LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಅಮ್ಮನೂ – ಅನ್ನವೂ – ತೃಪ್ತಿಯೂ..

Author: ; Published On: ಬುಧವಾರ, ಜೂನ್ 29th, 2011;

Switch to language: ಕನ್ನಡ | English | हिंदी         Shortlink:

|| ಹರೇ ರಾಮ ||

ಅನ್ನಂ ಬ್ರಹ್ಮ
ಅನ್ನವೇ ಭಗವಂತನೆಂದಿತು ಉಪನಿಷತ್ತು..

ಅನ್ನವೆಲ್ಲಿ? ದೇವರೆಲ್ಲಿ?
ಅನ್ನವು ದೇವರಾಗುವುದಾದರೂ ಹೇಗೆ?
ಒಮ್ಮೆ ಕಣ್ಮುಚ್ಚಿ ದೇವರ ಲಕ್ಷಣಗಳನ್ನು ನೆನಪಿಸಿಕೊಳ್ಳಿ..
ಈಗ ಕಣ್ತೆರೆದು ಅನ್ನವನ್ನು ನೋಡಿ..
ಸಾಮಾನ್ಯ ಮೇಧೆಗೂ ಸುಲಭವಾಗಿಯೇ ನಿಲುಕುವಂತೆಯೇ ದೇವರು ಅನ್ನದ ರೂಪದಲ್ಲಿ ಅವತರಿಸುವುದನ್ನು ಗಮನಿಸಿದಿರಾ?

ಬದುಕು ಇರುವುದು ದೇವರಿಂದಾಗಿ..
ಅನ್ನವಿಲ್ಲದೇ ಬದುಕಿಲ್ಲ..
ದೇವರಿಂದ ಕ್ಲೇಶನಿವಾರಣೆ..
ಹಸಿವೆಂಬ ನಿತ್ಯಕ್ಲೇಶದ ನಿತ್ಯನಿವಾರಣೆ ಅನ್ನದಿಂದ..
ದೇವರು ಆನಂದಸ್ವರೂಪ..
ಅನ್ನವುಣುವಾಗ ಆನಂದಿಸದ ಜೀವಗಳುಂಟೇ?
ದೇವರು ಲಭಿಸಿದಲ್ಲಿಗೆ ಪೂರ್ಣತೃಪ್ತಿ..
ಅನ್ನ ನೀಡುವುದು ನಿತ್ಯತೃಪ್ತಿ..
ದೇವರು ನಮ್ಮ ಅಂತರ್ಯಾಮಿ..
ಅನ್ನವು ನೆಲೆಗೊಳ್ಳುವುದು ನಮ್ಮ ಅಂತರಾಳದಲ್ಲಿಯೇ !
ದೇವರಿಂದ ಶಕ್ತಿ…
ಅನ್ನದಿಂದ ಪುಷ್ಟಿ…

ದೇವರಿಗೂ ನಮಗೂ ಅಂತಿಮವಾಗಿ ಸಂಭವಿಸಬೇಕಾಗಿರುವುದು ‘ಅದ್ವೈತ
ನಮ್ಮೊಳ ಹೊಕ್ಕು,ನಮ್ಮ ರಸ-ರಕ್ತ-ಮಾಂಸಗಳಲ್ಲಿ ಹಾಸುಹೊಕ್ಕಾಗಿ ಬೆರೆತು,ಕೊನೆಗೆ ನಾವೇ ಆಗಿಬಿಡುವ ಅನ್ನಕ್ಕೂ-ನಮಗೂ ‘ನಿತ್ಯಾದ್ವೈತ

ಅನ್ನದಿಂದಲೇ ಜನನ, ಅನ್ನದಿಂದಲೇ ಜೀವನ, ಅನ್ನದಿಂದಲೇ ಮರಣ…
ಅನ್ನದಿಂದಲೇ ಭಾವ, ಅನ್ನದಿಂದಲೇ ಬವಣೆ..
ಅನ್ನದಿಂದಲೇ ಭೋಗ, ಅನ್ನದಿಂದಲೇ ರೋಗ, ಅನ್ನದಿಂದಲೇ ಯೋಗ…
ಅನ್ನದಿಂದಲೇ ಸಕಲವೂ…
ಅನ್ನದಿಂದಲೇ ಬಂದ ಬಂಧ ತೊಲಗುವುದೂ ಅನ್ನದಿಂದಲೇ…
ಪರಮಾತ್ಮನಂತೆ ಸರ್ವರ ಅಂತರ್ಯಾಮೀ..ಆನಂದದಾಯೀ..ಅದ್ವೈತಪರ್ಯವಸಾಯೀ..
ಆದುದರಿಂದಲೇ ‘ಅನ್ನಂ ಬ್ರಹ್ಮ’

ಜೀವ-ಜೀವನಗಳ ನಡುವಿನ ನಿತ್ಯಸೇತುವಾದ ಈ ಅನ್ನಬ್ರಹ್ಮವೇ ವಸಿಷ್ಠ-ಕೌಶಿಕರ ನಡುವಿನ ಸರಸ-ಸಮರ-ಸಮರಸಗಳ ಮಹಾಘಟನೆಗೆ ಮೂಲಕಾರಣ..
ಕೌಶಿಕನಿಗೆ ದೇವರನ್ನು ತೋರಬಯಸಿದ ಮಹಾಗುರು ವಸಿಷ್ಠರು ಮೊದಲ ಮಾಧ್ಯಮವಾಗಿ ಆರಿಸಿದ್ದು ಅನ್ನವನ್ನೇ..
ಹಾಗಲ್ಲದಿದ್ದರೆ ಬೇಡ-ಬೇಡವೆಂದರೂ ಬಿಡದೆ, ಬಲಸಮೇತನಾದ ಭೂಪಾಲನಿಗೆ ಆಶ್ರಮದಲ್ಲಿ,ಅರಮನೆಯನ್ನು ಮೀರಿದ ಆತಿಥ್ಯವನ್ನೆಸಗುವ ಸಡಗರವಾದರೂ ಏಕೆ ವಸಿಷ್ಠರಿಗೆ ! ?

ಕೇಳಿದರೂ ಕೊಡದವರುಂಟು..
ಕೇಳಿದರೆ ಕೊಡುವವರುಂಟು..
ಕೇಳದಿದ್ದರೂ ಕೊಡುವವರುಂಟೇ..?
ಅದಕ್ಕೆ ಬೇಕು ಅಮ್ಮನ ಹೃದಯ..

ಮುದ್ದು ಮಗುವಿಗೆ ಹಾಲುಣಿಸುವ ವಿಷಯದಲ್ಲಿ ಅದು ಬಾಯ್ದೆರೆದು ಬೇಡಬೇಕೆಂದು ಎಲ್ಲಿಯಾದರೂ ನಿರೀಕ್ಷಿಸುವಳೇ ಜನನಿ..?
ತಾಯಿಹೃದಯ ವಸಿಷ್ಠರದು..
ಏನೂ ಕೇಳದ ಕೌಶಿಕನಿಗೆ ಎಂದೂ ಕಾಣದ ಸಂಗತಿಯೊಂದನ್ನು ತೋರಬಯಸಿದರವರು…
ಮತ್ತೆಲ್ಲಿಯೂ ಸಿಗಲಾರದ ಸಂತೋಷವನ್ನು ನೀಡಬಯಸಿದರವರು..
ಆಶ್ರಮಕ್ಕೆ ಬಂದ ಅತಿಥಿಯನ್ನು ಬರಿಗೈಯಲ್ಲಿ ಕಳುಹಿಸಬಾರದೆಂದು ವಸಿಷ್ಠರೆಂದುಕೊಂಡರೆ ಅದು ಸರಿಯೇ..
ಆದರೆ ಚಕ್ರವರ್ತಿಗೆ ಆಶ್ರಮವಾಸಿಯೇನು ಕೊಟ್ಟಾನು..?
ಕೊಡಲು ಕೌಶಿಕನ ಬಳಿ ಇಲ್ಲದುದಾದರೂ ಏನು..?

ಹೌದು..
ಕೌಶಿಕನ ಬಳಿ ಎಲ್ಲವೂ ಇತ್ತು..
ಇಲ್ಲದುದೊಂದೇ….ಅದು ತೃಪ್ತಿ..
ಇದ್ದುದರಲ್ಲಿ ತೃಪ್ತಿಯಿಲ್ಲದುದರಿಂದಲೇ ಅಲ್ಲವೇ ಅವನು ಜೈತ್ರಯಾತ್ರೆಗೆ ತೊಡಗಿದ್ದು..
ತೃಪ್ತಿ ಚಿನ್ನಕ್ಕೆ ಬಲು ದೂರ, ಆದರೆ ಅನ್ನಕ್ಕೆ ಅತ್ಯಂತ ಹತ್ತಿರ..
‘ಇಷ್ಟು ಸಿಕ್ಕರೆ ಮತ್ತಷ್ಟು ಬೇಕೆಂಬಾಸೆ’ ಇದು ಚಿನ್ನದ ಕಥೆ..
ಆದರೆ ಅನ್ನ ಹಾಗಲ್ಲ, ಅದೆಂಥಾ ಆಸೆಬುರುಕನನ್ನಾದರೂ ಸಾಕೆನಿಸಿಯೇ ಸಿದ್ಧ..
ಅನ್ನವಿತ್ತು ಯಾರನ್ನೂ ತೃಪ್ತಿ ಪಡಿಸಬಹುದು…
ಚಿನ್ನ ತೆತ್ತು ಯಾರನ್ನೂ ತೃಪ್ತಿ ಪಡಿಸಲಾಗದು..
ಅನ್ನ-ತೃಪ್ತಿಗಳು ನಿತ್ಯಸಂಗಾತಿಗಳು..
ಅನ್ನಪುರುಷನ ಆಗಮನವಾದರೆ ಆತನ ಹಿಂದೆ ಮೆಲ್ಲಮೆಲ್ಲನೆ ಬಂದೇ ಬರುವಳು ತೃಪ್ತಿಸುಂದರಿ..ಇದು ಸಿದ್ಧ..
ಆದರೆ ಅನ್ನಪುರುಷನನ್ನು ಕರೆತರುವವರಾರು..?
ಅದು ‘ಅಮ್ಮ’

ಅಮ್ಮನಿಂದ ಅನ್ನ, ಅನ್ನದಿಂದ ತೃಪ್ತಿ..
ಕ್ರಮವಾಗಿ ಹೃದಯ ತುಂಬುವ, ಹೊಟ್ಟೆ ತಣಿಸುವ, ಮೈಯೆಲ್ಲ ವ್ಯಾಪಿಸುವ ದೇವರ ಮೂರು ರೂಪಗಳಿವು..!
ಹೌದು,
ಅನ್ನವು ದೇವರು..
ಜೊತೆಗೆ ಅನ್ನವೀಯುವ ತೃಪ್ತಿಯೂ ದೇವರು, ಅನ್ನವನ್ನೀಯುವ ಅಮ್ಮನೂ ದೇವರು..

ತಾಯಿಯೇ ದೇವರು ~~ ‘ಮಾತೃದೇವೋ ಭವ’
ತಾಯಿಯ ಕೈತುತ್ತೂ ದೇವರ ರೂಪವೇ..! ~~‘ಅನ್ನಂ ಬ್ರಹ್ಮ’
ಆ ತುತ್ತು ತರುವ ತೃಪ್ತಿಯೂ ದೇವರೇ ಹೌದು~~‘ಆನಂದಂ ಬ್ರಹ್ಮ’

ಕೌಶಿಕನಿಗೆ ದೇವರನ್ನೇ ಸಾಕ್ಷಾತ್ಕಾರ ಮಾಡಿಸಬಯಸಿದ್ದರು ವಸಿಷ್ಠರು..
ಅಮ್ಮ-ಅನ್ನ-ತೃಪ್ತಿಗಳೆಂಬ ಮೂರು ಅಮೃತಬಿಂದುಗಳು ಸೇರಿ ಸಂಭವಿಸಿದ ದೈವೀತ್ರಿಕೋಣವನ್ನೇ ಉಡುಗೊರೆಯಾಗಿ ದೊರೆಗೆ ನೀಡಬಯಸಿದ್ದರು ವಸಿಷ್ಠರು…
ಮಾತೃತ್ವದ ಮೂರ್ತರೂಪವೇ ಆದ ಕಾಮಧೇನುವಿನ ಮೂಲಕವಾಗಿ ಅನ್ನಪೂರ್ಣೇಶ್ವರಿಯ ವಿಸ್ಮಯ-ವಿಶ್ವರೂಪವನ್ನೇ ಕೌಶಿಕನ ಮುಂದೆ ತೆರೆದಿಡಬಯಸಿದ್ದರು ವಸಿಷ್ಠರು…
ಕೌಶಿಕನಿಗೆ ಪೂರ್ಣತೃಪ್ತಿಯ ಪರಮಾತ್ಮನ ಪಾಠವನ್ನು ನಿತ್ಯತೃಪ್ತಿಯ ಅನ್ನದಿಂದ ಪ್ರಾರಂಭಿಸಿದ್ದರು ಮಹಾಗುರು ವಸಿಷ್ಠರು..
ಮಹಾಗುರುವಿನ ಆಶಯ-ಆಶೀರ್ವಾದಗಳನ್ನು ಹೃದಯದಲ್ಲಿ ಧರಿಸಿ ಆ ಮಹಾಸಂತರ್ಪಣೆಗಾಗಿ, ಮೃಷ್ಟಾನ್ನದ ಹೊಳೆಯನ್ನೇ ಹರಿಸಲು ಸಿದ್ಧಳಾದ ಶಬಲೆಯು, ಸೂರ್ಯನು ಕಿರಣಜಾಲದ ಮೂಲಕವಾಗಿ ಸಂಗ್ರಹಿಸಿ, ತನ್ನೊಳಗೆ ನಿಕ್ಷಿಪ್ತಗೊಳಿಸಿದ ಜೀವಜಲವನ್ನು ಜೀವಜಾಲದ ಮೇಲೆ ಅಭಿವರ್ಷಿಸಲು ಸನ್ನದ್ಧಗೊಂಡ ಮೇಘಮಾಲಿಕೆಯಂತೆಯೇ ಶೋಭಿಸಿದಳು..

~( ಸಶೇಷ)

23 Responses to ಅಮ್ಮನೂ – ಅನ್ನವೂ – ತೃಪ್ತಿಯೂ..

 1. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ರಾಮ… ಪೂರ್ಣ ತೃಪ್ತಿ… ಅದ್ವೈತ… !?

  [Reply]

 2. seetharama bhat

  ಹರೇರಾಮ್,

  ಅನ್ನ-ಅಮ್ಮರ ಅನ೦ತ ರೂಪ
  ಅನ್ನ-ಅಮ್ಮ-ಆನ೦ದದ ಅದ್ವೈತ
  ಅನ೦ತ ಆನ೦ದದ ಗುರು ರೂಪ

  ಹರೇರಾಮ್

  [Reply]

 3. ಮಂಗ್ಳೂರ ಮಾಣಿ...

  ಅಬ್ಬಾ…
  ತುಂಬಾ ದಿನಗಳ ಹಸಿವು.. ಇಂದು ನೀಗಿತು..
  ಮಾತ್ರುಸ್ವರೂಪಿ ಗುರು ಉಣಿಸಿದ ಅ-ಕ್ಷರದ ಅನ್ನದಿಂದ:):):):)

  [Reply]

  Vidya Ravishankar Reply:

  ಇದು ನಿಜ.

  [Reply]

 4. ಮರುವಳ ನಾರಾಯಣ

  ಹರೇ ರಾಮ
  ಅನೇಕ ಸಮಯದ ನಂತರ ಮತ್ಫ್ತೊಮ್ಫ್ಮೆ ಶ್ಫ್ರೀ ಸಂಸ್ಫ್ಥಾನದವರ ಲೇಖನ ಓದುವ ಭಾಗ್ಯ ಬಂದಿದೆ.

  [Reply]

 5. Raghavendra Narayana

  Happy to see Gurugalu back in Raajya blog.
  .
  Shri Gurubhyo Namaha

  [Reply]

  Raghavendra Narayana Reply:

  Gurugalu Back With A Bang. This is as usual beautiful and spiritual.
  .
  Shri Gurubhyo Namaha

  [Reply]

 6. Raghavendra Narayana

  “ಅನ್ನವುಣುವಾಗ ಆನಂದಿಸದ ಜೀವಗಳುಂಟೇ?”
  .
  “ದೇವರಿಗೂ ನಮಗೂ ಅಂತಿಮವಾಗಿ ಸಂಭವಿಸಬೇಕಾಗಿರುವುದು ‘ಅದ್ವೈತ‘
  ನಮ್ಮೊಳ ಹೊಕ್ಕು,ನಮ್ಮ ರಸ-ರಕ್ತ-ಮಾಂಸಗಳಲ್ಲಿ ಹಾಸುಹೊಕ್ಕಾಗಿ ಬೆರೆತು,ಕೊನೆಗೆ ನಾವೇ ಆಗಿಬಿಡುವ ಅನ್ನಕ್ಕೂ-ನಮಗೂ ‘ನಿತ್ಯಾದ್ವೈತ‘”

  “ಕೇಳದಿದ್ದರೂ ಕೊಡುವವರುಂಟೇ..?
  ಅದಕ್ಕೆ ಬೇಕು ಅಮ್ಮನ ಹೃದಯ..”
  .
  “ಅನ್ನವಿತ್ತು ಯಾರನ್ನೂ ತೃಪ್ತಿ ಪಡಿಸಬಹುದು…
  ಚಿನ್ನ ತೆತ್ತು ಯಾರನ್ನೂ ತೃಪ್ತಿ ಪಡಿಸಲಾಗದು..
  ಅನ್ನ-ತೃಪ್ತಿಗಳು ನಿತ್ಯಸಂಗಾತಿಗಳು..”
  .
  “ಕೌಶಿಕನಿಗೆ ಪೂರ್ಣತೃಪ್ತಿಯ ಪರಮಾತ್ಮನ ಪಾಠವನ್ನು ನಿತ್ಯತೃಪ್ತಿಯ ಅನ್ನದಿಂದ ಪ್ರಾರಂಭಿಸಿದ್ದರು ಮಹಾಗುರು ವಸಿಷ್ಠರು.”
  .
  Shri Gurubhyo Namaha

  [Reply]

 7. Anuradha Parvathi

  ಗುರುಗಳ ಲೇಖನ ಎಷ್ಟು ಓದಿದರೂ ಸಾಕಾಗೋದಿಲ್ಲ….

  [Reply]

  Jayashree Neeramoole Reply:

  ಹರೇ ರಾಮ,
  ಅಮ್ಮನ ಮಡಿಲು ಎಂದಾದರೂ ಸಾಕೆಂದೆನಿಸಬಹುದೇ?

  [Reply]

  Anuradha Parvathi Reply:

  ಅದೇ….

  [Reply]

 8. Dr Amrita Prasad

  ಹರೇ ರಾಮ. ಅನ್ನ -ಅಮ್ಮ -ಆನಂದದ ಅದ್ವೈತದ ಅನುಭವವನ್ನು ನಿತ್ಯವೂ ಪಡೆಯುತಿರುವ ನಮಗೆ ಆತ್ಮ -ಪರಮಾತ್ಮ -ಪರಮಾನಂದದ ಅದ್ವೈತದೆಡೆಗೆ ಕ್ರಮಿಸಲು ಇಷ್ಟೊಂದು ಅಡೆತಡೆಗಳೇಕೆ ಗುರುಗಳೇ ?

  [Reply]

  Sri Samsthana Reply:

  ಅನ್ನ-ಅಮ್ಮ-ಆನಂದಗಳ ಅದ್ವೈತಾನುಭವವನ್ನು ನಿತ್ಯವೂ ನಾವು ಪಡೆಯುತ್ತಿದ್ದೇವೆಯೇ..?
  ನಿಜವಾಗಿಯೂ….!?

  [Reply]

  r82hegdegmail Reply:

  bahushaha,!!!!???? ederadakku.munduvarida naavu vanchita raagiddeve kowtumbik vyavaste namage beekgailla heegendare unnata vyasanga,adarinda duuradalli kelasa,edarinda ammana saniha dinda doora,mattu amrutadantaha aahaaradalli visha vannu sevisutiddeve.

  [Reply]

 9. premalatha

  “nitya tripti’ya annaDalli poorNa tripti’ya paramaatma’na paaTa….”
  nijaDalli – oDiDavaru triptaru.. mattu kritaartharu!

  shraddhaa’namanagaLu Guruve…
  hare raama!

  [Reply]

 10. Arun Hegde

  ॥ ಹರೇ ರಾಮ ॥
  ನಮ್ಮ ಜೀರ್ಣಸಾಮರ್ಥ್ಯಕ್ಕೆ ಅನುಗುಣವಾಗಿ ಮಧುರಾನ್ನವನ್ನು ಉಣಬಡಿಸಿದ ಶ್ರೀಗುರುಚರಣಾರವಿಂದಗಳಿಗೆ ಸಾಷ್ಟಾಂಗ ಪ್ರಣಾಮಗಳು.

  [Reply]

  Raghavendra Narayana Reply:

  ಅದ್ಭುತ.
  .
  ಶ್ರೀ ಗುರುಭ್ಯೋ ನಮಃ

  [Reply]

 11. mayakk

  ಹರೇರಾಮ,,,

  ಮಾತೆಯ ಕೈ,,, ತುತ್ತು,,,ನಮ್ಮೊಳಗೆ ಹೊದಾಗ ಆಗುವ ಆನಂದ,,,,,,

  ಅಬ್ಬಾ!!!!!

  ನಿತ್ಯಾ ಇದ್ದರು,,,,

  ಈ ಅದ್ಭುತ ದ ಕದೆ ಗಮನ ಇಲ್ಲದೆ,,,,,,

  ಹರೆರಾಮಾ,,,,

  ಗುರುದೇವಾ,,,,,,

  [Reply]

 12. gopalakrishna pakalakunja

  ಹರೇ ರಾಮ.

  ಹಸಿದ ಹೊಟ್ಟೆಗೆ ವೇದಾಂತ ಸಲ್ಲ ಎಂಬುದನರಿತ ಅಮ್ಮ…
  ಅನ್ನವೇ ಬ್ರಹ್ಮ ವೆಂದು ಮಕ್ಕಳಿಗೆ ಉಣಿಸಿದ ಅಮ್ಮಂದಿರಲ್ಲೇ
  ಬ್ರಹ್ಮನನ್ನು ಕಂಡು ತೃಪ್ತಿ ಯ ಕಿರುನಗೆ ಬೀರುವ ಮಕ್ಕಳು…
  ಅನ್ನ_ಅಮ್ಮ-ಬ್ರಹ್ಮ-ಗಳ ಅಧೈತದಿಂದಲೇ ಬೆಳೆ ಬೆಳೆಯುತ್ತಾ
  ಹೋದಂತೆ ನಿಜಾನಂದದಿಂದ ದೂರ ಬಹುದೂರ ಸಾಗುವ
  ತೃಪ್ತಿ ಕಾಣದ ಚಕ್ರವರ್ತಿಗಳೇ ಈ ಜಗದ ತುಂಬ
  ಆಶ್ರಮವಾಸಿಗಳ ಹಿತ ನುಡಿಗೆ ಕಿವಿ ನೀಡಿದರೆ ಅಲ್ಲೇ ಬ್ರಹ್ಮ ಸಾಕ್ಷಾತ್ಕಾರ !

  ಅಮೃತ ಸಿಂಚನ ನೀಡಿ ಮುದಗೊಳಿಸಿವ ಸವಿನುಡಿ ಮುತ್ತು
  ಬಹಳ ಅರ್ಥಗರ್ಭಿತ ಅತ್ಯಂತ ಸಮಯೋಚಿತ

  ವಂದೇ ಗುರೂಣಾಂ ಚರಣಾರವಿಂದೇ…

  [Reply]

 13. ರವೀಂದ್ರ

  ಹರೇ ರಾಮ, ಸಂಸ್ಥಾನ,

  ಅಮ್ಮನಿಂದ ಅನ್ನ,
  ಅನ್ನದಿಂದ ತೃಪ್ತಿ,

  ತೃಪ್ತಿಯಲ್ಲಿ ತೃಪ್ತಿ ಕಾಣದ ಮೂಢರು ನಾವು!!

  ಅಲ್ಲ, ಸಂಸ್ಥಾನ,

  ಇಷ್ಟು ದೊರಕಿದ ಮೇಲೆ, ಇನ್ನಷ್ಟು ಬೇಕೇಂಬಾಸೆ, ಅಷ್ಟೂ ದೊರಕಿದ ಮೇಲೆ ಮತ್ತಿಷ್ಟರಾಸೆ,
  ಕಷ್ಟ ಬೇಡೆಂಬಾಸೆ,ಕಡು ಸುಖವ ಕಾಂಬಾಸೆ, ನಷ್ಟ ಜೀವನದಾಸೆ, ……ಬಿನ್ನಹಕೆ ಬಾಯಿಲ್ಲವಯ್ಯ,…..

  ಅನ್ನ ಮಧ, ಅರ್ಥ ಮಧ, ಮುನ್ನ ಪ್ರಾಯದ ಮಧವು, ರೂಪ ಮಧವು, ತನ್ನ ಸತ್ವದ ಮಧ, ದಾತೃ ವಷದ ಮದ, ಇನ್ನು ತನಗೆದುರಿಲ್ಲವೆಂಬೆಂತ ಮದದಿಂದ, ಬಿನ್ನಹಕೆ ಬಾಯಿಲ್ಲವಯ್ಯ…..

  ಛೇ!

  ಅನ್ನ ಅಲ್ಲವೇ ಅನಂತ, ಅನ್ನವಲ್ಲವೇ ಅವ್ವೆ,
  ಅನ್ನ ಅಲ್ಲವೇ ಅಮೃತ, ಅನ್ನವಲ್ಲವೆ ಜೇವೆ,

  ಶ್ರೀ ಗುರುವಾಣಿಯ ಜೇನು ಹೊನಲು ತುಂಬಿ ಹರಿಯಲೀ…
  ಜಗವಾ ಕುಣಿಸಿ ತಣಿಸಲೀ……

  ಹರೇ ರಾಮ

  [Reply]

 14. Sahana Bhat

  ಅನ್ನಂ ಬ್ರಹ್ಮ – ಅನ್ನ ದೇವರ ಮುಂದೆ ಇನ್ನು ದೇವರಿಲ್ಲ ಅನ್ನುವ ಜ್ಞಾನ ಅದ್ಭುತ.. ಅನ್ನವೂ ಅಲ್ಪತೃಪ್ತಿ ಮತ್ತೆ ಮತ್ತೆ ಈ ದೇಹಕ್ಕೆ ಅನ್ನ ಬೇಕು, ತೃಪ್ತಿ ಎಂಬ ದೇವರನ್ನ ಕಾಣಲು ಪೂಜೆ ಬೇಕು.. ಮೂರು ಹೊತ್ತಿನ ಅನ್ನ ನೀದುವ ತೃಪ್ತಿ ಯಂತೆ ಬದುಕಿನ ಪ್ರತಿಕ್ಷಣವೂ ದೇವರನ್ನ ಕಾಣುವ ತೃಪ್ತಿಯಾಗಲೆಂದು ಹರಸಿ ಗುರುದೇವ…

  [Reply]

 15. r82hegdegmail

  manushya saaku heeluvudu hotte tumbidaaga maatra. Bahusha beraava vishayadallu manushyanige trupti siglikkilla alva? aanndam bramha.

  [Reply]

 16. Prema

  ಸನ್ನದ್ಧ ಮೇಘಮಾಲಿಕೆ ಶಬಲೆ ಎಂದು ವರ್ಷಿಸುವಳೋ……

  || ಹರೇ ರಾಮ ||

  [Reply]

Leave a Reply

Highslide for Wordpress Plugin