ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ರಾಮನ ರತ್ನ ಪಾದುಕೆಗಳೊಡನೆ ಭರತನು ನಾಡಿಗೆ ಮರಳಿರಲಾಗಿ. ಚಿತ್ರಕೂಟದ ತಪೋವನದಲ್ಲಿ ವಿರಾಜಿಸಿದ ರಾಮನು ಒಂದು ವಿಶೇಷವನ್ನು ಗಮನಿಸಿದನು,ವಿಶೇಷವೇನು? ಉದ್ವೇಗ,ಉತ್ಸುಕತೆ.ಯಾರಲ್ಲಿ? ಚಿತ್ರಕೂಟದಲ್ಲಿ ನಿವಾಸಮಾಡುವಂಥ ಋಷಿಗಳಲ್ಲಿ,ತಪಸ್ವಿಗಳಲ್ಲಿ.ಹೌದು,ಚಿತ್ರಕೂಟದಲ್ಲಿರಾಮನೊಬ್ಬನೆ ವಾಸಮಾಡುತ್ತಾ ಇದ್ದಿದ್ದಲ್ಲ.. ಇನ್ನೂ ಅನೇಕ ಮಹಾನುಭಾವರು, ತಪಸ್ವಿಗಳು ಚಿತ್ರಕೂಟದಲ್ಲಿ ವಾಸಮಾಡುತ್ತಾ ಇದ್ದರು. ಅವರಲ್ಲಿ ಈವರೆಗೆ ಇಲ್ಲದ ಒಂದು ಉದ್ವೇಗ, ಭಯ, ಉತ್ಸುಕತೆ, ಏನನ್ನೋ ಹೇಳಬೇಕು ಎಂದಿದ್ದಾಗೆ ಇದ್ದರೂ, ಹೇಳ್ತಾ ಇಲ್ಲ. ಹೇಳಲು ಅವರಿಗೆ ಸಾಧ್ಯ ಆಗ್ತಾ ಇಲ್ಲ. ಅದು ಹಾಗೆ ಅದು.. ಎಷ್ಟೋ ಭಯಗಳನ್ನು ಹೇಳಲು ಸಾಧ್ಯವಾಗದೇ ಜೀವನ ಮುಗಿದುಬಿಡುತ್ತದೆ. ಎಲ್ಲಿ ಹೇಳಬೇಕೋ, ಅಲ್ಲಿ ಹೇಳಿದರೆ ಪರಿಹಾರವಾಗುತ್ತದೆ. ಆದರೆ ಹೇಳಲು ಅದೇನೋ ಅಡ್ಡ ಬರುತ್ತದೆ. ಎಷ್ಟೋ ಭಯಗಳು ಹಾಗೆ, ಎಷ್ಟೋ ದುಃಖಗಳು ಹಾಗೆ..ಹೇಳಿದರೆ ಹಗುರಾಗುತ್ತದೆ ಮನಸ್ಸು, ಹೇಳಿದರೆ ಭಾರ ಇಳಿಯುತ್ತದೆ. ಆದರೆ ಹೇಳೋದಕ್ಕೆ ಅದೇನೋ ಹಿಡಿದಂತೆ ಆಗೋದೇ ಇಲ್ಲ. ಆ ಬಗೆಯ ಒಂದು ವಾತಾವರಣವನ್ನು ಚಿತ್ರಕೂಟದ ತಪಸ್ವಿಗಳಲ್ಲಿ ರಾಮನು ಗಮನಿಸಿದ.
ಮೊದ ಮೊದಲು ಅದು ಅಸ್ಪಷ್ಟವಾಗಿತ್ತು. ಬರುಬರುತ್ತಾ ರಾಮನಿಗೆ ಅದು ಸ್ಪಷ್ಟವಾಯಿತು. ತನ್ನನ್ನು ಕುರಿತಾಗಿಯೇ ಅವರ ಮನಸ್ಸಿನಲ್ಲಿ ಏನೋ ಇದೆ.  ರಾಮ ಮಾಷೃತ್ಯ ಉಸ್ಸುಕಾ. ತನ್ನನ್ನು ಕುರಿತಾಗಿಯೇ ಏನೋ ಋಷಿಮುನಿಗಳಲ್ಲಿ ಏರು – ಪೇರು ಉಂಟಾಗಿದೆ,ಎಂಬುದು ರಾಮನ ಮನಸ್ಸಿಗೆ ಬಂತು. ಅದಕ್ಕೆ ಪ್ರತ್ಯಕ್ಷ ಪ್ರಮಾಣವೂ ಕೂಡಾ ಇತ್ತು. ಅವರವರೇ ಮಾತನಾಡುವಾಗ ದೂರದಲ್ಲಿ ರಾಮನಿದ್ದರೆ, ತಪಸ್ವಿಗಳು ಪರಸ್ಪರ ಮಾತನಾಡುವಾಗ ಕಣ್ಣಿಂದ ರಾಮನನ್ನು ತೋರಿಸೋರು ಮತ್ತೊಬ್ಬನಿಗೆ. ಹುಬ್ಬುಗಳಿಂದ ಕೆಲವು ಬಾರಿ,ರಾಮನ ಕಡೆ ತೋರಿಸಿ ಅವರೇನೋ ಪರಸ್ಪರ ಮಾತಾಡಿಕೊಳ್ಳುತ್ತಾ ಇದ್ದರು.
ಕಷ್ಟ ಆಗ್ತದೆ ಅಲ್ವಾ? ಉದಾಹರಣೆಗೆ :ನಾವೆಲ್ಲಾ ಒಟ್ಟಿಗೆ ಇದ್ದವರು ಅಂದುಕೊಳ್ಳಿ, ಇವರು ಪರಸ್ಪರ ನಮ್ಮಲ್ಲಿ ಇದ್ದವರು ಯಾರೋ ಒಬ್ಬರನ್ನು ತೋರಿಸಿ, ಅವರು ಮಾತಾಡ್ಕೊಳ್ಳಲು ಶುರು ಮಾಡಿದರೆ, ಅವರಿಗೆ ಏನೂ ಹೇಳದೇನೇ ಇದ್ದರೆ? ಏನೋ ವಿಷಯ ಇದೆ ಅಥವಾ ನಡೆದಿದೆ ಎಂದರೆ ಎಷ್ಟು ಕಷ್ಟ ಆಗಬಹುದು? ಹಾಗಾಯಿತು ರಾಮನಿಗೆ. ಆದರೆ ರಾಮನು ತುಂಬಾ ನೇರವಾಗಿರುವಂತಹ ಮನುಷ್ಯ,ಮನುಷ್ಯೋತ್ತಮ.ದೇವಮಾನವ. ತುಂಬಾ ಸೀದಾ ಅವನು, ಸುತ್ತುಬಳಸು ಇಲ್ಲ. ನಾಳೆ ಹೇಳೋದು-ನಾಡಿದ್ದು ಹೇಳೋದು ಎಲ್ಲಾ ಇಲ್ಲ.”ರಾಮನ ಮನಸ್ಸು ತೆರೆದಿಟ್ಟ ಪುಸ್ತಕವೇ.”ರಾಮನು ಕುಲಪತಿಗಳನ್ನು ನೇರವಾಗಿ ಕಾಣುತ್ತಾನೆ. ಋಷಿ ಕುಲ, ಸಾವಿರಾರು ಜನ ಋಷಿಗಳ ಒಂದು ಸಮೂಹ ಆ ಕುಲಕ್ಕೊಂದು ‘ಕುಲಪತಿ’. ಅವರೇ ಎಲ್ಲರಿಗೂ ವಿದ್ಯೆಯನ್ನು ಕೊಡುತ್ತಿದ್ದವರು. “ಕುಲಪತಿಗಳು” ಶಬ್ದ ಅಲ್ಲಿಂದಲೇ ಬಂದಿರುವಂಥದ್ದು. ಚಿತ್ರಕೂಟಾಲಯರಾದ ಎಷ್ಟು ಮಂದಿ ಋಷಿಗಳಿದ್ದಾರೋ ಅವರಿಗೆಲ್ಲಾ ಕುಲಪತಿ. ಅವರನ್ನು ಹೋಗಿ ಭೇಟಿಯಾಗುತ್ತಾನೆ. ಆತ್ಮನಿಶಂಕಿತಃ ತನ್ನ ಬಗ್ಗೆಯೇ ಪ್ರಶ್ನೆ ರಾಮನಿಗೆ, ನಾನೇನು ಮಾಡಿದೆ? ಇಲ್ಲಿಯವರೆಗೆ ಇರದ ಹುಬ್ಬು ಹಾರಿಸುವಿಕೆ, ಕಣ್ಭಾಷೆ ಏನಿದು? ಯಾಕೆ ಇದು? ಎಂಬುದಾಗಿ ಹೋಗಿ ಕುಲಪತಿಗಳನ್ನ ಕಂಡು ಮಾತನಾಡುತ್ತಾನೆ. ಭಗವನ್ ಈ ಪೂರ್ವವರೋತ್ತಮ್? ಮೊದಲು ಇರುವ ಹಾಗೆ ಇವರೆಲ್ಲಾ ನನ್ನಲ್ಲಿ ಇಲ್ಲ ಯಾಕೆ? ಏನೋ ವ್ಯತ್ಯಾಸ?ಮೊನ್ನೆ ಮೊನ್ನೆವರೆಗೂ ಹೇಗೆ ಇದ್ದರೋ ಹಾಗಿಲ್ಲ  ಯಾಕೆ  ಈ ಮಹರ್ಷಿಗಳೆಲ್ಲಾ? ಏನೋ ವಿಕಾರ. ಏನೋ ಭಾವಾಂತರ. ಭಾವವನ್ನು ಬಿಟ್ಟು ಬೇರೆ ಭಾವ. ಬಹಳ ಕಷ್ಟ ಇದು. ಉದಾ:ಪರಸ್ಪರ ಪ್ರೀತಿಯಿಂದ ಇದ್ದಾಗ ಸ್ಪಷ್ಟ ವ್ಯತ್ಯಾಸ ಕಂಡರೂ ಮನಸ್ಸಿಗೆ ತುಂಬಾ ಸಂಕಟವಾಗುತ್ತದೆ. ಯಾವಾಗಲೂ ನಗುವ ಹಾಗೆ ನಗುತ್ತಾ ಇಲ್ಲ ಯಾಕೆ? ಯಾವಾಗಲೂ ಮಾತನಾಡಿಸುವ ಹಾಗೆ ಮಾತನಾಡುತ್ತಿಲ್ಲ ಯಾಕೆ? ಸ್ವಲ್ಪ ಬೇರೆ ಅನಿಸಿದರೂ ಕೂಡ ಆತ್ಮೀಯದಲ್ಲಿ ತುಂಬಾ ಸಂಕಟವಾಗುತ್ತದೆ. ಆ ಭಾವ ರಾಮನಲ್ಲಿ ಇದೆ. ಏನಾಯಿತು ಅಂಥದ್ದು?
ಪ್ರಮಾದಾ ಚರಿತಂ ಯಾವುದು ನನ್ನಿಂದ ಲೋಪವಾಯಿತು? ತಪ್ಪು ಮಾಡಿದನಾ ನಾನು ತಿಳಿದೋ ? ತಿಳಿಯದೆಯೋ? ಅಥವಾ ತಮ್ಮ ಲಕ್ಮಣ ಅವನು ಏನಾದರೂ ತಪ್ಪು ವ್ಯವಹಾರವನ್ನು – ತಪ್ಪು ಮಾತನ್ನು ಆಡಿದನೇ?
ಅದಿಲ್ಲದಿದ್ದರೆ ಸೀತೆ? ನಾರಿಯರು ಹೇಗಿರಬೇಕು ಅದನ್ನು ಬಿಟ್ಟು ಬೇರೆ ಬಗೆಯಲ್ಲಿ ಸೀತೆಯ ವರ್ತನೆ-ವ್ಯವಹಾರ ಏನಾದರೂ ಇತ್ತಾ? ಉಚಿತವಲ್ಲದ ವರ್ತನೆ ಯಾವುದಾದರೂ? ಏನಿದು?
• ಆತ್ಮಾವಲೋಕನ ತುಂಬಾ ಮುಖ್ಯ
ಉದಾಹರಣೆಗೆ :ಹಾಲು ಸಾತ್ವಿಕವಾದ ಪದಾರ್ಥ. ಹಾಲಿನಲ್ಲಿ ಅಭಿರುಚಿ ಬಂದರೆ ಅದು ಕಲ್ಯಾಣಾಭಿರುಚಿ. ಆದರೆ ಹಾಲಿನಲ್ಲಿ ಬರದೆ ಇನ್ನು ಯಾವುದೋ ಕುಡಿಯಬಾರದ್ದಲ್ಲಿ ಬಂದಾಗ, ಅಲ್ಲಿ ಮಧ್ಯ ಮಾತ್ರ ಅಲ್ಲ ಕಾಫಿ-ಚಹಾಗಳಲ್ಲಿ ನಮಗೆ ಇರೋ ಆಸಕ್ತಿ, ಹಾಲು – ಎಳನೀರಿನಲ್ಲಿ  ನಮಗೆ ಇರೋದಿಲ್ಲ. ಮನೆಗೆ ಬಂದವರಿಗೆ ಹಾಲು, ಎಳನೀರು ಕೊಡೋದಿಕ್ಕಿಂತ ಜಾಸ್ತಿ ಚಹಾ ಕೊಡುವುದು ರೂಢಿ. ಸ್ವಲ್ಪ ರಜೋ ಗುಣ ಇರಬೇಕು,ಇದ್ದರೇ ಮನುಷ್ಯನಿಗೆ ಅಭಿರುಚಿ ಬರೋದು.
ಉದಾ:ಪಡುವಲಕಾಯಿಗೆ ಎಷ್ಟು ಓಟು ಬೀಳುತ್ತದೆ? ಈರುಳ್ಳಿಗೆ ಎಷ್ಟು ಓಟು ಬೀಳುತ್ತದೆ? ಮನಸ್ಸು ಹೋಗುವುದೇ ಈರುಳ್ಳಿ ಕಡೆಗೆ.
ಆದರೆ ಸೀತೆ ಬಗ್ಗೆ ಕುಲಪತಿಗಳ ಕೊಟ್ಟ certificate ಏನು ಅಂದರೆ ಆಸಕ್ತಿಯೇ,ಕಲ್ಯಾಣದ ಕಡೆಗೆ  ಅವಳ ಮನಸ್ಸು ಹೋಗದೇ ಯಾವುದು ಸಾತ್ವಿಕವೋ, ಶುಭವೋ ಆ ಕಡೆಯತ್ತ ಸಾಗುತ್ತದೆ. ನಮ್ಮ ಅಭಿರುಚಿಗಳು ಹೀಗಿರಬೇಕು. ಎಲ್ಲೆಲ್ಲಿ ಸಾತ್ವಿಕವಲ್ಲದ್ದನ್ನು ಬಯಸುತ್ತೇವೆಯೋ ನೋಡಿಕೊಳ್ಳಬೇಕು. ಅದೆಲ್ಲಾ ಬದಲಾಗಬೇಕು. ನಾವು ಪ್ರಯತ್ನಪೂರಕವಾಗಿ ಬದಲಾಗೋದು ಆದರೆ ಸೀತೆಗೆ ಸಹಜವಾದ ಗುಣ ಅದು. ಅಂತಹ ಸೀತೆ ಆಕೆಯಲ್ಲಿ ಚಲನೆ ಎನ್ನುವುದು ಸಾಧ್ಯವೇ ಇಲ್ಲ. ತನ್ನ ಸಹಜತೆಯನ್ನು ಬಿಟ್ಟು ಆ ಕಡೆ-ಈ ಕಡೆ ಚಲಿಸೋದೇ ಇಲ್ಲ. ಅದರಲ್ಲೂ ತಪಸ್ವಿಗಳ ವಿಷಯದಲ್ಲಿ ಚಲಿಸಲು ಎಲ್ಲಿ ಸಾಧ್ಯ? ಖಂಡಿತಾ ಇಲ್ಲ. ಸೀತೆ ಬಗ್ಗೆ ಏನೂ ಸಮಸ್ಯೆ ಇಲ್ಲ, ಇರುವುದೆಲ್ಲಾ ನಿನ್ನ ಬಗ್ಗೆಯೇ ‘ತ್ವಂನಿಮಿತ್ತಂ ಇದಂ ಪಾವತ್ ಪಾಪಸಾಂತತಿ ವರ್ತತೇ’ ನಿನ್ನನ್ನು ಕುರಿತಾಗಿಯೇ ಈ ಉದ್ವೇಗ, ಔತುಕ್ಯ.
ನಾನೇನು ಮಾಡಿದೆ?
ನೀನು ಏನನ್ನೂ ಮಾಡಿಲ್ಲ, ರಾಕ್ಷಸರು ಮಾಡುತ್ತಿದ್ದಾರೆ. ರಾಕ್ಷಸರು ಉಪದ್ರವವನ್ನು ಮಾಡುತ್ತಿದ್ದಾರೆ ತಪಸ್ವಿಗಳಿಗೆ. ನಾನು ಏನು? ರಾಮನಿಗಾಗಿಯೇ ಮಾಡುತ್ತಿರುವಂತದ್ದು ‘ಮುಖ್ಯ ಲಕ್ಷಂ ನೀನು’. ನಿನ್ನನ್ನು ಕಂಡೇ ಪ್ರಾರಂಭವಾಗಿದ್ದು, ಆದರೆ ತೋರಿಸುತ್ತಿರುವುದು ನಮ್ಮ ಮೇಲೆ. ರಕ್ಷೋಭ್ಯ ತೇನ ಸಂವಿಘ್ನಾ: ಕತೆಯಂತಿ ಮಿಥಃಕತಾಃ -ರಾಮನ ಕಾರಣದಿಂದಾಗಿ ರಾಕ್ಷಸರು ನಮ್ಮನ್ನು ಪೀಡಿಸುತ್ತಿದ್ದಾರೆ ಎಂಬುದು ವಿಷಯ. ಯಾರದು ರಾಕ್ಷಸರು? ರಾವಣಾ ವರಜಃ ಕಕ್ಷಿತ್, ರಾವಣನ ತಮ್ಮನಾದ ಒಬ್ಬ ರಾಕ್ಷಸ. ವಿಭೀಷಣ ಅಂತೂ ಸಾಧ್ಯವಿಲ್ಲ;ಕುಂಭಕರ್ಣನಿಗೆ ಎಚ್ಚರವಾಗೋದೇ ಅಪರೂಪ.(6 ತಿಂಗಳ ನಂತರ 1 ದಿನ ಎಚ್ಚರವಿರುವುದು) ತಮೋ ಮೂರ್ತಿಯಾದ ಕುಂಭಕರ್ಣನೂ ಅಲ್ಲ;ಸತ್ವಮೂರ್ತಿಯಾದ ವಿಭೀಷಣನೂ ಅಲ್ಲ.
ಮತ್ತೆ ಯಾರು?
ಖರ
ರಾವಣನ ತಮ್ಮನೇ ಹೌದು. ನೇರವಾಗಿ ಅಲ್ಲದಿದ್ದರೂ ತಮ್ಮನೇ ಆಗಬೇಕು. ಖರನಿಗೆ ಜವಾಬ್ದಾರಿ ಏನು? ದಂಡಕಾರಣ್ಯದಲ್ಲಿ ಇರತಕ್ಕಂಥಹ ಒಳ್ಳೆಯವರನ್ನೆಲ್ಲಾ ಪೀಡಿಸುವುದು. ರಾವಣನ ಭಾಷೆಯಲ್ಲಿ ದಂಡಕಾರಣ್ಯವನ್ನು ನೋಡಿಕೋ ಎಂದರೆ ತಪಸ್ವಿಗಳಿಗೆ, ಋಷಿ ಮುನಿಗಳಿಗೆ ಉಪದ್ರವ ಕೊಡು ಎಂದು. ಇದಕ್ಕಾಗಿಯೇ ಹದಿನಾಲ್ಕು ಸಾವಿರ ಘೋರ ರಾಕ್ಷಸರ ಒಂದು ತುಕುಡಿ ಪಂಚವಟೀ ಸ್ಥಾನದಲ್ಲಿದೆ. ಅದರ ಮಹಾನಾಯಕನೇ ಈ ಖರ. ಮತ್ತೆ ದೂಷಣ, ಬಳಿಕ ಪ್ರಿಶಿರ ಇವರುಗಳು ಅವನಿಗೆ ಸಹಾಯಕರು. ಇವರಿಗೆ ಪೀಡಿಸುವುದು ಒಂದೇ ಉದ್ಯೋಗ. ದಂಡಕಾರಣ್ಯದ ಪಾಲನೆಯಲ್ಲಿ ಪೀಡನೆ. ಪೀಡನೆಯೇ ಪಾಲನೆ. ಹಾಗಾಗಿ ಖರನೆಂಬ ರಾವಣನ ಸಹೋದರ ಮತ್ತು ಕಡೆಯವರು ತಾಪಸಿಗಳನ್ನು ಪೀಡಿಸುತ್ತಿದ್ದಾರೆ.
ಖರನೆಂತಹವನು? ದಾಷ್ಟವಿದೆ, ಪುಕ್ಕಲನಲ್ಲ. ದೃಷ್ಟ – ಜಿತಕಾಶೀ ಚ ಸಮರವೀರನೂ ಹೌದು. ಅನೇಕಾನೇಕ ಗೆಲುವನ್ನು ಕಂಡವನವನು. ಜಯಮಾಲೆ ಇದೆ,ಅವನ ಕೊರಳಲ್ಲಿ. ಜಯದಿಂದ ಬೆಳಗುವವನು. ಅದೆಲ್ಲಾ ಸರಿ. ಒಬ್ಬನಿಗೆ ಧೈರ್ಯ ಇದೆ, ಎಷ್ಟೋ ಯುದ್ಧಗಳನ್ನ ಗೆದ್ದಿದ್ದಾನೆ ಅದೆಲ್ಲಾ ಸಕಾರಾತ್ಮಕವಾದದ್ದು. ಆದರೆ ಅವನು ಕ್ರೂರ. ಮಾತ್ರವಲ್ಲ ಪುರುಷಾದಕಃ ನರಮಾಂಸ ಭಕ್ಷಕ, ನರಸಂಹಾರಿ. ದೊಡ್ಡ ಗರ್ವಿಷ್ಠ. ಪಾಪಶ್ಚ – ಪಾಪವೇ ತುಂಬಿದೆ ಅವನಲ್ಲಿ. ಪಾಪವನ್ನು ಬಿಟ್ಟು ಬೇರೇನೂ ಇಲ್ಲ. ಒಳಗೆ ರಕ್ತ ಮಾಂಸ ಇರೋದಕ್ಕಿಂತ ಹೈಚ್ಚು ಪಾಪವೇ ತುಂಬಿದೆ. ಇಂಥಹ ಖರನು ನಿನ್ನನ್ನು ಸಹಿಸಲಾರ. ನಾವು ಯಾರೂ ಲೆಕ್ಕವಲ್ಲ ಅವನಿಗೆ. ದೃಷ್ಟಿ ಇರುವುದು ನಿನ್ನ ಮೇಲೆ. ಹಾಗಾಗಿ ನಿನ್ನ ಮುಟ್ಟಲಾಗದೇ ನಮ್ಮನ್ನು ಪೀಡಿಸುತ್ತಿದ್ದಾನೆ.
• ಕೆಲವು ಬಾರಿ ಹಾಗೆ ಆಗುತ್ತದೆ ಯಾರು ಪ್ರಧಾನರಾಗಿರುತ್ತಾರೋ ಅವರನ್ನು ಮುಟ್ಟಲಾಗದೇ ಇದ್ದಾಗ ಅಕ್ಕ-ಪಕ್ಕದವರಿಗೆಲ್ಲಾ ತೊಂದರೆ ಕೊಡುವುದು. ಅವರಿಗೆ ಸಂಬಂಧಿಸಿದವರಿಗೆ ತೊಂದರೆ ಕೊಡುವಂತದ್ದು. ನಾಯಕನಿಗೆ ಉಪದ್ರವ ಮಾಡಲು ಸಾಧ್ಯವಾಗದೇ ಇದ್ದಾಗ ನಾಯಕನ ಸೇವಕರನ್ನು ಪೀಡಿಸುವಂತದ್ದು. ಸೃಷ್ಟಿ ಬಂದಾಗಿನಿಂದ ಇದೆಲ್ಲಾ ಇದೆ.
ಹಾಗೆ ಪಾಂಚಶಾನಮೃಶ್ಯತಿ ಯಾವಾಗಿನಿಂದ ಈ ಆಶ್ರಮದಲ್ಲಿ ನೀನು ಇದ್ದೀಯೋ ಅವಾಗಿನಿಂದ ನಮ್ಮನ್ನು ರಾಕ್ಷಸರು ಪೀಡಿಸುತ್ತಿದ್ದಾರೆ. ಆವರೆಗೆ ಅಷ್ಟಾಗಿ ಇರಲಿಲ್ಲ. ಒಳ್ಳೆಯವರು ಜೊತೆಗಿರಬೇಕು ಎಂದರೂ ಕೆಲವು ತೊಂದರೆಗಳಿವೆ. ಗಟ್ಟಿ ಇರಬೇಕಾಗುತ್ತದೆ. ರಾಮನ ಜೊತೆಗಿರುತ್ತೇನೆಂದರೆ ಸಹಜವಾಗಿ ರಾವಣ ಮತ್ತು ಅವನ ಕಡೆಯವರಿಗೆ ಆಗದವರಾಗಿರುತ್ತಾರೆ. ಅವರಿಗೆ ರಾಮನನ್ನು ಮುಟ್ಟಲಾಗದೇ ಇದ್ದಾಗ ಜೊತೆಗಿರುವವರನ್ನು ಮುಟ್ಟುತ್ತಾರೆ. ಆಗ ರಾಮನನ್ನೇ ಆಶ್ರಯಿಸಬೇಕು,ಅದುವೇ ಪರಿಹಾರ. ಆದರೆ ಇಲ್ಲಿ ಸ್ವಲ್ಪ ಬೇರೆ ತರಹ ಆಗಿದೆ. ಅವರಿಗೆ ತುಂಬಾ ಪೀಡೆಯಾಗಿಬಿಟ್ಟಿದೆ. ಹೇಳಿಕೊಳ್ಳಲೂ ಇಲ್ಲ. ಒಂದು ವೇಳೆ ರಾಮನಲ್ಲಿ ಹೇಳಿಕೊಂಡಿದ್ದಾರೆ ಈಗಾಗಲೇ ಪರಿಹಾರ ಸಿಕ್ಕಿರುತ್ತಿತ್ತು. ಈಗ ರಾಮನೇ ಕೇಳಿದ ಮೇಲೆ ಹೇಳುತ್ತಿರುವುದು.
– ತುಂಬ ಸಲ ಹೀಗೆ ಆಗುವುದುಂಟು,ಎಲ್ಲಿ ಹೇಳಬೇಕೋ ಅಲ್ಲಿ, ಯಾವಾಗ ಹೇಳಬೇಕೋ ಆಗ ಹೇಳದೇ ಇರುವುದು.. ಅದರಿಂದಾಗಿ ತುಂಬಾ ಪೀಡೆಗಳು ಉಂಟಾಗುತ್ತದೆ. ಮೊದಲೇ ಹೇಳಿದರೆ ಪರಿಹಾರವಿದೆ. “ನೀರು ಹರಿದು ಹೋದ ಮೇಲೆ ಅಣೆಕಟ್ಟು ಕಟ್ಟಿ ಏನು ಪ್ರಯೋಜನ?” ಇದೂ ಅಂಥದ್ದು.
ರಾಕ್ಷಸರು ಏನನ್ನು ಮಾಡುತ್ತಿದ್ದಾರೆ?ಋಷಿಗಳಿಗೆ ಬೀಭತ್ಸವಾದ – ಭಯಂಕರವಾದ ರೂಪಗಳನ್ನು ತೋರಿಸುವುದು. ಎಲ್ಲಾ ಋಷಿಗಳು ವಸಿಷ್ಠ ರಾಗಿರುತ್ತಾರೆಯೇ? ಇಲ್ಲ. ಸಾಧನೆಯ ಆರಂಭದಲ್ಲಿ ಇರುವಂತವರು, ಸಾಧನೆಯ ಮಧ್ಯೆ ಇರುವವರು, ತಮ್ಮಷ್ಟಕ್ಕೆ ತಾವು ತೊಂದರೆ ಇಲ್ಲದೇ ಇರುವವರು ಇರುತ್ತಾರೆ. ಅವರ ಮುಂದೆ ಘೋರ ರೂಪವನ್ನು ಪ್ರಕಟಿಸಿದರು. ಬೀಭತ್ಸೈಹಿ, ಕ್ರೂರೈಹಿ:, ವಿರೂಪೈಹಿ:, ವಿಕೃತದರ್ಶನೈಹಿ:. ಬೀಬತ್ಸ, ವಿಕೃತ ದರ್ಶನ, ವಿರೂಪ, ನಾನಾ ರೂಪ ಎಷ್ಟು ರೀತಿಯಲ್ಲಿ ಕೆಟ್ಟ ರೂಪ ತೋರಿಸಲು ಸಾಧ್ಯವೋ ಅಷ್ಟು ರೂಪಗಳನ್ನು ತೋರಿಸಿಬಿಟ್ಟಿದ್ದಾರೆ. ವಿಕೃತ ದರ್ಶನ ಆದರೆ ಕಣ್ಣಿಗೆ ಮಾತ್ರ ಕೇಡು ಆದರೆ ಇದು ಹಾಗಲ್ಲ. ಅಶುಚಿ ವಸ್ತುಗಳನ್ನು ಸಂಸರ್ಗ ಮಾಡಿಸುವುದು, ಶುಭ್ರವಾಗಿರುವಂತಹ ಋಷಿಗಳ ಮೇಲೆ ಮಧ್ಯ ಸುರಿಯುವಂತದ್ದು, ರಕ್ತ ಸುರಿಯುವುದು, ಮಾಂಸವನ್ನು ಮಡಿಲಿಗೆ ಹಾಕುವುದು. ಹೀಗೆ ಅಶುಚಿ ವಸ್ತುಗಳನ್ನು, ಕೊಳಕು ಮತ್ತು ಅಪವಿತ್ರವಾಗಿರುವಂತಹ ವಸ್ತುಗಳನ್ನು ತಂದು ಅದರ ಮೂಲಕವಾಗಿ ಋಷಿಗಳನ್ನ ಅಶುಚಿ ಮಾಡುವುದು. ಋಷಿಗಳು ಅಶುಚಿ ಭಾವದಿಂದ ಹೊರ ಬರುವ ಮುನ್ನವೇ ಅನ್ಯ ಋಷಿಗಳನ್ನ ಹೊಡೆಯುವುದು, ಪ್ರಹಾರಮಾಡುವುದು, ಮಾಯೆಯ ಮೂಲಕ ಕಾಣಿಸುವುದು-ಕಾಣಿಸಿಕೊಳ್ಳದಿರುವುದು, ಬೇರೆ ತರಹ ಕಾಣಿಸಿಕೊಂಡು, ಹಿಂದಿಂದ ಬಂದು – ಮುಂದಿಂದ ಬಂದು ಹೀಗೆ ಒಟ್ಟು ಮೋಸ-ವಂಚನೆಯೇ ಪ್ರಧಾನವಾಗಿ ಋಷಿಗಳಿಗೆ ಈ ಬಗೆಯಲ್ಲಿ ತೊಂದರೆಕೊಟ್ಟರು. ಇಲ್ಲಿಗೆ ಹೆಜ್ಜೆ ಮೂರಾಯಿತು.
1.ಕಣ್ಣಿಗೆ ಬೀಬತ್ಸ ರೂಪ ತೋರಿಸಿ
2.ಮೈ ಮೇಲೆ ಅಶುಚಿ ವಸ್ತುಗಳನ್ನು ಸುರಿದು
3.ತಳ್ಳುವುದು,ಏಟು ಕೊಡುವುದು
ಆಶ್ರಮದ ಪರಿಸರದಲ್ಲಿ ಎಲ್ಲೋ ಅಡಗಿ ಕುಳಿತು ಕಾಣದಂತೆ, ಆ ತಾಪಸಿಗಳ ಮೇಲೆ ಪ್ರಹಾರ ಮಾಡಿ ಸಂತೋಷಪಟ್ಟರು. ವಿಘ್ನ ಸಂತೋಷಿಗಳು. ರಾಕ್ಷಸರನ್ನು ವಾಲ್ಮೀಕಿಗಳು “ಹಿಂಸಾರತಿ” ಎಂದು ಕರೆದಿದ್ದಾರೆ. ರತಿ ಎಂದರೆ ಖುಷಿ ಅಥವಾ ಸಂತೋಷ. ಈ ರತಿ ಎಲ್ಲಿ ಇವರಿಗೆ? ಅಂದರೆ ಪೀಡಿಸಿ, ಹಿಂಸಿಸಿ ವಿಕೃತವಾದ ಸಂತೋಷ, ಹಾಗಾಗಿ ರಾಕ್ಷಸರು ಎಂದು ಹೆಸರು. ರಾಕ್ಷಸರನ್ನು ಯಾಕೆ ರಾಮ ಸಂಹಾರ ಮಾಡಬೇಕು ಎಂದರೆ ಈ ಕಾರಣಕ್ಕಾಗಿಯೇ. ಇಷ್ಟಕ್ಕೇ ಮುಗಿಯಿತಾ? ಎಂದರೆ ಇಲ್ಲ.ಹೋಮ ಮಾಡುತ್ತಿರುವ ಹೊತ್ತಿನಲ್ಲಿ, ಪುಣ್ಯಫಲವಾಗಿರುವಂತಹ ಯಜ್ಞಗಳನ್ನು ಮಾಡುವ ಸಂದರ್ಭದಲ್ಲಿ ಬಂದು ಹೋಮದ ಉಪಕರಣಗಳನ್ನು ಕಸಿದು ಬಿಡುವುದು. ಯಜ್ಞ ಅಗ್ನಿಗೆ ನೀರು ಹೊಯ್ಯುವುದು, ಅಗ್ನಿಂ ಸಿಂಚಂತಿ ವಾರಿಣಾಂ – ಯಜ್ಞಾರ್ಥವಾದ ಕಲಶಗಳನ್ನು ಒಡೆಯುವುದು, ಈ ರೀತಿ ದುರಾತ್ಮರಿಂದ ಆ ರಾಕ್ಷಸರಿಂದ ದೂಷಿತವಾದ ಆಶ್ರಮಗಳನ್ನು ತ್ಯಜಿಸುವ ಮನಸ್ಸು ಬಂತು. ಎಲ್ಲವನ್ನೂ ಬಿಟ್ಟು ಬೇರೆ ಕಡೆ ಹೋಗೋಣ, ಈ ಕಾಟ ತಡೆಯೋಕೆ ಸಾಧ್ಯವಿಲ್ಲ ಎಂಬುದಾಗಿ ಋಷಿಗಳು ನನ್ನನ್ನು ಪ್ರಚೋದಿಸುತ್ತಿದ್ದಾರೆ. ನನ್ನನ್ನು ಬಂದು ಮತ್ತೆ ಮತ್ತೆ ಪ್ರಾರ್ಥನೆ ಮಾಡುತ್ತಿದ್ದಾರೆ. ಬೇರೆಲ್ಲಾದರೂ ಹೋಗೋಣ, ಬೇಡ ಇಲ್ಲಿ. ಖರನ ಕಾಟ ತುಂಬಾ ಆಯಿತು. ಈಗ ಇಷ್ಟೇ ಇದೆ ಮುಂದೆ ನಮ್ಮ ಪ್ರಾಣಕ್ಕೇ ಕುತ್ತು ತರುವ ಮುನ್ನ ನಾವೆಲ್ಲಾದರೂ ಹೋಗೋಣ.
ತತ್ಪುರಾ ರಾಮ ಶಾರೀರೀಂ ಉಪಹಂಸಾಂ ತಪಸ್ವಿಚು ಗಚ್ಛಯಂತಿ ತೇ ದುಷ್ಟಾ ಯಕ್ಷಾಮ ಇಮ ಮಾಶ್ರಯಾಂ
            ಶಾರೀರಿಕವಾದ ಹಿಂಸೆಗೆ ಅವರು ತೊಡಗುವ ಮೊದಲು ಬೇರೆ ಹೋಗುತ್ತೇವೆಂದು ಕುಲಪತಿ ರಾಮನಿಗೆ ಹೇಳಿದರು. ಎಲ್ಲಿಗೆ ಹೋಗೋದು? ನನ್ನದೇ ಮೊದಲಿನ ಆಶ್ರಮವೊಂದಿದೆ ಪುರಾಣಾಶ್ರಮ-ಇಲ್ಲಿಗೆ ಬರುವ ಮೊದಲು ಇದ್ದಂತಹ ಆಶ್ರಮ, ಬಹಳ ದೂರ ಇಲ್ಲ. ಅಲ್ಲಿ ಮೂಲ ಫಲಗಳು ಬಹಳ. ಗೆಡ್ಡೆ – ಗೆಣಸುಗಳು, ಹಣ್ಣು – ಹಂಪಲುಗಳು ಬೇಕಾದಷ್ಟು ಇರುವ ಆಶ್ಚರ್ಯಕರವಾಗಿರುವಂತಹ ಆ ಮೊದಲಿನ ಆಶ್ರಮಕ್ಕೆ ನಾವೆಲ್ಲರೂ ಹೋಗುತ್ತೇವೆ. ಖರನು ನಿನಗೂ ತೊಂದರೆ ಮಾಡಿಯಾನು, ಮೂಲತಃ ಕೇಡು ಭಾವ-ಅಸಹನೆ ಇರುವಂತದ್ದು ನಿನ್ನ ಮೇಲೆ ಹಾಗಾಗಿ ನೀನು ಬಾ ನಮ್ಮೊಡನೆ ಒಟ್ಟಿಗೇ ಹೋಗೋಣ ಆ ಕಡೆಗೆ. ಸಹತ್ವಾ ತ್ಮಾಭಿರಿತೋ-ಜೊತೆಯಲ್ಲಿ ಹೋಗೋಣ.ನೀನೂ ಬಂದು ಬಿಡು ಎನ್ನಲು ಕಾರಣವಿದೆ. ನೀನು ಸಕಲತ್ರಾ – ಸೀತೆ ನಿನ್ನೊಡನಿದ್ದಾಳೆ. ನಿನ್ನ ಪತ್ನಿ ಆಕೆಯ ಮೇಲೆ ಕಣ್ಣು ಬೀಳಬಹುದು ರಾಕ್ಷಸರದ್ದು. ಆಕೆಯಿಂದಾಗಿ ನಿನ್ನ ಮೇಲೆ ವೈರ ಸಾಧಿಸಬಹುದು. ಆಕೆಯನ್ನು ಅಪಹರಿಸುವ ಸಲುವಾಗಿ ನಿನಗೆ ಕೇಡನ್ನು ಮಾಡುವ ಪ್ರಯತ್ನವನ್ನೂ ಮಾಡಬಹುದು.ನೀನು ಸಮರ್ಥನು ಹೌದು, ಎಂಥಹ ರಾಕ್ಷಸರನ್ನು ಬಡಿದುರುಳಿಸುವ ಶಕ್ತಿ ನಿನಗಿದೆ. ಆದರೆ ರಾಕ್ಷಸರು ಮೋಸದ ಸ್ವಭಾವದವರು ಷಠಾ ಮಾಯಾವಿಗಳು. ಧರ್ಮ ಯುದ್ಧ ಮಾಡುವವರಲ್ಲ.ಮೋಸದಲ್ಲೇ ಯುದ್ಧ ಮಾಡುವಂತದ್ದು,ಆಕ್ರಮಣ ಮಾಡುವವರು. ಹಾಗಾಗಿ ನಿನಗೂ ಈ ಚಿತ್ರಕೂಟದ ವಾಸ ಖಂಡಿತಾ ಸುಖಕರವಲ್ಲ. ನೀನು ಬಂದು ಬಿಡು.
ಸಮರ್ಥಸ್ಯಾಪಿ ಹೇ ಸತೋವಾಸ
ನಮಗೆ ರಾಕ್ಷಸರ ಸ್ವಭಾವ, ಅವರ ಸ್ವರೂಪ, ಅವರು ಏನು ಮಾಡುತ್ತಾರೆ ಎನ್ನುವ ಕುರುಹು ಸಿಗುತ್ತದೆ. ಋಷಿಗಳಿಗೆ ಯಾವ ಬಗೆಯ ಉಪದ್ರವವಾಗುತ್ತಾ ಇತ್ತು ದಂಡಕಾರಣ್ಯದಲ್ಲಿ? ಇದು ರಾಮನ ಸುತ್ತ-ಮುತ್ತ ನಡಿತಾ ಇದ್ದಿದ್ದು. ರಾಮನ ಮುಂದೆ ಬಂದಿಲ್ಲ ಈವರೆಗೂ. ಆದರೆ ಪರಿಸರದ ತಪಸ್ವಿಗಳನ್ನು ನಾನಾ ರೀತಿಯಲ್ಲಿ ಪೀಡಿಸಿದ್ದಾರೆ.
ಏನು ಮಾಡುವುದು? ಯಾಕೆ ಹೀಗೆ ಮಾಡಬೇಕು? ಜೀವಕ್ಕೆ ಸಂತೋಷಪಡುವ ಹಕ್ಕಿದೆ. ಅದೇ ಜೀವನದ ಪರಮೋದ್ದೇಶ ಹಾಗಂತ ಇನ್ನೊಬ್ಬರ ಸಂತೋಷವನ್ನು ಕಿತ್ತುಕೊಳ್ಳುವ ಹಕ್ಕಿಯಲ್ಲ ಅಥವಾ ಇನ್ನೊಬ್ಬರ ಸಂತೋಷವನ್ನು ಕಿತ್ತುಕೊಂಡು ತಾನು ಸಂತೋಷ – ಸುಖಪಡುವ ಹಕ್ಕಿಲ್ಲ. ನಮ್ಮ ನಗುವಿನ ಹಿಂದೆ ಇನ್ನಾರದೋ ಕಣ್ಣೀರು ಇರಬಾರದು.
ಕಗ್ಗದ ಮಾತೊಂದಿದೆ-
ಅನ್ನವುಣುವೊಂದು ಕೇಳ್
ಅದನು ಬೇಯಿಸಿದ ನೀರ್ ನಿನ್ನ ದುಡಿಮೆಯ ಬೆಮರು
ಪರರ ಕಣ್ಣೀರೋ..
ಅನ್ನ ಬೇಯಿಸಿದ ನೀರು ಯಾವುದು? ನಿನ್ನ ಬೆವರಿನಲ್ಲಿ ನೀನು ಅನ್ನವನ್ನು ಬೇಯಿಸಿಕೊಳ್ಳುತ್ತಿದ್ದೀಯ ಅಥವಾ ಪರರ ಕಣ್ಣೀರಿನಲ್ಲಿಯಾ? ರಾಕ್ಷಸತ್ವ ಅಂದರೆ ಇದು. ಅಕಾರಣವಾಗಿ ಪೀಡಿಸುವಂತದ್ದು. ಯಾವುದೇ ಲಾಭವೂ ಇಲ್ಲ ಅವರಿಗೆ. ಲಾಭವೆಂದರೆ ವಿಕೃತ ಸಂತೋಷವೇ ಲಾಭ. ಅದಿಲ್ಲದಿದ್ದರೆ ಯಾಕೆ ಹೋಮಾದಿಗಳಿಗೆ ನೀರು, ರಕ್ತ ಸುರಿಯಬೇಕು? ಇವರು ವಧಾರ್ಹರು, ಇವರು ಕನಿಕರಕ್ಕೆ ಅರ್ಹರಲ್ಲ ಯಾಕೆಂದರೆ ಇವರು ಇದ್ದಷ್ಟು ಕಾಲವೂ ಪ್ರಪಂಚಕ್ಕೆ ಪೀಡನೆಯೇ ಹೊರತು ಬೇರೆ ಇನ್ನೇನೂ ಇಲ್ಲ. ಇದು ನಡಿತಾ ಇದ್ದಿದ್ದು ದಂಡಕಾರಣ್ಯದಲ್ಲಿ. “ರಾಮನಿಗೆ ಯಾಕೆ ವನವಾಸ ಮಾಡಬೇಕಾಯಿತು ಎಂದರೆ ಪ್ರಮುಖ ಕಾರಣ ಇದು.” ಚಿತ್ರಕೂಟದಲ್ಲಿ ನಡಿತಾ ಇದ್ದಂತಹ ಅನ್ಯಾಯ ದಂಡಕಾರಣ್ಯದ ಬಾಗಿಲು ಎನ್ನಬಹುದಷ್ಟೇ. ಇದು ಚಿತ್ರಕೂಟದವರೆಗೆ ಇದೆ. ಸಿದ್ಧಾಶ್ರಮ ಇನ್ನೂ ದೂರ ಇದೆ.ಅಲ್ಲಿ ಕೂಡ ಮಾರೀಚ, ಸುಬಾಹು ರಾವಣನ ಕಡೆಯವರೆ ಪೂಜೆ ಮಾಡ್ತಾ ಇದ್ರು. ಅಕಾರಣವಾಗಿ ಪೂಜೆ ಮಾಡ್ತಾ ಇದ್ರು. ಹೊರಟೆ. ಆ ಕುಲಪತಿಯನ್ನು ನಿಲ್ಲಿಸಲಿಕ್ಕೆ ನಾನು ಮನಸ್ಸು ಮಾಡಲಿಲ್ಲ. ಇನ್ನಷ್ಟು ಸಮಾಧಾನ ಮಾಡಿ, ಉತ್ತರ ಹೇಳಿ ನಾನಿದೇನೆ ಭಯಪಡಬೇಡಿ. ಯಾಕೆಂದ್ರೆ ಅವರು ಅಷ್ಟರ ಮಟ್ಟಿಗೆ ವಿಚಲಿತರಾಗಿಬಿಟ್ಟಿದ್ರು. ಅಷ್ಟೂ ಅವರ ಮನಸ್ಸು ವ್ಯಘ್ರವಾಗಿತ್ತು. ವಿಚಲಿತವಾಗಿತ್ತು. ಹಾಗಾಗಿ ಉತ್ತರ ಇರುವಾಗ ಇನ್ನಷ್ಟು ಮತ್ತಷ್ಟು ಏನೇನೋ ಹೇಳಿ ಮನವರಿಕೆ ಮಾಡಿಸುವಂತ ಸ್ಥಿತಿ ಇಲ್ಲ.ಅಲ್ಲಿ ಹೊರಟು ಹೋಗುವಂಥ ಸ್ಥಿತಿ ಇದೆ‌. ಹೊರಟೇ ಬಿಟ್ರು ಅವರೆಲ್ರು ಕೂಡ. ರಾಮನನ್ನು ಅಭಿನಂದಿಸಿ, ಹೋಗಿ ಬರ್ತೇವೆ ಅಂತ ಹೇಳಿ ರಾಮನಿಗೆ ಸಮಾಧಾನದ ಮಾತುಗಳು ಕೂಡ ನಿನ್ನ ಬಗ್ಗೆ ಅಂದ್ರೆ ಹಾಗಲ್ಲ ಅದು ನಮ್ಮಿಂದಾಗಿ ಪುನಃ ನಿನಗೂ ಉಪದ್ರವ ಆಗಬಹುದು.ಇಲ್ಲಿಗೆ ನಿಲ್ಲಿಸೋಣ ಇದನ್ನ ಎಂಬುದಾಗಿ ಅವನಿಗೂ ಸಮಾಧಾನ ಹೇಳಿ ಆ ಕುಲಪತಿಯೂ ಕುಲಗಳ ಜೊತೆಗೆ ಅನೇಕಾನೇಕ ಕುಲಗಳು, ಗುರುಕುಲಗಳು, ವಿದ್ಯಾಕುಲಗಳು, ಅವರೆಲ್ಲರ ಜೊತೆಗೆ ಕುಲಪತಿಗಳು ಹೊರಡ್ತಾರೆ.ರಾಮ ಅವರನ್ನ ಕಳಿಸಿ ಕೊಡಲಿಕ್ಕೆ ಸಾಕಷ್ಟು ದೂರ ಅವರ ಜೊತೆಗೆ ಹೋಗ್ತಾನೆ. ಕುಲಪತಿಯನ್ನು ಮತ್ತೆ ಆರಾಧನೆ ಮಾಡ್ತಾನೆ. ಇವರಿಗೂ ತುಂಬಾ ಪ್ರೀತಿ ಇದೆ ರಾಮನಲ್ಲಿ. ಸಂತೋಷವಿದೆ. ಒಳ್ಳೆ‌ ಮಾತುಗಳನ್ನ ಹೇಳ್ತಾರೆ ಅವರೆಲ್ರೂ ಕೂಡ. ಮತ್ತೂ ಕೂಡ. ಆದರೆ ಹೊರಟೇ ಹೋಗ್ತಾರೆ. ರಾಮ ತನ್ನಾಶ್ರಮಕ್ಕೆ ಹೊರಡ್ತಾನೆ.ಅದರ ಬಳಿಕ ರಾಮನು ಆಶ್ರಮವನ್ನು ಬಿಟ್ಟು ಒಂದು ಕ್ಷಣಾನೂ ಇರಲಿಲ್ಲ.ಋಷಿರಹಿತವಾದ ಆಶ್ರಮ. ಋಷಿಗಳೆಲ್ಲ ಹೊರಟು ಹೋಗಿದಾರೆ. ಒಂದು ಕ್ಷಣ ಕೂಡ ಆಶ್ರಮ ಬಿಡ್ಲಿಲ್ಲ. ಯಾಕಂದ್ರೆ ಸೀತೆಗಾಗಿ. ಎಷ್ಟೊತ್ತಿಗೆ ಬಂದು ಏನು ಮಾಡ್ತಾರೋ ಅನ್ನೋ ಕಾರಣಕ್ಕೆ ಬಹುಷಃ ಇಲ್ಲಿಂದ ಆರಂಭಿಸಿ ಮಾಯಾಮೃಗದವರೆಗೆ. ಮಾಯಾಮೃಗಲ್ಲಿಯೂ ರಾಮ ಬಿಟ್ಟು ಹೋಗಲಿಲ್ಲ. ಲಕ್ಷ್ಮಣನನ್ನ ಬಿಟ್ಟು ಹೋಗಿದಾನೆ. ಅದು ಬೇರೆ ಯಾವುದೋ ಕಾರಣಕ್ಕೆ ಲಕ್ಷ್ಮಣನೂ ಕೂಡ ಹೊರಡುವಂತಾಯ್ತು ಇದು ಬೇರೆ ಮಾತು. ಅಲ್ಲಿಂದ ನಂತರ ಸೀತೆಗೆ ರಾಮ ಲಕ್ಷ್ಮಣರಿಲ್ಲದಂತ ಸಂದರ್ಭದವೇ ಇಲ್ಲ. ಇಬ್ರೂ ಇರ್ತಾರೆ. ಒಬ್ಬರಂತೂ ಇದ್ದೇ ಇರ್ತಾರೆ. ಹಾಗೆ ಆಕೆಯನ್ನ ಕಾಪಾಡ್ತಾರೆ ಅವರು. ಹಾಗಾಗಿ ಒಂದು ಕ್ಷಣವೂ ಕೂಡ ಆಶ್ರಮವನ್ನ ರಾಮನು ಅಗಲಲಿಲ್ಲ. ಎಲ್ಲರೂ ಹೋದ್ರೂ ಅಂತಲ್ಲ. ಕೆಲವರು ಉಳ್ಕೊಂಡ್ರು. ಅವರಿಗೆ ವಿಶೇಷ ಪ್ರೀತಿ ರಾಮನಲ್ಲಿ. ವಿಶೇಷ ಪ್ರೀತಿ.ಹಾಗಾಗಿ ಅವರೂ ಕೂಡ ರಾಮನನ್ನು ಬಿಡದೇ ರಾಮನ ಜೊತೆಗೆ ಉಳಿದರು. ಆರ್ಷ ಚರಿತ ಚಿತ ಗುಣಾಹ
ಅವನಲ್ಲಿ ಆ ಸಾಮರ್ಥ್ಯ ವಿದೆ ರಾಮನಲ್ಲಿ. ಅವರು ರಾಮನನ್ನು ಬಿಟ್ಟು ಅಗಲಲಿಲ್ಲ. ಹೀಗೆ ಒಂದು ಸ್ವಲ್ಪ ಸಮಯ ಕಳೆದ ಮೇಲೆ ರಾಮನ ಮನಸು ಬೇರೆಯಾಯ್ತು. ಅಲ್ಲಿ ಇರಲಿಕ್ಕೆ ರಾಮನು ಸಹ ಇಷ್ಟ ಪಡಲಿಲ್ಲ.ಚಿತ್ರಕೂಟದಲ್ಲಿ ಉಳಿಲಿಕ್ಕೆ ರಾಮನೂ ಇಷ್ಟ ಪಡಲಿಲ್ಲ.ಅದಕ್ಕೆ ಬಹಳ ಕಾರಣಗಳಿದ್ದಾವೆ.ಏನು ಕಾರಣ ? ಭರತನ ನೋಡಿದ ಸ್ಥಾನವಿದು. ತಾಯಂದಿರನ್ನು ಭೇಟಿಯಾದ ಸ್ಥಾನವಿದು. ಅವರ ಜೊತೆಗೆ ಒಡನಾಡಿದ ಸ್ಥಾನವಿದು.ಇಲ್ಲಿದ್ರೆ ಅದೇ ನೆನಪು ಬರುವಂಥದ್ದು‌.ಆ ನೆನಪು ಈಗ ದುಃಖದ, ಜೊತೆಗೆ ಇದ್ದಾಗ ಸುಖದ. ಆದ್ರೆ ಈಗ ವಿರಹ ಬಂದಿದೆ ನೋಡಿ ವಿರಹ ಬಂದ ಬಳಿಕ ಆ ನೆನಪು ಇನ್ನು ಸುಖವಲ್ಲ.‌ದುಃಖ.( ಶ್ಲೋಕ) ರಾಮನಿಗೂ ಅವರ ನೆನಪು, ಅವರಿಗಾಗಿ ದುಃಖ. ಅವರ ದುಃಖಕ್ಕಾಗಿ ದುಃಖ. ಅವರಿಗಾಗಿ ದುಃಖ. ಹಾಗಾಗಿ ಅದು ಪ್ರಬಲವಾದ ಕಾರಣ.ಪ್ರಥಮವಾದ ಕಾರಣ ಯಾವುದೂ ಅಂದ್ರೆ ಅವರೆಲ್ಲರೂ ಒಂದುಗೂಡಿದ ಸ್ಥಳ.‌ಭರತ ಮೊದಲಾದವರು ಬಂದು ಹೋದ ಸ್ಥಳ. ದುಃಖವನ್ನು ಉಂಟುಮಾಡ್ತಂಕ್ಕಂತಹ, ಆ ನೆನಪನ್ನು ತರ್ತಕಂತಹ ಸ್ಥಳ. ನೋಡಿ ತುಂಬಾ ಪ್ರೀತಿಸಿದವರ ಜೊತೆಗೆ ನಾವು ಪ್ರೀತಿಯಲ್ಲಿಂದಂತಹ ಸ್ಥಳಗಳು ಅವರನ್ನಗಲಿದ ಮೇಲೆ ದುಃಖದ ಸ್ಥಳಗಳಾಗಿ ಮಾರ್ಪಾಡಾಗ್ತವೆ. ನೋಡಿದಾಗ ನೆನಪಾಗ್ತದೆ ಅಲ್ವಾ.ಹಾಗಾಗಿ ಆ ಸ್ಥಳವು ಸಂತೋಷದ ಸ್ಥಳವಾಗಿ ಉಳಿಯೋದಿಲ್ಲ.ಎಲ್ಲಿ ನಾವು ಸುಖವನ್ನು ಅನುಭವಿಸಿದ್ದೀವೋ ನಮ್ಮ ಆಪ್ತರ ಜೊತೆಗೆ, ನಮ್ಮ ಇಷ್ಟವಾದ ವ್ಯಕ್ತಿ ಜೊತೆಗೆ ನಾವು ಎಲ್ಲಿ ಸುಖ ಪಟ್ಟಿದ್ದೇವೋ ಆ ಸ್ಥಳವೂ ಕೂಡ ವಿರಹದ ಬಳಿಕ ಸುಖಸ್ಥಾನವಾಗಿ ಉಳಿಯೋದಿಲ್ಲ. ಪ್ರಧಾನ ಕಾರಣ ಏನು. ಮತ್ತೆ ಆ ಸ್ಥಳವೂ ಕೂಡ ಏನೇನೋ ಆಗ್ಬಿಟ್ಟಿದೆ. ಸಾವಿರಾರು ಆನೆಗಳು,ಲಕ್ಷಾಂತರ ರಥಗಳು,ಕುದುರೆಗಳು, ಜನರು ಎಲ್ಲ ಬಂದು ಹೋದ ಮೇಲೆ ಆ ಸ್ಥಳವು ಖುದ್ದಾಗಿರಲಿಕ್ಕೆ ಸಾಧ್ಯವೇ ಇಲ್ಲ. ಭರತನ ಸೇನೆ ಬಂದು ಬೀಡು ಬಿಟ್ಟಾಗ ಅನೇಕ ವ್ಯತ್ಯಾಸಗಳಾಗಿವೆ. ಆ ಸ್ಥಳದಲ್ಲಿ ಮತ್ತೆ ಎಲ್ಲೆಂದ್ರೆ ಅಲ್ಲಿ ಆನೆ ಕುದುರೆಗಳ ಲದ್ದಿ ಕೂಡ ಎಲ್ಲ ಕಡೆ ಬಿದ್ದಿದೆ….ನಮ್ಮ ಆಪ್ತರ ಜೊತೆಗೆ ನಾವು ಎಲ್ಲಿ ಸುಖಪಟ್ಟಿದ್ದೆವೋ ಆ ಸ್ಥಳವೂ ನಮಗೆ ಅವರ ವಿರಹದ ಬಳಿಕ ಸುಖಸ್ಥಾನವಾಗಿ ಉಳಿಯುವುದಿಲ್ಲ. ಪ್ರಧಾನ ಕಾರಣ ಇದು. ಇಂದು ಆ ಸ್ಥಳವೂ ಕೂಡ ಏನೇನೋ ಆಗಿಬಿಟ್ಟಿದೆ. ಸಾವಿರಾರು ಆನೆಗಳು, ಲಕ್ಷಾಂತರ ರಥಗಳು, ಕುದುರೆಗಳು, ಜನರು ಎಲ್ಲರೂ ಬಂದು ಹೋದ ಮೇಲೆ ಆ ಸ್ಥಳ ಕೂಡ ಇದ್ದ ಹಾಗೆ ಇರಲು ಸಾಧ್ಯವಿಲ್ಲ. ಭರತನ ಸೇನೆ ಬಂದು ಬೀಳು ಬಿಟ್ಟಾಗ ಅನೇಕ ವಿಫಲನಾಮಗಳು, ವ್ಯತ್ಯಾಸಗಳು ಆಗಿವೆ. ಎಲ್ಲೆಂದರಲ್ಲಿ ಆನೆ, ಕುದುರೆಗಳ ಲದ್ದಿ ಕೂಡ ಬಿದ್ದಿದೆ. ಅದನ್ನು ನೋಡಿದರೂ ಕೂಡ ರಾಮನಿಗೆ ಭರತನ ನೆನಪಾಗುತ್ತದೆ. ಆ ಚಿಹ್ನೆಗಳು ಯಾವುದನ್ನು ನೋಡಿದರೂ ಕೂಡ ದುಃಖ ಉಮ್ಮಳಿಸಿ ಬರುತ್ತದೆ. ಹಾಗಾಗಿ ಆಶ್ರಮದ ಪರಿಸರವೂ ಹಾಳಾಗಿದೆ. ಅದೂ ಮತ್ತೊಂದು ಕಾರಣ. ಮತ್ತೆ ಮೊದಲ ಕಾರಣ ಮತ್ತೆ ಮತ್ತೆ ನೆನಪು ಮರುಕಳುಹಿಸುವುದು. ರಾಮ ಇಲ್ಲಿ ಇದ್ದ ಮೇಲೆ, ಅಯೋಧ್ಯೆಗೂ ಚಿತ್ರಕೂಟಕ್ಕೂ ದಾರಿ ಗೊತ್ತಾದ ಮೇಲೆ ಚಿತ್ರಕೂಟ ಊರಾಗುವುದು ನಿಶ್ಚಿತ. ಅದು ಕಾಡಾಗಿ ಉಳಿಯಲು ಸಾಧ್ಯವಿಲ್ಲ. ಎಲ್ಲರೂ ಇಲ್ಲೇ ಬರುತ್ತಾರೆ. ಬರದೇ ಇರಲು ಸಾಧ್ಯವಿಲ್ಲ. ಈ ಎಲ್ಲಾ ಕಾರಣಳಿಂದಾಗಿ ರಾಮ ಹೇಳುತ್ತಾನೆ ನಾವು ಕೂಡ ಬೇರೆ ಕಡೆ ಹೊರಟು ಹೋಗೋಣ. ಹಾಗಾಗಿ ವೈದೇಹಿಯ ಜೊತೆಗೂಡಿ ಲಕ್ಷ್ಮಣನೂ ಚಿತ್ರಕೂಟದಿಂದ ಹೊರಟ. ಭರತ ಬಂದು ಹೋಗದೇ ಇದ್ದಿದ್ದರೆ, ಸೀತಾಪಹರ ಆಗುತ್ತಿತ್ತೋ ಇಲ್ಲವೋ? ಭರತ ಬಂದು ಹೋದದ್ದರಿಂದ ಚಿತ್ರಕೂಟವನ್ನು ಬಿಟ್ಟು ಬೇರೆಡೆಗೆ ತೆರಳುತ್ತಾರೆ. ಚಿತ್ರಕೂಟದಲ್ಲೇ ಎಷ್ಟು ಕಾಲ ಬೇಕಿದ್ದರೂ ಇರಬಹುದು ಎಂಬ ಭಾವ ಈ ಮೊದಲು ತುಂಬಿತ್ತು. ಭರತ ಬಂದು ಹೋಗದೇ ಇದ್ದಿದ್ದರೆ 14 ವರ್ಷ ಚಿತ್ರಕೂಟದಲ್ಲೇ ಇದ್ದು ನಂತರ ಅಯೋಧ್ಯೆಗೆ ರಾಮ ಹಿಂತಿರುಗುತ್ತಿದ್ದ. ಆದರೆ ಭರತ ಬಂದು ಹೋದದ್ದೇ ತಿರಗಲು ಕಾರಣವಾಯಿತು. ದೈವ ಸಂಕಲ್ಪ. ರಾಮ ಹೋಗಿ ತಲುಪಿದ್ದು ಎಲ್ಲಿಗೆ ಎಂದರೆ, ಅತ್ರಿ ಮಹರ್ಷಿಗಳ ಆಶ್ರಮಕ್ಕೆ. ಅತ್ರಿ ಎಂದರೆ ಮೂರನ್ನು ಮೀರಿದವನು. ಸತ್ತ್ವ, ರಜಸ್ಸು ಮತ್ತು ತಮಸ್ಸುಗಳನ್ನು ಮೀರಿದ ಮಹಾಚೇತನ ಅವರು. ಹಾಗಾಗಿ ಅತ್ರಿ ಎಂದು ಕರೆಯಲಾಗುತ್ತದೆ. ಅತ್ರಿ ಮಹರ್ಷಿಗಳ ಆಶ್ರಮಕ್ಕೆ ರಾಮ ಭೇಟಿ ನೀಡಿದಾಗ ಮಗನಂತೆ ಕಂಡರು. ಸ್ವತಃ ತಾವೇ ಆತಿಥ್ಯ ಮಾಡುತ್ತಾರೆ. ಪರಮ ಸತ್ಕಾರವನ್ನು ರಾಮನಿಗೆ ಮಾಡುತ್ತಾರೆ. ಸವಿತ್ರಿ ಸೀತೆಯನ್ನು ಅತ್ರಿಗಳು ಸಂತೈಸುತ್ತಾರೆ. ಮಹರ್ಷಿಗಳ ಪತ್ನಿ ಅನುಸೂಯೆ ಕೂಡ ಅಷ್ಟೇ. ಭಗವಂತ ತನ್ನನ್ನು ತಾನೇ ದತ್ತ ಮಾಡಿದವನು ಅತ್ರಿ ಮಹರ್ಷಿಗಳ ಮಗ. ದತ್ತನ ತಾಯಿ ತಂದೆಯರು. ಹಾಗೆ ಅನುಸೂಯೆಯನ್ನು ಅತ್ರಿಗಳು ಕರೆಯುತ್ತಾರೆ. ವೈದೇಹಿಯನ್ನು ಸ್ವೀಕಾರ ಮಾಡು ಎನ್ನುತ್ತಾರೆ. ಆಕೆಗೆ ಸೀತೆಯನ್ನು ವಿಶೇಷ ಗಮನ. ರಾಮನಿಗೂ ತನ್ನ ಪತ್ನಿಯ ಪರಿಚಯವನ್ನು ಅತ್ರಿಗಳು ಮಾಡುತ್ತಾರೆ. ಆಕೆಯ ಪರಿಚಯ ಬಹಳ ಇದೆ. ಒಂದೆರಡಲ್ಲ. 10 ವರ್ಷಗಳ ಕಾಲ ಮಳೆ ಬರಲಿಲ್ಲ. ಜಗತ್ತಿನಲ್ಲಿ ಅನಾವೃಷ್ಠಿ ಆವರಿಸಿತು. ಘೋರವಾದ ಕ್ಷಾಮ, ಡಾಮರುಗಳು ಆವರಿಸಿದಾಗ, ಈ ಅನುಸೂಯೆ ಕಂದ ಮೂಲಗಳನ್ನು ಪರಿಚಯ ಮಾಡಿಸಿ ಋಷಿಮುನಿಗಳಿಗೆ ಊಟ ಮಾಡಿಸಿದಾಕೆ. ಅವರನ್ನು ಭರಿಸಿ, ಪೋಷಣೆ ಮಾಡಿದಾಕೆ. ಆವೃಷ್ಠಿಯ ಸಮಯದಲ್ಲಿ ನೀರಿಲ್ಲ, ಹಾಹಾಕಾರ, ಅನ್ನ, ಆಹಾರಗಳನ್ನು ತಾನೇ ಸೃಷ್ಟಿ ಮಾಡಿ ಅಸಂಖ್ಯ ಋಷಿಗಳನ್ನು ಪಾಲಿಸಿ, ಪೋಷಿಸಿದವಳು. ಮಾತ್ರವಲ್ಲ, ಗಂಗೆ ಬತ್ತಿ ಹೋಗಿತ್ತು. ಗಂಗೆಯನ್ನು ಹರಿಸಿದವಳು. ಆಶ್ರಮದ ಪರಿಸರದಲ್ಲೇ ಗಂಗೆಯನ್ನು ಹರಿಸಿ ಎಲ್ಲರಿಗೂ ನೀರು ಕೊಟ್ಟಾಕೆ. ಅಷ್ಟು ತಪ್ಪಸ್ಸು ಮಾಡಿದಾಕೆ. ಉಗ್ರ ತಪಸ್ಸನ್ನು ಮಾಡಿದಾಕೆ. ಜಗದ ನಿಯಮಗಳನ್ನು ಪಾಲಿಸಿದಾಕ. ನಿಯಮಗಳು ಆಕೆಗೆ ಅಲಂಕಾರ. ಚಿನ್ನದ ಆಭರಣಗಳಿಗಿಂತ ಆಕೆ ಅನುಸರಿಸಿದ ನಿಯಮಗಳೇ ಆಕೆಗೆ ಅಲಂಕಾರ. 10,000 ವರ್ಷಗಳ ಕಾಲ ಉಗ್ರ ತಪಸ್ಸನ್ನು ಮಾಡಿದವಳು. ಬಗೆ ಬಗೆಯ ಯಜ್ಞಗಳನ್ನು ಮಾಡಿದವಳು, ವಿಜ್ಞಗಳನ್ನು ಗೆದ್ದವಳು, ಮಾತ್ರವಲ್ಲ, ಯಜ್ಞ, ತಪಸ್ಸುಗಳಿಗೆ ವಿಜ್ಞ ಎದುರಾದಾಗ ಅವುಗಳನ್ನು ನಿವಾರಿಸುವವಳು. ದೊಡ್ಡ ದೊಡ್ಡ ಋಷಿಗಳಿಗೆ ಯಜ್ಞದಲ್ಲಿ ವಿಜ್ಞಗಳಾದಾಗ ಅವುಗಳನ್ನು ನಿವಾರಣೆ ಮಾಡುತ್ತಾಳೆ. ಅಷ್ಟು ದೊಡ್ಡ ತಪಸ್ವಿನಿ ಅನುಸೂಯೆ. ಬರಿ ಪತ್ನಿ, ಅಡುಗೆ ಮಾಡುವಾಕೆ ಎನ್ನುವುದಕ್ಕಿಂತ ಬಾರಿ ದೊಡ್ಡ ವ್ಯಕ್ತಿತ್ವ ಅನುಸೂಯೆಯದ್ದು. ರಾಮನಂತಹವರಿಗೆ ಅತ್ರಿಗಳಂತಹವರು ಪರಿಚಯ ಮಾಡಿಕೊಡುವುದು. ಒಂದು ಕಾಲದಲ್ಲಿ ದೇವತೆಗಳೇ ಬಂದು ಆಕೆಯ ಬಳಿ ವಿನಂತಿ ಮಾಡುತ್ತಾರೆ. 10 ರಾತ್ರಿಗಳನ್ನು ಒಂದೇ ರಾತ್ರಿಯಲ್ಲಿ ವಿಜ್ಞಗಳನ್ನು ನಿವಾರಣೆ ಮಾಡುತ್ತಾಳೆ. 10 ರಾತ್ರಿ ಒಂದೇ ರಾತ್ರಿ ಮಾಡುವ ಕಾಲವನ್ನೇ ಪರಿವರ್ತಿಸುವ ಶಕ್ತಿ ಯಾರಿಗೂ ಇಲ್ಲ. ಅಂತಹ ಶಕ್ತಿ ಈಕೆಗಿದೆ. ಅಂತಹವಳು ನಿನಗೆ ಕೌಸಲ್ಯೆ ಇದ್ದಂತೆ. ನಿನ್ನ ಅಮ್ಮ ಇದ್ದಂತೆ ಈಕೆ ಎಂಬುದಾಗಿ ಪರಿಚಯ ಮಾಡಿಸುತ್ತಾರೆ. ಹೀಗೆ ಸಮಸ್ತ ಜೀವಕೋಶಗಳ ನಮಸ್ಕಾರಿಸಲು ಯೋಗ್ಯತೆ ಉಳ್ಳವಳು. ಅಂತಹವಳು ವೃದ್ಧೆ. ಬಹಳ ವಯಸ್ಸಾಗಿದೆ. ಸಿಟ್ಟೇ ಇಲ್ಲದವಳು. ಸಿಟ್ಟು ಬರುವುದೇ ಇಲ್ಲ. ವಯಸ್ಸಾದ ಮೇಲೂ ಕೋಪ ಬರುತ್ತದೆ. ಈ ಅಸಹಾಯಕತೆಯಿಂದ ಕೋಪ ಬರುತ್ತದೆ. ಸಾಮಾನ್ಯವಾಗಿ ಕೋಪದ ಮೂಲ ಅಸಹಾಯಕತೆ ಎಂದು ಹೇಳಲಾಗುತ್ತದೆ. ಸ್ವಲ್ಪ ಅನುಷ್ಠಾನ ಮಾಡುವುದು ಹೆಚ್ಚಾದರೆ ಕೋಪ ಬರುವುದು ಹೆಚ್ಚಾಗುತ್ತದೆ. ಅನುಷ್ಠಾನ ಸಾಧನೆ ಮಾಡಬೇಕಾದರೆ ಕೋಪವನ್ನು ಗೆಲ್ಲಬೇಕಾಗುತ್ತದೆ. ಸಾತ್ವಿಕ ಕಾರ್ಯ ಮಾಡಿ ರಜೋ ಗುಣ ಬರುವುದಾದರೂ ಹೇಗೆ? ಗರ್ವ ಬಂದಾಗ ಸಿಟ್ಟು ಮಾಡಿ ತಾನು ಅನುಷ್ಠಾನವಂತ ಎಂಬುದನ್ನು ತೋರಿಸುವುದು. ಅನುಷ್ಠಾನದ ಫಲವೇ ಕ್ಷಮವೇ ಆಗಿದೆ. ಚಿತ್ತ ನಿಗ್ರಹ, ಸಮಾಧಾನ ಬೆಳಿಬೇಕು. ಹಾಗೆಯೇ ಅನುಸೂಯೆ ಕೂಡ ತನ್ನ ಕರ್ಮಗಳಿಂದಲೇ ಸಾರ್ಥಕವಾಗಿ ಅನುಸೂಯ ಎಂದು ಕರೆಸಿಕೊಂಡಾಕೆ. ಕ್ಷೀರಸಾಗರ ಬೆಟ್ಟ ಆದರೆ ಮನೆಯಲ್ಲಿ ಒಂದು ತೊಟ್ಟು ಹಾಲಿಲ್ಲ. ಸಾರ್ಥಕವಾಗಿ ತನ್ನ ಕರ್ಮಗಳಿಂದ ಅಸೂಯೆಯನ್ನು ಗೆದ್ದು ಅನುಸೂಯ ಎನಿಸಿಕೊಂಡವಳು. ಅಂತಹ ಮಹತ್ತರವಾದ ಕಾರ್ಯಗಳನ್ನು ಮಾಡಿದಾಕೆ ಎಂದು ಅತ್ರಿ ಮಹರ್ಷಿಗಳೇ ಪರಿಚಯ ಮಾಡಿಕೊಡುತ್ತಾರೆ. ಸಾಮಾನ್ಯವಾಗಿ ತನ್ನ ಪತ್ನಿಯ ಬಗ್ಗೆ ಅಷ್ಟೊಂದು ಪರಿಚಯ ಕೊಟ್ಟರೆ ಪ್ರಪಂಚ ವಿಚಿತ್ರವಾಗಿ ಕಾಣುತ್ತದೆ. ಆದರೆ ಇಲ್ಲಿ ಇದು ಸಹಜವಾದುದು. ರಾಮ ಕೂಡ ಋಷಿಗಳ ಮಾತನ್ನು ಹಾಗೆಯೇ ಸ್ವೀಕಾರ ಮಾಡಿ ಹೇಳುತ್ತಾನೆ ನೋಡು, ಸೀತೆ ಅತ್ರಿಗಳು ಹೇಳಿದ್ದನ್ನು ಅನುಸೂಯೆಯ ಸೇವೆ ಮಾಡು ನಿನಗೆ ಶ್ರೇಯಸ್ಸು ಸಿಗುತ್ತದೆ. ನಿನ್ನ ಆತ್ಮದ ಒಳಿತಿಗಾಗಿ ಅನುಸೂಯೆಯ ಬಳಿ ಸಾರು ಎಂದು ಹೇಳಿದಾಗ, ತನ್ನ ಹಿತವನ್ನು ಬಯಸುವ ರಾಮನ ಮಾತನ್ನು ಕೇಳಿದ ಸೀತೆ ಅನುಸೂಯೆಯ ಕಡೆಗೆ ಸಾಗಿ ಹೋಗುತ್ತಾಳೆ. ಅನುಸೂಯೆ ಹೇಗಿದ್ದಾಳೆ ಎಂದರೆ ಶರೀರವೆಲ್ಲಾ ಶಿಥಿಲವಾಗಿ ಹೋಗಿದೆ. ಅಂಗಾಂಗಗಳೆಲ್ಲವೂ ಸಡಿಲವಾಗಿ ಹೋಗಿದೆ. ಅಷ್ಟರ ಮಟ್ಟಿಗೆ ಆಕೆಗೆ ಮುಪ್ಪು ಎಂಬುದು ಆವರಿಸಿ ಬಿಟ್ಟಿದೆ. ದೇಹದ ಭಾಗಗಳೆಲ್ಲವೂ ಸುಕ್ಕು ಗಟ್ಟಿದೆ. ಕರ್ಮ ಕಳೆದು ಹೋಗಿದೆ. ಸಹಜ ವೃದ್ಯಾಪ್ಯದಿಂದಾಗಿ ಕಪ್ಪು ಕೂದಲು ಇಲ್ಲ, ಎಲ್ಲವೂ ಬಿಳಿಯಾಗಿ ಬಿಟ್ಟಿದೆ. ಒಳಗಿರುವ ಜ್ಞಾನ ಪ್ರಕಾಶ ಹೊರಬಂದಾಗ ಕೂದಲು ಬಿಳಿಯಾಗುತ್ತದೆ. ಅದೊಂದು ಸಹಜವಾದ ಪ್ರಕ್ರಿಯೆ. ಹಾಗೆ ಆಗಲಿಲ್ಲ ಎಂದರೆ ಏನೂ ಐಬು ಇದೆ ಎಂದೇ ಅರ್ಥ. ವಯಸ್ಸಾದ ಹಾಗೆ ಜ್ಞಾನ ಬರಬೇಕು. ಕಾಯಿಗೆ ವಯಸ್ಸಾದ ಹಾಗೆ ರುಚಿ ಬರಬೇಕು. ಹಣ್ಣಾಗುವುದು ಎಂದರೆ ಪರಿಮಳ ಬರಬೇಕು, ಮೃದುವಾಗಬೇಕು. ಮೃದುವಾಗದೇ, ಹುಳಿ ಹುಳಿ ಇದ್ದು ಮಧುರವಾಗದಿದ್ದರೆ ಅದಕ್ಕೆ ಯಾವುದೇ ಅರ್ಥವಿರುವುದಿಲ್ಲ. ಮುಪ್ಪಿನಲ್ಲಿ ನೆರೆ ಗಡ್ಡ ಚೆಂದ. ಮುಪ್ಪು ಬಹಳ ಶೋಭೆ. ಒಂದು ಕ್ಷಣವೂ ನಿಲ್ಲದೇ ನಡುಗುತ್ತಾಳೆ. ಬೀಸುವ ಗಾಳೆಗೆ ಕಂಪಿಸುವ ಬಾಳೆಯಂತೆ ಕ್ಷಣ ಕ್ಷಣವೂ ಕಂಪಿಸುವ, ಆ ಮಹಾನುಭಾವೆಯನ್ನು ಸೀತೆ ಹೋಗಿ ಸೇರುತ್ತಾಳೆ. ತನ್ನ ಹೆಸರು ಸೀತೆ ಎಂದು ಹೇಳಿ ಅಭಿವಾದನ ಮಾಡುತ್ತಾಳೆ. ಹಿರಿಯರಿಗೆ ಕಿರಿಯರ ಹೆಸರು ಬೀಳಬೇಕು ಎಂಬುದು ಪದ್ಧತಿ. ಉಪಚಾರಾರ್ಥವಾಗಿ ಅನುಸೂಯೆಯನ್ನು ಅರೋಗ್ಯವೇ ಎಂದು ಕೇಳುತ್ತಾಳೆ. ಸಾಮಾನ್ಯವಾಗಿ ಹಿರಿಯರು ಬಹಳ ಕಿರಿಯರನ್ನು ಕಂಡರೆ ಪ್ರೀತಿಯಿಂದ ಕಾಣುತ್ತಾರೆ. ಆಕೆ ಸೀತೆಗ ಹೇಳುತ್ತಾಳೆ, ನೀನು ಧರ್ಮವನ್ನು ಬಿಟ್ಟಿಲ್ಲ. ಧರ್ಮದಲ್ಲೇ ದೃಷ್ಟಿಯನ್ನು ನೆಟ್ಟಿದ್ದಿ. ಅದು ನನಗೆ ಸಂತೋಷ. ಕಾಡಿನಲ್ಲೇ ಆಗಲೀ, ಭವನದಲ್ಲೇ ವಾಸ ಮಾಡಲಿ ಯಾವ ಸ್ತ್ರೀ ತನ್ನ ಗಂಡನಿಗೆ ಬದ್ಧವೋ ಆಕೆ ಧರ್ಮಕ್ಕೆ ಬದ್ಧ ಎಂದು ಹೇಳುತ್ತಾಳೆ. ಆತ ಒಳ್ಳೆಯವನೋ, ಕೆಟ್ಟವನೋ, ಉತ್ತಮ ಅಥವಾ ಕೆಟ್ಟ ಸ್ಥಿತಿಯಲ್ಲಿ ಇದ್ದರೂ, ಮನಸ್ಸಿಗೆ ಬಂದ ಹಾಗೆ ನಡೆದುಕೊಳ್ಳುವವನೇ ಆಗಿರಲಿ, ದುಡ್ಡೇ ಇಲ್ಲದವನಾಗಲಿ, ಆರ್ಯ ಸ್ವಭಾವದ ಸ್ತ್ರೀಯರಿಗೆ ಪತಿ ಎಂದರೆ ಪರದೈವ. ಅವನು ಅದೆಷ್ಟು ಕೇಡಿದ್ದರೂ ಸತಿಗೆ ಪತಿ ಕೇಡಲ್ಲ. ಸತಿಗೆ ಪತಿ ದೇವರಿದ್ದ ಹಾಗೆ. ಪತಿಗಿಂತ ದೊಡ್ಡ ಬಂದುವಿಲ್ಲ. ತಪಸ್ಸಿಗೆ ಹೇಗೆ ದೊಡ್ಡ ಫಲ ಮುಂದೆ ಇದೆಯೋ ಹಾಗೆ ಪಾತಿವ್ರತ್ಯಕ್ಕೂ ಮಹಾಫಲ ಮುಂದೆ ಬರುತ್ತದೆ. ಆದರೆ ಕೆಲವು ಸ್ತ್ರೀಯರಿಗೆ ಈ ಬುದ್ಧಿ ಇಲ್ಲ. ಈ ವಿವೇಕವಿಲ್ಲ. ಬಯಕೆಗಳೇ ಇವರನ್ನು ನಡೆಸುತ್ತವೆ, ಅಪೇಕ್ಷೆಗಳ ಹಿಂದೆ ಓಡುವುದು, ಅಂತಹರು ಗಂಡನಿಗೆ ಗಂಡಾಗಿರುತ್ತಾರೆ. ಗಂಡನಿಗೇ ಗಂಡನಾಗಿ ಅವನ ತಲೆ ಮೇಲೆ ಕೂತಿರುತ್ತಾರೆ. ಅವನಿಂದಲೇ ಸೇವ ಮಾಡಿಸಿಕೊಳ್ಳುತ್ತಿರುತ್ತಾರೆ. ಕೆಲವರು ತನಗೆ ಬೇಕಾದ ಪತಿಯನ್ನು ಹುಡುಕುತ್ತಾ ಹೋಗುತ್ತಾರೆ. ಒಂದಾದ ಮೇಲೆ ಎರಡು, ಎರಡಾದ ಮೇಲೆ ಮೂರು, ಮೂರಾದ ಮೇಲೆ ನಾಲ್ಕು ಎನ್ನುವ ಹಾಗೆ ಇವನಲ್ಲಿ ಸಮಾಧಾನವಾಗಲಿಲ್ಲ ಎಂದು ಇನ್ನೊಬ್ಬ, ಮತ್ತೊಬ್ಬ ಹೀಗೆ ಅಕಾರ್ಯವನ್ನು ಮಾಡುವಂತಹವರು ಆ ಸ್ತ್ರೀಯರು. ಅಂತಹವರಿಗೆ ಎಂದಿಗೂ ಒಳ್ಳೆಯದಾಗುವುದಿಲ್ಲ. ಪ್ರಪಂಚದಲ್ಲಿ ಯಾವುದು ಶ್ರೇಷ್ಠವಾದುದು, ಯಾವುದು ಕನಿಷ್ಠವಾದುದು ಎಂಬುದು ತಿಳಿದಂತಹವರಿಗೆ ಅಂದರೆ ನಿನ್ನಂತಹವರಿಗೆ ಎಂದಿಗೂ ಒಳ್ಳೆಯದಾಗುತ್ತದೆ. ಮುಂದೆ ಸ್ವರ್ಗ, ಪುಣ್ಯಲೋಕಗಳು ಅವರಿಗಾಗಿ ಸಿದ್ಧವಾಗಿವೆ ಎಂದು ಪಾತಿವ್ರತ್ಯವನ್ನು ಎತ್ತಿ ಹೇಳುತ್ತಾಳೆ ಅನುಸೂಯ.
ನೀನಂತೂ ರಾಮನಿಗೆ ಅನುವ್ರತಗಮಿ. ಪತಿವ್ರತ್ಯಗಳನ್ನು ಪಾಲನೆ ಮಾಡುವವಳು. ಹೀಗೆಯೇ ಮುಂದುವರಿ. ರಾಮನಿಗೆ ಎಡಬಿಡದೇ ಸಹಧರ್ಮಿಣಿಯಾಗಿರು. ಅದರಿಂದ ನಿನಗೆ ಕೀರ್ತಿ ಮತ್ತು ಧರ್ಮ ಎಂದು ಹೇಳುತ್ತಾಳೆ ಅನುಸೂಯೆ. ಸೀತೆ ಆಕೆಗೆ ಗೌರವಿಸಿ, ಅಮ್ಮ ಈ ರೀತಿ ಉಪದೇಶ ಮಾಡುವುದು ನಿರೀಕ್ಷಿತವೇ. ಇದೇ ಮಾತನ್ನು ನಾನು ಇದುವರೆಗೂ ಕೇಳುತ್ತಾ ಬಂದಿದ್ದೇನೆ. ನಾರಿಗೆ ಪತಿಯೇ ಗುರು. ನನ್ನ ಪತಿ ಒಂದು ವೇಳೆ ನಡತೆಗೆಟ್ಟವನಾಗಿದ್ದರೂ, ಶೀಲ, ಚಾರಿತ್ರ್ಯವಿಲ್ಲದಿದ್ದರೂ ಎರಡಿಲ್ಲದೇ ಉಪಚರಿಸಬೇಕಿತ್ತು. ಎಷ್ಟೆಲ್ಲಾ ಗುಣಗಳು ನನ್ನ ಪತಿಯಲ್ಲಿ ಇವೆ. ನನ್ನ ಪತಿಯಲ್ಲಿ ನನ್ನ ಮೇಲೆ ಬಹಳ ಕರುಣೆ. ರಾಮನಲ್ಲಿ ಅನುರಾಗ ಸ್ಥಿರವಾಗಿದೆ. ಸ್ಥಿರವಾದ ಪ್ರೀತಿ ನನ್ನಲ್ಲಿ. ಪರಮಾತ್ಮ ನನ್ನ ಪತಿ. ಮಾತೃವತ್, ಪಿತೃವತ್ ಪ್ರಿಯಃ. ನನ್ನ ಪತಿ ನನಗೆ ಮಾತೃ, ಪಿತ ಇದ್ದ ಹಾಗೆ. ತಾಯಿ ತಂದೆ ಕೊಡುವ ಸುಖವನ್ನು ಆತ ನೀಡುತ್ತಾನೆ. ರಾಮ ನನಗೆ ತಾಯಿ-ತಂದೆ ಇದ್ದಂತೆ. ಕಲ್ಯಾಣ ಚಾರಿತ್ರ್ಯ, ಸ್ಥಿರವಾದ ಪ್ರೇಮ ಉಳ್ಳವನು. ಕೌಸಲ್ಯೆಯಲ್ಲಿ ನಡೆದುಕೊಳ್ಳುವ ಹಾಗೆಯೇ ದಶರಥನ ಎಲ್ಲಾ ರಾಣಿಯರಲ್ಲೂ ನಡೆದುಕೊಳ್ಳುತ್ತಾನೆ. ದಶರಥ ಯಾರನ್ನಾದರೂ ಪ್ರೀತಿಯಿಂದ ನೋಡಿ ಬಿಟ್ಟರೆ, ಅದು ರಾಮನಿಗೆ ಗೊತ್ತಾದರೂ ಆಕೆಯ ಮೇಲೂ ಮಾತೃ ಭಾವ ಅಷ್ಟು ಪರಾಕಾಷ್ಠೆಯನ್ನು ಹೊಂದಿದ್ದಾನೆ. ಬೇರೆ ಸ್ತ್ರೀಯರನ್ನು ಮಾತೃವಿನಂತೆ ನೋಡುವಷ್ಟು ಚಾರಿತ್ರ್ಯ. ಒಂದು ಬಾರಿ ನೋಡಿದರೂ ಸಾಕು. ತಾನು ರಾಜ ಪುತ್ರ, ಆಕೆ ಏನೋ ಸಾಮಾನ್ಯ ಹೆಣ್ಣು ಎಂಬ ತುಚ್ಛ ಭಾವವಿಲ್ಲದೇ ಆಕೆಯನ್ನು ಗೌರವಿಸುತ್ತಾನೆ. ಅಂತಹ ದೊಡ್ಡತನ ರಾಮನಿಗಿದೆ. ಹಾಗಾಗಿ ಇಂತಹ ದೊಡ್ಡವನ ಮುಂದೆ ನಾನು ಪತಿವ್ರತೆಯಾಗಿದ್ದರೆ ಯಾವ ದೊಡ್ಡ ಮಾತೂ ಇಲ್ಲ. ರಾಮ ಹಾಗಿದ್ದಾನೆ ಅಂತಹ ಪತಿ ಯಾರಿಗೆ ಸಿಗಲು ಸಾಧ್ಯ. ಪತಿಯಲ್ಲಿ ಸಂಪೂರ್ಣ ಸಮಾಧಾನ ಸಿಕ್ಕುವಾಗ ಬೇರೆ ಕಡೆಗೆ ಮನಸ್ಸನ್ನು ಹರಿಸುವುದು ಹೇಗೆ. ಮತ್ತೊಂದು ನಾನು ಕಾಡಿಗೆ ಹೊರಡುವಾಗ ನಮ್ಮತ್ತೆ ನನಗೆ ಎಲ್ಲವನ್ನೂ ತಿಳಿಸಿ ಹೇಳಿದ್ದಾಳೆ. ಆಕೆಯ ಶ್ರೇಷ್ಠವಾದ ಮಾತನ್ನು ಬಚ್ಚಿಟ್ಟುಕೊಂಡಿದ್ದೇನೆ. ಪಾಣಿಗ್ರಹಣದ ವೇಳೆ ಅಮ್ಮ ಕೂಡ ಇದೇ ಮಾತನ್ನು ಹೇಳಿದ್ದಾಳೆ. ಅದೆಲ್ಲವೂ ನವೀಕೃತವಾಯಿತು ಈಗ. ಮತ್ತೆ ಹೊಸದಾಯಿತು. ಅಮ್ಮ ಮತ್ತು ಅತ್ತೆಯ ಮಾತು ಮತ್ತೆ ಕಿವಿಗೆ ಬಂತು. ಈ ನಿಮ್ಮ ಎಲ್ಲಾ ಮಾತುಗಳಿಂದಾಗಿ. ಪತಿ ಶಿಶ್ರುಷೆಗಿಂತ ದೊಡ್ಡ ತಪಸ್ಸು ನಾರಿಗೆ ಇಲ್ಲ. ಸತಿ ಸಾವಿತ್ರಿ ಪತಿಯ ಶಿಶ್ರುಷೆಯಿಂದಾಗಿ ದೇವತೆಯಾಗಿದ್ದಾಳೆ. ರೋಹಿಣಿ ಚಂದ್ರನನ್ನು ಬಿಟ್ಟು ಹೋಗುವುದೇ ಇಲ್ಲ. ಅನೇಕ ಸ್ತ್ರೀಯರು ಪಾತಿವ್ರತ್ಯದ ಫಲವಾಗಿ ದೇವಲೋಕದಲ್ಲಿ ವಿರಾಜಿಸುತ್ತಿದ್ದಾರೆ. ಪಾತಿವ್ರತ್ಯದ ಫಲವಾಗಿ ನೀನು ಕೂಡ ಸ್ವರ್ಗವನ್ನು ಗೆದ್ದಿದ್ದೀಯಾ. ತನ್ನಂತೆಯೇ ಆಕೆ ಕೂಡ ಇದ್ದಾಳೆ ಎಂಬುದನ್ನು ತಿಳಿದ ಅನುಸೂಯೆಗೆ ಬಹಳ ಸಂತೋಷವಾಗುತ್ತದೆ. ಅನುಸೂಯೆ ಸೀತೆಯನ್ನು ಹತ್ತಿರ ಕರೆದು ಸೀತೆಯನ್ನು ಆಘ್ರಾಣಿಸಿ ಸೀತೆಯ ತಲೆಯನ್ನು ನೇವರಿಸುತ್ತಾ, ನನ್ನಲ್ಲಿ ತಪಸ್ಸಿನ ರಾಶಿಯೇ ನನ್ನಲ್ಲಿದೆ. ಎಷ್ಟು ಖರ್ಚು ಮಾಡಿದರೂ ಮುಗಿಯುವುದಿಲ್ಲ. ಹಾಗಾಗಿ ನಿನಗೆ ಏನು ಬೇಕು ಕೇಳು ಕೊಟ್ಟೇನು. ಕೇಳಿದ್ದನ್ನು ಕೊಟ್ಟೆ ಎಂಬ ಮಾತೇ ಸಾಕು, ವರವನ್ನೇ ಕೊಡಬೇಕು ಎಂದೇನೂ ಇಲ್ಲ. ಆದರೆ ಅನುಸೂಯೆ ಬಿಡಲಿಲ್ಲ. ದುರಾಸೆ ಹೋಗಲಿ ಆಸೆ ಕೂಡ ಇಲ್ಲವೇ ನಿನ್ನಲ್ಲಿ ಎಂದು ಕೇಳುತ್ತಾಳೆ. ಅದಕ್ಕೆ ಸಂತೋಷ ಪಟ್ಟು ದಿವ್ಯ ಮಾಲೆ, ದಿವ್ಯ ಬಿಲ್ಲು, ದಿವ್ಯವಾದ ಅಂಗರಾಗ ಇದೆಲ್ಲವನ್ನೂ ಕೊಡುತ್ತೇನೆ. ಒಮ್ಮೆ ಧಾರಣೆ ಮಾಡಿದರೆ ಎಲ್ಲವೂ ಶಾಶ್ವತ ಅಂತಹ ಎಲ್ಲವನ್ನೂ ಕೊಡುತ್ತೇನೆ. ಈ ಅಂಗರಾಗವನ್ನು ಹಚ್ಚಿಕೊಂಡು ರಾಮನ ಪಕ್ಕ ನಿಂತುಕೋಬೇಕು. ಹೇಗೆ ಕಾಣುತ್ತೀಯಾ ಎಂದು ಹೇಳುತ್ತಾಳೆ. ಈ ಅಂಗರಾಗವನ್ನು ಹಚ್ಚಿಕೊಂಡು, ದಿವ್ಯ ಮಾಲೆಯನ್ನು ಹಾಕಿಕೊಂಡು ಹೋಗಿ ರಾಮನ ಪಕ್ಕ ನಿಂತುಕೊಂಡರೆ ಶ್ರೀಮನ್ನಾರಯಣನ ಪಕ್ಕದಲ್ಲಿ ನಿಂತುಕೊಂಡರೆ ಲಕ್ಷ್ಮಿ ನಿಂತುಕೊಂಡಂತಾಗುತ್ತದೆ. ಮಹಾಲಕ್ಷ್ಮಿಯು ವಿಷ್ಣುವನ್ನು ಅಲಂಕರಿಸುವಂತೆ ನೀನು ಹೋಗಿ ನಿಂತುಕೋ, ರಾಮ ಚೆನ್ನಾಗಿ ಕಾಣುತ್ತಾನೆ. ನೀನು ರಾಮನಿಗೆ ಆಭರಣವಾಗಿ ಶೋಭಿಸುತ್ತೀಯೇ ಎನ್ನುತ್ತಾಳೆ. ಸೀತೆ ಆ ಅಂಗರಾಗ, ವಸ್ತ್ರ, ಆಭರಣಗಳನ್ನು ಸ್ವೀಕರಿಸುತ್ತಾಳೆ. ಪ್ರೀತಿಯಿಂದ ಕೊಟ್ಟದ್ದು, ಪ್ರೀತಿಯನ್ನೇ ಕೊಟ್ಟದ್ದು. ಹೀಗೆ ಆಭೂಷಣಗಳನ್ನು ಸ್ವೀಕಾರ ಮಾಡಿದ ಸೀತೆ ಅನುಸೂಯೆಯ ಬಳಿ ಕೂತು ಆಕೆಯ ಸೇವೆಯನ್ನೇ ಮಾಡುತ್ತಿರುತ್ತಾಳೆ. ಅನುಸೂಯೆ ಮುಂದುವರೆದು ಸೀತೆಯ ಕಥೆ ಎಲ್ಲವನ್ನು ಕೇಳಲು ಪ್ರಾರಂಭಿಸಿದಳು. ಹುಟ್ಟಿದ್ದು, ಬೆಳೆದದ್ದು, ಇದುವರೆಗಿನ ಜೀವನದ ಕಥೆಯನ್ನು ಹೇಳು ಎನ್ನುತ್ತಾಳೆ. ವೀರ ಜನಕ, ಛತ್ರಾಧಿಪತಿ ಈಗಲೂ ಕೂಡ ಭೂಮಿಯನ್ನು ಧರ್ಮದಿಂದ ಪಾಲನೆ ಮಾಡುತ್ತಿರುವಾತ. ಅವನೇ ಯಜ್ಞಕ್ಕಾಗಿ ಉಳುಮೆ ಮಾಡುವಾಗ ನಾನು ಎದ್ದು ಬಂದೆನಂತೆ. ನೇಗಿಲ ರೇಖೆಯಲ್ಲಿ ನಾನು ಎದ್ದು ಬಂದೆಯಂತೆ. ಪದ್ಮರೇಣು ಎಂಬ ಧೂಳಿನಿಂದ ಶೋಭಿತಳಾಗಿದ್ದಳು ಸೀತೆ ಆ ಸಂದರ್ಭದಲ್ಲಿ. ಅಂತಹ ಲಕ್ಷಣವಾದ ಮಗುವನ್ನು ಕಂಡು ಜನಕನಿಗೆ ಬಹಳ ಸಂತೋಷವಾಯಿತು. ಅತ್ಯಾಶ್ಚರ್ಯವಾಯಿತು. ಆಗ ಜನಕನಿಗೆ ಮಕ್ಕಳಿರಲಿಲ್ಲ. ಜನಕ ಎತ್ತಿಕೊಂಡು ನನ್ನ ಮಗಳು ಎಂದು ಹೇಳಿದನಂತೆ. ಆ ವೇಳೆಗೆ ಅಂತರಿಕ್ಷವಾಣಿಯಾಯಿತು. ಹೌದು ನಿನ್ನ ಮಗಳೇ ಎಂದು. ಮನುಷ್ಯ ತನ್ನದು ಎಂದು ಹೇಳಿದರೂ ದೇವರು ಒಪ್ಪುವುದಿಲ್ಲ. ಧರ್ಮದಿಂದ ಈಕೆಯೇ ನಿನ್ನ ಮಗಳು ಎಂದಾಗ ಬಹಳವೇ ಸಂತೋಷವಾಯಿತು. ದೇವರೇ ಆ ಮಾತನ್ನು ಅನುಮೋದನೆ ಮಾಡಿದಾಗ ಮತ್ತಷ್ಟು ಸಂತೋಷವಾಯಿತು. ನನ್ನನ್ನು ಬಹಳ ಪ್ರೀತಿಯಿಂದ ಮನೆಗೆ ಕೊಂಡೊಯ್ಯುತ್ತಾನೆ. ಆಗ ಮಿಥಿಲೆಯಲ್ಲಿ ಬಹಳ ಸಮೃದ್ಧಿಯಾಯಿತು. ಸೀತೆಯ ಪ್ರವೇಶವಾದ ಕೂಡಲೇ ಧನಾಗಮನವಾಗುತ್ತದೆ. ಇಷ್ಟವಾದ ಜೇಷ್ಠ ಪತ್ನಿಗೆ ಜನಕ ಕೊಡುತ್ತಾನೆ. ಆಕೆ ಸ್ವೀಕಾರ ಮಾಡಿ ಹೊಟ್ಟೆಯಲ್ಲಿ ಹುಟ್ಟಿದ ಮಗಳಂತೆ ಬೆಳೆಸುತ್ತಾಳೆ. ತುಂಬಾ ಪ್ರೀತಿ ಮಾಡುತ್ತಾಳೆ. ಕೆಲವು ಕಾಲ ಕಳೆಯಿತು. ಮದುವೆಯ ವಯಸ್ಸು ಬಂದಾಗ ಬಹಳ ಚಿಂತೆಯಾಗುತ್ತದೆ. ಬಹಳ ಕಷ್ಟಪಟ್ಟು ಸಂಪಾದನೆ ಮಾಡಿರುತ್ತಾನೆ. ಅವೆಲ್ಲವನ್ನೂ ಕಳೆದುಕೊಂಡರೆ ಎಷ್ಟು ಚಿಂತೆಯಾಗುತ್ತದೆಯೋ ಅಂತಹ ಚಿಂತೆ ಜನಕನಿಗೆ ಬರುತ್ತದೆ. ಕಷ್ಟಪಟ್ಟು ಸಿಕ್ಕಿದ ಸಂಪತ್ತು. ಇವಳಿಗೆ ತಕ್ಕವನು ಎಲ್ಲಿದ್ದಾಳೆ. ಇವಳಿಗ ಸರಿಯಾದ ಗಂಡ ಯಾರೆಂದು ಚಿಂತಿತನಾಗುತ್ತಾನೆ, ಕನ್ಯಾಪಿತನಾಗುವುದು ಬಹಳ ಕಷ್ಟ. ಸರಿಯಾದ ಗಂಡು ಸಿಕ್ಕಿ ಮದುವೆ ಮಾಡುವುದು ಬಹಳ ಕಷ್ಟ ಇಲ್ಲವಾದಲ್ಲಿ ಆತ ತೊಂದರೆಗೆ ಸಿಲುಕುತ್ತಾನೆ. ಹಾಗಾಗಿ ಕಪಿ ಎಂಬಂತಾಗಿದೆ. ಅಂದಿನ ಕಾಲದಲ್ಲಿ ವಯಸ್ಸಿಗೆ ಬಂದ ಮಗಳನ್ನು ಮದುವೆ ಮಾಡಿಕೊಡಲಾಗುತ್ತಿಲ್ಲ ಎಂದು ಬಹಳವಾಗಿ ತನಗಿಂತ ಕೆಳಗಿನವರು ಕೂಡ ಅಪಮಾನ ಮಾಡುತ್ತಿದ್ದರಂತೆ. ಹೆಚ್ಚು ಸಮಯವಿಲ್ಲ. ಚಿಂತಾ ಸಮುದ್ರದಲ್ಲಿ ಮುಳುಗಿದ್ದ. ಮಹಾಯಜ್ಞದಲ್ಲಿ ಶಿವ ಕೊಟ್ಟ ಧನಸ್ಸು ಇತ್ತು. ಅಕ್ಷಯ ಕುಳೇರುಗಳಿದ್ದವು. ಹಾಗಾಗಿ ಸ್ವಯಂವರ ಮಾಡುವ ಯೋಜನೆ ಹಾಕಿಕೊಂಡನು. ಅದೇನು ಮನುಷ್ಯರು ಅಲುಗಾಡಿಸಲೂ ಸಾಧ್ಯವಾಗದ ಧನಸ್ಸು. ಹಾಗಾಗಿ ದೊರೆಗಳನ್ನು ಕರೆದು ಎದೆಯೇರಿಸಿ ಬಗ್ಗಿಸಿದರೆ ನಾನು ನನ್ನ ಮಗಳನ್ನು ಕೊಡುತ್ತೇನೆ ಎಂದು. ಕೆಲವರಿಗ ಅಲುಗಾಡಿಸಲೂ ಸಾಧ್ಯವಾಗದೇ, ಹಾಗೆಯೇ ಹಿಂತಿರುಗಿದೆ. ಕೆಲವರು ಎದೆಯೇರಿಸಿದರೋ ಅವರಿಗೆ ಮಾನಭಂಗವಾಯಿತು. ಮೇರು ಪರ್ವತದ ತೂಕ. ಇದೇ ವೇಳೆ ರಾಮನು ವಿಶ್ವಾಮಿತ್ರನ ಒಡಗೂಡಿ ಲಕ್ಷ್ಮಣ ಜೊತೆಗೆ ಬರುತ್ತಾನೆ. ವಿಶ್ವಾಮಿತ್ರರು ರಾಮ ಲಕ್ಷ್ಮಣರಿಗೆ ಧನಸ್ಸನ್ನು ತೋರಿಸುವಂತೆ ಸೂಚನೆ ನೀಡುತ್ತಾರೆ. ಆಗ ಧನಸ್ಸನ್ನು ತರಲಾಯಿತು. ಕ್ಷಣ ಮಾತ್ರದಲ್ಲಿ ಧನಸ್ಸನ್ನು ಎದೆಯೇರಿಸಿ ಎತ್ತಿ ಮುರಿದಾಯಿತು. ಆ ಪರಾಕ್ರಮಿಯು ಧನಸ್ಸು ಮುರಿದು ಗಮನ ಸೆಳೆದನು. ದೊಡ್ಡ ಶಬ್ಧವಾಯಿತು. ಆಗ ಜನಕ ಜಲಪಾತ್ರೆಯನ್ನು ತೆಗೆದುಕೊಂಡು ಸೀತೆಯನ್ನು ಕೊಡಬೇಕು ಎಂದಾಗ ರಾಮ ಅದನ್ನು ಸ್ವೀಕರಿಸಲಿಲ್ಲ. ಏಕೆಂದರೆ ನನ್ನ ತಂದೆಯವರು ಒಪ್ಪಿಗೆ ಬೇಕು ಎನ್ನುತ್ತಾನೆ, ದಶರಥ ಮಹಾರಾಜ ಅಲ್ಲಿಗೆ ಬಂದ ಮೇಲೆ ವಿಧಿವತ್ತಾಗಿ ವಿವಾಹ ಮಾಡಿಕೊಡಲಾಯಿತು. ನನ್ನ ತಂಗಿ ಊರ್ಮಿಳೆ ರೂಪವತಿ ಲಕ್ಷ್ಮಣನಿಗೆ ಕೊಡಲಾಯಿತು. ಅಂದಿನಿಂದ ರಾಮನಲ್ಲಿ ನಾನು ಅನುರಕ್ತಳು. ಧರ್ಮದಿಂದ ವೀರ್ಯರಲ್ಲಿ ವೀರನಾದ ರಾಮನಲ್ಲಿ ನಾನು ನಿತ್ಯ ಅನುರಕ್ತಳು ಎಂದು ಇಷ್ಟು ಕಥೆಯನ್ನು ಹೇಳುತ್ತಾಳೆ. ಎಲ್ಲಾ ಕಥೆಯನ್ನು ಕೇಳಿದ ನಂತರ ಅನುಸೂಯೆ ಸೀತೆಯನ್ನು ತಪ್ಪಿಕೊಂಡು ಎಷ್ಟು ಚೆಂದ ನೀನು ಮಾತನಾಡುವುದು. ಸೀತೆ ಮಾತನಾಡುವುದನ್ನೇ ಬಾಯಿ ಬಿಟ್ಟುಕೊಂಡು ಕೇಳುತ್ತಿರುತ್ತಾಳೆ ಅನುಸೂಯೆ. ಒಂದಂದು ಅಕ್ಷರವೂ ಸ್ಪಷ್ಟ. ನುಂಗಿ, ತೇಗಿ ಮಾತನಾಡುವುದಲ್ಲ. ತೂಗಿ ತೂಗಿ ಮಾತನಾಡುತ್ತೀಯೆ. ಆ ಮಾತಿನ ಶೈಲಿಯೇ ಬೇರೆ. ಜೇನುಸುರಿದಂತೆ ಮಾತು. ಸ್ವಯಂವರ ಪೂರ್ತಿ ಕಣ್ಣಿಗೆ ಕಟ್ಟಿದ ಹಾಗೆ ಹೇಳಿದೆ. ನಿನ್ನ ಕಥೆಯನ್ನು ಕೇಳಿ ಆನಂದಪಟ್ಟೆ. ರಾತ್ರಿಯನ್ನು ಬರಮಾಡಿ ಸೂರ್ಯ ಅಸ್ತಂಗತನಾಗಿದ್ದಾನೆ. ಚದುರಿದ್ದ ಪಕ್ಷಿಗಳೆಲ್ಲವೂ ಗೂಡಿಗೆ ಮರಳಿವೆ. ಮುನಿಗಳು ಸ್ನಾನ ಮಾಡಿ ಒದ್ದೆ ಮಾಡಿ ಬಂದಿದ್ದಾರೆ. ಕೈಯಲ್ಲಿ ಮಡಿ ನೀರು ತುಂಬಿದ ಕಳಸ ಇದೆ. ಬಟ್ಟೆಯಲ್ಲಿ ನೀರು ಸುರಿಯುತ್ತಿದೆ. ಅನೇಕ ಋಷಿಮುನಿಗಳು ಅಗ್ನಿಹೋತ್ರ ಮಾಡಿದ್ದಾರೆ. ವಿಧಿಪೂರ್ವಕವಾಗಿ ಅಗ್ನಿಹೋತ್ರ ಮಾಡಿದ್ದಾರೆ. ಧೂಮ ಮೇಲೆದ್ದಿದೆ. ಧೂಮ ಹೇಗಿದೆ ಎಂದರೆ, ಪಾರಿವಾಳದ ಕುತ್ತಿಗೆಯಂತೆ ಧೂಮವೂ ಆವರಿಸಿದೆ. ಕತ್ತಲ ಹೊತ್ತಿನಲ್ಲಿ ನೋಡಿದರೆ ವಿರಳವಾದ ಎಲೆಗಳು ಒತ್ತೊತ್ತಾಗಿರುವಂತೆ ಕಾಣುತ್ತಿದೆ. ದಿಕ್ಕುಗಳೆಲ್ಲಾ ಕತ್ತಲಾಗಿದೆ. ಕಾಡಿನ ರಾತ್ರಿ ಸಂಚರಿಸುವ ಪ್ರಾಣಿಗಳು ಓಡಾಡುತ್ತಿವೆ. ಒಳಗೆ ಯಜ್ಞವೇಧಿಯ ಪರಿಸರದಲ್ಲಿ ನಿದ್ದೆ ಮಾಡುತ್ತಿವೆ. ರಾತ್ರಿ ದೇವಿ ಬಂದಿದ್ದಾಳೆ. ನಕ್ಷತ್ರ ಆಭರಣಗಳನ್ನು ತೊಟ್ಟು ಚಂದ್ರ ಚಂದ್ರಿಕೆಯನ್ನು ಹೊದ್ದು ಬಂದಿದ್ದಾನೆ. ನೀನು ಕೂಡ ಚಂದ್ರ ಚಂದ್ರಿಕೆಯರಂತೆ ನೀನು ಕೂಡ ರಾಮನನ್ನು ಸೇರುಹೋಗು. ಅದಕ್ಕಾಗಿ ನಾನು ಅಪ್ಪಣೆಯನ್ನು ಕೊಡುತ್ತೇನೆ. ನಾನು ಕೊಟ್ಟ ಎಲ್ಲವನ್ನು ತೊಟ್ಟುಕೊಂಡು ರಾಮನ ಪಕ್ಕ ನಿಂತರೆ ಮಾತ್ರ ನನಗೆ ಪೂರ್ತಿ ಸಂತೋಷವಾಗುತ್ತದೆ. ನನ್ನ ಮುಂದೆಯೇ ಆಗಬೇಕು. ದಿವ್ಯಾಲಂಕಾರ ಶೋಭಿತಳಾಗಿ ಸಂತೋಷ ನೋಡು. ಅನುಸೂಯೆಗೆ ತಲೆಬಾಗಿ ನಮಸ್ಕರಿಸಿ ಸೀತೆ ಅಲಂಕಾರ ಮಾಡಿಕೊಳ್ಳಲು ತೆರಳುತ್ತಾಳೆ. ಸರ್ವಾಭರಣ ಭೂಷಿತ ಸೀತೆಯನ್ನು ನೋಡಿದ ರಾಮನಿಗೆ ಬೆರಗಾಗುವಂತಾಯಿತು. ಕಂದಾಗಿದ್ದ ಮುಖಕ್ಕೆ ಮತ್ತಷ್ಟು ಕಾಂತಿ ಬಂದಿದೆ. ಅಂಗರಾಗ ತೊಟ್ಟ ಮೇಲೆ ಆಕೆಯ ಕಾಂತಿಯೇ ಬೇರೆಯಾಗಿರುತ್ತದೆ. ಸೀತೆ ರಾಮನಿಗೆ ಅನುಸೂಯೆ ಕೊಟ್ಟ ಎಲ್ಲಾ ಕಥೆಯನ್ನು ಹೇಳುತ್ತಾಳೆ. ಅಂಗರಾಗ, ಆಭರಣದ ಬಗ್ಗೆ ವಿಶೇಷವಾಗಿ ಹೇಳುತ್ತಾಳೆ. ಅನುಸೂಯ ಕೊಟ್ಟ ವಸ್ತುಗಳು ಯಾವ ಅಂಗಡಿಯಲ್ಲೂ ಸಿಗುವಂತಹದ್ದಲ್ಲ. ಯಾವ ನೇಕಾರರು ನೇಯ್ಗೆ ಮಾಡಲ ಸಾಧ್ಯವಿಲ್ಲ. ಯಾವ ಹೂವಿನವನು ಕಟ್ಟಲು ಸಾಧ್ಯವಿಲ್ಲ. ಹಾಗಾಗಿ ರಾಮ ಲಕ್ಷ್ಮಣರಿಗೆ ಬಹಳ ಸಂತೋಷವಾಯಿತು. ನಾನಾ ಬಗೆಯ ಉಪಚಾರಗಳಿಂದ ರಾತ್ರಿ ಕಳೆಯಿತು. ಅತ್ರಿಗಳು ಅಗ್ನಿಹೋತ್ರ ಮಾಡಿದ ನಂತರ ರಾಮ ಲಕ್ಷ್ಮಣರು ಕಂಡು ಮುಂದೆ ಪ್ರಯಾಣ ಮಾಡಲು ಅನುಮತಿ ನೀಡಬೇಕೆಂದು ಬೇಡುತ್ತಾರೆ. ದಂಡಕಾರಣ್ಯದ ಕಡೆಗೆ ಪ್ರಯಾಣ ಮಾಡುತ್ತಾರೆ. ರಾಮನಿಗೆ ಸೂಚನೆ ನೀಡುತ್ತಾರೆ. ಮನುಷ್ಯರನ್ನೇ ತಿನ್ನುವ ರಾಕ್ಷಸರು ಕಾಡಿನಲ್ಲಿದ್ದಾರೆ. ಅಡಿಗಡಿಗೆ, ಸರ್ಪಗಳು, ರಕ್ತಪಿಪಾಸುಗಳು ಇವೆ. ಮೈಲಿಗೆಯಾದರೆ ತಿಂದು ಹಾಕುವ ರಾಕ್ಷಸರು ಇದ್ದಾರೆ. ಅಂತಹ ರಾಕ್ಷಸರನ್ನು ನೀನು ನಿಗ್ರಹಿಸಬೇಕು. ಕಾಡನ್ನು ಪೊರೆಯಬೇಕು. ನಿನ್ನ ಜೊತೆಗೆ ಇರುವವನ್ನು ರಕ್ಷಣೆ ಮಾಡಬೇಕು ಎಂದು ಹೇಳಿ, ದಾರಿ ತೋರಿಸುತ್ತಾರೆ. ಮಹರ್ಷಿಗಳು ಹೋಗುವ ದಾರಿ ಇದು. ಇಲ್ಲಿ ಹಣ್ಣು-ಹಂಪಲುಗಳು ಹೇರಳವಾಗಿ ದೊರೆಯುತ್ತದೆ. ಹಾಗಾಗಿ ಇದೇ ದಾರಿಯಲ್ಲಿ ಹೋಗುವುದು ಕ್ಷೇಮ ಎನ್ನುತ್ತಾರೆ. ಅವರು ಹೇಳಿದ್ದನ್ನು ಅಂಗೀಕರಿಸಿ ಶ್ರೀರಾಮ ಹೊರಟಿದ್ದಾನೆ. ಪ್ರಯಾಣ ಬೆಳೆಸುವವರಿಗೆ ಮಾಡುವ ಎಲ್ಲಾ ಮಂಗಳಗಳನ್ನು ಮಾಡಿದ್ದಾರೆ. ಅದನ್ನು ಸ್ವೀಕಾರ ಮಾಡಿ ಸೀತಾ, ಲಕ್ಷ್ಮಣರೊಡಗೂಡಿ ದಂಡಕಾರಣ್ಯವನ್ನು ಪ್ರವೇಶ ಮಾಡಿದ. ಸೂರ್ಯನು ಮೇಘ ಮಂಡಲವನ್ನು ಪ್ರವೇಶ ಮಾಡುವಂತೆ, ದಂಡಕಾರಣ್ಯವನ್ನು ಪ್ರವೇಶ ಮಾಡಿದ ಎಂಬಲ್ಲಿಗೆ ದಂಡಕಾರಣ್ಯವು ಪೂರ್ಣಗೊಳ್ಳುತ್ತದೆ

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments