HareRaama.in : Homepage of Sri Sri Raghaveshwara Bharati Mahaswamiji » ಪ್ರಮುಖ

ಶ್ರೀಗಳ ಕಾರ್ಯದಿಂದ ವಿಸ್ಮಿತರಾಗಿದ್ದೇವೆ! – ಶ್ರೀ ಆರ್. ಎಸ್. ಅಗರವಾಲ್
ಶ್ರೀ ಆರ್. ಎಸ್. ಅಗರವಾಲ್

ಇಮಾಮಿ ಲಿಮಿಟೆಡ್ ಅಧ್ಯಕ್ಷರು

ಶ್ರೀಗಳ ಜೊತೆಗೆ ಅಗರವಾಲ್ ಮತ್ತು ಗೊಯೆಂಕಾ ದಂಪತಿಗಳು.

ಅಲೌಕಿಕ ಶಕ್ತಿಯೊಂದನ್ನು ವರ್ಣಿಸುವುದಾಗಲೀ, ಆ ಶಕ್ತಿಸ್ವರೂಪವನ್ನು ಶಬ್ದಗಳಲ್ಲಿ ಕಟ್ಟುವುದಾಗಲೀ ಸರಳವಲ್ಲ. ಅವರ ಸಾಮೀಪ್ಯದಲ್ಲಿ ಕುಳಿತು ನಾವೇನನ್ನು ಪಡೆದಿದ್ದೇವೆ ಎನ್ನುವುದು ವರ್ಣನೆಗೆ ಮೀರಿದ ಸಂಗತಿ. ಅವರ ರೋಮ ರೊಮಗಳಲ್ಲಿ ಜ್ಞಾನ, ಶಾಂತಿ, ಶಕ್ತಿ, ಪ್ರಕಾಶಗಳು ತುಂಬಿದೆಯೆಂದರೆ; ಅವರಿಂದ ಆನಂದದ ಪ್ರವಾಹವೇ ಹರಿದು ಬರುತ್ತದೆಯೆಂದರೆ; ಆ ಆನಂದ ನಿಮ್ಮನ್ನು ತಲುಪುತ್ತದೆಯೆಂದರೆ; ನಿಮ್ಮನ್ನು ಅದು ಚರಮಾನಂದ, ಬ್ರಹ್ಮಾನಂದ, ಪರಮಾನಂದದ ಸ್ಥಿತಿಗೆ ಏರಿಸುವಷ್ಟು ಆನಂದಮಯಗೊಳಿಸುತ್ತದೆಯೆಂದರೆ ಆ ವ್ಯಕ್ತಿ ಸಾಧಾರಣ ವ್ಯಕ್ತಿಯಲ್ಲ. ಭಗವಂತನ ಪರಿಪೂರ್ಣ ಅನುಗ್ರಹವನ್ನು ಪಡೆದುಕೊಂಡವರಿಂದ ಮಾತ್ರ ಇದು ಸಾಧ್ಯ. ಅಂತವರು ನಮ್ಮ ಗುರುಗಳು, ಪೂಜ್ಯ ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು.

ಶ್ರೀಗಳು ಮತ್ತು ಕಲಾವಿದ ಬಿ. ಕೆ. ಎಸ್ ವರ್ಮಾ ಜೊತೆಗೆ

ಅವರನ್ನು ಸತ್ಯವೆನ್ನಲೇ, ಶಿವವೆನ್ನಲೇ, ಸುಂದರವೆನ್ನಲೇ, ಮೂರನ್ನೂ ಸೇರಿಸಿ ಸತ್ಯಶಿವಸುಂದರವೆನ್ನಲೇ ಏನೆಂದರೂ ಅದು ಅಲ್ಪವೇ ಆಗಿರುತ್ತದೆ. ಯಾಕೆಂದರೆ ಅವರ ಗುಣಗಳು ಗಣನೆಗೆ ನಿಲುಕದಂತವುಗಳು. ಅವರು ಪ್ರೀತಿ ತುಂಬಿದ ನಗುವಿನೊಂದಿಗೆ ಒಳ್ಳೆಯದಾಗಲಿ ಎಂದು ನಿಮ್ಮನ್ನು ಆಶೀರ್ವದಿಸಿದಂತೆಯೇ ನೀವು ಅವರೆಡೆಗೆ ಸೆಳೆದುಕೊಳ್ಳುತ್ತಿರುವಿರೆಂದು ನಿಮಗೆ ಅನಿಸತೊಡಗುತ್ತದೆ. ಅನಿಸಿಕೆ ಮಾತ್ರವಲ್ಲ ನೀವು ಅವರ ಸೆಳೆತಕ್ಕೆ ಒಳಗಾಗುತ್ತೀರಿ ಕೂಡ. ಕಣ್ಣಿನಲ್ಲಿ ಸ್ನೇಹ: ನಗುವಿನಲ್ಲಿ ಪ್ರೀತಿ: ಕೈಗಳಲ್ಲಿ ನೀಡುವ ಇಚ್ಛೆ…. ಹೀಗಿದ್ದಾರೆ ನಮ್ಮ ಗುರುವರ್ಯರು. ಒಂದು ಅದ್ಭುತ ವಾತ್ಸಲ್ಯ: ಒಂದು ತನ್ನತನ, ಒಂದು ಆತ್ಮೀಯತೆ, ಎಲ್ಲರ ಜೊತೆ… ಇವರು ನಮ್ಮ ಗುರುವರ್ಯರು. ಯಾರೇ ಬರಲಿ ಅವರ ಹೆಸರು ಪರಿಚಯ ಅವರ ಮನದಲ್ಲಿರುತ್ತದೆ. ಬಂದವರ ಹೆಸರು ಹೇಳಿ ಒಳ್ಳೆಯದಾಗಲಿ ಎಂದು ಗುರುಗಳು ಹರಸುತ್ತಾರೆ.

ಗುರು ಭಗವಂತನಂತೆಯೇ ವರ್ಣಿಸುವ ವಸ್ತುವಲ್ಲ; ಅನುಭವಿಸುವ ವಸ್ತು, ಗುರುವಿನ ಕುರಿತಾಗಿ ಭಾವ – ಭಕ್ತಿ – ಆಸ್ಥೆ ಇದ್ದವರಿಗೆ ಮಾತ್ರ ಆ ಅನುಭವ ಸಾಧ್ಯ. ಈ ಮಾರ್ಗದಲ್ಲಿ ಬಂದವರನ್ನು ಕಂಡಾಗ ಗುರುಗಳಿಗೆ ಸಂತಸ; ನಿಮ್ಮ ರೋಮ ರೋಮವೂ ಪುಲಕಿತ. ಜೀವನದಲ್ಲಿ ಮೇಲೇರಲು; ಶಾಂತಿ, ಸುಖ, ಆನಂದ ಪಡೆಯಲು ಎಷ್ಟು ಶಕ್ತಿ ಬೇಕೋ ಅದಷ್ಟೂ ನಮ್ಮ ಗುರುವಿನಲ್ಲಿ ನಿಮಗೆ ದೊರೆಯುತ್ತದೆ.

ನಮ್ಮ ದೇಶದಲ್ಲಿ ಬಹುಕಾಲದಿಂದ ಗೋಹತ್ಯೆ ನಡೆಯುತ್ತಿದೆ. ಗುರುಗಳು ಬೇರೆಯದೇ ವಿಧಾನದ ಆಂದೋಲನವನ್ನು ಆರಂಭಿಸಿದರು. ಅವರ ಪ್ರಕಾರ ಗೋವನ್ನು ರಕ್ಷಿಸುವ ಅವಶ್ಯಕತೆಯೇ ಇಲ್ಲ; ಗೋವು ತಾನೇ ತನ್ನನ್ನು ರಕ್ಷಿಸಿಕೊಳ್ಳುತ್ತದೆ. ಗೋಮಯ ಮತ್ತು ಗೋಮೂತ್ರಗಳನ್ನು ಯೋಗ್ಯ ವಿಧಾನದಲ್ಲಿ ನಾವು ಬಳಸುವುದನ್ನು ಕಲಿಯಬೇಕಷ್ಟೆ! ಅವುಗಳಿಂದ ಔಷಧಗಳನ್ನು ತಯಾರಿಸಬಹುದು; ಅವು ಫರ್ಟಿಲೈಸರ್ ಆಗಿಯೂ ಉಪಯುಕ್ತ; ಪರ್ಯಾಯ ಶಕ್ತಿಮೂಲವಾಗಿಯೂ ಸಹ ಅವುಗಳ ಬಳಕೆ ಸಾಧ್ಯ.. ಹೀಗೆಲ್ಲ ಬಳಸಿಕೊಂಡಾಗ ಗೋವು ನಮಗೆ ಖರ್ಚಿನ ಹಾದಿಯಲ್ಲ, ಆದಾಯದ ಸಾಧನ. ಗುರುಗಳು ಇದರ ಕುರಿತಾದ ತುಂಬಾ ಉತ್ತಮ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಅದರ ಪ್ರಯೋಜನವನ್ನು ಆಸಕ್ತರು ಯಾರೂ ಕೂಡ ಪಡೆದುಕೊಳ್ಳಬಹುದು, ಅದ್ಭುತವನ್ನು ಸಾಧಿಸಬಹುದು.

ಗೋಸಂರಕ್ಷಣೆಗಾಗಿ ಗುರುಗಳು ಗೋಗ್ರಾಸ ಯೋಜನೆಯನ್ನು ಮಾಡಿದ್ದಾರೆ. ಒಂದು ತಿಂಗಳಿನ ಗೋವಿನ ನಿರ್ವಹಣೆಯ ವೆಚ್ಚವಾದ ೧೦೦೦ ರೂಗಳನ್ನು ನೀಡಿ ಗೋಪಾಲನೆಗೆ ತೊಡಗಿಸಿಕೊಳ್ಳುವ ಯೋಜನೆಯದು. ಇದಲ್ಲದೇ ಗೋವಿನ ವಾರ್ಷಿಕ ನಿರ್ವಹಣೆಗೆ ದೇಣಿಗೆ ನೀಡುವ ಗೋಬಂಧು ಯೋಜನೆ ಕೂಡ ಇದೆ. ಈ ಎಲ್ಲ ಯೋಜನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಸರಣಗೊಳ್ಳುತ್ತಿವೆ.

ವಿದ್ಯಾಬಂಧು ಯೋಜನೆಯ ಮೂಲಕ ಗುರುಗಳು ಶಿಕ್ಷಣಸಂಸ್ಥೆಗಳನ್ನು ಮತ್ತು ವಿದ್ಯಾರ್ಥಿನಿಲಯಗಳನ್ನು ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಇಲ್ಲಿ ಶಿಕ್ಷಣ, ಆಹಾರ, ವಸತಿ ಎಲ್ಲವೂ ಲಭ್ಯ. ಅದೆಲ್ಲವೂ ನಿಶ್ಶುಲ್ಕವಾಗಿ ಲಭ್ಯ. ಇಂತಹ ೨೦-೨೫ ಶಿಕ್ಷಣ ಸಂಸ್ಥೆಗಳನ್ನು ಅವರು ನಡೆಸುತ್ತಿದ್ದಾರೆ. ವಿಶೇಷವೆಂದರೆ ವೈದಿಕ ಪದ್ಧತಿಯ ಶಿಕ್ಷಣ ಕೂಡ ಇಲ್ಲಿ ಲಭ್ಯ.

ದೀನರು ದಲಿತರು, ದುರ್ಬಲರ ಬಗ್ಗೆ ಗುರುಗಳಿಗೆ ವಿಶೇಷ ಅನುಕಂಪ. ಅವರನ್ನು ಗುರುಗಳು ಸಹೋದರ ಭಾವದಿಂದ, ಬಂಧು ಭಾವದಿಂದ ಕಾಣುತ್ತಾರೆ. ಅವರಿಗೆ ಸಾಧ್ಯವಾದಷ್ಟು ಸಹಾಯ ಮಾಡಲು ಪ್ರಯತ್ನಿಸುತ್ತಾರೆ.

ಲಕ್ಷಾಂತರ ಶಿಷ್ಯರಿದ್ದಾರೆ ಗುರುಗಳಿಗೆ. ಅವರೆಲ್ಲರನ್ನು ಸಂಘಟಿಸಬೇಕೆಂದರೆ ಅದೆಷ್ಟು ಸಾಮರ್ಥ್ಯ ಬೇಕು ! ಶಿಷ್ಯ ಪರಿವಾರದ ಸಂಘಟನೆಯನ್ನು ಗುರುಗಳು ವ್ಯವಸ್ಥಿತವಾಗಿ ಮಾಡಿದ್ದಾರೆ. ಪ್ರತಿ ಐದು ಮನೆಗಳಿಗೊಬ್ಬ ಪ್ರತಿನಿಧಿ ॒ಅಂತಹ ಐದು ಜನರ ಮೇಲೆ ಒಬ್ಬ. ಹೀಗೆ ೩೦ ಸಾವಿರ ಮನೆಗಳನ್ನು ಪರಸ್ಪರ ಜೋಡಿಸಿದ್ದಾರೆ. ಪರಿವಾರ ಸಂಘಟನೆಯ ಈ ಪರಿಕಲ್ಪನೆಯನ್ನು ಒಂದೊಮ್ಮೆ ಎಲ್ಲ ಸಾಧು ಸಂತರೂ ಕಾರ್ಯರೂಪಕ್ಕೆ ತಂದರೆ ನಮ್ಮ ದೇಶದಲ್ಲಿ ಶತ್ರುಭಾವವೇ ನಾಶವಾಗಿ ಎಲ್ಲರಲ್ಲಿ ಪರಸ್ಪರ ಮೈತ್ರಿ, ಆತ್ಮೀಯತೆಗಳು ಆರಂಭವಾಗುತ್ತದೆ.

ಕೆಲವೊಮ್ಮೆ ನಾವು ನಮ್ಮ ಕುರಿತಾಗಿಯೂ ಯೋಚಿಸುತ್ತೇವೆ. ಒಬ್ಬ ಉದ್ಯಮಪತಿಯಾಗಿ ನಾನೇನು ಮಾಡಿದ್ದೇನೆ ಎಂದು. ಹೀಗೆ ಯೋಚಿಸುವಾಗ ನನಗೇ ಸಂಕೋಚವಾಗುತ್ತದೆ, ನಾಚಿಕೆಯೆನಿಸುತ್ತದೆ. ನಾವೇನು ಮಾಡುತ್ತಿದ್ದೇವೆ? ನಾವೆಷ್ಟು ಹಿಂದಿದ್ದೇವೆ ಎಂದೆನಿಸುತ್ತದೆ.

ಶಿಷ್ಯ ಪರಿವಾರದ ಮೇಲೆ ಗುರುಗಳ ಪ್ರೀತಿ ಕೂಡ ಅದ್ಭುತವೇ ಸರಿ! ಬೆಳಗಿನಿಂದ ರಾತ್ರಿಯವರೆಗೆ ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ಗೃಹಸ್ಥರವರೆಗೆ ಇವರ ಹಿಂದಿರುತ್ತಾರೆ. ಎಷ್ಟೊಂದು ಸೇವೆ ಮಾಡುತ್ತಾರೆ; ಇದೆಲ್ಲವನ್ನು ನೋಡಿಯೇ ಅರಿಯಬೇಕು, ಹಾಗಿದೆ ಆ ಶಿಷ್ಯರ ಆತ್ಮಸಮರ್ಪಣೆ.

ನಮ್ಮ ಇಡೀ ಕುಟುಂಬದೊಂದಿಗೆ ಗುರುಗಳು ಎರಡುಮೂರು ಬಾರಿ ಸಂವಾದ ನಡೆಸಿದರು. ಅದರ ಪ್ರಭಾವ ಎಷ್ಟಿತ್ತೆಂದರೆ ಮುಂದಿನ ಸಂವಾದಕ್ಕೆ ಕುಳಿತಾಗ ೫-೬ ವರ್ಷದ ಮಕ್ಕಳು ಕೂಡ ಗುರೂಜಿಯವರ ಮಾತನ್ನು ಬರೆದುಕೊಂಡು ಪ್ರಸ್ತುತಪಡಿಸಿದ್ದು ಅದ್ಭುತವಾಗಿತ್ತು. ಹಿರಿಯರಿಗಿಂತಲೂ ಕಿರಿಯರೇ ಹೆಚ್ಚೆಚ್ಚು ಚರ್ಚೆಯಲ್ಲಿ ಭಾಗವಹಿಸಿ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದುದು ಯಾರನ್ನೂ ಆಶ್ಚರ್ಯಚಕಿತರನ್ನಾಗಿಸುವಂತಿತ್ತು. ಹೀಗೆ ಗುರುಗಳು ಮಕ್ಕಳ ಮೇಲೂ ಪ್ರಭಾವ ಬೀರಿದಾರೆ.

ಗುರುಗಳ ಸಾನ್ನಿಧ್ಯದಲ್ಲಿ ನಿಮ್ಮೊಳಗೆ ವಿಶಿಷ್ಟ ಭಾವ ಜಾಗೃತವಾಗುತ್ತದೆ ನನ್ನಲ್ಲಿ ಬಲವಿದೆ, ಆದರಿಂದ ಇನ್ನೊಬ್ಬರಿಗೆ ಹೇಗೆ ಒಳಿತು ನೀಡಲಿ, ನನ್ನಲ್ಲಿ ಜ್ಞಾನವಿದೆ, ಅದನ್ನು ಇನ್ನೊಬ್ಬರಿಗೆ ಹೇಗೆ ಹಂಚಲಿ, ನಾನು ಸಮಾಜಕ್ಕೆ ಒಳಿತನ್ನು ಹೇಗೆ ಮಾಡಲಿ, ದೇಶಕ್ಕೆ ಒಳ್ಳೆಯದನ್ನು ಹೇಗೆ ಮಾಡಲಿ ಎಂಬುದೇ ಆ ಭಾವ.

ಇದೆಲ್ಲದರಿಂದಾಗಿ ನಿಮ್ಮೊಳಗಿಂದ ಎಷ್ಟು ಆತ್ಮ ಸುಖ ಸಿಗಲಾರಂಭಿಸುತ್ತದೆ ಎಂದರೆ ನಿಮ್ಮ ಮನಸ್ಸಿಗೆ ಅನ್ನಿಸತೊಡಗುತ್ತದೆ ಇಂತಹ ಸುಖವನ್ನು ನಾನು ಹಿಂದೆಂದೂ ಅನುಭವಿಸಿರಲಿಲ್ಲ. ಬಹಳ ಹಣವನ್ನು ಗಳಿಸಿದೆ, ಆದರೆ ಇಂತಹ ಸುಖ ಯಾವಾಗಲೂ ಸಿಗಲಿಲ್ಲ ಎಂದು. ಹೀಗೆ ನಿಮಗೆ ವಾಸ್ತವ ಸುಖ ಸಿಗಲಾರಂಭಿಸುತ್ತದೆ.

ನಿಮಗೆ ಈ ಜಗತ್ತಿನೊಂದಿಗೆ ಹೋರಾಡುವ ಶಕ್ತಿ ಇಲ್ಲವಾದಾಗ ಅವರ ಸಾನ್ನಿಧ್ಯ, ಅವರ ಜ್ಞಾನದರ್ಶನ, ಅವರ ಮಾರ್ಗದರ್ಶನ ನಿಮಗೆ ಪುನರ್ಜನ್ಮವನ್ನು ನೀಡುತ್ತದೆ.

ಶ್ರೀಗಳು, ಶ್ರೀಪರಿವಾರದೊಂದಿಗೆ ಶ್ರೀಮತಿ ಉಷಾ ಅಗರವಾಲ್

ಇತರ ಸಾಧು – ಸಂತರು ಮತ್ತು ರಾಜಕಾರಣಿಗಳಿಗಿಂತ ಇವರು ಹೇಗೆ ಭಿನ್ನ? ನಾನು ಬಹಳ ಸಾಧು – ಸಂತರನ್ನು ನೋಡಿದ್ದೇನೆ, ದೊಡ್ಡ ದೊಡ್ಡವರ ಜೊತೆ ಕೆಲಸ ಮಾಡಿದ್ದೇನೆ. ದೊಡ್ಡ – ದೊಡ್ಡವರಿಗಿಂತ ನಾನು ಇವರನ್ನು ಭಿನ್ನವಾಗಿ ತಿಳಿದುಕೊಂಡಿದ್ದೇನೆ. ಏಕೆಂದರೆ ಗುರುಗಳು ಯಾರೊಬ್ಬರ ಬಗ್ಗೆಯೂ ಏನನ್ನೂ ಹೇಳುವುದಿಲ್ಲ. ಯಾರೊಬ್ಬರನ್ನೂ ಕಡಿಮೆ ಎಂದು ಭಾವಿಸುವುದಿಲ್ಲ. ಇನ್ನೊಬ್ಬರ ಜೊತೆ ತುಲನೆ ಮಾಡಿ ತಾನೇ ಶ್ರೇಷ್ಠ ಎಂದು ಹೇಳುವ ಪ್ರಯತ್ನವನ್ನು ಮಾಡುವುದಿಲ್ಲ. ಏಕೆಂದರೆ ಪ್ರತಿಯೊಬ್ಬ ಸಾಧು – ಸಂತರ ಒಂದು ಪ್ರವೃತ್ತಿ ಏನೆಂದರೆ ಇನ್ನೊಬ್ಬರ ಕಾಲೆಳೆಯುವುದು. ತಮ್ಮನ್ನು ತಾವೇ ಪ್ರಚಾರ ಮಾಡಿಕೊಳ್ಳುವುದು. ನನಗೆ ಈ ರೀತಿಯ ಸಂತರೂ ಸಿಕ್ಕಿದ್ದಾರೆ. ಅವರು ಹೇಳುತ್ತಾರೆ. ಅಗರ್‌ವಾಲ್‌ಜಿ ನಮ್ಮ ಪೋಸ್ಟರ್ ಕಡಿಮೆ ಇದೆ, ಆದ್ದರಿಂದ ನಮ್ಮ ಪ್ರಚಾರ ಕಡಿಮೆ ಆಗುತ್ತಿದೆ. ಇದನ್ನು ನಾನು ಗುರುಗಳಲ್ಲಿ ಎಂದೂ ನೋಡಿಲ್ಲ. ಹಾಗೆಯೇ ಕೆಲವರು ತಮ್ಮ ದಿನದ ಖರ್ಚನ್ನು ನಿಗದಿಪಡಿಸಿಕೊಂಡು ಬರುತ್ತಾರೆ. ಆದರೆ ಅವರೂ ಗುರುಗಳೇ. ಪ್ರತಿಯೊಬ್ಬ ಗುರುವನ್ನೂ ಈಶ್ವರನು ತನ್ನ ಅಂಶದಿಂದ ಗುರುವನ್ನಾಗಿ ಮಾಡಿದ್ದಾನೆ. ಆದರೆ ಯಾವುದು ಕೆಟ್ಟದ್ದು, ಯಾವುದು ದೋಷ, ಯಾವುದು ಗುಣ ಇವುಗಳನ್ನೆಲ್ಲ ಅರ್ಥೈಸಿಕೊಳ್ಳಲು ನಾನು ಬಹಳ ಸಣ್ಣವನು, ಆದರೆ ನಾನು ಇಷ್ಟು ಹೇಳಬಲ್ಲೆ ನನಗೆ ಗುರುಗಳು ಒಳ್ಳೆಯವರಾಗಿ ಕಂಡಿದ್ದಾರೆ.

ಆರಂಭದಲ್ಲಿ ನಾನು ಗುರುಗಳಲ್ಲಿ ಅಷ್ಟು ಬೇಗನೆ ವಿಶ್ವಾಸವನಿಡಲಿಲ್ಲ. ನನ್ನ ಹೆಂಡತಿ ತುಂಬಾ ಗೌರವಿಸುತ್ತಿದ್ದಳು. ಅವಳು ಮೀರಾಬಾಯಿಯಂತೆ ಭಕ್ತಳಾಗಿದ್ದಳು. ನಿಧಾನವಾಗಿ ನಾನೂ ಅವರ ಬಗ್ಗೆ ಆಕರ್ಷಿತನಾಗಲಾರಂಭಿಸಿದೆ. ನನಗೀಗ ಇಲ್ಲಿ ಬಹಳ ಶಾಂತಿ ಸಿಗುತ್ತಿದೆ; ಸುಖ ಸಿಗುತ್ತಿದೆ ಮತ್ತು ಬಹಳ ಜ್ಞಾನ ಸಿಗುತ್ತಿದೆ. ಹಾಗೆಯೇ ದೊಡ್ಡ ದೊಡ್ಡ ಸಂಕಷ್ಟದಿಂದ ಮುಕ್ತಿ ಸಿಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಾವು ಏನು ಒತ್ತಡಮಯವಾದ ಕೆಲಸದಲ್ಲಿ ಸಿಕ್ಕಿಕೊಂಡಿದ್ದೇವೆ, ಒತ್ತಡಮಯವಾದ ಸಂದರ್ಭಗಳನ್ನು ಸೃಷ್ಟಿಸುವಲ್ಲಿ ಪರಿಣತರಾಗಿದ್ದೇವೆ. ಗುರುಗಳ ಸನ್ನಿಧಿಯಲ್ಲಿ ಅವೆಲ್ಲ ದೂರವಾಗುತ್ತವೆ, ಅನಂತರ ಒತ್ತಡವಿಲ್ಲ.

ಗುರುಗಳ ಮುಖದಲ್ಲಿ ಯಾವ ನಗುವಿದೆಯೋ, ನಿರಂತರ ಹಸನ್ಮುಖ ಅದನ್ನು ನೋಡುತ್ತಿದ್ದರೆ ನೋಡುತ್ತಲೇ ಇರೋಣವೆಂದೆನಿಸುತ್ತದೆ.

ಹರೇರಾಮ ದ ಈ ಬಾರಿಯ ಪ್ರಮುಖರು

ಶ್ರೀರಾಧೇಶ್ಯಾಮ ಅಗರವಾಲ್

ಇಮಾಮಿ ಲಿಮಿಟೆಡ್ ಅಧ್ಯಕ್ಷರು

*ಜನನ- ೧೯೪೫ ಫೆಬ್ರವರಿ ೧೮

*ಪದವಿ MCom, LLB, FCA, FCS

*ಸ್ವಂತ ಕಂಪೆನಿಯನ್ನು ಆರಂಭಿಸುವ ಮೊದಲು ಬಿರ್ಲಾ ಗ್ರೂಪಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರಲ್ಲದೇ ಅಲ್ಪ ಸಮಯದಲ್ಲಿ ಉನ್ನತ ಹುದ್ದೆಗೇರಿ ಅತ್ಯಂತ ಕಿರಿಯ ಪ್ರೆಸಿಡೆಂಟ್ ಎನಿಸಿಕೊಂಡಿದ್ದರು.

*ಅಂತಹ ಉನ್ನತ ಉದ್ಯೋಗವನ್ನು ಬಿಟ್ಟು ೨೦ಸಾವಿರ ರೂಗಳ ಬಂಡವಾಳದಲ್ಲಿ ೧೯೭೪ರಲ್ಲಿ ತಮ್ಮ ಬಾಲ್ಯದ ಗೆಳೆಯ ಶ್ರೀರಾಧೇಶ್ಯಾಮ್ ಗೋಯಂಕಾ ಅವರನ್ನು ಸೇರಿಸಿಕೊಂಡು ಸ್ವಂತ ಉದ್ಯಮವನ್ನು ಆರಂಭಿಸಿದರು.

*ಇಂದು ಇಮಾಮಿ ಗ್ರೂಪಿನ ಮೌಲ್ಯ ೩೦೦೦ ಕೋಟಿ ರೂ.

*ತೀವ್ರತರವಾದ ಜ್ಞಾನದ ಆಕಾಂಕ್ಷೆ ಅವರನ್ನು ಉತ್ತಮ ಪುಸ್ತಕ ಓದುಗರನ್ನಾಗಿಸಿದೆ.

*ಅವರು ಚಿತ್ರಗಳ ಮತ್ತು ಶಿಲ್ಪಗಳ ಅತ್ಯುತ್ತಮ ಸಂಗ್ರಾಹಕ. ವಿಶ್ವದಲ್ಲೇ ಅತ್ಯಪರೂಪವಾದ ಚಿತ್ರ – ಶಿಲ್ಪಗಳು ಅವರ ಸಂಗ್ರಹದಲ್ಲಿದೆ.

*ತಮ್ಮದೇ ದಾಖಲೆಗಳನ್ನು ಮುರಿಯುತ್ತಾ, ತಮಗೆ ತಾವೇ ಮತ್ತೊಂದು ಗುರಿಯನ್ನು ಹಾಕಿಕೊಂಡು ಅದನ್ನು ತಲುಪಲು ಸದಾ ಪ್ರಯತ್ನ ಶೀಲರಾಗಿರುವುದು ಅವರ ಸ್ವಭಾವ.

*ಸಂತರೊಂದಿಗೆ ಒಡನಾಟ; ಅವರೊಂದಿಗೆ ಧರ್ಮ, ಅಧ್ಯಾತ್ಮದ ಕುರಿತು ಚರ್ಚಿಸುವುದು; ಅವರ ಉಪದೇಶಗಳನ್ನು ಆಲಿಸುವುದು ಅವರ ನಿತ್ಯದ ಅಭ್ಯಾಸ.

*ಧರ್ಮ ಕಾರ್ಯಗಳಿಗೆ ಕೊಡುಗೈ ದಾನಿ.

*ಬಡವರಿಗೆ ಸದಾ ಪ್ರೀತಿ ಪೂರ್ವಕ ನೀಡುವುದು ಅವರ ಹೃದಯವಂತಿಕೆ.

*ಸರಳ ಹಾಗೂ ಶಿಸ್ತಿನ ಜೀವನ ಅವರದ್ದು.

“ನಾನೆಷ್ಟು ಅದೃಷ್ಟವಂತ!”- ಶ್ರೀ ಬಿ.ಕೆ.ಎಸ್. ವರ್ಮಾ
ಶ್ರೀ ಬಿ. ಕೆ. ಎಸ್. ವರ್ಮಾ

ಅಂತಾರಾಷ್ಟ್ರೀಯ ಚಿತ್ರಕಲಾವಿದರು

ಕೆಲವು ದಿನಗಳ ಹಿಂದೆ ಪವಾಡವೊಂದು ಜರುಗಿತು. ‘ಶ್ರೀಗಳು ಭಕ್ತರೊಬ್ಬರಿಗೆ ಕೊಡುವುದಕ್ಕೆ ಎರಡು ಚಿತ್ರಗಳು ಬೇಕು’ ಅಂತ ನನಗೆ ದೂರವಾಣಿ ಕರೆ ಬಂತು. ಚಿತ್ರದ ಕಾನ್ಸೆಪ್ಟ್ ಏನಿರಬೇಕೆಂದು ಶ್ರೀಗಳೇ ಲೈನ್ ಮೇಲೆ ಬಂದು ತಿಳಿಸಿದರು. ಅದನ್ನು ಕೇಳಿದ ಮೇಲೆ ನನಗನ್ನಿಸಿದ್ದು ಈ ಚಿತ್ರ ರಚಿಸಲು ೩ ತಿಂಗಳು ಬೇಕು ಅಂತ. ಚುರುಕಾಗಿ ಮಾಡುವದಾದರೂ ಒಂದೂವರೆ ತಿಂಗಳು ಬೇಕೇಬೇಕು. ನಾನು ಅದನ್ನೇ ಹೇಳಿದೆ. ಅದಕ್ಕೆ ಗುರುಗಳು ಹೇಳಿದ್ರು ’ವರ್ಮಾ ಮನಸು ಮಾಡಿದ್ರೆ ೩ ತಿಂಗಳ ಚಿತ್ರ ೩ ದಿನದಲ್ಲಿ ಆಗುತ್ತೆ’. ’೩ ತಿಂಗಳು ಬೇಕಾಗೋ ಚಿತ್ರ ಐದು ದಿನದಲ್ಲಿ ಹೇಗೆ ಆಗೋಕೆ ಸಾಧ್ಯ? ಅದೂ ಆಯಿಲ್ ಪೈಂಟ್!’ ನಾನು ಪ್ರಶ್ನಿಸಿದೆ.

ಶ್ರೀ ಬಿ. ಕೆ. ಎಸ್. ವರ್ಮಾ

’ಅದೆಲ್ಲ ಗೊತ್ತಿಲ್ಲ, ಆಗಲೇಬೇಕು, ಆಗುತ್ತೆ’ ಎಂದರು ಗುರುಗಳು!. ಸರಿ, ಆದದ್ದಾಗಲಿ ಎಂದು ಗುರುಗಳನ್ನು ಧ್ಯಾನಿಸಿ ಚಿತ್ರ ಬರೆಯಲು ಪ್ರಾರಂಭಿಸಿದೆ. ಶ್ರೀಗಳ ನಗು ಎಂದರೆ ನನಗೆ ಅತ್ಯಂತ ಪ್ರಿಯವಾದದ್ದು. ಅದನ್ನೇ ಧ್ಯಾನಿಸಿದೆ. ನೀವೇ ಚೇತನ ಕೊಡಬೇಕೆಂದು ಮನದುಂಬಿ ಪ್ರಾರ್ಥಿಸಿ ಚಿತ್ರ ಬರೆಯಲು ಪ್ರಾರಂಭಿಸಿದೆ. ಬರೆಯುವಾಗಲೆಲ್ಲ ಗುರುಗಳ ನಗುಮುಖವನ್ನೇ ಧ್ಯಾನಿಸುತ್ತಾ, ಮಧ್ಯೆ ಮಧ್ಯೆ ಮನಸ್ಸಿನಲ್ಲೇ ನಮಿಸುತ್ತಾ ಮುಂದುವರಿಸಿದೆ. ಆ ಚಿತ್ರದ್ದೋ ಹೊಚ್ಚಹೊಸ ಪರಿಕಲ್ಪನೆ. ಅವತ್ತು ಬೆಂಗಳೂರಿನಲ್ಲಿ ಜಡಿಮಳೆ. ಆಯಿಲ್ ಪೆಯಿಂಟಿನಲ್ಲಿ ಮಾಡಬೇಕಾದ ಸೂಕ್ಷ್ಮ ಕೆಲಸ. ಮಳೆ ಬೀಳುತ್ತಾ ಇದ್ದಿದ್ದರಿಂದ ಚಿತ್ರ ಬೇಗ ಬೇಗ ಒಣಗುತ್ತ ಇರಲಿಲ್ಲ. ಯಾವುದೋ ಧೈರ್ಯದ ಮೇಲೆ ಮಾಡತೊಡಗಿದೆ. ನಾನೇ ನಿರೀಕ್ಷಿಸಿರಲಿಲ್ಲ, ಇಡೀ ಐದು ದಿನಗಳಲ್ಲಿ ೨ ಚಿತ್ರ ಬರೆದು ಮುಗಿದೇ ಹೊಯಿತು! ಅದು ನನ್ನ ಅರವತ್ತು ವರ್ಷಗಳ ಚಿತ್ರ ಜೀವನದಲ್ಲಿ ಆದ ಒಂದು ಪವಾಡ…

ನನಗೆ ಗುರುಗಳ ಪರಿಚಯ ಆಗಿದ್ದು ೨೦೦೨ರಲ್ಲಿ ಎಂದು ನೆನಪು. ಅದಕ್ಕೂ ಹಿಂದೆಯೇ ನನ್ನ ’ಕಾವ್ಯಚಿತ್ರ’ ನೋಡಿದ್ದರು. ಆಗ ಅಷ್ಟೇನೂ ಆಪ್ತವಾದ ಪರಿಚಯ ಅಂತ ಆಗಿರಲಿಲ್ಲ. ಅದಾದ ಕೆಲವು ದಿನಗಳಲ್ಲಿ ಒಂದು ದಿನ ಪತ್ರವೊಂದು ಬಂತು, ಮುಂಬಯಿಯಿಂದ. ರಾಘವೇಶ್ವರರಿಂದ! ಸ್ವತಃ ಗುರುಗಳೇ ಬರೆದಿದ್ದರು! ನನಗೆ ಆಗ ರಾಜ್ಯೋತ್ಸವ ಪ್ರಶಸ್ತಿ ಬಂದಿತ್ತು. ಅದಕ್ಕೆ ಅಭಿನಂದನೆ ಮತ್ತು ಆಶೀರ್ವಾದ ತಿಳಿಸಿ.. ಎರಡೂ ಕೂಡ ಅನಿರೀಕ್ಷಿತವಾಗಿ ಆಗಿದ್ದು. ರಾಜ್ಯೋತ್ಸವ ಪ್ರಶಸ್ತಿಯನ್ನು ನಿರೀಕ್ಷಿಸಿರಲಿಲ್ಲ. ಗುರುಗಳ ಆಶೀರ್ವಾದ ಪತ್ರವಂತೂ ಊಹಿಸಿಯೇ ಇರದ ವಿಷಯ. ಆಗ ನನಗೆ ಅನ್ನಿಸಿದ್ದು, ಒಳ್ಳೆಯ ಕೆಲಸ ಮಾಡಿದರೆ ದೇವರಿಂದ ಮತ್ತು ಗುರುಗಳಿಂದ ಪ್ರತಿಸ್ಪಂದನ ಬಂದೇ ಬರುತ್ತದೆ ಅಂತ. ಅದಾದ ನಂತರ ಬಚ್ಚಗಾರಿನಲ್ಲಿ ಕಾವ್ಯಚಿತ್ರ ನಡಿಯುತ್ತಾ ಇತ್ತು. ಆಗ ಗುರುಗಳು ಕಾರ್ಯಕ್ರಮಕ್ಕೆ ಬಂದಿದ್ದರು. ಕಾರ್ಯಕ್ರಮದಲ್ಲಿ ಶ್ರೀಗಳು, ’ವರ್ಮಾ, ತಮ್ಮ ಚಿತ್ರನೋಡಲು ಸಮಯ ಇಲ್ಲ, ಆದರೂ ನೋಡುವ ಮನಸ್ಸಿದೆ. ವಾಹನದಲ್ಲೆ ಕುಳಿತು ಕೆಲಕಾಲ ನೋಡ್ತೇವೆ’ ಅಂತ ಹೇಳಿದರು. ಕಾರ್ಯಕ್ರಮ ಪ್ರಾರಂಭವಾಗಲು ಸ್ವಲ್ಪ ಸಮಯ ಉಳಿದದ್ದರಿಂದ ಒಂದಿಷ್ಟು ಹೊತ್ತು ಸಂಭಾಷಿಸಿದರು. ಭಾಂಧವ್ಯದ ಪ್ರಾರಂಭ ಅಲ್ಲಿ. ನಂತರ ಆಗಾಗ ಯಾರದ್ದೋ ಮನೆಗಳಿಗೆ ಹೋಗುವ ಸಂದರ್ಭಗಳಲ್ಲಿ ’ಗುರುಗಳು ಈ ತರ ಒಬ್ಬರ ಮನೆಗೆ ಹೋಗುತ್ತಾ ಇದ್ದಾರೆ. ಒಂದು ಚಿತ್ರ ಬೇಕು’ ಅಂತ ಫೋನ್ ಬರುತ್ತಾ ಇರುತ್ತದೆ. ನಾನು ’ವಾಟರ್ ಕಲರ್ ಆದ್ರೆ ಒಂದು ವಾರ ಬೇಕು’ ಅಂತ ಹೇಳುತ್ತಾ ಇದ್ದರೂ ’ಇಲ್ಲ, ನಾಳೆನೇ ಹೋಗುತ್ತಾ ಇದ್ದಾರೆ’ ಅಂತ ಅವರ ಶಿಷ್ಯರು ಹೇಳಿದರೆ ನನಗೆ ’ಆಗಲ್ಲ’ ಅಂತ ಹೇಳೋಕೆ ಮನಸು ಬರುವುದಿಲ್ಲ.. ಅಂಥ ಪ್ರೀತಿಯ ಬೆಸುಗೆ.

ಶ್ರೀ ಬಿ. ಕೆ. ಎಸ್. ವರ್ಮಾ

ಅವರ ಕಣ್ಣುಗಳಲ್ಲಿ ಅದಮ್ಯ ಚೇತನ ಇದೆ. ಯಾವತ್ತೂ ಮುಖದಲ್ಲಿ ಒಂದು ತರಹ ಲವಲವಿಕೆ, ಮನಸಿಗೆ ಸ್ಫೂರ್ತಿ ಕೊಡುವ ಮುಖಭಾವ. ಒಂದು ವಿಷಯ ನನ್ನ ಮನಸ್ಸಿಗೆ ಸದಾ ಬರುತ್ತಾ ಇರುತ್ತದೆ .. ನೂರಾರು ಜನರ ಹತ್ತಿರ ಸದಾ ಮಾತನಾಡುತ್ತಾ ಇರುತ್ತಾರೆ. ಅನುಷ್ಠಾನ ಇತ್ಯಾದಿಗಳು, ಸಂನ್ಯಾಸತ್ವದ ಕಠಿಣ ನಿಯಮಗಳು ಇರುತ್ತವೆ. ಇಷ್ಟೆಲ್ಲ ಇದ್ದರೂ ಕೂಡ ಸ್ವಲ್ಪವಾದರೂ ಡಲ್ ಆಗಿ ಇರುವುದು ನಾನು ಇದುವರೆಗೂ ಕಂಡಿಲ್ಲ. ಎಂತಹ ಚೈತನ್ಯ ಇದು! ಸದಾ ನಗುಮುಖ! ಅವರು ಪೀಠದಲ್ಲಿ ಕುಳಿತುಕೊಳ್ಳುವ ದೃಶ್ಯವೇ ಸೊಗಸು. ಪೀಠದಲ್ಲಿ ಕುಳಿತುಕೊಳ್ಳುವಾಗ ಸುಮ್ಮನೆ ಒಮ್ಮೆ ಸ್ಮೈಲ್ ಮಾಡುತ್ತಾರೆ ನೋಡಿ, ಆಗ ಕಣ್ಣಲ್ಲಿ ಏನೋ ಮಿಂಚು ಹೊಳೆದ ಹಾಗಾಗುತ್ತದೆ. ನನ್ನ ಶ್ರೀಮತಿಯವರು ಯಾವಾಗಲೂ ಹೇಳುತ್ತಾ ಇರುತ್ತಾರೆ, ’ಅವರನ್ನು ನೇರವಾಗಿ ನೋಡೋಕೆ ಸಾಧ್ಯಾನೆ ಇಲ್ಲ, ಅಂತಹ ತೇಜಸ್ಸು’ ಅಂತ. ನಾನು ಕಂಡುಕೊಂಡ ಹಾಗೆ ಶ್ರೀಗಳದ್ದು ಮಗುವಿನಂತಹ ಮನಸ್ಸು. ಗೋಸಂರಕ್ಷಣೆಗೋಸ್ಕರ ತಮ್ಮನ್ನೇ ಅರ್ಪಿಸಿಕೊಂಡಿದ್ದಾರೆ. ಲೋಕದಲ್ಲಿ ತಮ್ಮ ಸ್ವಾರ್ಥಕ್ಕೋಸ್ಕರ ದುಡಿಯುವವರು ತುಂಬಾ ಜನರಿದ್ದಾರೆ, ಹಣಕ್ಕೊಸ್ಕರ, ಕೀರ್ತಿಗೋಸ್ಕರ… ಆದರೆ ಗುರುಗಳು ಹಾಗಲ್ಲ, ಗೋವಿಗೋಸ್ಕರ ತಮ್ಮನ್ನೇ ಅರ್ಪಿಸಿಕೊಂಡಿದ್ದಾರೆ. ಸಭೆಯೊಂದರಲ್ಲಿ ಅವರು ಹೇಳಿದ ’ಗೋರಕ್ಷಣೆಗೋಸ್ಕರ  ನಮ್ಮನ್ನೇ ಅರ್ಪಿಸಿಕೊಂಡಿದ್ದೇವೆ’ ಎಂಬ ಮಾತು ನನ್ನ ಮನಸ್ಸಿನಲ್ಲಿ ನಿಂತುಹೋಗಿದೆ.

ಸ್ವಾಮಿಗಳು ಅಂದರೆ ಮಡಿ ಮಡಿ ಅಂತ ಸದಾ ಜನರನ್ನು ದೂರ ಮಾಡುವವವರು ಎಂಬ ಭಾವನೆ ಸಮಾಜದಲ್ಲಿ ಇದೆ. ಆದರೆ ಶ್ರೀಗಳ ಪ್ರೀತಿ ಎಲ್ಲರನ್ನೂ ಹತ್ತಿರ ಸೇರಿಸಿಕೊಳ್ಳುವಂತಹದ್ದು. ಮಡಿ ಮೈಲಿಗೆಗಳ ಬದಲು ಶುದ್ಧ ಪ್ರೀತಿ ಇದೆ. ಇದನ್ನು ನೋಡಿದ ನನಗೆ ನೆನಪು ಬಂದಿದ್ದು ರಾಮ ಶಬರಿಯನ್ನು ಪ್ರೀತಿಸಿದ ಘಟನೆ. ನನಗೆ ಎಷ್ಟೋ ಬಾರಿ ಅವರು ರಾಮನಾಗಿ ಕಾಣಿಸಿದ್ದಾರೆ. ಎಳೆಯ ಮುದ್ದು ಕೃಷ್ಣನಾಗಿ ಕಾಣಿಸಿದ್ದಾರೆ. ಅಂಥದೊಂದು ಚಿತ್ರ: ರಾಜ್ಯಸಂರಕ್ಷಣೆಯ ರಾಮ, ಗೋಸಂರಕ್ಷಣೆಯ ಕೃಷ್ಣ ಎರಡೂ ಶ್ರೀಗಳಲ್ಲಿರುವಂತೆ ಒಂದು ಚಿತ್ರ ಕೂಡ ಮಾಡಿದ್ದೇನೆ. ಆ ಚಿತ್ರವನ್ನು ಶ್ರೀಗಳಿಗೆ ಶ್ರೀರಾಮಾಶ್ರಮದಲ್ಲಿ ಭಕ್ತಿಯಿಂದ ಅರ್ಪಿಸಿದೆ. ಆಗ ಅದನ್ನು ನೋಡಿ ಅದೆಷ್ಟು ಸಂತೋಷ ಪಟ್ಟರೆಂದರೆ ಆಗ ಮನಸ್ಸು ಪಡೆದುಕೊಂಡ ಶಕ್ತಿ, ಆ ಅನುಭೂತಿ ಅದೆಷ್ಟೋ ಕಾಲದವರೆಗೂ ತುಂಬಿತ್ತು. ನನಗೆ ಶ್ರೀಗಳೊಂದಿಗೆ ಅದೆಷ್ಟೋ  ಬಾರಿ ಮಾತನಾಡುವ ಅವಕಾಶ ಸಿಕ್ಕಿದೆ. ಒಂದು ಕಡೆ ಕುಳಿತು ಮಾತನಾಡುತ್ತಾ ಇದ್ದಾಗ ಡಿಸ್ಟರ್ಬ್ ಆಗುತ್ತ ಇದೆ ಅನ್ನಿಸಿದರೆ ’ಬನ್ನಿ ಮತ್ತೊಂದು ಕೋಣೆಯಲ್ಲಿ ಕುಳಿತು ಮಾತನಾಡೋಣ’ ಎಂದು ಮತ್ತೊಂದು ಕೋಣೆಗೆ ಕರೆದೊಯ್ದು ಮಾತನಾಡುತ್ತಾರೆ. ಅಷ್ಟು ಸೂಕ್ಷ್ಮ! ನಾನು ಅವರ ಬಳಿ ನನ್ನ ಯೋಜನೆಗಳ ಬಗ್ಗೆ ಹೇಳುತ್ತಾ ಇರುತ್ತೇನೆ, ಈ ರೀತಿ ಗೋವರ್ಧನ ಗಿರಿ ಇರಬೇಕು, ಇಲ್ಲಿ ಹೀಗಿರಬೇಕು ಅಂತ… ಗೋಸಂಬಂಧೀ ದಿವ್ಯ ಸಮುಚ್ಚಯ, ಹಾಗೂ ಗೌ-ಪುರದ ಬಗ್ಗೆ. ಅದಕ್ಕೆ ಅವರು ಹೇಳುತ್ತಾರೆ ’ಇಲ್ಲೇ ಇದ್ಬಿಡು ವರ್ಮಾ ನೀನು’ ಅಂತ… ನಾನು ಹೃದಯ ತುಂಬಿ ಹೇಳುತ್ತಾ ಇದ್ದೆ… ’ಮಗನಿಗೊಂದು ಮದುವೆ ಆಗಲಿ ಸ್ವಾಮೀಜಿ, ಅದಾದ್ಕೂಡ್ಲೆ ಬಂದುಬಿಡ್ತೀನಿ’ ಅಂತ. ನಾನು ಮನೆಯಲ್ಲಿ ಅದೆಷ್ಟೋ ಬಾರಿ ನನ್ನ ಶ್ರೀಮತಿಯವರಿಗೆ ಹೇಳುತ್ತಾ ಇರುತ್ತೇನೆ ’ಗುರುಗಳು ನನಗೇನೋ ಹೊಸ ಚೈತನ್ಯ ಕೊಡ್ತಾ ಇದ್ದಾರೆ’ ಅಂತ.

ಗೋಕರ್ಣಕ್ಕೆ ನನ್ನನ್ನು ಕರೆಸಿದ್ದರು. ನಾನು ಅದೆಷ್ಟೋ ವರ್ಷಗಳಿಂದ ಹೋಗಬೇಕು ಅಂದುಕೊಂಡಿದ್ದೆ. ಆದರೆ ಆಗಿಯೇ ಇರಲಿಲ್ಲ. ಇದ್ದಕಿದ್ದಂತೆ ಒಂದು ದಿನ ಕರೆ ಬಂತು. ಗೋಕರ್ಣದ ’ಸಾರ್ವಭೌಮ’ ಪ್ರಶಸ್ತಿ ನಿಮಗೆ ಬಂದಿದೆ ಅಂತ. ಇದು ಭಗವಂತ ಕೊಟ್ಟಿದ್ದು ಅಂತ, ಸ್ವಾಮಿಕಾರ್ಯ, ಸ್ವಕಾರ್ಯ ಎರಡೂ ಆಯಿತು ಅಂತ ಹೋದೆ. ಅಲ್ಲಿ ಆತ್ಮಲಿಂಗ ಎಲ್ಲವನ್ನೂ ಗುರುಗಳ ಜೊತೆ ನೋಡಿ ಆದ ಸಂತೋಷ ಅತಿಶಯವಾದದ್ದು. ತುಂಬಾ ಸಂತೋಷವಾಯಿತು. ಅಂದು ಸಮುದ್ರತೀರದಲ್ಲಿ ಕುಳಿತು ’ಇಲ್ಲಿ ಮರಳಿನಲ್ಲಿ ಒಂದು ಆತ್ಮಲಿಂಗ ಮಾಡ್ಬೇಕು, ಗುರುಗಳು ಅದನ್ನು ನೋಡ್ಬೇಕು’ ಅಂತ ಕನಸು ಕಂಡಿದ್ದು ಇನ್ನೂ ನೆನಪಿದೆ.

ಶ್ರೀಗಳ ಧ್ವನಿಯಲ್ಲೊಂದು ಮಾಂತ್ರಿಕ ಶಕ್ತಿಯಿದೆ. ಅವರ ಪ್ರತಿ ಶಬ್ದಗಳಲ್ಲೂ ದಿವ್ಯವಾದ ಅರ್ಥ ಇದೆ. ಇಂದು ಮುಂಜಾನೆ ತಾನೆ ಓದುತ್ತಾ ಇದ್ದೆ.. ಶ್ರೀಗಳು ಬರೆದ ಬ್ಲಾಗ್‍ನಲ್ಲಿ… ’ಜಗತ್ತು ಉದ್ಧಾರ ಮಾಡ್ಬೇಕು ಅಂದ್ರೆ ಸಿಂಧುವಾಗಿರಬೇಕು, ಆತ್ಮೋದ್ಧಾರಕ್ಕಾದರೆ ಬಿಂದು ಸಾಕು’ ಅಂತ. ಎಷ್ಟು ಅರ್ಥಪೂರ್ಣವಾಗಿದೆ ಈ ಮಾತು.

ಶ್ರೀ ಬಿ. ಕೆ. ಎಸ್. ವರ್ಮಾ ೬೦ರ ಸಂಭ್ರಮ

ನನಗೆ ಅರವತ್ತು ವರ್ಷಗಳು ಪೂರೈಸಿದ ಸಂಧರ್ಭದಲ್ಲಿ ಹಮ್ಮಿಕೊಂಡಿದ್ದ ಸಮಾರಂಭಕ್ಕೆ ಗುರುಗಳನ್ನು ಕರೆದಿದ್ದೆವು. ಆಗ ಶ್ರೀಗಳು ತುಂಬಾ ಬ್ಯುಸಿಯಾಗಿದ್ದರು. ಕರೆಯುವುದಕ್ಕೇ ಸಂಕೋಚ ನಮಗೆ. ಆದರೂ ಏನೋ

ದೂರದ ಆಸೆಯಿಂದ ಕರೆದೆವು. ಒಪ್ಪಿಕೊಂಡರು. ಗುರುಗಳು ಅಂದು ಮಡಿಕೇರಿಯಿಂದ ಕಾರ್ಯಕ್ರಮಕ್ಕೋಸ್ಕರವೇ ಬಂದರು. ಗುರುಗಳು ಕಾರಿನಿಂದ ಇಳಿದಿದ್ದನ್ನು ಕಂಡ ಕೂಡಲೇ ರೋಮಾಂಚನವಾಯಿತು. ಕಣ್ಣುತುಂಬಿ ಬಂತು. ಆಶೀರ್ವಾದ ಮಾಡಿದರು. ಅವತ್ತು ನನಗೆ ಅರವತ್ತು ವರ್ಷದ ಬದುಕು ಸಾರ್ಥಕ ಅಂತ ಅನ್ನಿಸಿತು. ’ಗುರುಗಳು ಸಾಮಾನ್ಯವಾಗಿ ಕುಳಿತುಕೊಂಡೇ ಸನ್ಮಾನ ಮಾಡುತ್ತಾರೆ, ಆದರೆ ನಿಮ್ಮ ಸನ್ಮಾನ ಸಂದರ್ಭದಲ್ಲಿ ನಿಮ್ಮನ್ನು ಕೂರಿಸಿ ತಾವು ನಿಂತು ಸನ್ಮಾನ ಮಾಡಿದರು. ಇದು ತುಂಬಾ ಅಪರೂಪದ್ದು’ ಎಂದು ನನ್ನ ಸ್ನೇಹಿತ ಡಾ.ಪ್ರಸಾದ್ ಹೇಳಿದರು. ಇದಕ್ಕಿಂತ ಇನ್ನೇನು ಭಾಗ್ಯ ಬೇಕು ಅಂತ ಅನ್ನಿಸಿತು. ಇದನ್ನೆಲ್ಲ ಸದಾ ಮೆಲಕು ಹಾಕುತ್ತಾ ಇರುತ್ತೇನೆ.

ನನಗೆ ಅದೆಷ್ಟೋ ಬಾರಿ ಅನ್ನಿಸಿದೆ,… ನನ್ನ ದೇಹ ಒಂದು ಮಠ.. ಇದರಲ್ಲಿ ಇರುವವರು ಗುರುಗಳು ಅಂತ. ಅವರಲ್ಲೊಂದು ವಿಶೇಷ ಶಕ್ತಿಯಿದೆ. ಕಲ್ಕತ್ತಕ್ಕೂ ಕರೆದುಕೊಂಡುಹೋಗಿದ್ದರು. ಅಲ್ಲಿ ಇಮಾಮಿ ಸಂಸ್ಥೆಯ ಅಗರವಾಲ್  ಹಾಗೂ ಗೋಯೆಂಕ ಅವರು ನನ್ನ Demonstration ನೋಡಿ ಸಂತೋಷ ಪಡುತ್ತಾ ಇದ್ದರೆ ಅವರ ಮುಖ ನೋಡಿ ಗುರುಗಳಿಗೆ ಹಿಗ್ಗು.. ’ನಮ್ಮ ಹುಡುಗ ಹೇಗೆ ಮಾಡ್ತ ಇದ್ದಾನೆ, ನೋಡಿ’ ಅಂತ.

ವರ್ಮರ ಕುಂಚದಲ್ಲಿ ಅರಳಿದ ಶ್ರೀಗಳ ಚಿತ್ರ

ಒಮ್ಮೆ ಗುರುಗಳೊಂದಿಗೆ ರಾಮಚಂದ್ರಾಪುರಮಠದ ಗೋಶಾಲೆ ನೋಡುವ ಭಾಗ್ಯ ನನ್ನದಾಗಿತ್ತು. ಮಠಕ್ಕೆ ಹೋದಾಗ, ನಾನು ಗೋಶಾಲೆ ನೋಡಬೇಕು ಅಂತ ಹೊರಟೆ. ಗುರುಗಳು ತಾವೂ ನಮ್ಮೊಂದಿಗೆ ಬರುವುದಾಗಿ ಹೇಳಿದರು. ನನಗೆ ಹಿಗ್ಗಾಯಿತು. ಇಂದು ಇದೆಂಥಾ ಅದೃಷ್ಟ, ಗುರುಗಳೊಂದಿಗೆ ಗೋಶಾಲೆ ನೋಡುವ ಸುವರ್ಣಾವಕಾಶ ಸಿಕ್ಕಿತಲ್ಲ ಅಂತ. ಸರಿ, ಗುರುಗಳೊಂದಿಗೆ ಗೋಶಾಲೆಗೆ ಹೋದೆವು. ಅಲ್ಲಿ ಕರುಗಳು ತಾವು ಮುಂದೆ ತಾವು ಮುಂದೆ ಅಂತ ಬಂದು ಗುರುಗಳನ್ನು ಮುತ್ತಿಕೊಳ್ಳುತಾ ಇದ್ದ ದೃಶ್ಯ ನೋಡಿ ನನಗೆ ಶ್ರೀಕೃಷ್ಣನನ್ನು ಗೋವುಗಳು ಸುತ್ತುವರೆಯುತ್ತಿದ್ದವು ಅಂತ ಓದಿದ ವಿಷಯ ನೆನಪಾಯಿತು. ಪ್ರತಿ ಕರುವನ್ನೂ ಮೈಸವರಿ ಪ್ರೀತಿಸಿದರು. ’ಏನೋ, ಸಿಟ್ಟೇನೋ?’ ಅಂತ ಗುರುಗುಟ್ಟಿಕೊಂಡು ನೋಡುತ್ತಾ ಇದ್ದ ಕರುವನ್ನು ಮಾತನಾಡಿಸಿದರು. ’ಹೇಗಿದ್ದಿಯೋ’ ಅಂತ ಇನ್ನೊಂದನ್ನು. ಗುರುಗಳು ಕುಳಿತೆಡೆಗೆ ಹಸುಕರುಗಳೆಲ್ಲ, ಮಧ್ಯ ಇರುವ ನಮ್ಮೆಲ್ಲರನ್ನೂ ದಾಟಿಕೊಂಡು ಬರುತ್ತಾ ಇದ್ದವು. ಇದೆಂಥ ಪವಾಡ ಅಂತ ನನಗೆ ಆಶ್ಚರ್ಯ ಆಯಿತು. ಗುರುಗಳು ಹೋದೆಡೆಗೆ ಹಸುಕರುಗಳೆಲ್ಲ ಹಿಂಬಾಲಿಸಿಕೊಂಡು ಹೊಗುತ್ತಾ ಇದ್ದುದನ್ನು ನೋಡಿ ಮೂಕವಿಸ್ಮಿತನಾದೆ. ಆಗ ನನಗೆ ಗೋಪಾಲನೆ ಮಾಡುತ್ತಾ ಇರುವ ಶ್ರೀಕೃಷ್ಣನನ್ನೇ ಕಣ್ಣುತುಂಬಾ ನೋಡುತ್ತಾ ಇದ್ದೀನಿ ಎಂಬ ಹಾಗೆ ಭಾಸವಾಯಿತು. ಗುರುಗಳ ಬಗ್ಗೆ ಹೇಳಿದಷ್ಟಕ್ಕೂ ಮುಗಿಯದು. ಆದರೆ ನನಗೆ ಅಷ್ಟೇನೂ ಚನ್ನಾಗಿ ಹೇಳಲು ಬರುವುದಿಲ್ಲ. ಕುಂಚ ನನ್ನ ಅಭಿವ್ಯಕ್ತಿ ಮಾಧ್ಯಮ, ಪೆನ್ನು ಅಲ್ಲ. ನನಗೆ ಅವರನ್ನು ನೆನಪಿಸಿಕೊಂಡಾಗಲೆಲ್ಲ ಆನಂದ.. ನನಗೆ ’ಆನಂದ’ವೇ ಅವರಾಗಿದ್ದಾರೆ.

ಗುರುಗಳ ಯೋಜನೆಗಳಂತೂ ಸರ್ವಜನರಿಗೂ ಉಪಯುಕ್ತವಾದಂತವುಗಳು. ಅವುಗಳಲ್ಲಿ ಕಾಳಿನಷ್ಟೂ ಅನುಪಯುಕ್ತತೆ ಇಲ್ಲ. ಅವರು ಹೇಳುತ್ತಾರೆ, ಇದು ಬೀಜ, ನಿಮ್ಮ ಎದೆಯಲ್ಲಿ ಮೊಳಕೆ ಆಗಲಿ ಅಂತ. ಗೋಸಂರಕ್ಷಣಾ ಆಂದೋಲನದ ಬಗ್ಗೆ ನನಗೆ ಹೇಳಿದ ಮಾತು ’ವರ್ಮಾ, ವೃಕ್ಷಗಳ ಬಗೆಗೆ ಚಿತ್ರಗಳ ಮೂಲಕ ಜಾಗೃತಿ ಮೂಡಿಸಿದ್ದೀರ, ಗೋವುಗಳ ಬಗೆಗೂ ಜಾಗೃತಿ ಮೂಡಿಸಲು ಚಿತ್ರಗಳನ್ನು ಬರೆಯಿರಿ’ ಎಂಬುದು. ಗುರುಗಳ ಜೀವನಚರಿತ್ರೆಯನ್ನು ನನ್ನ ಚಿತ್ರಗಳ ಮೂಲಕ ಬಿಂಬಿಸಲು ಪ್ರಯತ್ನ ನಡಿಯುತ್ತಾ ಇರುವುದು ನನ್ನ ಸೌಭಾಗ್ಯ. ಗುರುಗಳ ಬಾಲ್ಯ, ಅವರು ಪುನರಪಿ ಜನನಂ ಶ್ಲೋಕ ಕೇಳುತ್ತ ಊಟ ಮಾಡುವುದು ಹೀಗೆ ಅವರ ಕಾಲದಲ್ಲೇ ಅವರ ಜೀವನಚರಿತ್ರೆಯನ್ನು ಚಿತ್ರಗಳ ಮೂಲಕ ಬರೆಯಲು ಅವಕಾಶ ಸಿಕ್ಕಿದೆ ಎಂಬ ಖುಶಿಯಿಂದ ಆ ಕೆಲಸದಲ್ಲಿ ತೊಡಗಿದ್ದೇನೆ. ಅವರು ತಾಯಿಯನ್ನೊಪ್ಪಿಸಿ ಸಂನ್ಯಾಸ ತೆಗೆದುಕೊಳ್ಳುವುದು, ಈಜಿಕೊಂಡು ಹೋಗಿ ಶಿವಪೂಜೆ ಮಾಡುತ್ತ ಇದ್ದಿದ್ದು.. ಈ ಎಲ್ಲ ಚಿತ್ರಗಳನ್ನೂ ಬರೆಯುವಾಗ ತುಂಬಾ ಅನುಭವಿಸಿ ಅನುಭವಿಸಿ ಬರೆದಿದ್ದೇನೆ. ಆ ಸಮಯದಲ್ಲಿ ನಾನೇ ಗುರುಗಳಾಗಿ ಭಾವಿಸಿಕೊಂಡಿದ್ದಿದೆ, ಸಂತೋಷದಲ್ಲಿ ಕಣ್ಣೀರು ಹಾಕಿದ್ದಿದೆ.

ನಾನು ಏನೇ ಮಾಡಬೇಕಾದರೂ, ಗುರುಗಳನ್ನು ನೆನಸದೇ ಹೋಗುವುದಿಲ್ಲ. ಅವರು ಏನು ಹೇಳಿದರೂ ಮಾಡುತ್ತೇನೆ. ವಿವೇಕಾನಂದರು ಹೇಳಿದಂತೆ ಇಂಥವರು ನಾಲ್ಕು ಜನ ದೇಶದ ನಾಲ್ಕು ಮೂಲೆಯಲ್ಲಿ ಇದ್ದರೆ ಈಗಿರುವ ಬಾಂಬ್ ಸಂಸ್ಕೃತಿ ಹೋಗಿ ಶಾಂತಿ ನೆಲೆಸೀತು. ನನ್ನ ಕಲ್ಪನೆಯಲ್ಲಿ ಗುರುಗಳ ಕುರಿತಾಗಿ ಒಂದಿಷ್ಟು ಚಿತ್ರಗಳನ್ನು ಮಾಡಬೇಕೆಂದುಕೊಂಡಿದ್ದೇನೆ. ಹರೇರಾಮ ವೆಬ್ಸೈಟಿನಲ್ಲಿ ಬರುತ್ತಿರುವ ಗುರುಗಳ ಬ್ಲಾಗಿಗೆ ಪೂರಕವಾದ ಚಿತ್ರಗಳನ್ನು ಬರೆಯಲು ಗುರುಗಳು ಸೂಚಿಸಿದ್ದಾರೆ. ಖಂಡಿತ ಬರೆಯುತ್ತೇನೆ ಎಂದು ಹೇಳಿದೆ. ಇದು ದೇವರೇ ಹುಡುಕಿಕೊಂಡು ಬಂದು ಕೊಟ್ಟ ಅವಕಾಶವಾಗಿ ತೋರುತ್ತದೆ. ನನಗೆ ಆಶ್ಚರ್ಯವಾಗುವುದೆಂದರೆ ಅವರಿಗೆ ಇಷ್ಟು ಬರೆಯಲು ಸಮಯ ಹೇಗೆ ಸಿಗುತ್ತದೆ ಎಂಬುದು. ಕೇಳಿದೆ, ’ರಾಮಾಯಣ ಬರೆಯೋಕೆ ಎಷ್ಟು ಏಕಾಗ್ರತೆ ಬೇಕು, ವಾತಾವರಣ ಬೇಕು, ಶಾಂತಿ ಬೇಕು. ಅಂಥದ್ದರಲ್ಲಿ ಸದಾ ಬ್ಯುಸಿ ಇರುವ ತಮಗೆ ಬರೆಯೋಕೆ ಸಮಯ ಎಲ್ಲಿ ಸಿಗುತ್ತೆ’ ಅಂತ. ’ಕಾರಿನಲ್ಲಿ ಹೋಗುತ್ತ ಇರಬೇಕಾದ್ರೆ ನಾವು ಹೇಳ್ತೇವೆ, ಮತ್ತೊಬ್ರು ಬರೆದುಕೊಳ್ತಾರೆ’ ಅಂದರು. ಛೆ, ಪ್ರಯಾಣದಲ್ಲೂ ಇವರಿಗೆ ರೆಷ್ಟ್ ಸಿಗೋದಿಲ್ವಲ್ಲ ಎನ್ನಿಸಿತು. ಅವರು ವಿಶ್ರಾಂತಿ ಯಾವಾಗ ತೆಗೆದುಕೊಳ್ಳುತ್ತಾರೆ ಎಂಬುದು ನನಗಿನ್ನೊಂದು ಕೌತುಕದ ವಿಷಯ. ರಾಮಾಯಣದ ಬಗ್ಗೆ ಅವರು ಬರೆಯುತ್ತಾ ಇರೋ ಲೇಖನ ’ಯೋಚನೆ ಮಾಡಿ’ ಬರೆಯುತ್ತಿರುವಂತಹದ್ದಲ್ಲ. ಅದು ಒಳಗಿಂದ ಹರಿದು ಬರುತ್ತಿರುವುದು.

ಯಾವುದೋ ಚಿತ್ರ ತುಂಬಾ ಚೆನ್ನಾಗಿ ಮೂಡಿತೆಂದರೆ ಒಮ್ಮೆ ಗುರುಗಳಿಗೆ ತೋರಿಸೋಣವೆಂಬ ಭಾವ ತಾನಾಗೇ ಮೂಡುತ್ತದೆ. ಚಿತ್ರ ಬರೆಯುವಾಗ ಗುರುಗಳೇ ಪಕ್ಕದಲ್ಲಿ ನಿಂತ ಹಾಗೆ ಭಾಸವಾಗಿದೆ. ನನ್ನ ತಾಯಿ ಕೂಡ ಗುರುಗಳ ಭಕ್ತೆ. ಮೊದಲಬಾರಿ ಫೋಟೋ ನೋಡಿದಾಗಲೇ ಮುಖದಲ್ಲಿ ಮಹಾಪುರುಷರ ಲಕ್ಷಣ ಕಾಣಿಸ್ತಾ ಇದೆ  ಅಂತ ಕಣ್ಣಿಗೊತ್ತಿಕೊಂಡರು. ಸದಾ ತಮ್ಮ ತಲೆದಿಂಬಿನ ಬಳಿ ಗುರುಗಳ ಫೋಟೋ ಇಟ್ಟುಕೊಳ್ಳುತ್ತಾ ಇದ್ದರು. ಆದರೆ ಗುರುಗಳ ಭೇಟಿಗೆ ಸೂಕ್ತ ಅವಕಾಶ ಕೂಡಿ ಬಂದಿರಲಿಲ್ಲ. ನಂತರ ಅವರಿಗೆ ಖಾಯಿಲೆಯಾಗಿ ಆಸ್ಪತ್ರೆಯಲ್ಲಿದ್ದಾಗ ಅಲ್ಲಿಗೆ ಗುರುಗಳು ಬೇರೆ ಯಾವುದೋ ಕಾರ್ಯನಿಮಿತ್ತ ಬಂದರು. ನನ್ನ ತಾಯಿಯವರನ್ನು ಭೇಟಿ ಮಾಡಿದರು. ನನ್ನ ತಾಯಿ ಗುರುಗಳನ್ನು ಭೇಟಿ ಮಾಡಿದಾಗ ಆಕೆಗೆ ಆದ ಸಂತೊಷ ಮುಖದಲ್ಲಿ ವ್ಯಕ್ತವಾಗಿದ್ದು ನನಗಿನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ. ಆಗ ಆಕೆ ತನ್ನ ಬಳಿ ಇದ್ದ ಹತ್ತು ಸಾವಿರ ರೂಪಾಯಿಗಳನ್ನು ಗುರುಚರಣಕ್ಕೆ ಅರ್ಪಿಸಿದಳು. ಅದಾಗಿ ಕೆಲದಿನಗಳಲ್ಲೆ ತೀರಿಕೊಂಡಳು. ಅವಳ ಕೊನೆದಿನಗಳಲ್ಲಿ ಶ್ರೀಗಳ ದರ್ಶನ ಆಯ್ತು. ನನಗೆ ಆಕೆ ರಾಮನಿಗೆ ಶಬರಿ ಕಾದ ಹಾಗೆ ಕಾಯುತ್ತಾ ಇದ್ದಳೇನೋ ಅನ್ನಿಸಿದೆ.

ಇಂಥ ಅನೇಕ ಅನುಭವಗಳು ಆ ಕ್ಷಣಕ್ಕೆ ಅಂಥದ್ದೇನೋ ಅನ್ನಿಸದಿರಬಹುದು. ಆದರೆ ಸಮಯ ಕಳೆದಂತೆಲ್ಲ ಸ್ಫೂರ್ತಿಯನ್ನು ಕೊಡುವಂತವುಗಳಾಗುತ್ತದೆ.

ಗುರುಗಳಿಗೂ ನನಗೂ ಅದೆಂತ ಭಾಂಧವ್ಯ ಬೆಳದಿದೆಯೆಂದರೆ ನನ್ನ ಮನಸ್ಸಿನಲ್ಲಿ ಸದಾ ಅವರಿರುತ್ತಾರೆ. ನಾನು ಯೋಚಿಸುತ್ತ ಇರುತ್ತೇನೆ.. ಎಷ್ಟು ಸಾವಿರ ಜನ ಅವರ ಭಕ್ತರು! ಆದರೆ ನನ್ನ ಮೇಲೆ ಅವರು ಎಂಥಾ ಅತಿಶಯವಾದ ಪ್ರೀತಿ ಇಟ್ಟಿದ್ದಾರೆ, ನಾನೆಷ್ಟು ಅದೃಷ್ಟವಂತ ಅಂತ. ಒಟ್ಟಿನಲ್ಲಿ ನನ್ನ ದೃಷ್ಟಿಯಲ್ಲಿ ದೇವರ ಚೈತನ್ಯವೇ ಮನುಷ್ಯರೂಪವಾಗಿ ಬಂದು ಹೀಗೆ ನಮ್ಮೆಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತಿದೆ.

ಈ ವಾರದ ಹರೇರಾಮದ ಪ್ರಮುಖರು:

ಶ್ರೀ ಬಿ. ಕೆ. ಎಸ್. ವರ್ಮಾ

ಶ್ರೀಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ ವರ್ಮಾ.

ಜನಜನಿತವಾಗಿ ಬಿ.ಕೆ. ಎಸ್. ವರ್ಮಾ.

ಜನ್ಮ ೧೯೪೯ರ ಸಪ್ಟಂಬರ್  ಐದರಂದು.

ಎಳವೆಯಲ್ಲೇ ಚಿತ್ರಕಲೆಯೆಡೆಗೆ ಸೆಳೆತ.

ಮಹಾನ್ ಕಲಾವಿದರಾದ ಶ್ರೀ ಎ.ಸಿ.ಹೆಚ್. ಆಚಾರ್ಯ ಮತ್ತ್ತುಎ.ಎಸ್.ಸುಬ್ಬರಾವರ ಪ್ರಭಾವ.

ಪ್ರಜಾಮತದ ಚಿತ್ರಕಲಾವಿದನಾಗಿ ವೃತ್ತಿ ಆರಂಭ.

೧೫ರ ಎಳೆ ಹರಯದಲ್ಲಿಯೇ ಹಿಂದಿಯ ‘ಆದ್ಮಿ’ಗೆ ಸಹಾಯಕ ಕಲಾನಿರ್ದೇಶಕ. ಅನಂತರ ಹಲವು ಕನ್ನಡ ಚಿತ್ರಗಳಲ್ಲಿ ಕೆಲಸ.ಶ್ರೀ ದೇವಿಪ್ರಸಾದ ಚೌಧರಿ, ಶ್ರೀ ಜಯಚಾಮರಾಜ ಒಡೆಯರ್,  ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್,  ಶ್ರೀ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭೇಟಿ ಮಾಡಿ ಅವರ ಚಿತ್ರ ಬಿಡಿಸಿದ ವೈಶಿಷ್ಟ್ಯ.

೧೯೮೬-೮೭ರಲ್ಲಿ ವರ್ಮರ ಮೊದಲ ಏಕವ್ಯಕ್ತಿ ಪ್ರದರ್ಶನವನ್ನು ಡಾ.ರೋರಿಚ್ ಮತ್ತು ಶ್ರೀಮತಿ ದೇವಿಕಾರಾಣಿಯವರು ಉದ್ಘಾಟಿಸಿದರು.

ವರ್ಮಾರವರು ’ಹರೇರಾಮ’ದ ಸಂಪಾದಕ ಬಳಗದೊಂದಿಗೆ..

ದೇಶ-ವಿದೇಶಗಳಲ್ಲಿ ಅವರ ಚಿತ್ರಗಳು ಪ್ರದರ್ಶನಗೊಂಡಿವೆ.

ಅವರ ಅಪರೂಪದ ದಾರ ಮತ್ತು ಉಗುರಿನ ಚಿತ್ರರಚನೆ ಅಪಾರ ಜನಪ್ರಿಯ.

‘ಕಾವ್ಯ-ಚಿತ್ರ’, ‘ಗೀತ-ನೃತ್ಯ’ಗಳು ಜನಮನ್ನಣೆ ಗಳಿಸಿವೆ.

೧೯೯೭ರಲ್ಲಿ ಶತಾವಧಾನಿ ರಾ.ಗಣೇಶರೊಂದಿಗೆ ೨೪ ಗಂಟೆಗಳ ಕಾಲ ನಿರಂತರವಾಗಿ ನಡೆಸಿದ ‘ಕಾವ್ಯ-ಚಿತ್ರ’ ಒಂದು ದಾಖಲೆ.

ಪರಿಸರ ರಕ್ಷಣೆಯ ಸಂದೇಶ ನೀಡುವ ಚಿತ್ರಣದಲ್ಲಿ ವರ್ಮಾ ಪ್ರಖ್ಯಾತರು.

ಸನಾತನ ದೇವ-ದೇವತೆಗಳ ವರ್ಮರ ಚಿತ್ರ ಅತಿವಿಶಿಷ್ಟ.

ಸಂದ ಪ್ರಶಸ್ತಿಗಳು ಹಲವು;

ಅದರಲ್ಲಿ ಕೆಲವು:

ರಾಜ್ಯಲಲಿತ ಅಕಾಡೆಮಿ ಪ್ರಶಸ್ತಿ

ಆರ್ಯಭಟ ಪಶಸ್ತಿ

ರಾಜೀವಗ್ಧಾಂಧಿ ಪ್ರಶಸ್ತಿ

ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ

ಶ್ರೀ ರಾಮಚಂದ್ರಾಪುರಮಠದ ‘ಸಾರ್ವಭೌಮ ಪ್ರಶಸ್ತಿ’

ಇನ್ನೂ ಅದೆಷ್ಟೋ ಪ್ರಾದೇಶಿಕ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು.

“ನನ್ನ ಅಂತರಂಗದ ಚಾಲಕ ನನ್ನನ್ನು ಮುನ್ನಡೆಸುತ್ತಾನೆ. ನನ್ನ ಕೃತಿಗಳಾವುವೂ ನನ್ನದಲ್ಲ, ನಾನು ಅಭಿವ್ಯಕ್ತಿ ಕೇಂದ್ರ ಮಾತ್ರ”. ಎನ್ನುವುದು ವರ್ಮರ ವಿನೀತಭಾವ.

ಭಾವಚಿತ್ರಗಳು:

“ಮಾತೃಹೃದಯದ ಶ್ರೀಗಳು” – ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ.
ಡಾ. ವೀರೇಂದ್ರ ಹೆಗ್ಗಡೆ,

ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ.

ನನಗೂ ಶ್ರೀರಾಮಚಂದ್ರಾಪುರಮಠಕ್ಕೂ ಸಂಪರ್ಕವಾಗಿದ್ದು ಹಿಂದಿನ ಗುರುಗಳ  ಕಾಲದಲ್ಲಿ.  ಹಿಂದಿನ ಗುರುಗಳನ್ನು ಒಂದೆರಡು ಬಾರಿ ದರ್ಶನ ಮಾಡುವಂತಹ ಅವಕಾಶ ನನಗೆ ಸಿಕ್ಕಿತ್ತು.

ಭಕ್ತರ ’ಸಿರಿ’, ಧರ್ಮಸ್ಥಳ ಕ್ಷೇತ್ರ

ನನಗೆ ನೆನಪಿದ್ದ ಹಾಗೆ, ಒಂದು ಬಾರಿ ಕೊಲ್ಲೂರಿನಲ್ಲಿ ನಡೆದ ಚಂಡಿಕಾ ಹೋಮದ ಸಂದರ್ಭದಲ್ಲಿ, ಮತ್ತೊಂದೆರಡು ಬೇರೆ ಕಾರ್ಯಕ್ರಮಗಳಲ್ಲಿ ಕೂಡ ಭೇಟಿ ಮಾಡಿದ್ದೆ. ಅವರ ತೇಜಸ್ಸು ಮತ್ತು ಆ ದಿನಗಳಲ್ಲಿ ಸಮಾಜದಲ್ಲಿ ಅವರಿಗಿದ್ದ ವ್ಯಕ್ತಿತ್ವ  ಬಹಳ ದೊಡ್ಡದಾಗಿತ್ತು. ಆದರೆ  ನನ್ನ ವಯಸ್ಸಿಗೂ  ಅವರ ವಯಸ್ಸಿಗೂ ಬಹಳ ಅಂತರ ಇದ್ದಿದ್ದರಿಂದ ಅವರ ಸಾಮೀಪ್ಯದ ಅವಕಾಶ ನನಗೆ ಹೆಚ್ಚಾಗಿ ಸಿಕ್ಕಿರಲಿಲ್ಲ. ಆದರೆ, ರಾಘವೇಶ್ವರ ಪೂಜ್ಯರು ಪೀಠಾಧಿಕಾರಿಗಳಾದ ಮೇಲೆ ಅವರ ಮತ್ತು ನಮ್ಮ ನಡುವೆ ವಿಶ್ವಾಸ ಹೆಚ್ಚಿನದಾಗಿ ಬೆಳೆದಿದೆ. ಅನೇಕ ಬಾರಿ ನಾನು ಶ್ರೀಗಳ ಜೊತೆ ಕಳೆದಿದ್ದೇನೆ. ಅನೇಕ ಸಂದರ್ಭಗಳಲ್ಲಿ ನಾವು ಅವರ ಜೊತೆಗೆ ಖಾಸಗಿಯಾಗಿ ಸಂತೋಷದ ಕ್ಷಣಗಳನ್ನು ಕಳೆದದ್ದೂ ಉಂಟು. ಆತ್ಮೀಯತೆಯಿಂದ ಇಬ್ಬರೂ ನಕ್ಕು ನಲಿದಿದ್ದೇವೆ. ಅವರ ಸಾಮೀಪ್ಯ  ನನಗೆ ಬಹಳ ಇಷ್ಟವಾದ ವಿಚಾರ.

ಇಂತಹ ಸಂದರ್ಭಗಳಲ್ಲಿ ನಾನು  ಅವರಲ್ಲಿ ಕಂಡ ಒಂದು ಗುಣವೆಂದರೆ  ’ವಿಷಯಗಳನ್ನು ಸಂಗ್ರಹಿಸಬೇಕು, ವಿಷಯಗಳನ್ನು ತಿಳಿದುಕೊಳ್ಳಬೇಕು’ ಅನ್ನುವ ಹಂಬಲ ಮತ್ತು ಕುತೂಹಲ. ಅವರು ಅನೇಕ ವಿಷಯಗಳ ಕುರಿತು ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಆಗ ನಾವು ಕೂಡ   ನಮ್ಮ ಅನುಭವ ಏನು ಹೇಗೆ ಎನ್ನುವುದನ್ನು   ತಿಳಿಸಿದ್ದಿದೆ.  ಬಹುಶಃ ಪೀಠಕ್ಕೆ ಬಂದಮೇಲೆ, ಜಗದ್ಗುರುಗಳಾದಮೇಲೆ ಇನ್ನೊಬ್ಬರ ಮಾತು ಕೇಳುವವರು ಬಹಳ ಕಡಿಮೆ.  ಹೇಳುವವರೇ  ಹೆಚ್ಚು, ತಾವು ಸರ್ವಜ್ಞರು ಅಂತ ತಿಳಿದುಕೊಳ್ಳುವವರೇ ಜಾಸ್ತಿ. ಆದರೆ ಇನ್ನೊಬ್ಬರ ಅನುಭವವನ್ನು ಗೌರವಿಸುವ, ಇನ್ನೊಬ್ಬರ ಬಳಿ ಕೇಳಬೇಕು, ಮತ್ತೊಬ್ಬರ ಬಳಿ ತಿಳಿದುಕೊಳ್ಳಬೇಕು ಅನ್ನುವ ಪೂಜ್ಯರ ಬಿಚ್ಚುಮನಸಿನ ಆತ್ಮೀಯತೆ ನನಗೆ ಬಹಳ ಸಂತೋಷ ಕೊಡುತ್ತದೆ. ಹಾಗಾಗಿ ಎಷ್ಟೋ ಬಾರಿ ನಾವು ಕೂಡ ಅವರಿಗೆ ಸಂದೇಶವನ್ನು ಕೊಡುತ್ತ ಇರುತ್ತೇವೆ.

ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನಿಜವಾಗಿಯೂ ಕಾಲಕ್ಕೆ ಸರಿಯಾದಂತಹ ಮನೋಧರ್ಮವನ್ನು ಹೊಂದಿದಂತಹ ಪೀಠಾಧಿಕಾರಿಗಳು. ಯಾಕೆಂದರೆ  ಸಮಾಜ ಮತ್ತು  ಕಾಲ ಎರಡೂ

ಶ್ರೀ ವೀರೇಂದ್ರ ಹೆಗ್ಗಡೆಯವರು

ಪರಿವರ್ತನಾಶೀಲವಾದದ್ದು. ಪರಿವರ್ತನೆ  ಸದಾ ಆಗುತ್ತಲೇ ಇರುತ್ತದೆ. ಅದರಲ್ಲಿ ಚಿರಂತನವಾಗಿ ಚಲನಶೀಲತೆ ಇರುತ್ತದೆ. ಈ ಚಲನಶೀಲತೆಯಲ್ಲಿ ನಮ್ಮ ವ್ಯಕ್ತಿತ್ವವನ್ನು ಬಿಡದೆ ಸಮಾಜದ ಪ್ರವಾಹದ ಒಟ್ಟಿಗೆ ಹೋಗಬೇಕಾಗುತ್ತದೆ. ಹಾಗಾಗಿ, ಚಲನಶೀಲತೆ ಅಂದರೆ ಎಲ್ಲದನ್ನೂ ಹೊಂದಿಸಿಕೊಂಡು ಹೋಗುವಂತಹದ್ದು ಅಂತ ಅಲ್ಲ. ಆದರೂ ಕಾಲ ದೇಶ ರಾಜಕೀಯ ಇನ್ನಿತರ ವಸ್ತು ಸ್ಥಿತಿಗಳನ್ನು ಅರ್ಥ ಮಾಡಿಕೊಂಡು, ಶಿಷ್ಯರಲ್ಲಿಯೂ ಸಮಾಜದಲ್ಲಿಯೂ  ದೇಶದಲ್ಲಿಯೂ ಆಗಿರತಕ್ಕಂತಹ  ಬದಲಾವಣೆಯನ್ನು ಗುರುತಿಸಿಕೊಂಡು, ತಮ್ಮ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವಂತಹದ್ದು ಬಹಳ  ಅವಶ್ಯಕತೆ ಇದ್ದು, ಆ ದಿಶೆಯಲ್ಲಿ ಇಂದಿನ ದಿನಗಳಲ್ಲಿ ನನಗೆ ಮುಖ್ಯವಾಗಿ ಕಾಣುವಂತಹದ್ದು ಶ್ರೀರಾಘವೇಶ್ವರ ಶ್ರೀಗಳವರು. ಅವರು  ತಮ್ಮ ವ್ಯಕ್ತಿತ್ವವನ್ನು ಕಾಲಕ್ಕೆ ಸರಿಯಾದ ಹಾಗೆ ಪರಿವರ್ತನೆಗೊಳಿಸಿಕೊಂಡಿದ್ದಾರೆ.  ಮಠದ ಅನೇಕ ಶಿಸ್ತುಗಳು, ರೀತಿ ರಿವಾಜುಗಳು, ಸಂಪ್ರದಾಯಗಳು,  ಅಲ್ಲದೇ ಅನೇಕ ಪೂಜಾದಿ ಕ್ರಿಯಾಭಾಗಗಳು ಇದನ್ನೆಲ್ಲವನ್ನೂ ಉಳಿಸಿಕೊಂಡು ಅದರ ಜೊತೆಜೊತೆಗೆ ಅದನ್ನೂ ಹೇಗೆ ಎಷ್ಟರ ಮಟ್ಟಿಗೆ ಸರಳೀಕರಿಸಿಕೊಳ್ಳಬಹುದು ಅನ್ನುವುದನ್ನೂ ಕೂಡ ಅರ್ಥ ಮಾಡಿಕೊಂಡಿದ್ದಾರೆ.

ಇನ್ನೊಂದು ಬಹಳ ಮುಖ್ಯವಾದ ಅಂಶವೇನೆಂದರೆ ಗುರು ಯಾವಾಗಲೂ ಭಕ್ತನಿಗೆ ಆತ್ಮೀಯನಾಗಿರಬೇಕು.  ಬಹಳ ಹತ್ತಿರ ಇರಬೇಕು. ಆ ಆತ್ಮೀಯತೆ ಬರುವುದು ಹೇಗೆ ಎನ್ನುವುದು ಬಹಳ ಕಷ್ಟದ ಪ್ರಶ್ನೆ.  ಏಕೆಂದರೆ ಆತ್ಮೀಯತೆ  ಬೇಕಾದ ಹಾಗೆ ಬರುವಂತಹದ್ದಲ್ಲ.  ಶಿಷ್ಯರಿಗೆ ಬೇಕಾದ ಹಾಗೆ ಇರುವಂತಹದ್ದಲ್ಲ. ‘ಗುರು ಶಿಷ್ಯರನ್ನು ಆಕರ್ಷಿಸುವಂತವನಾಗಿರಬೇಕು, ಅವರ ಚಿತ್ತವನ್ನು ಅಪಹರಿಸುವಂತವನಾಗಿರಬೇಕು’  ಅಂತ ಒಂದು ಮಾತಿದೆ. ಶಿಷ್ಯರ ಚಿತ್ತಾಕರ್ಷಣೆ ಮಾಡಬೇಕಾದರೆ ಅದು ಗುರುವಿನ ವ್ಯಕ್ತಿತ್ವದಿಂದ ಆಗಬೇಕು. ಮಾತಿನಿಂದ ಆಕರ್ಷಿಸಬೇಕು. ಮತ್ತೆ  ಹೃದಯಪೂರ್ವಕವಾಗಿ ಆಕರ್ಷಿಸಬೇಕು.  ನಾನು ಕಂಡ ಹಾಗೆ  ಶ್ರೀಗಳಲ್ಲಿ ಮಾತೃ ಹೃದಯವಿದೆ. ಬಹಳ ಸವಿಯಾದ ಮಾತನಾಡುವಂತಹ ಅಭ್ಯಾಸ ಇದೆ, ಸಂಸ್ಕಾರ ಇದೆ. ಅವರ ಧ್ವನಿಯೂ ಕೂಡ ಆಕರ್ಷಕವಾದದ್ದು. ಹೀಗಾಗಿ ಮೂರೂ ಅವರಲ್ಲಿ ಬೆರೆತಿದೆ:  ಮುಖದ ತೇಜಸ್ಸು,  ವಾಕ್ಷ ಕ್ತಿ,  ಮಾತೃ ಹೃದಯ.  ಅದರ ಜೊತೆಗೆ ಅವರ ಧ್ವನಿ ಕೂಡ ಪ್ರಭಾವಶಾಲಿ. ಇದು ಅವರು ಎಲ್ಲೇ ಹೋದರೂ ಶಿಷ್ಯರು ಆಕರ್ಷಿತರಾಗುವಂತೆ ಮಾಡಿದೆ. ಅದರ ಜೊತೆಗೆ ನಾನು ಕಂಡ ಹಾಗೆ, ಅವರು  ಅವರ ಶಿಷ್ಯ ಸಮುದಾಯದವರನ್ನಲ್ಲದೇ ಇತರ ಸಮಾಜದವರನ್ನೂ ಕೂಡ ಸಮಾನವಾಗಿ ಆಕರ್ಷಿಸುತ್ತಾರೆ. ಉದಾಹರಣೆಗೆ, ಕಡೂರಿನ ಕೃಷಿ ಮೇಳಕ್ಕೆ ಅವರು ಬಂದಿದ್ದರು. ಅಲ್ಲಿ ಸಹಜವಾಗಿಯೇ ಎಲ್ಲ ಸಮಾಜದವರೂ , ಸಂಪ್ರದಾಯದವರೂ, ಮತಧರ್ಮದವರೂ ಇದ್ದರು. ಅಂದಿನ ಅವರ ಮಾತು ಹೇಗಿತ್ತೆಂದರೆ, ಸರ್ವಧರ್ಮಗಳಿಗೂ , ಎಲ್ಲ ಜಾತಿಮತಪಂಥದವರಿಗೂ ಅನುಗುಣವಾಗಿ, ಆಕರ್ಷಣೀಯವಾಗಿ ಇತ್ತು. ಮತ್ತು ಅದು ಸಭೆಗೆ  ಉಪಯುಕ್ತವಾಗಿರತಕ್ಕಂತಹ ಸಂದೇಶವಾಗಿತ್ತು. ಪ್ರವಚನ ಪ್ರಾರಂಭ ಮಾಡಿ ಹತ್ತು ನಿಮಿಷದ ಒಳಗೆಯೇ ಅವರು ಎಲ್ಲರನ್ನೂ ಆಕರ್ಷಿಸಿಬಿಟ್ಟರು. ಇಂತಹ ಶಕ್ತಿ ಬಹಳ ಕಡಿಮೆ ಜನರಿಗೆ  ಇರುತ್ತದೆ. ಅಲ್ಲದೆ ಅವರ ಮಾತಿನಲ್ಲಿ ಸಹಜತೆ ಇರುತ್ತದೆ. ಅವರು ಪ್ರವಚನ ಕೊಡುವಾಗ ಅಲ್ಲಿನ ಸಂದರ್ಭಕ್ಕೆ ಸರಿಯಾಗಿ ಏನೋ ಮೇಲೆಮೇಲೆ ಮಾತನಾಡುವುದಲ್ಲ, ಹೃತ್ಪೂರ್ವಕವಾಗಿ ಮಾತು ಹೊರಗೆ ಬರುತ್ತದೆ.

ಶ್ರೀ ಹೆಗ್ಗಡೆಯವರ ಹವ್ಯಾಸ - ಹಳೆಕಾರುಗಳ ಸಂಗ್ರಹ

ನಾನು ಅವರಲ್ಲಿ ಕಂಡ ಮತ್ತೊಂದು ಗುಣವೆಂದರೆ, ಅವರು ಎಲ್ಲರನ್ನೂ ಮೆಚ್ಚುತ್ತಾರೆ, ಪ್ರಶಂಸೆ ಮಾಡುತ್ತಾರೆ ಮತ್ತು ಅವರಿಗೆ ಬೇಕಾದ ಪ್ರೇರಣೆಯನ್ನು ಕೊಡುತ್ತಾರೆ.  ಬಹಳ ಕಡಿಮೆ ವ್ಯಕ್ತಿಗಳಿಗೆ ಇಂತಹ  ಒಂದು ಮನೋಧರ್ಮ ಇರುತ್ತದೆ. ಅಂದರೆ ಮೆಚ್ಚಿ ಮಾತನಾಡುವಾಗ ಕೆಲವರು ಸ್ವಲ್ಪ ಹತೋಟಿ ಇಟ್ಟುಕೊಳ್ಳುತ್ತಾರೆ.  ಎಲ್ಲಿಯಾದರೂ ನಾವು ಇನ್ನೊಬ್ಬರನ್ನು ಪ್ರಶಂಸೆ ಮಾಡಿದರೆ ಅತಿಯಾದೀತೇನೋ,  ಈ ರೀತಿ ಹೇಳಿದರೆ ಅವರೇನು ಅಂದುಕೋಳ್ಳುತ್ತಾರೋ, ಜನ ಎನೆಂದುಕೊಳ್ಳುತ್ತಾರೋ ಎಂಬ ಹಾಗೆ. ಆದರೆ ಇವರದು ಹಾಗಲ್ಲ, ಮಾತೃಹೃದಯದಿಂದ ಅವರು ಎಲ್ಲರ ಒಳ್ಳೆಯ ವಿಷಯಗಳನ್ನೂ ಮೆಚ್ಚುತ್ತಾರೆ. ಮೆಚ್ಚುವಾಗ ಧಾರಾಳವಾಗಿ ಮೆಚ್ಚುತ್ತಾರೆ. ಅದೇ ರೀತಿಯಲ್ಲಿ ಧಾರಾಳವಾಗಿ ಅವರಿಗೆ ಬೇಕಾದ ಮಾರ್ಗದರ್ಶನವನ್ನೂ ಕೊಡುತ್ತಾರೆ. ಹೀಗಾಗಿ ಅವರ ವ್ಯಕ್ತಿತ್ವ ವಿಶೇಷವಾಗಿ ಇವತ್ತು ಎಲ್ಲರ ಗಮನ ಸೆಳೆದಿದೆ.

ಮಠದ ಸಾಂಪ್ರದಾಯಿಕ ಕಾರ್ಯಕ್ರಮಗಳ ಜೊತೆಗೆ ಒಂದೆರೆಡು ನಿರ್ದಿಷ್ಟವಾದ ಕಾರ್ಯಕ್ರಮಗಳನ್ನು ಗುರಿ ಇಟ್ಟುಕೊಂಡು ಮಾಡಿದರೆ ಆಗ ನಮ್ಮ ಕಾರ್ಯಕ್ರಮ ಸಫಲತೆಯನ್ನು ಹೊಂದುತ್ತದೆ.  ಶ್ರೀಗಳು ಅವರ ಪೂಜೆ ಪಾಠ ಪ್ರವಚನ  ಇವೆಲ್ಲ ಕಾರ್ಯಕ್ರಮಗಳನ್ನು ಮಾಡುತ್ತಲೇ ಇದ್ದಾರೆ. ಆದರೆ ಗೋಸಂರಕ್ಷಣೆ ವಿಷಯದಲ್ಲಿ ಅವರು ನಿರ್ದಿಷ್ಟವಾದ ಗುರಿ ಇಟ್ಟುಕೊಂಡು ಮಾಡಿದಂತಹ ಒಂದು ಕಾರ್ಯಕ್ರಮದಿಂದಾಗಿ ಇವತ್ತು ಇಡೀ ದೇಶದಲ್ಲಿಯೇ ಒಂದು ಅದ್ಭುತವಾದಂತಹ ವಿದ್ಯುತ್ಸಂಚಾರ ಆಗಿದೆ. ಗೋವಿನ ಬಗ್ಗೆ ಗೌರವ ಕೊಡುವ ಸಂದರ್ಭದಿಂದ ಹಿಡಿದು ರಕ್ಷಣೆ ಮಾಡುವಂತಹದ್ದು, ಪೋಷಣೆ ಮಾಡುವಂತಹದ್ದು ಮತ್ತು ಅದರ ಬೆಳವಣಿಗೆಗೆ ಬೇಕಾದಂತಹ ಎಲ್ಲ ಮಾರ್ಗದರ್ಶನವನ್ನೂ ಕೂಡ  ಕೊಟ್ಟಿದ್ದಾರೆ. ಇದು ಇವತ್ತು ಬಹಳ ಪರಿವರ್ತನೆಯನ್ನು ತಂದಿದೆ.  ಒಂದು ಸಂದರ್ಭದಲ್ಲಿ ಇಂತಹ ಗೋಸಂರಕ್ಷಣೆ ಅನ್ನುವಂತಹದ್ದು ಕೇವಲ ಭಕ್ತಿಯ ಮಾತಾಗಿತ್ತು. ಹಿಂದುಗಳು ಗೋಮಾತೆಯನ್ನು ರಕ್ಷಿಸಬೇಕು ಇಷ್ಟೇ ಆಗಿತ್ತು. ಆದರೆ ಅದಕ್ಕಿಂತ ಎರಡು ಮೂರು ಹೆಜ್ಜೆ ಮುಂದೆ ಹೋಗಿ ಕೇವಲ ಗೌರವಿಸಿ, ಪೂಜೆ ಮಾಡಿ ಆರಾಧಿಸುವುದಲ್ಲ. ಅದರ ಜೊತೆಗೆ ಅದನ್ನ ಮಾತೃವಾಗಿ ಕಂಡು, ಮಾತೃವಿನ ಮೇಲಿನ ಗೌರವದಿಂದ ನಾವು ಅದನ್ನು ಪೋಷಿಸಿಕೊಂಡು ಬರಬೇಕು, ಗೌರವಿಸಬೇಕು ಅನ್ನುವುದನ್ನು ಅವರು ತೋರಿಸಿಕೊಟ್ಟಿರುವುದರಿಂದ ಇದು ಇಂದು ಅತ್ಯಂತ ಪ್ರಬಲವಾದ ಆಂದೋಲನವಾಗಿ ಪರಿಣಮಿಸಿದೆ.

ನಾವಿದನ್ನು ಆಂದೋಲನ ಅಂತ ಹೇಳುತ್ತೇನೆ. ಎಷ್ಟೋ ಜನ ಉತ್ತರಭಾರತದಿಂದ ಧರ್ಮಸ್ಥಳಕ್ಕೆ ಬಂದವರು ಅವರನ್ನು ಅವರು ಪರಿಚಯಿಸಿಕೊಳ್ಳುವಾಗ ನಾವು ಗೋಸಂರಕ್ಷಣೆಯ ಕೆಲಸದಲ್ಲಿದ್ದೇವೆ ಅಂತ ಪರಿಚಯಿಸಿಕೊಳ್ಳುತ್ತಾರೆ.

ಶ್ರೀ ವೀರೇಂದ್ರ ಹೆಗ್ಗಡೆಯವರು, ಸಂದರ್ಶನ ಸಮಯದಲ್ಲಿ

ನಾವು ನಮ್ಮ ಆಶ್ರಮದಲ್ಲಿ ಅಥವಾ ಸಂಸ್ಥೆಯಲ್ಲಿ ಇಷ್ಟು ಸಂಖ್ಯೆಯ ಗೋವುಗಳನ್ನು ರಕ್ಷಿಸುತ್ತೇವೆ ಅಂತ ಹೇಳುತ್ತಾರೆ. ಬಹುಶಃ ಈ ಆಂದೋಲನಕ್ಕಿಂತ ಮೊದಲು ಅವರು ಹೀಗೆ ಹೇಳಿಕೊಳ್ಳುತ್ತಾ ಇದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಈಗಂತೂ ಇದನ್ನು ಬಹಳ ಅಭಿಮಾನದಿಂದ, ಹೆಮ್ಮೆಯಿಂದ, ಕರ್ತವ್ಯ ದೃಷ್ಟಿಯಿಂದ ಹೇಳಿಕೊಳ್ಳುತ್ತಾರೆ. ಪೂಜ್ಯರ ಆಂದೋಲನ  ಎಷ್ಟು ಯಶಸ್ವಿಯಾಗಿದೆ ಅಂದರೆ ಎಲ್ಲರ ಗಮನ ಅದರ ಕಡೆ ಹರಿದಿದೆ. ಅನೇಕ ಪರಿವರ್ತನೆಗಳು ಗೋಚರವಾಗಿ ಅಗೋಚರವಾಗಿ ಆಗುತ್ತಾ ಇವೆ. ಗೋಸಂರಕ್ಷಣೆ ಮತ್ತು ಗೋಹತ್ಯೆ ವಿರೋಧವಾಗಿ ಆಗುತ್ತಿರುವ ಕಾರ್ಯಕ್ರಮಗಳು ಗೋಚರವಾಗಿ ಆಗುತ್ತಿರುವ ಕಾರ್ಯಕ್ರಮಗಳು.  ಅಗೋಚರವಾಗಿ  ಕೂಡ ಅನೇಕ ಕಡೆ ಕಾರ್ಯಗಳು ನಡೆಯುತ್ತಿವೆ. ಉದಾಹರಣೆಗೆ ನಮ್ಮಲ್ಲಿಯೇ ನಾವು ಹಸುವನ್ನೋ ಕರುವನ್ನೋ ಕೇಳಿದವರಿಗೆ ಕೊಡುವಾಗ  ಯಾರು ತೆಗೆದು ಕೊಳ್ಳುತ್ತಾರೆ, ಅವರಲ್ಲಿ ಭೂಮಿ ಇದೆಯೇ, ಅವರಲ್ಲಿ ಸಂರಕ್ಷಣೆ ಮಾಡತಕ್ಕಂತಹ ಸಾಮರ್ಥ್ಯ ಇದೆಯೇ ಅಂತ ಪರಿಶೀಲಿಸುತ್ತೇವೆ.  ಭೂಮಿ ಇದೆ, ಸಂರಕ್ಷಿಸುತ್ತಾರೆ ಅಂತ ಬರವಣಿಗೆಯಲ್ಲಿ ಕೊಟ್ಟು, ಕೊಂಡುಹೋಗಬೇಕು ಅಂತ ನಾವು ಹೇಳುತ್ತೇವೆ. ಇದು ಹಿಂದೆ ವಿಶ್ವಾಸದಲ್ಲಿ ನಡೆಯುತ್ತಾ ಇತ್ತು. ಯಾರಾದರೂ ಬಂದು ಕೇಳಿದ್ದರೆ, ಪೂರ್ವಪರ ವಿಚಾರ ಮಾಡಿ ‘ಆಯ್ತು ನೀನು ಕೊಂಡು ಹೋಗಬಹುದು’ ಅಂತ ಕೊಡುತ್ತ ಇದ್ದೆವು. ಈಗ ಈ ಎಲ್ಲ ಆಂದೋಲನಗಳೆಲ್ಲ ಆದಮೇಲೆ,  ನಾವು ಎಚ್ಚರಿಕೆ ವಹಿಸಿ ಆ ಗೋವು ಸರಿಯಾಗಿ ರಕ್ಷಿಸಲ್ಪಡಬೇಕು.  ಹೋದ ಜಾಗದಲ್ಲಿ  ಅದು ಕೈಗಳನ್ನು ದಾಟಿ ಬೇರೆ ಆಪತ್ತಿಗೆ  ಒಳಗಾಗಬಾರದು ಅನ್ನುವಷ್ಟರ ಮಟ್ಟಿಗೆ ಎಚ್ಚರಿಕೆಯನ್ನು ವಹಿಸುತ್ತೇವೆ. ಇದು ಅಗೋಚರವಾಗಿ ಆಗಿರತಕ್ಕಂತಹ ಪರಿಣಾಮಗಳು. ಹೀಗಾಗಿ ಅವರ  ಆಂದೋಲನ ಬಹಳಷ್ಟು ಯಶಸ್ವಿಯಾಗಿದೆ.

ಯಾವುದೇ ಆಂದೋಲನ ಒಮ್ಮೆ ಚಾಲನೆಯಾದ ಮೇಲೆ  ನಿಲ್ಲುವುದಿಲ್ಲ. ಅದು ಮುಂದುವರಿಯುತ್ತಾ ಹೋಗುತ್ತದೆ. ಬೀಜ ಹಾಕಿದವರಿಗೆ ಅಷ್ಟೇ ಕೆಲಸ ಇರೋದು.. ಅದು ವೃಕ್ಷವಾದ ಮೇಲೆ ಅದರ ಫಲಗಳನ್ನು ಯಾರೋ ತಿನ್ನುತ್ತಾರೆ. ಯಾರೂ ತಿನ್ನಲಿ ಪರವಾಯಿಲ್ಲ. ಆದರೆ ಗೋಸರಂಕ್ಷಣೆಯ ಆಂದೋಲನದ ಮೂಲ ಬೀಜಾವಾಪ ಮತ್ತು ಅದರ ಪೋಷಣೆ ಮಾಡಿದ ಕೀರ್ತಿ ಮಾತ್ರ ಶ್ರೀಗಳಿಗೇ ಸಲ್ಲುತ್ತದೆ.

ನನ್ನಲ್ಲಿ ಪೂಜ್ಯರು ತುಂಬಾ ಆತ್ಮೀಯತೆಯನ್ನಿಟ್ಟಿದ್ದಾರೆ. ಸ್ವಲ್ಪ ದಿನಗಳ ಕೆಳಗೆ ಗೋಕರ್ಣದಲ್ಲಿ ನಡೆದ ಒಂದು ಘಟನೆ ಇಡೀ ಸಮಾಜಕ್ಕೆ  ಆಘಾತ ತಂದಿತ್ತು. ಅವರ ಮೇಲೆ ಅಪವಾದ ತರುವಂತಹ ಪ್ರಯತ್ನ ನಡಸಿದರು ಅಂತ ಗೊತ್ತಾಯಿತು. ಆಗ ನಾನು ಅವರಿಗೆ ದೂರವಾಣಿ ಮೂಲಕ ಮಾತನಾಡಿದೆ.  ನಾನು ಹೇಳಿದೆ ’ಸ್ವಾಮೀಜಿ ನೀವು ಗಾಬರಿ ಆಗ್ಬೇಡಿ. ಇದು ತಾತ್ಕಾಲಿಕವಾಗಿ ಮೋಡ ಬಂದ ಹಾಗೆ ಬಂದಿದೆ. ಇದರಿಂದ ಹೊರಗಡೆ ಬಂದ್ಮೆಲೆ ನಿಮ್ಮ ಪ್ರಕಾಶ ಇನ್ನೂ ಜಾಸ್ತಿ ಆಗತ್ತೆ’ ಅಂತ. ಮತ್ತು, ಅವರ  ಮನಸ್ಸಿಗೆ ಸ್ವಲ್ಪ ದುಗುಡ ಆಗಿತ್ತು. ಅದು ಯಾರಿಗಾದರೂ ಆಗುವಂತಹದ್ದು… ಈ ಸಂದರ್ಭದಿಂದ ತಮಗೇನಾದರೂ ಅಪಕೀರ್ತಿ ಬರುತ್ತದೋ, ಪೀಠದ ಘನತೆಗೇನಾದರೂ ತೊಂದರೆ ಬರುತ್ತದೋ ಎಂದು. ನಾನು ಹೇಳಿದೆ ‘ಇಲ್ಲ, ಅದರ ಬದಲಿಗೆ ಇಮ್ಮಡಿ ಆಗುತ್ತದೆ. ಯಾಕೆಂದರೆ ಯಾರು ಹೆಚ್ಚು ಪ್ರಸಿದ್ಧನಿರುತ್ತಾನೋ ಅವನ ಮೇಲೆ ಅಸೂಯೆ ಹೆಚ್ಚು’.   ಒನಿಡಾ ಕಂಪನಿಯವರು ಟೀವಿಯ ಒಂದು ಜಾಹಿರಾತು ಮಾಡಿದ್ದಾರೆ.  ಒಬ್ಬ ಟೀವಿಗೆ  ಕಲ್ಲು ಹೊಡಿಯುವುದು . ಯಾಕೆಂದರೆ ಅದು ಅಷ್ಟು ಪ್ರಸಿದ್ಧ…   ಈ ಪ್ರಸಿದ್ಧವಾದ ಟೀವಿ ಇರುವುದರಿಂದ ಪಕ್ಕದ ಮನೆಯವ ಮತ್ಸರದಿಂದ ಶತ್ರುವಾಗುತ್ತಾನೆ ಎಂದು ಆ ಟೀವಿಯ ಹೆಗ್ಗಳಿಕೆ. ಇದು ಕೂಡ ಆಗಿದ್ದು ಹಾಗೆ. ಶ್ರೀಗಳ ಪ್ರಖ್ಯಾತಿಯನ್ನು ಕಂಡು ಕರುಬಿದವರಿದ್ದಾರೆ. ಈ ಪ್ರಖ್ಯಾತಿಯನ್ನೇ ಕಂಡು ವಿನಾ ಕಾರಣ ಅವರ ಮೇಲೆ ದ್ವೇಷವನ್ನು ಸಾಧಿಸುವವರು, ಅವರ ಸಮಾಜದ ಒಳಗೂ ಹೊರಗೂ ಇದ್ದಾರೆ. ಹಾಗಾಗಿ ಅಂದು ನಾನು ಪೂಜ್ಯರಿಗೆ  ’ತಾವು ಏನೂ ಈ ಕುರಿತಾಗಿ ಯೊಚನೆ ಮಾಡ್ಬೇಕಾದ್ದಿಲ್ಲ. ಇದನ್ನೆಲ್ಲ ಮೀರಿ ನಿಲ್ತೀರಿ ಮತ್ತು ಇಂತಹ ಘಟನೆಗಳಿಂದ ನಿಮ್ಮ ವ್ಯಕ್ತಿತ್ವಕ್ಕೆ ಇನ್ನೂ   ಪ್ರಭೆ ಬರುತ್ತದೆ… ಬೆಂಕಿಗೆ ಹಾಕಿ ಹೊರಬಂದ ಚಿನ್ನದ ಹಾಗೆ… ನೀವು ಪ್ರಜ್ವಲಿಸ್ತೀರಿ’ ಎಂಬುದಾಗಿ  ಹೇಳಿದೆ. ಅಂತಹ ಆತ್ಮೀಯತೆಯನ್ನು ಅವರು ಉಂಟುಮಾಡಿದ್ದಾರೆ.

ನಾನು ಮತ್ತೊಮ್ಮೆ ಹೇಳಬಯಸುವುದೇನೆಂದರೆ ಅವರ ಮಾತೃ ಹೃದಯ, ಅವರ ಶಿಷ್ಯ ವಾತ್ಸಲ್ಯ ಮತ್ತು  ವಿಶಾಲ ಹೃದಯದಿಂದ ಮಾತನಾಡುವಂತಹ ಅವರ ವಾಣಿಯನ್ನು ಅನೇಕ ಜನ ಗೌರವಿಸುತ್ತಾರೆ. ಅವರ ಹಿಂಬಾಲಕರಾಗುತ್ತಾ ಇದ್ದಾರೆ. ಹಾಗಾಗಿ ಸಮಕಾಲೀನವಾಗಿ ಇರತಕ್ಕಂತಹ ಅನೇಕ ಯತಿಶ್ರೇಷ್ಠರಲ್ಲಿ ಸಣ್ಣವಯಸ್ಸಿನಲ್ಲಿ ಇವತ್ತು ಶ್ರೀಗಳು ಅತ್ಯಂತ ಹೆಚ್ಚು ಜನರ ಗೌರವ ಪಡೆದುಕೊಂಡಿದ್ದಾರೆ. ಅವರಿಂದ ನಾವು ಬಹಳ ನಿರೀಕ್ಷಿಸುತ್ತೇವೆ. ಇಂತಹ ಉತ್ಸಾಹಿ ಮತ್ತು ತಮ್ಮ ದೇಹ ಅಥವಾ ಆರೋಗ್ಯ ಇವುಗಳ ಕಡೆ ಗಮನ ಹರಿಸದೇ ಕೇವಲ ಧಾರ್ಮಿಕ, ಸಾಮಾಜಿಕ ಮತ್ತು ಇತರ ಈ ರೀತಿಯ, ಗೋಸರಂಕ್ಷಣೆಯಂತಹ ಕಾರ್ಯಕ್ರಮಗಳನ್ನು ಪೂರ್ತಿ ಮನಸ್ಸಿನಿಂದ ತೆಗೆದುಕೊಳ್ಳತಕ್ಕಂತವರು ಅಪರೂಪ. ಮುಂದೆ ಅವರಿಗೆ ತುಂಬ ಉಜ್ವಲವಾದ ಭವಿಷ್ಯ ಇದೆ. ಅವರಿಂದ ಬಹಳ ನಿರೀಕ್ಷೆಗಳು ಹೆಚ್ಚಾಗುತ್ತಾ ಇವೆ. ಈ ನಿರೀಕ್ಷೆಗೆ ಸರಿಯಾಗಿ ಮತ್ತು ಅವರ ಮನೋಧರ್ಮಕ್ಕೆ ಸರಿಯಾಗಿ ಅವರು ಸಂಪೂರ್ಣವಾಗಿ ಬೆಳೆಯಲಿ ಅಂತ ನಾವು ಹಾರೈಸುತ್ತೇವೆ. ಮತ್ತು ಅವರು ಇನ್ನೂ ಹೆಚ್ಚು ಕಾರ್ಯಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ  ಮಾರ್ಗದರ್ಶನ ಕೊಟ್ಟರೆ ಖಂಡಿತವಾಗಿ ಜನ ಅವರ ಮಾತಿಗೆ ಬೆಲೆ ಕೊಡುತ್ತಾರೆ. ಇಂದು ಅವರು ಏನು ಹೇಳುತ್ತಾರೋ ಅದರ ಹಿಂದೆ ಹೋಗತಕ್ಕಂತಹ ಒಂದು ವರ್ಗ ತಯಾರಾಗಿದೆ, ಇದು ಕೂಡ ಬಹಳ ಅಪರೂಪಕ್ಕೆ ಒಬ್ಬ ಗುರುಗಳಿಗೆ ಸಿಗುತ್ತದೆ. ಎಂದರೆ ಯಾವುದೋ ಒಂದು ಕಾರ್ಯಕ್ರಮ ತೆಗೆದುಕೊಂಡರೆ ಅವರನ್ನ ನಾವು ಹಿಂಬಾಲಿಸುತ್ತೇವೆ ಅನ್ನುವಂತಹ ಒಂದು ದೊಡ್ಡ ಭಕ್ತವರ್ಗ ಅವರಿಗೆ ಇದೆ. ಅಂತಹ ಶಕ್ತಿಯನ್ನು ಅವರು ಪಡೆದುಕೊಂಡಿದ್ದಾರೆ. ಶ್ರೀಮಂಜುನಾಥ ಸ್ವಾಮಿ ಇನ್ನೂ ಅವರಿಗೆ ಆಯುರಾರೋಗ್ಯವನ್ನು ನೀಡಲಿ, ಸಮಾಜದ ನೇತೃತ್ವವನ್ನು ಅವರು ಬಹುಕಾಲ ವಹಿಸಲಿ,  ಧೀರ್ಘ ಕಾಲದ ಹಿನ್ನೆಲೆಯಿರತಕ್ಕಂತಹ ಪರಂಪರೆಯ ಮಠವಾದ ಶ್ರೀ ರಾಮಚಂದ್ರಾಪುರಮಠವನ್ನು ಇನ್ನೂ ಅವರು ಹೆಚ್ಚು ಬೆಳಸಲಿ  ಇನ್ನೂ  ದೀರ್ಘಕಾಲ ದೇವರಸೇವೆಯನ್ನು,  ಸಮಾಜದ  ಸೇವೆಯನ್ನು ಮಾಡುವಂತೆ   ಆಶೀರ್ವದಿಸಲಿ ಅಂತ  ಶ್ರೀಮಂಜುನಾಥಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ.

- ಡಾ. ಡಿ. ವೀರೇಂದ್ರ ಹೆಗ್ಗಡೆ

ಧರ್ಮಾಧಿಕಾರಿಗಳು,

ಶ್ರೀ ಕ್ಷೇತ್ರ ಧರ್ಮಸ್ಥಳ

ಕಿರುಪರಿಚಯ:

ಪದ್ಮಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು

ಧಾರ್ಮಿಕ ಆಡಳಿತ ಕ್ಷೇತ್ರದ ಅತಿದೊಡ್ಡ ಹೆಸರು..!

ಧರ್ಮಸ್ಥಳದ ಹೊಸತನದ ಹರಿಕಾರರು..

ಮಂಜುನಾಥನ ಗುರಿಕಾರರು..

ಭಕ್ತರ ಪಾಲಿನ ಮಾತನಾಡುವ ಮಂಜುನಾಥ ಸ್ವಾಮಿ..

ಗ್ರಾಮೋದ್ಧಾರಕರು..

ಪುರಾತನ ದೇವಾಲಯಗಳ ಸಮುದ್ಧಾರಕರು..

ಪುರಾತನ ವಸ್ತುವೈವಿಧ್ಯದ ಸಂರಕ್ಷಕರು..

ಬಡವರ ಭಾಗ್ಯದೇವತೆ..

ಶ್ರೀ ಹೆಗ್ಗಡೆಯವರು ’ಹರೇರಾಮ’ದ ಸಂಪಾದಕ ಬಳಗದೊಂದಿಗೆ..

ಬಲ್ಲಿದರ ಪೊಷಕರು..

ಶಿಕ್ಷಣ ಕ್ಷೇತ್ರದ ಹೊಸ ಬೆಳಕು..

ಕಲಾಪ್ರೇರಕರು..

ಸಾಹಿತ್ಯ ಸಮಾರಾಧಕರು..

ಸರ್ವಮತ ಸಮನ್ವಯಕಾರರು..

ಕೃಷಿಕರ ಆಶಾಕಿರಣ..

ಸಮರ್ಥ ನಾಯಕರು..

ಅಮಿತಗುಣಗಣಿಗಳು..

ಸಂವೇದನಾಶೀಲ ಲೇಖಕರು..

ಸದ್ಭಾವಪೂರಿತ ಅಂತಃಕರಣ ಸಮನ್ವಿತರು..

ಉತ್ತಮ ಛಾಯಾಗ್ರಾಹಕರು..

ಆದರ್ಶ ಗೃಹಸ್ಥರು..

ಸಹಾಯಕರ ಪೂಜ್ಯ ಖಾವಂದರು..

ಗಂಭೀರ ಮಾತುಗಾರರು..

ಅತಿವಿಶಿಷ್ಟ ಕಾರ್ಯಕ್ರಮಗಳ ಸಂಯೋಜಕರು..

ಅನ್ನ-ಔಷಧ-ವಿದ್ಯಾ-ದಾನವೀರರು..

ಧರ್ಮಸ್ಥಳದ ಇಪ್ಪತ್ತೊಂದನೆಯ ಧರ್ಮಾಧಿಕಾರಿಗಳು..

ಪ್ರಕೃತ ‘ಹರೇರಾಮ’ದ  ”ಪ್ರಮುಖ”ರು..

ಸಂಪಾದಕರು,

ಹರೇರಾಮ ಬಳಗ,

editor@hareraama.in

ಭಾವಚಿತ್ರಗಳು:

ಆಚಾರ್ಯರ ಪ್ರತಿರೂಪಕ್ಕಿದೋ ಕೋಟಿ ನಮನ
ಹೇಗೆ ನೋಡಿದರೂ ಇದೊಂದು ವಿಶ್ವದಾಖಲೆಯೇ. ಬಹುಶಃ ಒಂದು ನಿರ್ದಿಷ್ಟ ವಿಷಯದ ಮೇಲೆ ಬರೋಬ್ಬರಿ ಎಂಟು ಕೋಟಿ ಸಹಿ ಸಂಗ್ರಹಿಸಿರುವುದು, ಅದೂ ಕೇವಲ ಮೂರು ತಿಂಗಳ ಅವಧಿಯಲ್ಲಿ ಇಡೀ ಭಾರತ ಪರ್ಯಟನೆ ಕೈಗೊಂಡು ಇಂಥ ಸಾಧನೆಯನ್ನು ಮಾಡಿದ್ದು ಭಾರತೀಯ ಸಂತಸಮೂಹಕ್ಕೆ ಮಾತ್ರವಲ್ಲ, ಪ್ರತೀ ಭಾರತೀಯನಿಗೂ ಹೆಮ್ಮೆಯ ಸಂಗತಿ.

ಅಬ್ಬಾ, ಆ ವ್ಯಕ್ತಿಯ…ಅಲ್ಲ ಶಕ್ತಿಯ ಕರ್ತೃತ್ವಪರತೆಯೇ !

ಹೌದು, ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಇವತ್ತು ಕೇವಲ ಒಂದು ಪ್ರದೇಶಕ್ಕೆ, ಯಾವುದೇ ಒಂದು ಜನಾಂಗಕ್ಕೆ ಸೀಮಿತವಾಗುಳಿದಿಲ್ಲ. ಅಕ್ಷರಶಃ ಅವರಿಂದು ವಿಶ್ವ ಮಾನವ. ಇಡೀ ಮನುಕುಲಕ್ಕೆ ಸೇರಿದವರು. ದೇಸೀ ಗೋತಳಿಗಳ ಸಂರಕ್ಷಣೆಗೆ ತಮ್ಮ ಇಡೀ ಜೀವಿತಾವಧಿಯನ್ನೇ ಮುಡಿಪಾಗಿಟ್ಟ, ಅದಕ್ಕಾಗಿ ಅತ್ಯಲ್ಪ ಅವಧಿಯಲ್ಲಿ ಇಡೀ ವಿಶ್ವವೇ ಬೆರಗಾಗುವಂಥ ಆಂದೋಲನವನ್ನು ರೂಪಿಸಿದ, ಆ ಮೂಲಕ ಭಾವ ಜಾಗರಣದ ಹೊಂಗಿರಣ ಮೂಡುವಂತೆ ಮಾಡಿದ ಅವರಂಥ ಇನ್ನೊಬ್ಬ ಸಂತರನ್ನು ನಾನು ಕಂಡಿಲ್ಲ.

ಮೊನ್ನೆ ಮೊನ್ನೆಯಷ್ಟೇ ಮುಗಿದ ‘ವಿಶ್ವಮಂಗಲ ಗೋಗ್ರಾಮ ಯಾತ್ರೆ’ಯೊಂದೇ ಸಾಕು ಶ್ರೀಗಳ ಸಂಕಲ್ಪ ಶಕ್ತಿಯನ್ನು ಸಾರಲು. ಬೇರೇ ಯಾವುದೇ ದೇಶದಲ್ಲಾಗಿದ್ದರೆ, ಅಥವಾ ಬೇರೇ ಯಾವುದೇ ಸಂಸ್ಥೆಯಾಗಿದ್ದರೆ, ಹೋಗಲಿ ಬೇರೆ ಯಾವುದೇ ವಿಚಾರವಾಗಿದ್ದರೂ ಇಂಥದ್ದೊಂದು ಯಾತ್ರೆ ವಿಶ್ವಮಟ್ಟದ ಮಾತಾಗಿರುತ್ತಿತ್ತು. ಮಾಧ್ಯಮಗಳು ಅದನ್ನು ಬಿಂಬಿಸುತ್ತಿದ್ದ, ವಿಶ್ವ ಸಮುದಾಯ ಅದನ್ನು ನೋಡುತ್ತಿದ್ದ ರೀತಿಯೇ ಬೇರಾಗಿರುತ್ತಿತ್ತು. ಇಂಥದ್ದೊಂದು ಯಾತ್ರೆಗೆ ಸಿಗಬೇಕಾದ ಪ್ರಾಮುಖ್ಯ ಖಂಡಿತಾ ಸಿಗಲಿಲ್ಲ ಎಂಬುದು ನಿಜಕ್ಕೂ ಬೇಸರದ ಸಂಗತಿ.

ಅಲ್ಲದಿದ್ದರೆ ಮತ್ತೇನು?

ಕಳೆದ ವರ್ಷದ ಅಕ್ಟೋಬರ್ ೨೮ ರಂದು ವಿಜಯ ದಶಮಿಯ ಶುಭ ಮುಹೂರ್ತದಲ್ಲಿ ಭರತಭೂಮಿಯ ಅತ್ಯಂತ ಐತಿಹಾಸಿಕ, ಪೌರಾಣಿಕ ಮಹತ್ವದ ತಾಣ ಕುರುಕ್ಷೇತ್ರದಿಂದ ಶ್ರೀಗಳ ಸಾರಥ್ಯ, ಸಾಯುಜ್ಯದಲ್ಲಿ ಆರಂಭಗೊಂಡ ವಿಶ್ವಮಂಗಲ ಗೋ ಗ್ರಾಮ ಯಾತ್ರೆ ಅಖಂಡ ಭಾರತದಾದ್ಯಂತ ೨೪ ಸಾವಿರ ಕಿಲೋಮೀಟರ್‌ಗಳ ಉದ್ದಕ್ಕೂ ಸಂಚರಿಸಿ ಈ ವರ್ಷದ ಆರಂಭ- ಅಂದರೆ ಜನವರಿ ೧೪ರ ಸಂಕ್ರಾತಿಯಂದು ದೇಶದ ಮಧ್ಯಬಿಂದು ನಾಗಪುರದಲ್ಲಿ ಸಮಾಪನಗೊಂಡಿತು. ದೇಶದ ಎಲ್ಲ ೨೮ ರಾಜ್ಯಗಳನ್ನೂ ಯಾತ್ರೆ ತಲುಪಿದ್ದು ಮಾತ್ರವಲ್ಲ, ಉದ್ದಕ್ಕೂ ಗೋಸಂರಕ್ಷಣೆಯ ಕುರಿತು ಬಿತ್ತರಿಸಿದ ಸಂದೇಶ, ಜನಸಾಮಾನ್ಯರಲ್ಲಿ ಮೂಡಿಸಿದ ಜಾಗೃತಿ ಯಾತ್ರೆಯ ಅಭೂತಪೂರ್ವ ಯಶಸ್ಸಿಗೆ ಸಾಕ್ಷಿ. ಇದೇ ಸಂದರ್ಭದಲ್ಲಿ ಗೋ ಸಂರಕ್ಷಣೆಯ ಪರವಾಗಿ ೮ ಕೋಟಿ ಸಹಿಗಳನ್ನು ಸಂಗ್ರಹಿಸಿ ರಾಷ್ಟ್ರಪತಿಗಳಿಗೆ ಸಲ್ಲಿಸಲಾಗಿದೆ.

ಒಂದು ವಿಷಯದ ಪರವಾಗಿ ಅಷ್ಟು ಸಂಖ್ಯೆಯ ಜನಾಭಿಪ್ರಾಯ ರೂಪಿಸುವುದು, ಅದೂ ಸ್ವಯಂಪ್ರೇರಣೆಯಿಂದ ಅಂಥದ್ದರಲ್ಲಿ ಪಾಲ್ಗೊಳ್ಳುವಂತೆ ಮಾಡಿದುದು ಸಣ್ಣ ಸಂಗತಿಯೇನು ? ದುರದೃಷ್ಟಕ್ಕೆ ಈವರೆಗೆ ಅದು ಮಹತ್ವದ ಸಂಗತಿಯಾಗಿ ನಮಗಾರಿಗೂ ಕಂಡಂತಿಲ್ಲ. ಹೋಗಲಿ ಬಿಡಿ. ಆದರೆ, ಇಂದು ಇಡೀ ದೇಶದ ೮ ಕೋಟಿ ಜನ ಪ್ರತ್ಯಕ್ಷವಾಗಿ ಶ್ರೀ ರಾಘವೇಶ್ವರರ ಹಿಂದಿದ್ದಾರೆ. ಮಾನಸಿಕವಾಗಿ ಶ್ರೀಗಳ ಆಂದೋಲನಕ್ಕೆ ಸಾಥ್ ಕೊಟ್ಟಿರುವವರ ಸಂಖ್ಯೆ ಇದರ ಮೂರ್ನಾಲ್ಕುಪಟ್ಟು ಹೆಚ್ಚಿದೆ. ಅಂದರೇ ದೇಶದ ಜನಸಂಖ್ಯೆಯ ಕನಿಷ್ಠ ಕಾಲುಭಾಗಕ್ಕಿಂತಲೂ ಹೆಚ್ಚು ಮಂದಿ ಎಲ್ಲ ಎಲ್ಲೆಗಳನ್ನು ಮೀರಿ, ಕೇವಲ ಗೋಂಸರಕ್ಷಣೆಯ ಏಕೋದ್ದೇಶಕ್ಕೆ ಒಂದಾಗಿದ್ದಾರೆ. ಅಂಥದೊಂದು ಸಂಘಟನೆಗೆ ಕಾರಣೀಭೂತರಾಗಿ ನಿಂತಿರುವ ರಾಘವೇಶ್ವರರ ಬಗೆಗಿನ ಹೊಗಳಿಕೆಗಳೆಲ್ಲ ಕ್ಲೀಷೆ ಎನಿಸುತ್ತದೆ.

ಇನ್ನು ವಿಶ್ವ ಗೋ ಸಮ್ಮೇಳನದ ಸಾರ್ಥಕ್ಯ ಎಂಬುದೊಂದು ಕೈಗೆಟುಕಿದ ಸವಿಗನಸು. ೨೦೦೭ರ ಏಪ್ರಿಲ್ ೨೧ರಿಂದ ಸತತ ಒಂಬತ್ತು ದಿನಗಳ ಕಾಲ ಇಡೀ ವಿಶ್ವದ ಕಣ್ಣುಗಳು ಹೊಸನಗರ ಸಮೀಪದ ರಾಮಚಂದ್ರಾಪುರ ಎಂಬ ಕರ್ನಾಟಕದ ಮಲೆನಾಡಿನ ಕಗ್ಗಾಡಿನ ಹಳ್ಳಿಯೊಂದರ ಮೇಲೆ ನೆಟ್ಟಿತ್ತು. ಹಾಗೆ ನೆಟ್ಟ ದಿಟ್ಟಿಯ ಕೇಂದ್ರ ಬಿಂದು ಆಗಿದ್ದ ಶ್ರೀ ರಾಘವೇಶ್ವರರು ಗೋ ಸಂರಕ್ಷಣೆಯ ಆಂದೋಲನಕ್ಕೆ ಹೊಸದೊಂದು ಭಾಷ್ಯವನ್ನು ಆ ಮೂಲಕ ಬರೆದರು. ಅದೊಂದು ಜಾಗತಿಕ ಹಬ್ಬ. ವಿಶ್ವದ ಮೂಲೆ ಮೂಲೆಗಳಿಂದ ಗೋ ಅಭಿಮಾನಿಗಳು, ತಜ್ಞರು, ಹೋರಾಟಗಾರರು, ಸಂಶೋಧಕರು, ವಿಜ್ಞಾನಿಗಳು ಸಮ್ಮೇಳನದಲ್ಲಿ ಪಾಲ್ಗೊಂಡರು. ಒಂಬತ್ತು ದಿನಗಳ ನಿರಂತರ ಚರ್ಚೆ, ಸಂವಾದಗಳು ನಡೆದವು. ಶ್ರೀಗಳು ಅದಕ್ಕಿಟ್ಟ ಹೆಸರೇ ಜನರನ್ನು ಸಂಮೋಹನಗೊಳಿಸುವಂತಿತ್ತು. ‘ಜಗನ್ಮಾತೆಯ ಜಾಗತಿಕ ಹಬ್ಬ’-ಯಾವುದೇ ಒಂದು ಸರಕಾರ, ವಿಶ್ವವಿದ್ಯಾಲಯದ ಮಟ್ಟದಲ್ಲಿ ಆಗಬೇಕಿದ್ದ ಕೆಲಸವನ್ನು ತೀರಾ ಅಕಾಡೆಮಿಕ್ ಸ್ವರೂಪದಿಂದ ಭಿನ್ನವಾಗಿ ಜನಸಾಮಾನ್ಯರತ್ತ ಕೊಂಡೊಯ್ದ ಸಾಧನೆಗೆ ಎಣೆಯೇ ಇರಲಿಲ್ಲ. ಇವು ಉದಾಹರಣೆಗಳಷ್ಟೇ. ಶ್ರೀ ರಾಘವೇಶ್ವರರ ಒಂದೊಂದೂ ಹೆಜ್ಜೆಯೂ ಒಂದೊಂದು ವಿಶಿಷ್ಟ, ಮೌಲ್ಯಯುತ, ಸರ್ವಶ್ರೇಷ್ಠವೆಂದು ದಾಖಲಿಸಬಹುದಾದ ಸಾಧನೆಗಳೇ.

ಹಾಗೆ ನೋಡಿದರೆ, ಹೋರಾಟ, ಆಂದೋಲನಗಳಿಗೆ ಹತ್ತಾರು ವಿಷಯಗಳಿದ್ದವು. ಅದರಲ್ಲಿ ಯಾವುದನ್ನೇ ಕೈಗೆತ್ತಿಕೊಳ್ಳಬಹುದಿತ್ತು. ಅಥವಾ ಏನನ್ನೂ ಮಾಡದೇ ಅವೇ ಧಾರ್ಮಿಕ ಆಚರಣೆಗಳು, ಪೀಠಾಧಿಕಾರ, ಉತ್ಸವ, ಆರಾಧನೆ-ಭಕ್ತ ಸಮೂಹ, ಪಾದಪೂಜೆ, ಮಠ-ಮಹಲು, ಒಂದಷ್ಟು ಶಿಕ್ಷಣ ಸಂಸ್ಥೆಗಳು…ಇತ್ಯಾದಿ, ಇತ್ಯಾದಿಗಳಲ್ಲಿ ಅವರು ಕಳೆದು ಹೋಗಿಬಿಡಬಹುದಿತ್ತು. ಆದರೆ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಗೋ ಸಂರಕ್ಷಣೆಯನ್ನೇ ಆಯ್ದುಕೊಂಡು ಅದನ್ನೇ ತಮ್ಮ ಜೀವಿತದ ಗುರಿಯಾಗಿಸಿಕೊಂಡು, ಆ ನಿಟ್ಟಿನಲ್ಲಿ ತಾವು-ತಮ್ಮ ಇಡೀ ಶಿಷ್ಯ ಸಮೂಹವನ್ನೇ ತೊಡಗಿಸಿಕೊಂಡಿದ್ದಿದೆಯಲ್ಲಾ, ಅದು ನಿಜಕ್ಕೂ ಒಂದು ಪುಟ್ಟ ಬೆರಗನ್ನು ಹುಟ್ಟಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ಬೆಟ್ಟದಷ್ಟು ಹೆಮ್ಮೆ, ಇನ್ನಿಲ್ಲದ ಪ್ರೀತಿ, ಬೀಗುವಷ್ಟು ಗರ್ವ, ನಮ್ಮದೇ ಎನ್ನುವ ಅಭಿಮಾನವನ್ನು ನಮಗರಿವಿಲ್ಲದೇ ಮೂಡಿಸುತ್ತದೆ. ಏಕೆಂದರೆ ಈ ನೆಲದ ಕೃಷಿ, ಪಾರಂಪರಿಕ ಶ್ರೀಮಂತಿಕೆಗಳಲ್ಲಿ ಒಂದಾದ ಗೋ ಸಂಪತ್ತನ್ನು ನಾವು ಉಳಿಸಿಕೊಳ್ಳಲು ಇದು ಸಕಾಲ. ಆಧುನಿಕ ಈ ಕಾಲಘಟ್ಟದಲ್ಲಿ ಅಂಥ ಅನಿವಾರ್ಯತೆಯೂ ನಮಗೊದಗಿದೆ. ಆದರೆ ಅದಕ್ಕೊಂದು ಸಮರ್ಥ ನಾಯಕತ್ವದ ಕೊರತೆ ಎದುರಾಗಿತ್ತು. ಅಷ್ಟೇಕೆ, ಇಂಥ ಅಗತ್ಯ ಚಿಂತನೆಯಡೆಗೆ ತೊಡಗಿಸಿಕೊಳ್ಳುವವರೇ ವಿರಳ ಅಥವಾ ಇಲ್ಲವೇ ಇಲ್ಲ ಎನ್ನುವ ಸನ್ನಿವೇಶದಲ್ಲಿ ‌ಆಶಾಕಿರಣವಾಗಿ ಪಡಮೂಡಿದವರು ಶ್ರೀರಾಘವೇಶ್ವರರು. ಅಂಥ ಎಲ್ಲ ಕೊರತೆಯನ್ನೂ ಶ್ರೀಗಳು ಯಶಸ್ವಿಯಾಗಿ ತುಂಬಿಕೊಟ್ಟಿದ್ದಾರೆ. ಮಾತ್ರವಲ್ಲ, ಭರತಭೂಮಿಯ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಭವಿಷ್ಯಕ್ಕೆ ಭರವಸೆಯ ಹೊಸ ಬೆಳಕಾಗಿದ್ದಾರೆ.

ತೀರಾ ಮೂವತ್ತು ಮೂವತ್ತೆರಡನೇ ವಯಸ್ಸಿಗೆಲ್ಲಾ, ಪೀಠವೇರಿದ ಕೇವಲ ಹತ್ತು ವರ್ಷಗಳಿಗೆಲ್ಲಾ ಶ್ರೀಗಳು ಕೈಗೊಂಡ ದಿಟ್ಟ ನಿರ್ಧಾರಗಳು, ಮಾಡಿದ ಸಾಧನೆ-ಸಂಘಟನೆ, ಈ ಸಮಾಜಕ್ಕೆ ಕೊಟ್ಟ ಕೊಡುಗೆ, ಜತೆಜತೆಗೇ ಅವರು ಬೆಳೆದ ಪರಿ ಎಂಥವರನ್ನೂ ದಿಙ್ಮೂಢರನ್ನಾಗಿಸುತ್ತದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಪ್ರತಿಷ್ಠಿತ ಗೋಕರ್ಣ ಸಂಸ್ಥಾನದ ಶ್ರೀ ರಾಮಚಂದ್ರಾಪುರಮಠದ ಪೀಠಾಧಿಕಾರಕ್ಕೆ ಬರುತ್ತಿದ್ದಂತೆಯೇ ಶ್ರೀ ರಾಘವೇಶ್ವರರು ಮಾಡಿದ ಮೊದಲ ಕೆಲಸ ಸಮುದಾಯದ ಬಳಿಗೆ ಮಠವನ್ನು ಕೊಂಡೊಯ್ದದ್ದು. ತಾವು ಎಲ್ಲರ ಪ್ರತಿನಿಧಿಯಾಗಿ ನಿಂತು ಸಮಾಜ ಸಂಘಟನೆಗೆ ತೊಡಗಿದ್ದು. ಜತೆಗೆ ಪ್ರತಿಯೊಬ್ಬರ ಮೇಲೂ ಅವರು ತೋರುವ ಅವ್ಯಾಜ್ಯ ಪ್ರೀತಿ, ಅವರ ಆ ಮುಗ್ಧತೆ, ನಿಷ್ಕಪಟ ಮನಸ್ಸು, ನಿರ್ಮಲ ನಗು, ಮೃದುಭಾಷೆ, ಹಿತ ನುಡಿ, ಕಳಂಕರಹಿತ ವ್ಯಕ್ತಿತ್ವ, ಹಠ ಬಿಡದೇ ಹಿಡಿದದ್ದನ್ನು ಸಾಸುವ ಬದ್ಧತೆ, ನಿರಂತರ ಪರಿಶ್ರಮ, ದಣಿವರಿಯದ ದೇಹ, ಎಲ್ಲರನ್ನೂ ಒಂದೇ ಭಾವನೆಯಿಂದ ಬಳಿ ಕರೆದು ಜತೆಗೊಯ್ಯುವ ಸಮಾನ ಭಾವ, ನೊಂದ ಮನಕ್ಕೆ ಸಂತೈಕೆ ನೀಡುವ ಮಾತೃತ್ವ, ಎಂಥದೇ ಹೋರಾಟಕ್ಕೆ ಮುಂಚೂಣಿಯೊದಗಿಸುವ ನಾಯಕತ್ವ, ಅನ್ಯಾಯವನ್ನು ಮೃದು ಭಾಷೆಯಲ್ಲಿ, ಆದರೆ ಅಷ್ಟೇ ಖಂಡಿತವಾಗಿ ಖಂಡಿಸುವ ಛಾತಿ, ಧರ್ಮಪಾಲನೆಯ ಕರ್ತವ್ಯ ಪ್ರಜ್ಞೆ, ಆ ಪಾಂಡಿತ್ಯ, ಜ್ಞಾನ, ಅರಿವಿನ ವಿಸ್ತಾರ….ಓಹ್, ಸಾಕ್ಷಾತ್ ಆಚಾರ್ಯ ಶಂಕರರ ಪ್ರತಿ ರೂಪವನ್ನು ಶ್ರೀ ರಾಘವೇಶ್ವರರಲ್ಲಿ ಕಂಡರೆ ಅದರಲ್ಲಿ ಅತಿಶಯೋಕ್ತಿಯೇನೂ ಇಲ್ಲ.

ಅಂಥದ್ದೊಂದು ಮಹಾನ್ ಶಕ್ತಿಗೆ ಎಲ್ಲ ಸುಮನಸಿಗರ ಪರವಾಗಿ ಇದೋ ಕೋಟಿಕೋಟಿ ನಮನ.

- ವಿಶ್ವೇಶ್ವರ ಭಟ್

ಸಂಪಾದಕ, ವಿಜಯ ಕರ್ನಾಟಕ

ಪರಿಚಯ:

ವಿಶ್ವೇಶ್ವರ ಭಟ್

ಇಂದು ಕನ್ನಡನಾಡಿನ ಮನೆಮಾತು. ಅವರ ಸಂಪಾದಕತ್ವದ ಹಿರಿಮೆಗೆ ಇದೊಂದು ನಿದರ್ಶನ ಸಾಕು. ದಿನಪತ್ರಿಕೆಯ ಓದುಗನಿಗೆ ತಾನೋದುವ ಪತ್ರಿಕೆಯ ಸಂಪಾದಕನ ಹೆಸರು ಗೊತ್ತಿರಲಿಲ್ಲ.

ಶ್ರೀ ವಿಶ್ವೇಶ್ವರ ಭಟ್

ಅದೊಂದು ಗೊತ್ತುಮಾಡಿಕೊಳ್ಳುವ ಸಂಗತಿಯೆಂದೂ ಅವನು ಭಾವಿಸಿರಲಿಲ್ಲ. ಭಟ್ಟರು ವಿಜಯಕರ್ನಾಟಕದ ಸಾರಥ್ಯ ವಹಿಸಿಕೊಂಡ ಅನಂತರ ಬದಲಾದ ಕನ್ನಡ ಪತ್ರಿಕೋದ್ಯಮದ ದಿಕ್ಕಿನಲ್ಲಿ ಇದು ಗಮನಾರ್ಹ ವಿಷಯ. ವಿ.ಕ.ದ ಕಟ್ಟಕಡೆಯ ಓದುಗನಿಗೂ ಭಟ್ಟರು ಗೊತ್ತು. ಇದೊಂದು ಪತ್ರಿಕೋದ್ಯಮದ ದಾಖಲೆಯೇ ಸರಿ. ಇದು ಭಟ್ಟರ ಅದೃಷ್ಟರೇಖೆ ತಂದ ಫಲವಲ್ಲ, ನಿಂತನೀರಾಗಿದ್ದ ಪತ್ರಿಕೋದ್ಯಮದ ದಿಕ್ಕು ಬದಲಿಸಿದ ಪರಿಶ್ರಮದ ಫಲ. ಹೌದು! ವಿಜಯಕರ್ನಾಟಕದ ಸಾರಥ್ಯ ಭಟ್ಟರದ್ದಾದ ಅನಂತರದ್ದು ಇತಿಹಾಸ. ಅದು ಕನ್ನಡ ಪತ್ರಿಕೋದ್ಯಮದ ಸುವರ್ಣ ಇತಿಹಾಸ. ಭಟ್ಟರು ಸುದ್ದಿಮನೆಯಲ್ಲಿ ಸದ್ದಿಲ್ಲದೆ ಕ್ರಾಂತಿ ಮಾಡತೊಡಗಿದ್ದರು. ಪತ್ರಿಕೆಯ ಓರಣ ಒಪ್ಪವಾಯಿತು. ಒಳಹೂರಣದ ರೀತಿ-ನೀತಿ ಪರಿಷ್ಕೃತಗೊಂಡಿತು. ಏನಾಯಿತು………. ಎಷ್ಟಾಯಿತು………. ಎನ್ನುವುದು ಹೇಳಿಮುಗಿಸಲಾರದಷ್ಟು. ಇಷ್ಟಂತೂ ಸತ್ಯ, ಓದುಗ ಹೊಸತನದಲ್ಲಿ ಮಿಂದೆದ್ದ; ಪತ್ರಿಕೋದ್ಯಮ ಹೊಚ್ಚಹೊಸದೆನಿಸಿತು; ಭಟ್ಟರು ಹೊಸತನದ ಹರಿಕಾರರೆನಿಸಿದರು.

ಹುಟ್ಟಿದ್ದು ಉತ್ತರಕನ್ನಡದ ಸುಂದರ ಹಳ್ಳಿ ಮೂರೂರಿನಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದ ಎಮ್. ಎಸ್ಸಿ. ಪದವೀಧರ. ಸೆಳೆತ ಪತ್ರಿಕೋದ್ಯಮದತ್ತ. ಮತ್ತದೇ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ, ಪ್ರಥಮ ಸ್ಥಾನದೊಂದಿಗೆ. ಜೊತೆಗೆ Diploma in Development Journalism ಪದವಿ. ವಿದೇಶೀ ನೆಲದಲ್ಲಿ ಮುಂದುವರಿದ ಅಧ್ಯಯನ. Diploma in International Journalism, Diploma in International Reporting, Diploma in Newspaper Designing ಪದವಿಗಳು.

ಕೆಲಕಾಲ ಪತ್ರಕರ್ತ. ಮತ್ತೆ ಪತ್ರಿಕೋದ್ಯಮದ ‘ಮೇಸ್ಟ್ರು’. ಮತ್ತೆ ಕೆಲಕಾಲ ಕೇಂದ್ರ ಸಚಿವರ ವಿಶೇಷಾಧಿಕಾರಿ. ಮಧ್ಯದಲ್ಲಿ ಉದಯ ವಾಹಿನಿಯ ವಾರ್ತಾ ಓದುಗ. ಪ್ರಸ್ತುತ ವಿಜಯ ಕರ್ನಾಟಕದ ಸಂಪಾದನೆಯ ಜವಾಬ್ದಾರಿ…… ಹೆಜ್ಜೆ ಇಟ್ಟಲ್ಲೆಲ್ಲ ತನ್ನದೇ ಛಾಪು.

ಜನಪ್ರಿಯ ಅಂಕಣಕಾರ. ತನ್ನದೇ ವಿಶಿಷ್ಟ ಶೈಲಿಯಲ್ಲಿ ಓದುಗರನ್ನು ಕಟ್ಟಿಹಾಕಿದ ಲೇಖಕ. ಹತ್ತುಹಲವು ಅಂಕಣಕಾರರ ನಿರ್ಮಾತೃ. ಬೈಲೈನೂ ಸಿಗದ ಸುದ್ದಿಮನೆಯ ಕಾಯಕಜೀವಿಗಳನ್ನು ಅಂಕಣಕಾರರನ್ನಾಗಿಸಿದ ಅಪರೂಪದ ಸಂಪಾದಕ. 36ಗ್ರಂಥಗಳು ಪ್ರಕಟಿತ. ರಾಜ್ಯೋತ್ಸವವೂ ಸೇರಿದಂತೆ ಹತ್ತು ಹಲವು ಪ್ರಶಸ್ತಿ ಪುರಸ್ಕೃತ.

ಇದೆಲ್ಲಕ್ಕಿಂತ ಹೆಚ್ಚಾಗಿ “ಸಭ್ಯ, ಸುಸಂಸ್ಕೃತ, ಸಹೃದಯಿ.”

ಸಂಪಾದಕ,

ಹರೇರಾಮ.ಇನ್

editor@hareraama.in

ಏನಿದೀ ’ಪ್ರಮುಖ’ ? – ‘ಹರ ತನ್ನೊಳಿರ್ದುಂ ಗುರು ತೋರದೇ ತಿಳಿವುದೇ?’
‘ಹರ ತನ್ನೊಳಿರ್ದುಂ ಗುರು ತೋರದೇ ತಿಳಿವುದೇ?’ ಎನ್ನುತ್ತಾನೆ ಸರ್ವಜ್ಞ.

ನಮ್ಮೊಳಗೇ ಇರುವ   ಭಗವಂತನನ್ನು ಗುರು ತೋರಿಸಿಕೊಡದೇ ಇದ್ದರೆ ನಮಗದು ತಿಳಿಯುವುದಿಲ್ಲ.

ಸಾವಿರ ವರ್ಷಗಳ ಹಿಂದಿನ ಈ ಮಾತಿನ ಅರ್ಥವ್ಯಾಪ್ತಿ ಹಿಂದೆಂದಿಗಿಂತ ಹೆಚ್ಚು   ಇಂದು ವಿಸ್ತೃತ! ಅಂದಿನ ಜನಗಳಿಗಾದರೋ ಭಗವಂತನನ್ನು ತೋರಿಸಲು ಮಾರ್ಗದರ್ಶನ ಬೇಕಾಗಿತ್ತು.   ಆದರೆ ಇಂದು, ಸ್ವಕೇಂದ್ರೀಕೃತ ಜೀವನಶೈಲಿಯ ಕಾರಣದಿಂದಾಗಿ, ಭಗವಂತನಿರಲಿ, ಕಣ್ಣೆದುರು   ಕಾಣುವ ಯಾವ ಉದಾತ್ತವಾದುದನ್ನೂ ನಾವು   ಗುರುತಿಸಲು ತಿಳಿದಿಲ್ಲ! ಮಹತ್ತಾದುದನ್ನು     ಕಂಡು ಅದನ್ನು ಭಾವಿಸುವ, ಮಾನಿಸುವ ಸೂಕ್ಷ್ಮಪ್ರಜ್ಞೆಯೊಂದನ್ನು ನಾವು   ಕಳೆದುಕೊಂಡುಬಿಟ್ಟಿದ್ದೇವೆ. ಮಹಾತ್ಮರು, ಅವರ ಮಹತ್ಕಾರ್ಯಗಳು ಅದೆಷ್ಟೋ ಬಾರಿ ನಮ್ಮ   ಶುಷ್ಕಬುದ್ದಿಗೆ, ಕುತಾರ್ಕಿಕ ಮನಸ್ಸಿಗೆ, ದೋಷೈಕಗ್ರಾಹಿ ದೃಷ್ಟಿಗೆ ಹಿರಿದೆನಿಸದೇ   ಅವುಗಳ ನೈಜ ಉಪಯೋಗಗಳನ್ನು  ಪಡೆಯದಿರುವಂತಾಗಿದೆ. ಹೀಗಾಗಿ ಬೇಕು ಇದು ದೊಡ್ಡದೆಂದು   ಸಮಾಜಕ್ಕೆ ತೋರಬಲ್ಲ ಮುಖಂಡರು. ಹಿರಿದಾದನ್ನು ಇನ್ನಷ್ಟು ಸ್ಪುಟವಾಗಿ ಕಾಣುವಂತೆ ಮಾಡುವ   ದೃಷ್ಟಿಯೊಂದನ್ನು ಸಮಷ್ಟಿಗೆ ನೀಡುವ ’ಪ್ರಮುಖರು’.

‘ಪ್ರಮುಖ’ರು ಸಮಷ್ಟಿಯೊಂದರ ನೇತಾರರು. ಸಮಾಜವನ್ನು   ಮುನ್ನಡೆಸುವವರು. ಅವರದ್ದು ಒಳಿತೆಸಗುವ     ಮಾತು. ಪ್ರಮುಖವೆಂದರೆ ಒಳ್ಳೆಯ ಮಾತೆಂದೂ ಅರ್ಥ. ಹಾಗಾಗಿ     ಅವರ ಮಾತೂ ’ಪ್ರಮುಖ’. ಇನ್ನೊಂದು ಕೋನದಲ್ಲಿ ಅವರ ಮಾತು   ಸಮೂಹದ ಪ್ರಾತಿನಿಧಿಕವಾಗಿಯೂ ‘ಪ್ರಮುಖ’ .

ಪ್ರಕೃತ “ಪ್ರಮುಖ” , ನಿತ್ಯನೂತನತೆಯನ್ನು ತನ್ನ   ಪ್ರತ್ಯಂಗಗಳಲ್ಲಿ ಹೊಂದಿದ ಆಸ್ತಿಕರ ಶ್ರಧ್ಧಾಪ್ರಜ್ಞೆ, ಶ್ರೀಶ್ರೀಗಳವರ ಮುಖವಾಣಿ   ‘ಹರೇರಾಮ’ದಲ್ಲಿ ಹೊಸತೊಂದು ಅಂಕಣವಾಗಿ ಹೊರಹೊಮ್ಮಲಿದೆ.

ಇದು -

ಧರ್ಮ, ಕಲೆ, ಕ್ರೀಡೆ, ಉದ್ಯಮ, ಮಾಧ್ಯಮ, ರಾಜಕೀಯ ಹೀಗೆ     ಬೇರೆಬೇರೆ ಕ್ಷೇತ್ರಗಳಲ್ಲಿ ಕೃತಪರಿಶ್ರಮರಾದ ಮಹನೀಯರ ಭಾವಸ್ಪಂದನ…

ಪ್ರಮುಖರು, ಶ್ರೀಶ್ರೀಗಳವರೊಂದಿಗೆ ಕಳೆದ   ರಸನಿಮಿಷಗಳೆಡೆಗಿನ ಅವಧಾನ…

ಶ್ರೀಸಂಸ್ಥಾನ ಮತ್ತವರ     ಸಮಾಜಮುಖಿ ಕಾರ್ಯಗಳೆಡೆಗಿನ ಖಾಸ್ ಅಭಿಪ್ರಾಯಗಳ ಅನುಸಂಧಾನ…

ಪರಮಪೂಜ್ಯರ ವ್ಯಕ್ತಿತ್ವದ   ವಿವಿಧಮಜಲುಗಳೆಡೆಗಿನ   ಹೊಸನೋಟವೊಂದರ ಸಂಪ್ರದಾನ…