ಜೀವಿಗಳಲ್ಲಿ ಎರಡು ವರ್ಗ:
೧. ಮುಂದೆ ಹೋಗುವವರು
೨. ಹಿಂದೆ ಹೋಗುವವರು.

ಕೆಲವರಿಗೆ ಮುಂದೆ ಹೋಗುವುದು ಸಹಜ ಪ್ರವೃತ್ತಿ, ಕೆಲವರಿಗೆ ಹಿಂದೆ ಹೋಗುವುದು ಸಹಜ ಪ್ರವೃತ್ತಿ. ಹಿಂದೆ ಹೋಗುವವರಲ್ಲೂ ಮುಂದೆ ಹೋಗುವವರಿರುತ್ತಾರೆ.

ಯಾವ ವರ್ಗ, ಗುಂಪು, ಸಮುದಾಯವಾದರೂ ‘ಮುಂದಾಳು’ ಬೇಕಾಗುತ್ತದೆ.
ಈ ‘ನಾಯಕತ್ವ’ ಅನ್ನುವುದು ಸುಮ್ಮನೆ ಬಂದು ಬಿಡುವುದಿಲ್ಲ. ಸಹಜ ನಾಯಕತ್ವ ಎಂದರೆ ‘ಮೊದಲು ಪ್ರಹಾರಕ್ಕೆ ಎದೆಯೊಡ್ಡುವಂಥದ್ದು’.

ದೇವ ಸೈನಿಕರಿಗೂ ಒಬ್ಬ ಮುಂದಾಳು ಬೇಕಿತ್ತು. ದೇವತೆಗಳು ಬ್ರಹ್ಮನನ್ನು ಕಂಡು, ‘ ನೀನು ನಮಗೆ ಸೇನಾಪತಿಯನ್ನು ಕೊಟ್ಟಿದ್ದೀಯೆ, ಆದರೆ ಅವನು‌ ಹುಟ್ಟಿಯೇ ಇಲ್ಲ’ ಎಂದು ನುಡಿದರು.

ಹಿಂದಾಳುಗಳು ಮುಂದಾಳುಗಳಿಗೆ ಅವಕಾಶ ಮಾಡಿಕೊಡಬೇಕು.

ದೈವಸಂಕಲ್ಪದಂತೆ ಶಿವನ ತೇಜಸ್ಸು ಅಗ್ನಿಯೊಳಗೆ ಪ್ರವೇಶಿಸಿತು. ಅಗ್ನಿಯು ಗಂಗೆಯ ಮುಂದೆ ಪ್ರಕಟವಾಗಿ ತೇಜಸ್ಸನ್ನು ಆಕೆಯೆಡೆಗೆ ಚೆಲ್ಲುತ್ತಾನೆ. ಗಂಗೆ ಅದನ್ನು ಸ್ವೀಕರಿಸಿ ಹಿಮವತ್ ಪರ್ವತದೆಡೆಗೆ ಆ ತೇಜಸ್ಸನ್ನು ಹರಿಸಿದಾಗ ‘ಸ್ಕಂದ’ ಹುಟ್ಟಿಬಂದ.
ಕಾರ್ತಿಕೇಯನಿಗೆ ತಾಯ್ತಂತೆಯರು ಅನೇಕ. ಆತ ಶಿವತನಯ, ಅಗ್ನಿಕುಮಾರನೂ ಹೌದು. ಗಂಗೆ, ಪಾರ್ವತಿ ಆತನ ತಾಯಿಯರು. ಕೃತ್ತಿಕಾ ನಕ್ಷತ್ರ (ಆರು ನಕ್ಷತ್ರಗಳು) ಹಾಲು ಕೊಟ್ಟರು, ಆ ಆರು ತಾಯಿಯರೂ ಅಗ್ನಿಕನ್ಯೆಯರು‌.
ಆರು ಕೃತ್ತಿಕೆಯರಿಂದ ‘ಕಾರ್ತಿಕೇಯ’ನಾದ ಆತ.
ಸ್ಕಂದ ಎಂದರೆ ‘ಸ್ಕನ್ನಮ್’ ~ ಜಾರಿಬಂದವನು. ಶಿವನ ತೇಜಸ್ಸು ಅಗ್ನಿಯೊಳಗೆ, ಅಗ್ನಿಯಿಂದ ಗಂಗೆಗೆ, ಗಂಗೆಯಿಂದ ಹಿಮವತ್ ಪರ್ವತದೆಡೆಗೆ ಜಾರಿ ಬಂದವನು.
ಸ್ವಂತಬಲದಿಂದ ತಾರಕಾಸುರನನ್ನು ಸಂಹರಿಸಿದ, ದೇವಸೇನಾಪತಿ ಎನಿಸಿದ.
ಅವನು ‘ನಿತ್ಯ ಕುಮಾರ’.
ಈ ಕಥಾಭಾಗಕ್ಕೆ ‘ಕುಮಾರಸಂಭವ’ ಎನ್ನುತ್ತಾರೆ. ಇದನ್ನು ಪಠಿಸಿದವರು ಆಯಸ್ಸು, ಪುತ್ರ-ಪೌತ್ರರನ್ನು ಪಡೆಯುತ್ತಾರೆ, ಕೊನೆಗೆ ಕಾರ್ತಿಕೇಯನನ್ನು ಸೇರುತ್ತಾರೆ. ಇದು ಪುಣ್ಯ!

ಮುಂದೆ ವಿಶ್ವಾಮಿತ್ರರು ರಾಮನಿಗೆ ಆಕಾಶಗಂಗೆ ಭೂಮಿಗೆ ಹರಿದ ‘ಗಂಗಾವತರಣದ’ ಕಥೆಯನ್ನು ಹೇಳುತ್ತಾರೆ.
ಅಯೋಧ್ಯಾಧಿಪತಿ ಸಗರನ ಕಥೆಯದು.
ಭಾರತವು ‘ಭಾರತ’ ಏಕೆಂದರೆ ಗಂಗೆಯನ್ನು ಪಡೆದ ಪುಣ್ಯಭೂಮಿಯಿದು.
ಈ ಗಂಗಾವತರಣದ ಪುಣ್ಯಕಥೆಯನ್ನು ವಿಶ್ವಾಮಿತ್ರರು ರಾಮನಿಗೆ ಹೇಳ್ತಿದ್ದಾರೆ. ಇದೆಲ್ಲವೂ ‘ಸಂಸ್ಕಾರ’.

ಪ್ರವಚನವನ್ನು ಇಲ್ಲಿ ಕೇಳಿರಿ :


ಪ್ರವಚನವನ್ನು ನೋಡಲು :

Facebook Comments