅದು ರಾಮಾಯಣದ ತಪ್ಪಲ್ಲ…!
ಶುಚಿಯಲ್ಲದ ಕಣ್ಮನಗಳಿಂದ ರಾಮಾಯಣವನ್ನು ನೋಡಿದ್ದೇ ಅದರ ಹಲವು ಬಗೆಯ ಅಪಾರ್ಥ,ಅಪವ್ಯಾಖ್ಯಾನ,ಅಪಪ್ರಚಾರಗಳಿಗೆ ಕಾರಣವಾಯಿತು..!

ರಾಮಾಯಣವಿದು ರತ್ನಾಕರ…!

ಇತ್ತ…

ಕಡಲ ಒಡಲಲ್ಲಿ ಬಾಯ್ದೆರೆದು ಕಾಯುವುದು ಕಪ್ಪೆ ಚಿಪ್ಪು ಸ್ವಾತಿ ಮಳೆ ಹನಿಯನ್ನು…

ಅತ್ತ…

ಮೋಡದ ಮಡಿಲಿನಿಂದ ಧರೆಗೆ ಧುಮ್ಮಿಕ್ಕುವ ಸ್ವಾತಿ ಮಳೆ ಹನಿ ಹುಡುಕಿಯೇ ಹುಡುಕುವುದು ತನಗಾಗಿ ಮಿಡುಕುವ ಕಪ್ಪೆಚಿಪ್ಪನ್ನು …

ಸ್ವಾತಿಯದಲ್ಲದೆ ಬೇರಾವ ಮಳೆಹನಿ ಕಪ್ಪೆ ಚಿಪ್ಪಿನೊಳ ಹೊಕ್ಕರೂ ಅದು ಕೇವಲ ನೀರು… ನೀರು…

ಸ್ವಾತಿ ಮಳೆಹನಿಯೇ ಆದರೂ ಕಪ್ಪೆ ಚಿಪ್ಪೊಳಗಲ್ಲದೆ ಬೇರೆಲ್ಲಿ ಬಿದ್ದರೂ ಅದು ಕೇವಲ ನೀರು … ನೀರು…

ಕಪ್ಪೆಚಿಪ್ಪಿನ ಹೃದಯಗರ್ಭದೊಳಸೇರಬೇಕು ಸ್ವಾತಿಯ ಜಲಬಿಂದು..

ಅದು ಮುತ್ತಿನ ಅವತಾರ…

ಸ್ವಾತಿ ಮಳೆ ಹನಿಗೆ ಆಗುವುದು ಮುತ್ತಾಗಿ ಪುನರ್ಜನ್ಮ…

ಕಪ್ಪೆ ಚಿಪ್ಪಿನೊಳ ಚೈತನ್ಯದ ಸಂಚಾರ…

ಇದನ್ನು ಹೋಲುವ ಅಪೂರ್ವ ಸಮಾಗಮವೊಂದರ ಫಲವಾಗಿಯೇ ರಾಮಾಯಣವೆಂಬ ಮುತ್ತು ಹುಟ್ಟಿತು…!!

ಕಪ್ಪೆಚಿಪ್ಪಿನ ತೆರದಿ ತೆರೆದ ಮನ ಹೊತ್ತ ವಾಲ್ಮೀಕಿ ಧರೆಯಲ್ಲಿ ಧೀರ್ಘ ಪ್ರತೀಕ್ಷೆಯಲ್ಲಿ ಇರುವಾಗ…

ಸ್ವಾತಿಯ ಸಲಿಲಧಾರೆಯಂತೆ ಮೋಡದ ನಾಡಿನಿಂದ ಇಳಿದು ಬಂದರು ನಾರದರು..!

ಹೆಸರೆಂಬ ಕೆಸರೊಳು..

ಮೊಟ್ಟಮೊದಲಬಾರಿಗೆ ಗಟ್ಟಿ ಗಟ್ಟಿ ಅಕ್ಕಿಯಿಂದ ಮೃದು – ಮೃದುವಾದ, ಮಧುರ – ಮಧುರವಾದ, ರುಚಿ – ರುಚಿಯಾದ ಅನ್ನವನ್ನು ಸಿದ್ಧಪಡಿಸಬಹುದೆಂಬುದನ್ನು ಯಾರು ಕಂಡುಹಿಡಿದರು..?


ಮನವನ್ನು ಮನಗಳೊಂದಿಗೆ ಬೆರೆಸಲು ನೆರವೀಯುವ ಅಕ್ಷರಗಳನ್ನು ಮೊಟ್ಟಮೊದಲು ಕಂಡುಹಿಡಿದವರಾರು..?


ಬೆಣ್ಣೆ- ಬೆಣ್ಣೆಯಂತಹ ಹತ್ತಿಯಿಂದ ಎಳೆ – ಎಳೆಯಾಗಿ ನೂಲೆಳೆದು ಹಾಗೊಂದು – ಹೀಗೊಂದು ನೇಯ್ದು, ಮೈಮರೆಸುವ – ಮೈಮೆರೆಸುವ ಉಡುಗೆ ತೊಡುಗೆಗಳನ್ನು ನಿರ್ಮಿಸಬಹುದೆಂಬುದು ಯಾರ ಅನ್ವೇಷಣೆ..?


ಬಾಯಾರಿದರೆ ಬಾವಿಗಿಳಿಯಬೇಕಾಗಿಲ್ಲ…!

ಕೊಡದ ಕೊರಳಿಗೆ ಕುಣಿಕೆ ತೊಡಿಸಿ ಬಾವಿಗಿಳಿಸಿದರೆ ಅದರೊಳಗೆ ಕುಳಿತು ನೀರೇ ಮೇಲೇರಿ ನಮ್ಮೆಡೆಗೆ ಬರಬಹುದೆಂಬುದನ್ನು ಕಂಡುಹಿಡಿದವನ ಹೆಸರೇನು..?

ಅಕ್ಕಿಯೊಳಗನ್ನವನು ಮೊದಲಾರು ಕಂಡವನು..?|
ಅಕ್ಕರದ ಬರಹಕ್ಕೆ ಮೊದಲಿಗನದಾರು..? ||
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ.. |
ಸಿಕ್ಕುವುದೆ ನಿನಗೆ ಜಸ – ಮಂಕುತಿಮ್ಮ…||

ಬದುಕಿನ ಭವನದ ಮೂಲಾಧಾರಶಿಲೆಗಳನ್ನಿಟ್ಟವರ ಗುರುತೇ ಇಲ್ಲ…!
ಆದರೆ ಹೆಸರಿಗಾಗಿ ಓಟ ಮಾತ್ರ ನಿಂತಿಲ್ಲ..!

ಹೆಸರಿಗಾಗಿ ಉಸಿರುಗಟ್ಟಿ ಓಡುವವರೇ…….!!!!

ಈ ಬ್ರಹ್ಮಾಂಡದಲ್ಲಿ ಅದೆಲ್ಲಿ ಕೆತ್ತಿದರೂ ಶಾಶ್ವತವಾಗಿ ಉಳಿಯದು ನಿಮ್ಮ ಹೆಸರು..!!

ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವು

ಸುತ್ತಲೆಲ್ಲ ಮಲಗಿದ ಹಚ್ಚ ಹಸಿರು, ಬೀಸಿ ಬರುವ ಕಡಲ ಗಾಳಿ, ವಿಶಾಲವಾಗಿ ಹರಡಿದ ಮುರಕಲ್ಲಿನ ಬಯಲು, ಮಧ್ಯೆ ಸರೋವರ, ಪ್ರಶಾಂತ ಪರಿಸರದ ನಡುವೆ ಧಾರ್ಮಿಕ, ಆಧ್ಯಾತ್ಮಿಕ, ಮಾನಸಿಕ ಸಂತಸಗಳನ್ನು ಹೆಚ್ಚಿಸುವ ಮುಜುಂಗಾವು, ಮುಚುಕುಂದ ಮಹರ್ಷಿಯ ತಪೋಭೂಮಿ. ಧರ್ಮ ರಕ್ಷಕನೆಂದೇ ಹೆಸರು ಪಡೆದ ಪಾರ್ಥಸಾರಥಿ ಶ್ರೀಕೃಷ್ಣ ಆರಾಧ್ಯ ಮೂರುತಿಯಾಗಿರುವ ಈ ಭೂಮಿ ದೇವಾಲಯ, ನೇತ್ರಾಲಯ ಮತ್ತು ವಿದ್ಯಾಲಯಗಳ… Continue Reading →

ವಿದ್ಯಾನಿಕೇತನ ಮೂರೂರು- ಕಲ್ಲಬ್ಬೆ

ಶ್ರೀಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್-ಶ್ರೀಸಂಸ್ಥಾನ ಗೋಕರ್ಣ. ಶ್ರೀರಾಮಚಂದ್ರಾಪುರ ಮಠ ವಿದ್ಯಾನಿಕೇತನ ಮೂರೂರು- ಕಲ್ಲಬ್ಬೆ, ಅಂಚೆ: ಮೂರೂರು, ತಾ: ಕುಮಟಾ, ಜಿ: ಉ.ಕ 581343 ದೂ.ನಂ.(08386)268133 ದಿವಂಗತ ಶ್ರೀ ಎಲ್.ಟಿ.ಶರ್ಮ ಮತ್ತು ಡಾ|| ಕೃಷ್ಣ ಭಟ್ಟ ಹಳಕಾರ ಹಾಗೂ ಊರ ನಾಗರಿಕರು ಕೂಡಿ ಕ್ರಿ.ಶ 1958 ರಲ್ಲಿ ವಿದ್ಯಾನಿಕೇತನ ಮೂರೂರು-ಕಲ್ಲಬ್ಬೆ ಶಿಕ್ಷಣ ಸಂಸ್ಥೆ ಸ್ಥಾಪನೆ ಆಯಿತು ಮತ್ತು 1958 ರಲ್ಲಿ ಪ್ರಗತಿ… Continue Reading →

ಸೇರಿದವು ದಿವಿಭುವಿಗಳು . . . !

ಹಗಲ ಮೊದಲು ರಾತ್ರಿಯಿರುವಂತೆ……!
ಹಸಿವು ತೃಪ್ತಿಗೆ ಪೀಠಿಕೆಯಾಗಿರುವಂತೆ….!
ಮುಕ್ತಿಯ ಮೊದಲು ಬಂಧನವಿರುವಂತೆ..!!
ಉತ್ತರವೊಂದು ಉದಯಿಸಬೇಕಾದರೆ ಪೂರ್ವದಲ್ಲಿ ಪ್ರಶ್ನೆಯೊಂದು ಪ್ರಾದುರ್ಭವಿಸಲೇಬೇಕಲ್ಲವೇ..?

ಆದರೆ ಮುನಿಯ ಈ ಪ್ರಶ್ನೆಗೆ ಲಭಿಸಿದ್ದು ಅಂತಿಂಥ ಉತ್ತರವಲ್ಲ…!

ಲೋಕೋತ್ತರವಾದ ರಾಮಾಯಣ…!!!

ಆ ಪ್ರಶ್ನೆಯಲ್ಲಿ ಅದೆಂಥ ಸೆಳೆತವಿತ್ತೋ..?
ಅದಾವ ಮಿಡಿತವಿತ್ತೋ..?
ಅದೇನು ತುಡಿತವಿತ್ತೋ..?
ಉತ್ತರಿಸಲು ದೇವಲೋಕವೇ ಧರೆಗಿಳಿಯಿತು..!!!

ಶ್ರೀಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು

ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಮಹಾಸ್ವಾಮಿಗಳ ದಿವ್ಯ ಸಂಕಲ್ಪದಂತೆ, ಕುಂಬಳೆ ಸಮೀಪದ ಮುಜುಂಗಾವು ಎಂಬಲ್ಲಿ ಮೇ-೬-೨೦೦೪ರಂದು ಒಂದು ಸುಸಜ್ಜಿತ ಕಣ್ಣಿನ ಆಸ್ಪತ್ರೆ ಲೋಕಾರ್ಪಣೆಗೊಂಡಿದೆ. ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ನೇತ್ರ ಚಿಕಿತ್ಸಾ ಸೌಲಭ್ಯ. ಕೇವಲ ದಾನಿಗಳ ಸುಮಾರು ೧ ಕೋಟಿ ರೂಪಾಯಿ ನೆರವಿನಿಂದ ರೂಪುಗೊಂಡಿದೆ. ಸುಮಾರು ೮,೦೦೦ ಚದರ ಅಡಿ ವಿಸ್ತೀರ್ಣದ ಕಟ್ಟಡದೊಳಗೆ ೩೦ ಹಾಸಿಗೆಗಳುಳ್ಳ ಚಿಕಿತ್ಸಾಲಯ,… Continue Reading →

© 2017 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin