LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಅಮ್ಮನ ಮಗುವಿಗೆ – ಅಮ್ಮನ ಕುರಿತು..!!

Author: ; Published On: ರವಿವಾರ, ದಶಂಬರ 13th, 2009;

Switch to language: ಕನ್ನಡ | English | हिंदी         Shortlink:

|| ಹರೇ ರಾಮ ||

ಓ ಅಮ್ಮನ ಮಗುವೇ………..!

mother

ಅಮ್ಮ – ಪ್ರತ್ಯಕ್ಷ ದೇವತೆ

ಪ್ರೀತಿಯ ಪರಾಕಾಷ್ಠೆಯಲ್ಲಿ ಪ್ರೀತಿ ಪಾತ್ರರೊಡನೆ ಒಂದೇ ಎಲೆಯಲ್ಲಿ ಊಟ ಮಾಡಿದ್ದಿರಬಹುದು,
ಆದರೆ ಎಂದಾದರೂ ಒಂದೇ ಬಾಯಲ್ಲಿ ಇಬ್ಬರು ಊಟ ಮಾಡಿದ್ದು೦ಟೇ..?

ನೆನಪಿಸಿಕೋ….
ಬದುಕಿನ ಪುಸ್ತಕದ ಪುಟಗಳನ್ನು ಒಮ್ಮೆ ಹಿಂದೆ ಹಿಂದೆ ತಿರುವಿ ಹಾಕು..
ಹಿಂದು ಹಿಂದಕ್ಕೆ..ಇನ್ನೂ ಹಿಂದಕ್ಕ .. ಶಿಶುತ್ವದವರೆಗೆ..!
ನೆನಪಿನ ವ್ಯಾಪ್ತಿ ಇರುವಷ್ಟು ದೂರವೂ ಹಿಂದಕ್ಕೆ ಹೋಗಿ ನೆನಪಿಸಿಕೋ..
ನೆನಪಾಗಲಿಲ್ಲವೇ..???
ಸರಿ ಬಿಡು, ಬದುಕಿನ ನೆನಪಿರುವ ಭಾಗದಲ್ಲಿರುವ ವಿಷಯವಲ್ಲ ಅದು..!

ಒಮ್ಮೆಯಲ್ಲ, ಒಂದು ದಿನವಲ್ಲ, ಒಂದು ತಿಂಗಳಲ್ಲ, ಒಂಭತ್ತು ತಿಂಗಳ ಕಾಲ ಹೊರ ಜಗತ್ತಿನ ಸಂಪರ್ಕವೇ ನಿನಗಿಲ್ಲದಿದ್ದ ಆ ಸಮಯದಲ್ಲಿ…
ಕಣ್ಣಿದ್ದರೂ ನೋಡಲಾರೆ, ಕಾಲಿದ್ದರೂ ನಡೆಯಲಾರೆ, ಬಾಯಿದ್ದರೂ ಉಣ್ಣಲಾರೆ..
ಹೃದಯದ ಬಡಿತವಿತ್ತು, ನಾಡಿಯ ಮಿಡಿತವಿತ್ತು, ಮತ್ತೇನಿತ್ತು ಹೇಳು ನಿನ್ನಲ್ಲಿ ಅಂದು ..?
ಅಸಹಾಯಕನಾಗಿ ಜೀವಚ್ಛವದಂತೆ ಅಂಧಕಾರದಲ್ಲಿ ಮಲಗಿದ್ದೆ ಅಲ್ಲವೇ ಒಂಭತ್ತು ತಿಂಗಳ ಕಾಲ..?
ಅಂದು ಅಮ್ಮ ತನ್ನ ಬಾಯಿಯಿಂದ ನಿನಗೆ ಉಣಬಡಿಸಲಿಲ್ಲವೇ ..?
ತನ್ನ ಉಸಿರಲ್ಲಿ ನಿನಗೆ ಪಾಲು ಕೊಡಲಿಲ್ಲವೇ..?
ಊಟ ಮಾಡಲು ಒಂದೇ ಬಾಯಿ,
ಉಸಿರಾಡಲು ಒಂದೇ ಮೂಗು,
ಅಮ್ಮನಿಗೂ ನಿನಗೂ ಇದೆಂಥಾ ಅದ್ವೈತ..!!!!!

ಉಣ್ಣುವ ಅನ್ನದಲ್ಲಿ ಪಾಲು ಕೊಡುವವರಿರಬಹುದು,
ಉಂಡ ಊಟದಲ್ಲಿ ಪಾಲು ಕೊಟ್ಟವರುಂಟೇ ?
ಉಸಿರಿನಲ್ಲಿ ಪಾಲು ಕೊಟ್ಟವರುಂಟೇ ..?
ರಕ್ತ ಮಾಂಸಗಳನ್ನು ಹಂಚಿಕೊ೦ಡವರು೦ಟೇ..??
ಅಮ್ಮ ಉಸಿರಾಡಿದರೆ ನಿನಗೆ ಬದುಕು, ಅಮ್ಮನು೦ಡರೆ ನಿನಗೆ ತೃಪ್ತಿ..!
ಸಾಟಿಯಿಲ್ಲದ ಸಂಬಂಧವಲ್ಲವೇ..?

ನಿನ್ನಬಳಿ ಇಂದು ಬಂಗಲೆಗಳಿರಬಹುದು,
ಆದರೆ ಅಂದು ಅಮ್ಮನ ಒಡಲೇ ನಿನಗೆ ಮನೆಯಾಗಿತ್ತು..
ಇಂದು ನಿನ್ನ ಬಳಿ ವಾತಾನುಕೂಲಿತ(air conditioned) ಕೊಠಡಿಗಳಿರಬಹುದು,
ಆ ಒಂಭತ್ತು ತಿಂಗಳ ಮನೆ ವಾತಾನುಕೂಲಿತವಷ್ಟೇ ಅಲ್ಲ,  ಸರ್ವಾನುಕೂಲಿತವಿತ್ತಲ್ಲವೇ..?
ಅಲ್ಲಿಯ ಸೌಕರ್ಯಗಳು ಮತ್ತೆಲ್ಲಿಯೂ ಸಿಗಲಾರವು..!

ಅಂದು ನಿನ್ನಲ್ಲಿ ಉಸಿರಾಡುವ, ಉಣ್ಣುವ ಶಕ್ತಿಯು ಇಲ್ಲದಿದ್ದಾಗ ಅಮ್ಮ ತನ್ನ ಒಡಲಲ್ಲಿಟ್ಟುಕೊಂಡು ನಿನ್ನನ್ನು ಬೆಳಸಿದಳು,
ಮತ್ತೆ ಆ ಶಕ್ತಿ ನೀಡಿ ನಿನ್ನನ್ನು ಭುವಿಗಿಳಿಸಿದಳು ..
ಅಂದು ಆಕೆ ನಿನಗಾಗಿ ಅನುಭವಿಸಿದ ವೇದನೆ ಎಷ್ಟೆಂದು ಗೊತ್ತೇ..??

ಉಪನಿಷತ್ತುಗಳು ಬಣ್ಣಿಸುತ್ತವೆ “ಗರ್ಭದಲ್ಲಿರುವಾಗ ಶಿಶುವಿಗೆ ಪರಮಾತ್ಮದರ್ಶನವಾಗುವುದೆಂದು”. ಅದೆಷ್ಟು ಪವಿತ್ರವಿರಬೇಕು ಅಮ್ಮನ ಗರ್ಭ..!!
ಕಾಶಿ ಕೈಲಾಸಗಳಿಗೆ ಅದೇನು ಕಡಿಮೆ ಹೇಳು..?  (ಕಾಶಿ ಕೈಲಾಸಗಳಲ್ಲಿ ದೇವರ ಸಾಕ್ಷಾತ್ಕಾರವಾಗದಿರಬಹುದು, ಆದರೆ ಅಮ್ಮನ ಗರ್ಭದಲ್ಲಿ…?)
ಬದುಕಿಗೆ ಬೆಳಕು ಕೊಟ್ಟವಳು..
ಅವಳು ನಿನ್ನನ್ನು ತನ್ನೊಳಗಿಟ್ಟುಕೊಂಡು ಪರಮಾತ್ಮ ಜ್ಯೋತಿಯನ್ನು ತೋರಿಸಿದಳು,
ಮಾತ್ರವಲ್ಲ ಮತ್ತೆ ಹೊರತಂದು ಈ ಭುವಿಯ ಬೆಳಕು ತೋರಿಸಿದಳು..

ನೆನಪಿದೆಯೇ..ನೀನು ಈ ಜಗಕೆ ಬಂದ ಮೇಲೆ ಮಾಡಿದ ಮೊದಲ ಊಟ ??
ಅಮ್ಮನಿತ್ತ ಅಮೃತ ದ್ರವ ?
ಅದನ್ನು ಸಿದ್ದಪಡಿಸುವಾಗ ಅಮ್ಮ ತನ್ನ ಒಡಲನ್ನೇ ಅಡುಗೆ ಮನೆಯಾಗಿ ಮಾಡಿಕೊಂಡಿದ್ದಳು, ಮತ್ತೆ ತನ್ನ ಹೃದಯದಿಂದ ವಾತ್ಸಲ್ಯ ಧಾರೆಯಾಗಿ ನಿನ್ನೆಡೆಗೆ ಹರಿಸಿದಳು..
ನಿನ್ನ ಹಲ್ಲಿಲ್ಲದ ಬಾಯಿಗೆ ಶ್ರಮವಾಗದಂತೆ..
ಎಳೆಯ ಒಡಲಿಗೆ ಭಾರವಾಗದಂತೆ..
ಎಲ್ಲಿಲ್ಲದ ಮಧುರತೆ….!!
ಎಲ್ಲಬಗೆಯ ಪೌಷ್ಟಿಕಾಂಶ..!!

ಜಗತ್ತಿನ ಎಲ್ಲಾ ಬಾಣಸಿಗರು ಸೇರಿದರೂ ನೀನುಣುವ ಊಟಕ್ಕೆ ಆ ಸ್ವಾದವನ್ನು ತರಲಾರರು..
ಜಗತ್ತಿನ ಎಲ್ಲಾ ವೈದ್ಯರು ಜೊತೆಗೂಡಿದರೂ ಅಮ್ಮನಿತ್ತ ಮೊದಲೂಟದ ಪೌಷ್ಟಿಕತೆಯನ್ನು ತಂದು ಕೊಡಲಾರರು..!
ಇಂದು ನೀನು ಬೆಳ್ಳಿಯ ತಾಟು, ಬಂಗಾರದ ಸೌಟುಗಳನ್ನು ಕಂಡಿರಬಹುದು,
ಔತಣಕೂಟಗಳಲ್ಲಿ ಸಾವಿರಾರು ಬಾರಿ ಪಂಚಭಕ್ಷ್ಯ ಪರಮಾನ್ನಗಳನ್ನು ಉಂಡಿರಬಹುದು..
ಆದರೆ ಬದುಕಿನ ಪ್ರಥಮಚರಣದಲ್ಲಿ ಅಮ್ಮನಿತ್ತ ಅಮೃತ ದ್ರವದ ಶ್ರೇಷ್ಠತೆಯಾಗಲಿ,  ಪ್ರೇಮದ ಆ ಪರಾಕಾಷ್ಠೆಯಾಗಲಿ, ಎಲ್ಲಾದರೂ, ಎಂದಾದರೂ ಮತ್ತೊಮ್ಮೆ ಸಿಕ್ಕಿತೇ..?
ಬದುಕಿನ ಮೊದಮೊದಲೇ ಸಿಗುವ, ಮತ್ತೆಂದೂ ಸಿಗದ ಸೌಭಾಗ್ಯವದು..!

ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ” ಈ ಗಾದೆಮಾತನ್ನೊಮ್ಮೆ ಗಾಢವಾಗಿ ಚಿಂತಿಸು!
ಯಾವ ಇಬ್ಬರಲ್ಲಿ ಬಂಧವಿದೆಯೋ ಅವರು ಬಂಧುಗಳು
.ನಿಜವಾದ ಬಂಧುವೆಂದರೆ ತಾಯಿಯೇ ಸರಿ..!
ಜಗತ್ತಿನ ಇತರ ಸಂಬಂಧಗಳೆಲ್ಲ ಭಾವಾತ್ಮಕ..!
ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಬಹುದು, ಮಾತುಗಳಲ್ಲಿ ಆಡಬಹುದು, ಆದರೆ ಬರಿಗಣ್ಣಿನಿಂದ ನೋಡಲಾಗದು – ಎನ್ನುವರೀತಿಯವು.
ಆದರೆ, ನಿನ್ನ ಮತ್ತು ಅಮ್ಮನದ್ದು ಬೇರೆಯೇ ರೀತಿಯದ್ದು, ಅದು ಕಣ್ಣಿಗೆ ಕಾಣುವ ಕರುಳಬಳ್ಳಿಯ ಸಂಬಂಧ..!
ಅಂಥ ಸಂಬಂಧ ಒಂದು ಜನ್ಮಕ್ಕೆ ಒಂದೇ ಸರಿ..!
ಅತ್ಯಂತ ಅಸಹಾಯಕ ಸ್ಥಿತಿಗಳಲ್ಲಿ ಜೀವಸೆಲೆ ಅಮ್ಮನಿಂದ ನಿನ್ನೆಡೆಗ ಹರಿದು ಬರುವುದು ಕರುಳ ಬಳ್ಳಿಯೆಂಬ ಅಮೃತ ಸೇತುವಿನಿಂದಲ್ಲವೇ..!?

ಅಬ್ಬಾ….!!
ಕರುಳಬಳ್ಳಿಯೆಂಬ ಪರಮಾಶ್ಚರ್ಯವೇ! ಬರಿಗಣ್ಣಿಗೇ ಕಾಣುವ, ಭಾವಿಸಿದಷ್ಟೂ ಮುಗಿಯದ, ಜೀವ-ಜೀವಗಳ ನಡುವಿನ ಇಂಥದ್ದೊಂದು ಬೆಸುಗೆ ಬೇರೆಲ್ಲಿ ಕಾಣಲು ಸಾಧ್ಯ?
ಹೇಗೆ ತಾನೇ ಕತ್ತರಿಸುವರೋ…..?
ಕಲ್ಲು ಮನಸ್ಸೇ!!!
ದೇವರು ದೊಡ್ಡವನು, ನಾಭಿಯೊಂದು ಉಳಿದಿದೆ ನಮ್ಮ ಶರೀರದಲ್ಲಿ.  ನಾಭಿ ಇರುವವರೆಗೂ ನೀನು ಮರೆಯಬಾರದ ಸಂಬಂದ ಅದು.
ನೀನು ಹುಟ್ಟುವಾಗಲೇ ಇರುವ – ಅಷ್ಟೇ ಏಕೆ, ಅದಕ್ಕಿಂತ ಮೊದಲೇ ಇದ್ದ ಸಂಬಂಧವಿದು.

ಅದೇ ಬದುಕಿನ ಆದಿ ಸಂಬಂಧ.
ಮತ್ತೆಲ್ಲರೂ ಅಮ್ಮನ ಮುಖಾಂತರವೇ ಸಂಬಂಧಿಗಳು..!

ಈ ಜಗತ್ತಿನಲ್ಲಿ ಅದೆಷ್ಟೋ ಬಗೆಯ ಮೃದು ಮೃದುವಾದ – ಹಂಸತೂಲಿಕಾ ತಲ್ಪಗಳಿರಬಹುದು, ಆದರೆ ಅಮ್ಮನ ಮಡಿಲಿನ ಮಾರ್ದವಕ್ಕೆ ಅವು ಯಾವವೂ ಸಾಟಿಯಲ್ಲ..!!
ಭೌತಿಕ ಮಾರ್ದವಕ್ಕಿಂತ ಭಾವದ ಮಾರ್ದವ ಹಿರಿದಲ್ಲವೇ..?
ನಿರ್ಜೀವ ಮಾರ್ದವಕ್ಕಿಂತ ಚೈತನ್ಯಮಯವಾದ ಮಾರ್ದವ ಜೀವಕ್ಕೆ ಹೆಚ್ಚು ಹಿತವಲ್ಲವೇ..?

ವಿಶ್ವದಲ್ಲಿ ದೊಡ್ಡವರೆನಿಸಿಕೊಂಡವರು ಎಷ್ಟಿಲ್ಲ?
ಆದರೆ ಅವರೆಲ್ಲ ಅಮ್ಮನಮುಂದೆ ಚಿಕ್ಕವರೇ..!
ಭಯಂಕರವಾದ ಜೀವನರಣಾಂಗಣವನ್ನು ಪ್ರವೇಶಿಸುವ ಮುನ್ನ ಅವರೆಲ್ಲಾ ಅಮ್ಮನ ಮಡಿಲಲ್ಲಿ ಆಡಿದವರೇ..!
ಅಮ್ಮನೆಂದರೆ ದೊಡ್ಡವರಿಗಿಂತ ದೊಡ್ಡವಳು.

4225,1152307231,1

ಕೈ ಹಿಡಿದು ನಡೆಸೆನ್ನನು. . . .!

ನೀನಿಂದು ಜಗತ್ತನ್ನೇ ನಡೆಸುತ್ತಿರಬಹುದು, ಆದರೆ ನಡೆಯಲುಬಾರದ ಸ್ಥಿತಿಯಲ್ಲಿ ನಿನ್ನನ್ನು ಕೈ ಹಿಡಿದು ನಡೆಸಿದ ಅಮ್ಮನ ಮರೆಯದಿರು..!
ಹೃದಯದ ಹಾಲಿತ್ತವಳನ್ನು ಎಂದೂ ಉಪವಾಸ ಕೆಡಹದಿರು..
ಮಾತು ಕಲಿಸಿದ ಮಾತೆಯ ಮೇಲೆ ಅಪಶಬ್ಧಗಳನ್ನು ಪ್ರಯೋಗಿಸದಿರು..!
ತನ್ನ ರಕ್ತ ಮಾಂಸಗಳನ್ನೇ ನಿನಗೆ ಧಾರೆಯೆರೆದವಳಿಗೆ ಪ್ರತಿಯಾಗಿ ನೀನೇನು ತಾನೇ ಕೊಡಬಲ್ಲೆ?
ಅಮ್ಮ ಹಾಸಿಗೆ ಹಿಡಿದಾಗ ಆಕೆಯ ಮಡಿಲೇ ನಿನಗೆ ಹಾಸಿಗೆಯಾದ್ದುದನ್ನು ನೆನಪಿಸಿಕೊ..
ಏಳಲಾರದ ಅಶಕ್ತ ಅಮ್ಮನ ಶರೀರವನ್ನು ಶುಚಿಯಾಗಿಡಬೇಕಾಗಿ ಬಂದರೆ “ಛೀ” ಎನ್ನಬೇಡ..!
ಎಳವೆಯಲ್ಲಿ ನಿನ್ನ ಮಲಮೂತ್ರಗಳನ್ನು ಶುಚಿಗೊಳಿಸುವಾಗ ಎಂದೂ ಹೇಸಿಕೊಳ್ಳಲಿಲ್ಲ ಅವಳು..
ತನ್ನುದರವನ್ನೇ ನಿನಗೆ ಮನೆಯಾಗಿ ಮಾಡಿ ಕೊಟ್ಟವಳನ್ನು ಎಂದೂ ಮನೆಯಿಂದ ಹೊರನೂಕದಿರು..!

ತಾಯಿಯ ರೂಪದಲ್ಲಿ ವಿಶ್ವದ ತಂದೆಯೇ ಬಂದಾಗ,
ಮಮತೆಯ ಸಾಗರವನ್ನೇ ತಂದಾಗ,
ಕಣ್ಣಿದ್ದೂ ಕುರುಡನಾಗಿ ಮತ್ತೆ “ದೇವರು ಕಾಣಲಿಲ್ಲ” ವೆನ್ನುವವನಿಗೆ. . . . . . . . .
ಏನೆನ್ನ ಬೇಕು..?

|| ಮಾತೃದೇವೋ ಭವ.. ||

(ಮುಂದುವರಿಯುವುದು.. ಎಂದೂ ಮುಗಿಯದು.!)

49 Responses to ಅಮ್ಮನ ಮಗುವಿಗೆ – ಅಮ್ಮನ ಕುರಿತು..!!

 1. ravi n

  kuputro jaayate………. kvachidapi kumaataa na bhavati…

  [Reply]

 2. Raghavendra Narayana

  ಆಧ್ಯಾತ್ಮವನ್ನು ಸ೦ಸಾರವನ್ನು ಹಾಲು ಜೇನ೦ತೆ ಬೆರೆಸುವ ಈ ಲೇಖನಗಳಿಗೆ ಸಾಟಿಯಿಲ್ಲ

  ಅತ್ಯದ್ಭುತ. ತಾಯಿ ಮತ್ತು ಗುರು ಕಲ್ಲು ಹೃದಯದವರನ್ನು ಕರಗಿಸುತ್ತಾರೆ.

  ಎಲ್ಲಾ ತಾಯ೦ದಿರು – ಎಲ್ಲಾ ಮಕ್ಕಳ್ಳನ್ನು – ಮಕ್ಕಳ್ಳೆ೦ದು ಭಾವಿಸಿದರೆ..
  ಎಲ್ಲಾ ಮಕ್ಕಳ್ಳು – ಎಲ್ಲಾ ತಾಯ೦ದಿರನ್ನು – ತಾಯಿಯೆ೦ದು ಭಾವಿಸಿದರೆ..
  ಭುವಿ ಸಗ್ಗವಾದೀತು, ಸ್ವರ್ಗ ಸಪ್ಪೆಯಾದೀತು..

  ಗುರುಗಳೇ, ಈ ಕೆಳಗಿನ ಸಾಲುಗಳು ತು೦ಬಾ ಇಷ್ಟವಾಯಿತು.
  __________________________________________

  ೧. ದೇವರು ದೊಡ್ಡವನು, ನಾಭಿಯೊಂದು ಉಳಿದಿದೆ ನಮ್ಮ ಶರೀರದಲ್ಲಿ. ನಾಭಿ ಇರುವವರೆಗೂ ನೀನು ಮರೆಯಬಾರದ ಸಂಬಂದ ಅದು.
  ೨. ಈ ಜಗತ್ತಿನಲ್ಲಿ ಅದೆಷ್ಟೋ ಬಗೆಯ ಮೃದು ಮೃದುವಾದ – ಹಂಸತೂಲಿಕಾ ತಲ್ಪಗಳಿರಬಹುದು, ಆದರೆ ಅಮ್ಮನ ಮಡಿಲಿನ ಮಾರ್ದವಕ್ಕೆ ಅವು ಯಾವವೂ ಸಾಟಿಯಲ್ಲ..!!
  ಭೌತಿಕ ಮಾರ್ದವಕ್ಕಿಂತ ಭಾವದ ಮಾರ್ದವ ಹಿರಿದಲ್ಲವೇ..?

  ೩. ಹೃದಯದ ಹಾಲಿತ್ತವಳನ್ನು ಎಂದೂ ಉಪವಾಸ ಕೆಡಹದಿರು..
  ಮಾತು ಕಲಿಸಿದ ಮಾತೆಯ ಮೇಲೆ ಅಪಶಬ್ಧಗಳನ್ನು ಪ್ರಯೋಗಿಸದಿರು..!
  ತನ್ನ ರಕ್ತ ಮಾಂಸಗಳನ್ನೇ ನಿನಗೆ ಧಾರೆಯೆರೆದವಳಿಗೆ ಪ್ರತಿಯಾಗಿ ನೀನೇನು ತಾನೇ ಕೊಡಬಲ್ಲೆ?
  ______________________________________

  [Reply]

 3. Raghavendra Narayana

  Mother and Child relationship redefined.

  [Reply]

 4. abhirama Hegde

  ammaaaaaaaaaaaaaaaaaaaaaaaaaaa……ninnaa yedeyaaladalli…….

  [Reply]

  Raghavendra Narayana Reply:

  We are missing your comments..
  .
  Shri Gurubhyo Namaha

  [Reply]

 5. shobha lakshmi

  ತಾಯೆ ನಿನ್ನ ಮಡಿಲಲಿ ಕಣ್ಣ ತೆರೆದ ಕ್ಷಣದಲಿ ಸೂತ್ರ ಒ೦ದು ಬಿಗಿಯೆತಮ್ಮ ಸ೦ಭ೦ಧ ದ ನೆಪದಲಿ…..

  ಗುರುದೇವಾ…..ಎ೦ತ ಕಮೆ೦ಟ್ ಬರೆಯಲಿ?? ಅಮ್ಮನ ಮಗುವಿಗೆ ಅಮ್ಮನ ಕುರಿತು..ಅಹಾ…..hedding ಓದುವಗಲೇ ಆನ೦ದ ಆವುತ್ತು….
  ಗುರುದೇವಾ….ಆನು ಅಮ್ಮ ಆದರೂ ಅಮ್ಮನ ಬಗ್ಗೆ ಇಷ್ಟು ಆಳವಾಗಿ ಚಿ೦ತಿಸಿದ್ದಿಲ್ಲೆ…..
  ಪ್ರತಿಯೊಬ್ಬರೂ ಈ ಲೇಖನ ಓದಿರೆ ಇನ್ನು ವ್ರುಧ್ಧಾಶ್ರಮ ಮುಚ್ಚೆಕಕ್ಕು…….ಅಷ್ಟು ಒಳ್ಳೇ ಲೇಖನ…..ಕಣ್ಣು ತೆರೆಸಿದ್ದಕ್ಕೆ ಕ್ರುತಜ್ನತೆಗಳು…

  [Reply]

 6. sriharsha.jois

  AMMAA…….

  Ammaa yennuva shabha …….uhoom, alla….AMMANEE maguvina

  prapancha. Amma yendare vishvakosha..!!Avalilladiddare ee jagattina srushti

  saadhyavitte?

  Yava vishyavannu kaliyuvudiddaroo magu noduvudu ammanatta..!!!!!MAGU

  tannannu hanchikolluvudu ammanodaneyee horatu innaaralli heli?

  AMMANILLADA MAGUVINA STHITI…………..ANUBHAVISIDAVARIGEE GOTTU…………………………………………………………………………

  AMMANA BAGGE HELALIRUVUDU TUMBAA………..HORAHOMMADE ULIVUDU ANANTA……………………………………….

  GURUDEVAA………………DHANYA NAA

  Ishtee saadhya nanninda………………………………….

  [Reply]

 7. shobha lakshmi

  hareraama…gurudevaa……naanu amma agiddaru ammana bagge istu alavagi thilidilla….kannu theresida gurudevarige namonamaha…

  [Reply]

 8. ಜಗದೀಶ್ B. R.

  ಮೊದಲ ತೊದಲ ನುಡಿ
  ಅಮ್ಮಾ…
  ನಿಂದನೆ ಮಾಡದೇ ವಂದನೆ ಮಾಡುವೆ
  ಸಂಕಟ ನೀಡದೆ ಸಂತಸ ನೀಡುವೆ

  [Reply]

 9. nandaja haregoppa

  hare raama
  ತಾಯಿಯ ರೂಪದಲ್ಲಿ ವಿಶ್ವದ ತಂದೆಯೇ ಬಂದಾಗ,
  ಮಮತೆಯ ಸಾಗರವನ್ನೇ ತಂದಾಗ,
  ಕಣ್ಣಿದ್ದೂ ಕುರುಡನಾಗಿ ಮತ್ತೆ “ದೇವರು ಕಾಣಲಿಲ್ಲ” ವೆನ್ನುವವನಿಗೆ. . . . . . . . .
  ಏನೆನ್ನ ಬೇಕು..?

  kande hariya kande ,devadi devana divya charana kamaladalli ammana

  [Reply]

 10. Mohan Bhaskar

  bhaashge meerida bhaava… amma …. naanu mounavaade…..!

  idu yugada shreshta lekhana…. alla… anubhaava…
  idu prati mane maneya, mana manada nitya mantavagabekaagide….

  [Reply]

 11. Mohan Bhaskar

  saatiyillada lekhana…. gurugale…

  [Reply]

 12. nandaja haregoppa

  Amma ninna tolinalli kanda naanu ninna sanga aadalendu bande naanu

  ammmaaaaaa

  [Reply]

 13. ಜಗದೀಶ್ B. R.

  ಅಮ್ಮನಂತೆ ಈ ಬರಹವೂ ಬಣ್ಣಿಸಲಸದಳ!!

  [Reply]

 14. Ishwara Bhat Elliadka

  ನಮ್ಮ ಸಂಸ್ಕೃತಿಯ ಪಾಠದ ’ಮೊದಲ ಅಧ್ಯಾಯ’!
  ತುಂಬಾ ಚೆನ್ನಾಗಿದೆ.

  [Reply]

 15. raghavendra hegde

  ammana manassu hrudayakke bayi bandaru heege heluvudu kashtvitteno aadare idu adbuta . matru hrudayadavaru matrave mateya manava ballaru. taavu eka kaalakke jagadguru mattu jaganmaateyu aagi baredamtide e baraha . bhava paravashanaade guruve nimage namaskaara.

  [Reply]

 16. yajneshbhat

  ಅಧ್ಬುತ ಬರಹ. ಕಟುಕನ ಮನಸ್ಸು ಕರಗುವಂತಹ ಶಕ್ತಿ ಹೊಂದಿದ ಬರಹ. ಹೊತ್ತು ಹೆತ್ತು ತುತ್ತುಣಿಸಿದ ಅಮ್ಮನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಈ ಬರಹ ಓದಿದ ಅಮ್ಮನ ಮರೆತವರು ಒಮ್ಮೆಯಾದರೂ ಅಮ್ಮನ ವ್ಯಕ್ತಿತ್ವವನ್ನು ನೆನೆಪಿಸಿಕೊಳ್ಳುತ್ತಾರೆ. ಭಾವನಾತ್ಮಕವಾದ ಈ ಬರಹ ತುಂಬ ಮನಸಿಗೆ ಹಿಡಿಸಿತು ಸಂಸ್ಥಾನ.

  [Reply]

 17. Sunil Kulkarni

  ಹೆತ್ತ ತಾಯಿಯನ್ನು ಮರೆತು, ಯವ್ವನದ ಕುದುರೆ ಸಮಾರಿ ಮಾಡುತ್ತಿರುವ ಯುವ ಮನಸ್ಸುಗಳಿಗೆ ಮಾರ್ಮಿಕವಾದಂತಹ ನುಡಿಗಳಿಂದ ಶ್ರೀಗಳು ತಮ್ಮ ಲೇಖನದಲ್ಲಿ ವ್ಯಕ್ತಪಡಿಸಿದ್ದಾರೆ. ಸಮಾಜಕ್ಕೆ ಪ್ರೇರಣೆ ಹಾಗೂ ಸರಿಯಾದ ದಿಕ್ಕು ತೋರಿಸುವ ಕಾರ್ಯ ಶ್ರೀಗಳಿಂದ ಮೇಲ್ಪಂಕ್ತಿಯ ರೂಪದಲ್ಲಿ ಮೂಡಿಬರುತ್ತಿರುವುದು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳಬೇಕೆನ್ನಿಸುತ್ತದೆ.

  [Reply]

 18. Shreekant Hegde

  Gurugale, mathchless feelings.

  [Reply]

 19. Raghavendra Narayana

  Happy to note – nobody questioned anything in this blog.
  If it is unquestionable then why there is increase in old age homes? Both parents and children started liking the concept?

  [Reply]

  Sri Samsthana Reply:

  ಹೃದಯ ತೆರೆದಾಗ ಮಾತ್ರವೇ ಗಮನಕ್ಕೆ ಬರುವ ವಿಷಯಗಳಿವು..ಅಲ್ಲಿಯವರೆಗೆ ಅಜ್ಞಾನದ ಆಡಳಿತವೇ……..!!

  [Reply]

 20. Raghavendra Narayana

  ಭಾವದ ಅಭಾವ ಎಲ್ಲೆಡೆ
  ——————
  ಭಾವ – ಅಭಾವ
  ಮಾನವ – ಯ೦ತ್ರ
  ಧರ್ಮ – ಕ್ಷೀಣ

  ಗುರು – ಬಲ? ದುರ್ಲಭ
  ಶಿಷ್ಯ – ದ್ವ೦ದ್ವಿ, ದುರ್ಲಭ
  ವಿವೇಕ, ವೈರಾಗ್ಯ – ಗ್ರ೦ಥ, ಶ್ಲೋಕ

  ಆಸೆ – ನಿರ್ಲಜ್ಜ
  ಮಾಯೆ – ನಗ್ನ
  ಕಾಲಪುರುಷ – ವ್ಯಾಘ್ರ

  ಭ್ರಮಾಲೋಕದ ತಾ೦ಡವ ಕ೦ಡ ಕ೦ಡೆಡೆ

  [Reply]

 21. Jayashree Yajnesh

  ತುಂಬಾ ಅದ್ಭುತವಾದ ಲೇಖನ ಸಂಸ್ಥಾನ. ಅಮ್ಮನ ಬಗ್ಗೆ ವರ್ಣಿಸಕ್ಕೆ ಪದಗಳೇ ಸಾಕಾಗದಿಲ್ಲೆ ಅಲ್ದ ಸಂಸ್ಥಾನ. ನೀವು ಬರದಿದ್ದ ಸಾಲುಗಳನ್ನು ಓದಿದರೆ ಅಮ್ಮನ ಬಗ್ಗೆ ಕಾಳಜಿ ಇಲ್ಲದವರು ನಿಜವಾಗ್ಲು ಬದಲಾಗ್ತ.

  [Reply]

 22. Raghavendra Narayana

  ವಾನಪ್ರಸ್ಥಾಶ್ರಮಗಳು ಕಡಿಮೆಯಾಗಿ, ವೃದ್ದಾಶ್ರಮಗಳು ಹೆಚ್ಚಗುತ್ತಿವೆ ಎ೦ದು ಹೇಳಬಹುದೇ?
  ನಿವೃತ್ತಿಯಾದ ಮೇಲು, ಪರಮಾತ್ಮ ಚಿ೦ತನೆ ಆರ೦ಭಿಸದೆ, ಸ೦ಸಾರದಲ್ಲೆ ಮುಳುಗಿದ್ದರ ಪರಿಣಾಮವಿರಬಹುದೆ..
  ಶ೦ಕಾರಚಾರ್ಯರ ಭಜ ಗೋವಿ೦ದಮ್ ನೆನಪಾಗುತ್ತಿದೆ..

  ವಾನಪ್ರಸ್ಥಾಶ್ರಮಗಳು ಭಾರತದಲ್ಲಿ ಎಲ್ಲಾದರು ಇದೆಯೆ ಈಗ?

  [Reply]

  Sri Samsthana Reply:

  ಇಲ್ಲವೇ ಇಲ್ಲವೆನ್ನುವಂತಿಲ್ಲ..ಆದರೆ ಲುಪ್ತಪ್ರಾಯ..

  [Reply]

 23. anand hegde

  guruji i hv no words 2 define, SPELL BOUND.. feelin like 2 scream louder I LOVE YOU MOM

  [Reply]

 24. vdaithota

  Tayiye devaru ennuvudu huttina jotege baruva samskara…
  adare guruve, ondu sanaa gondala..,, Tayi tanagagi, tanna manada truptigagi jeevavondake garbha needuvale, athava jeevave taya garbhakagi beduvude..?!!!

  [Reply]

  Sri Samsthana Reply:

  ಇದು ಪರಸ್ಪರ..

  ಬೀಜವೊಂದರ ವಿಕಾಸ : ಮೊಳಕೆ-ಕಾಂಡ-ಕೊಂಬೆ-ಎಲೆ-ಹೂವು-ಹಣ್ಣು..ಅಂತಿಮವಾಗಿ ಪುನಃ ಬೀಜವೇ..ತನ್ನಂತಿರುವ ಇನ್ನೊಂದು ಜೀವಕ್ಕೆ ಜನ್ಮ ಕೊಟ್ಟು ‘ಅಮ್ಮ’ನಾದಾಗಲೇ ಹೆಣ್ಣು ಪರಿಪೂರ್ಣಳಾಗುವುದು..
  ಜೀವಕ್ಕಂತೂ ಮುಂದಿನ ಯಾವುದೇ ಗತಿಯನ್ನು ಪಡೆಯಬೇಕೆಂದರೆ ಅಮ್ಮನ ಗರ್ಭ ಏಕೈಕ ಮಾರ್ಗ..

  [Reply]

 25. Aravinda

  “AMMA” obbale saku e lokadalli ….. berenu beda ,berella sunya samstana alda .

  [Reply]

  Sri Samsthana Reply:

  ಸತ್ಯ..!!

  [Reply]

 26. Suma Nadahalli

  ಮಕ್ಕಳು ತಂದೆಯಂತೆ ಇರುತ್ತಾರೆ ……ಅಂತ ಕೇಳಿದ್ದೇನೆ
  ಆದರೆ ನೂಲಿನಂತೆ ಸೀರೆ, ತಾಯಿಯಂತೆ ಮಗಳು ಅಂತ ಹೇಳುತ್ತಾರಲ್ಲ?

  ಏನೇ ಆದರು “ಅಮ್ಮ” ……..great !!!!!!!!!!!!!! ಅದ್ಭುತ ಸೃಷ್ಟಿ

  [Reply]

 27. Sharada Jayagovind

  samsthana

  I have a question to all sons. They glorify and remember their mothers till the wife arrives. Why? They pack off their mothers to old age homes.

  Even girls refuse to live with in laws and call them Rahu and kethu.

  sharadakka

  [Reply]

 28. govindaraj korikkar

  Ammana endo kaledukonda nanage nanna nashtada nijavaada arivayitu

  [Reply]

 29. chs bhat

  Gurugale,hodadte.Ammana bagge arivilladdadella eega thilidangatu.Makkalinda ammana upekshe thilido thiliyaddeyo nadettane iddu. Ningala ee lekhana engo saripadisigombale ondu avakasha.Idakkagi gurugalinge aanu sadaa kritajna. Ondu prashne.Intha ammana preetiya toradu sanyasa sweekara maadekkadare eshtu kashta aagikku shankaraachaaryaringe? Hararaama.chs

  [Reply]

  Sri Samsthana Reply:

  ವಿಶ್ವವಂದ್ಯೇನ ಯತಿನಾ ಪ್ರಸೂಃ ವಂದ್ಯಾ ಪ್ರಯತ್ನತಃ ||

  ( ಯತಿ ವಿಶ್ವಕ್ಕೇ ವಂದ್ಯನಾದರೂ ಹೆತ್ತ ತಾಯಿಗೆ ಮಾತ್ರ ಆತ ಪ್ರಯತ್ನಪೂರ್ವಕವಾಗಿಯೇ ನಮಸ್ಕರಿಸಬೇಕು )

  [Reply]

 30. Anushree Bandady

  ಹರೇ ರಾಮ.
  ಅದ್ಭುತ ಬರವಣಿಗೆ ಗುರುಗಳೇ.
  ಎಲ್ಲೋ ಕಾಲುಜಾರಿ ಬಿದ್ದಾಗ, ಏನಾದರೂ ನೋವಾದಾಗ ತಕ್ಷಣ ನಾವಾಡುವ ಮಾತು, “ಅಮ್ಮಾ…”
  ಅಮ್ಮ ಎಂದರೆ ನೋವನ್ನೆಲ್ಲ ನೀಗಿಸುವವಳು. ಅವಳ ಮಮತೆಯ ಮಾತುಗಳಿಗೆ ಸಾಟಿಯಾದ ಔಷಧಿ ಮತ್ತೊಂದಿಲ್ಲ. ಅವಳಷ್ಟು ಗಮನ ಕೊಟ್ಟು ಪೋಷಿಸುವವರು ಇನ್ನೊಬ್ಬರಿಲ್ಲ.
  < < ಆ ಒಂಭತ್ತು ತಿಂಗಳ ಮನೆ ವಾತಾನುಕೂಲಿತವಷ್ಟೇ ಅಲ್ಲ, ಸರ್ವಾನುಕೂಲಿತವಿತ್ತಲ್ಲವೇ..? >>
  ನಿಜಕ್ಕೂ ಅತ್ಯದ್ಭುತ ಮಾತು.

  [Reply]

 31. Adithi B S

  ಹರೇ ರಾಮ.
  ಗುರುಗಳೇ, ಸಾ | ನಮಸ್ಕಾರಂಗೊ.
  ಅಮ್ಮನ ಬಗ್ಗೆ ಎಷ್ಟೊಂದು ವಿಷಯ ಅರಿವಿಂಗೆ ಬಂತು.
  This article is a reminder for us:
  ಕಣ್ಣಿಗೆ ಕಾಣುವ ದೇವರು ಎಂದರೆ ‘ಅಮ್ಮಾ’ ತಾನೆ.
  ಅಮ್ಮನಿಗೆ ಎಂದೂ ನೋವು ಕೊಡಬಾರದು.

  [Reply]

 32. Sharada Krishna

  ammaa emba eradaksharadali brhamandavella adagihudu
  shreeguruvemba muurakshara eemaramavanaruhi salahuvudu,
  ammana preetige ammana mamatege solada maguvunte?
  guruvinapremake guruvina niyamake bagada shiravunte?
  maguvige modala guruve tayi guruve maguvige eradane tayi
  muttanu kottu madilali ittu amruta needuvavalamma
  shistali kurisi preetiya matali jnanavaneeduvavaguruvamma
  adake tayiye guruvu guruve tayi guruve tayi tayiye guru

  houdallave?guruve

  [Reply]

 33. Ganesh Bhat Madavu

  ಹರೇ ರಾಮ ಗುರುಗಳೇ ..ಅಮ್ಮಾ ಎಂದರೆ ಪ್ರೀತಿಯ ಚಿಲುಮೆ, ಆಕೆ ಪ್ರೀತಿಯ ಚೇತನ. ಆಕೆಯ ಬಗೆಗೆ ಎಷ್ಟು ಹೇಳಿದರೂ ಸಾಲದು .. ಅದ್ಭುತ ಲೇಖನ ಲೇಖನ ಗುರುಗಳೇ… ಲೇಖನ ಓದಿ ಹೃದಯ ತುಂಬಿ ಬಂತು.

  [Reply]

 34. Ganesh Bhat Madavu

  `ಅಮ್ಮ’ ಎಂಬ ಕರೆ ಪ್ರೀತಿಯ ಪ್ರತೀಕ. ಅದು ಬರಿಯ ಎರಡು ಅಕ್ಷರಗಳ ಜೋಡಣೆ ಮಾತ್ರವಾಲ್ಲ; ಅದು ಒಂದು ಅಪೂರ್ವ ಅನುಭವ ನೀಡುವ `ಮಾಂತ್ರಿಕ’ ಕರೆ! ಈ ಶಬ್ದದಲ್ಲಡಗಿರುವ ಅಪಾರ ಪ್ರೀತಿಯ ಪ್ರವಾಹದಿಂದ ಹರಿದು ಬಂದ ಆನಂದದ ಮುಂದೆ ಬೇರೆಲ್ಲವೂ ಕಿರಿದಾಗಿಯೇ ಕಾಣಿಸುವುದು. ಅಕ್ಷರ ಮಾಲೆಯ ಮೊದಲನೆಯ ಅಕ್ಷರವೇ `ಅ’. ಮಗುವು ಕಲಿಯುವ ಮೊದಲ ಮಾತೇ `ಅಮ್ಮ’ ಎಂದು `ಅ’ಕಾರದಿಂದಲೇ ಪ್ರಾರಂಭವಾಗುವುದು. ಹೀಗೆ ಅದೇನೋ ಚಮತ್ಕಾರ `ಅ’ಕಾರದಲ್ಲಿ ಅಡಗಿದಂತಿದೆ! `ಅಮ್ಮ’ ಎಂದು ಕರೆಯುವಾಗ ಮಗುವಿಗೆ ವ್ಯಾಕರಣ ಮತ್ತು ಅಕ್ಷರ ಮಾಲೆಯ ಗಂಧವಿರುವುದಿಲ್ಲ; ಶಬ್ದ ಜೋಡಣೆಯ ಅಂದವೂ ತಿಳಿದಿರುವುದಿಲ್ಲ. ಆದರೂ ಅದಾವುದೋ ಒಂದು ಅವ್ಯಕ್ತ ಅಂತರಂಗ ಪ್ರೇರಣೆಯೇ ಮಗುವನ್ನು ಹಾಗೆ ಕರೆಯವಂತೆ ಮಾಡುತ್ತದೆ. `ಅಮ್ಮ’ ಎಂಬ ಶಬ್ದದಿಂದ ಮೂಡಿ ಬಂದ ಮಮತೆಯೇ ಈ ಪ್ರೇರಣೆಗೆ ಕಾರಣ. `ಅ’ಕಾರವು ಕಂಠದಿಂದ ಉದ್ಭವಿಸುವ ಚೈತನ್ಯದ ಸಂಕೇತವಾಗಿದೆ. ಮುಂದೆ ಮ-ಮ ಕೂಡಿದ ಒತ್ತಕ್ಷರ `ಮ್ಮ’ ಸೇರಿ ಮಮ-ತೆಯನ್ನೇ ಸೂಸುತ್ತ `ಅ’ ಸ್ವರದಿಂದಲೇ `ಅಮ್ಮ’ ಎಂದು ಕೊನೆಗೊಳ್ಳುತ್ತದೆ. ಅಂತರಾಳದಿಂದ ಹುಟ್ಟಿ ಬಂದ ಮಗುವಿನ ಪ್ರೀತಿಯು `ಅಮ್ಮ’ ಎಂಬ ಅಕ್ಕರೆಯ ಕರೆಯಲ್ಲಿ ಅಭಿವ್ಯಕ್ತಗೊಳ್ಳುತ್ತದೆ. `ಅಮ್ಮ’ ಎಂಬ ಶಬ್ದದಲ್ಲಿ ತುಂಬಿ ತುಳುಕುತ್ತಿರುವ ಪ್ರೀತಿಯ ನೆಲೆಯನ್ನು ಅಳೆಯುವ ಸಾಮರ್ಥ್ಯವನ್ನು ಯಾವ ಗ್ರಂಥವೂ ಪಡೆದಿಲ್ಲವೋ ಏನೋ! ಅದು ನೀಡುವ ಅನುಭವವೇ, ಅನಂತವಾದ ಅಮೃತ ಕಡಲಲ್ಲಿ ತೇಲಾಡುವ ಅತ್ಯಾನಂದ!

  [Reply]

 35. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು. ಕಣ್ಣು ತೆರೆಸಿದಿರಿ. ಕಣ್ಣಿದ್ದು ಕುರುಡಳಾಗಿದ್ದೆ. “ಶ್ರೀ ಮಾತಾ ಶ್ರೀ ಮಹಾರಾಜ್ಞ್ಹೀ …. ” ಎಂದು ಪುನಃ ಪುನಃ ಉಚ್ಚರಿಸಿದೆನಲ್ಲದೆ ಅಮ್ಮನಲ್ಲಿರುವ ಆ ಶ್ರೀಮಾತೆಯನ್ನು ನೋಡುವ ಮನಸ್ಸು ಮಾಡಿರಲಿಲ್ಲ. ಮನ್ನಿಸಿ ಅನುಗ್ರಹಿಸಿ ದಾರಿ ತೋರಿ ಮುನ್ನಡೆಸಿ…

  [Reply]

 36. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಪ್ರತಿಕ್ಷಣವೂ ಅಮ್ಮನಂತೆ ಕೈ ಹಿಡಿದು ಮುನ್ನಡೆಸುತ್ತಿರುವ ಈ ವಿಶ್ವಜನನಿಯ ಮಡಿಲಲ್ಲಿ ಹಸುಗೂಸಾಗೋಣ……

  [Reply]

 37. Aneesh P

  ಧರ್ಮ ಭಾರತಿಲ್ಲಿ ಓದಿಯಪ್ಪಗಳೇ ಬಹಳ ಹಿಡಿಸಿದ್ದು ಅಮ್ಮನ ಬಗ್ಗೆ ಕೊಟ್ಟ ಗುರುಗಳ ಸಾಲು. ಪ್ರತಿಯೊಬ್ಬನು ಅರ್ಥ ಮಾಡಿಕೊಳ್ಳೆಕಾದ ಸಾಲು….
  ಹರೇ ರಾಮ

  [Reply]

 38. ಮಂಗ್ಳೂರ ಮಾಣಿ...

  :):)

  [Reply]

 39. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಅಮ್ಮಂದಿರಿಗೆಲ್ಲಾ ‘ಲಲಿತಾ ಸಹಸ್ರನಾಮ’ ಓದಲು ಕಲಿಸಿದ ಗುರುಗಳು ‘ಅಮ್ಮಂದಿರ ಅಮ್ಮ’.

  ಅಮ್ಮನಲ್ಲಿರುವ ‘ಅಮ್ಮ’ನನ್ನು ನೋಡಲು ಕಲಿಸಿದವರು ಗುರುಗಳು. ಅಮ್ಮನಲ್ಲಿರುವ ‘ಅಮ್ಮ’ ನನ್ನು ನೋಡಲು ಸಾಧ್ಯವಾದರೆ ಸಂಪೂರ್ಣ ಜಗತ್ತು ಅಮ್ಮನೊಳಗೆ ಕಾಣಿಸುತ್ತದೆ. ಎಲ್ಲ ಅಮ್ಮ೦ದಿರ ಭಾವದಿಂದ ಈ ‘ಮಾಯೆ’ ಎಂಬ ಜಗತ್ತು ಸೃಷ್ಟಿ ಯಾಗಿದೆಯೇ? ಅಥವಾ ‘ಮಹಾ ಮಾಯೆ’ ಭಾವವು ತುಂಡು ತುಂಡಾಗಿ ಎಲ್ಲ ಅಮ್ಮಂದಿರೊಳಗೆ ನಿಕ್ಷಿಪ್ತವಾಯಿತೆ? ಎಲ್ಲ ಅಮ್ಮಂದಿರು ಜಾಸ್ತಿ ಜಾಸ್ತಿ ‘ಲಲಿತಾ ಸಹಸ್ರನಾಮ’ ಓದುವಂತಾಗಬೇಕು. ‘ಭಾವ ಶುದ್ದಿ’ಯಿಂದ ‘ಈಶ್ವರ’ ನನ್ನು ನೋಡಿ ಅವನಿಂದ ‘ರಾಮ ನಾಮ’ ದ ಉಪದೇಶವನ್ನು ಪಡೆದು ಅಮ್ಮನ ‘ದೃಷ್ಟಿ’ ಹೋದಲ್ಲೆಲ್ಲ ‘ರಾಮನ ಸೃಷ್ಟಿ’ ಆಗುವಂತಾಗಬೇಕು.ಆ ‘ರಾಮ’ ನು ಅನಂತ ರಾಮ ರಾಗಿ ಈ ಜಗವನ್ನು ಮುನ್ನಡೆಸಬೇಕು.

  ಗುರುಗಳ ‘ದೂರ ದೃಷ್ಟಿ’ಗೆ ,’ದಿವ್ಯ ದೃಷ್ಟಿ’ ಗೆ ಅನಂತ………………………………………… ಪ್ರಣಾಮಗಳು.

  [Reply]

 40. vidyashree

  amma sampoorna. kuputro jayeta kvachidapi kumaataa na bhavati enda hange ella ammandiroo sampoornatey padeva hange aaa abbeya anugrahavagali. gurudevara asheervadangalondige ella makkaloo belagali

  [Reply]

 41. meghana kashyap

  gurudeva hare ram.Ellaringoo ee mahatvapoorna mathu tilisiddakke dhanyavada.Ammana mahatvada bagge ee lekhana tumba aasaktipoorvaka ittu.Namma mele ningala aashirvada sada irali.
  “MAATRUDEVOBHAVA”

  [Reply]

 42. J.V.BABUPATEL

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಅಮ್ಮಂದಿರಿಗೆಲ್ಲಾ ‘ಲಲಿತಾ ಸಹಸ್ರನಾಮ’ ಓದಲು ಕಲಿಸಿದ ಗುರುಗಳು ‘ಅಮ್ಮಂದಿರ ಅಮ್ಮ’.

  ಅಮ್ಮನಲ್ಲಿರುವ ‘ಅಮ್ಮ’ನನ್ನು ನೋಡಲು ಕಲಿಸಿದವರು ಗುರುಗಳು. ಅಮ್ಮನಲ್ಲಿರುವ ‘ಅಮ್ಮ’ ನನ್ನು ನೋಡಲು ಸಾಧ್ಯವಾದರೆ ಸಂಪೂರ್ಣ ಜಗತ್ತು ಅಮ್ಮನೊಳಗೆ ಕಾಣಿಸುತ್ತದೆ. ಎಲ್ಲ ಅಮ್ಮ೦ದಿರ ಭಾವದಿಂದ ಈ ‘ಮಾಯೆ’ ಎಂಬ ಜಗತ್ತು ಸೃಷ್ಟಿ ಯಾಗಿದೆಯೇ? ಅಥವಾ ‘ಮಹಾ ಮಾಯೆ’ ಭಾವವು ತುಂಡು ತುಂಡಾಗಿ ಎಲ್ಲ ಅಮ್ಮಂದಿರೊಳಗೆ ನಿಕ್ಷಿಪ್ತವಾಯಿತೆ? ಎಲ್ಲ ಅಮ್ಮಂದಿರು ಜಾಸ್ತಿ ಜಾಸ್ತಿ ‘ಲಲಿತಾ ಸಹಸ್ರನಾಮ’ ಓದುವಂತಾಗಬೇಕು. ‘ಭಾವ ಶುದ್ದಿ’ಯಿಂದ ‘ಈಶ್ವರ’ ನನ್ನು ನೋಡಿ ಅವನಿಂದ ‘ರಾಮ ನಾಮ’ ದ ಉಪದೇಶವನ್ನು ಪಡೆದು ಅಮ್ಮನ ‘ದೃಷ್ಟಿ’ ಹೋದಲ್ಲೆಲ್ಲ ‘ರಾಮನ ಸೃಷ್ಟಿ’ ಆಗುವಂತಾಗಬೇಕು.ಆ ‘ರಾಮ’ ನು ಅನಂತ ರಾಮ ರಾಗಿ ಈ ಜಗವನ್ನು ಮುನ್ನಡೆಸಬೇಕು.

  ಗುರುಗಳ ‘ದೂರ ದೃಷ್ಟಿ’ಗೆ ,’ದಿವ್ಯ ದೃಷ್ಟಿ’ ಗೆ ಅನಂತ………………………………………… ಪ್ರಣಾಮಗಳು.

  [Reply]

 43. J.V.BABUPATEL

  ..ಅಮ್ಮಾ ಎಂದರೆ ಪ್ರೀತಿಯ ಚಿಲುಮೆ, ಆಕೆ ಪ್ರೀತಿಯ ಚೇತನ. ಆಕೆಯ ಬಗೆಗೆ ಎಷ್ಟು ಹೇಳಿದರೂ ಸಾಲದು .. ಅದ್ಭುತ

  [Reply]

Leave a Reply

Highslide for Wordpress Plugin