೨೧-ಜೂನ್-೨೦೧೩:
ಸಪರಿವಾರ ಶ್ರೀ ಗುರುಗಳ ಕೈಲಾಸ ಮಾನಸ ಸರೋವರ ಯಾತ್ರೆಯ ಅಂಗವಾಗಿ ಉತ್ತರಭಾರತದ ತೀರ್ಥಕ್ಷೇತ್ರವಾದ ಹೃಷೀಕೇಶದಲ್ಲಿ ವಸತಿಯಲ್ಲಿ ಕ್ಷೇಮದಿಂದಿರುವರು.
ನಾಲ್ಕನೇ ದಿನವಾದ ನಿನ್ನೆ ಸಮಸ್ತ ಶಿಷ್ಯಕೋಟಿಯ ಶ್ರೇಯಸ್ಸನ್ನು ಸಂಪ್ರಾರ್ಥಿಸುತ್ತಾ, ಆರಾಧ್ಯ ಶ್ರೀ ಸೀತಾರಾಮ, ರಾಮಚಂದ್ರ, ಚಂದ್ರಮೌಳೀಶ್ವರರ ಪೂಜಾಕಾರ್ಯಗಳು ನಿರ್ವಿಘ್ನವಾಗಿ ನಡೆದಿದೆ.

ಇದಲ್ಲದೇ, ಮುಂಜಾವಿನಲ್ಲಿ ಶ್ರೀಗುರುಗಳು ಪರಿವಾರದೊಂದಿಗೆ ಹೃಷೀಕೇಶದ ಬಳಿಯ ಭೂತನಾಥ್ ಪ್ರದೇಶಕ್ಕೆ ಪಾದಯಾತ್ರೆ ಕೈಗೊಂಡರು.
ಭೂತನಾಥ್ ನಲ್ಲಿ ಚಿಕ್ಕದೊಂದು ಸಭೆ ನಡೆಸಿ ಶಿವಮೊಗ್ಗದ ಸುಭದ್ರಕ್ಕ ಹಾಡಿದ ಶಂಕರಾಚಾರ್ಯ ವಿರಚಿತ ಶ್ಲೋಕವೊಂದಕ್ಕೆ ಅರ್ಥವನ್ನು ಪ್ರವಚನರೂಪವಾಗಿ ಸಭೆಯನ್ನು ಆಶೀರ್ವದಿಸಿದರು.

ತದನಂದರ ಗಂಗಾತೀರದ ಸ್ವಚ್ಛಂದ ಪರಿಸರದಲ್ಲಿ ಕೆಲವು ಕ್ಷಣಗಳನ್ನು ಕಳೆದರು.
ಪೂಜ್ಯ ಗಂಗಾ ಮೃತ್ತಿಕೆ (ಗಂಗಾತೀರದ ಮಣ್ಣು) ಯನ್ನು ಎಲ್ಲರೂ ಪರಸ್ಪರ ತಿಲಕವನ್ನಾಗಿ ಸ್ವೀಕರಿಸಿದರು.

ಪ್ರಾಕೃತಿಕ ವೈಪರೀತ್ಯದ ನಡುವೆಯೂ ಶ್ರೀಗುರುಗಳ ಕಾರ್ಯ ಯೋಜನೆಯು ಅತ್ಯಂತ ಯಶಸ್ವಿಯಾಗಿ ಸಾಗುತ್ತಿರುವುದು ಶಿಷ್ಯಕೋಟಿಗೆ ಸಂತಸದ ವಿಚಾರವಾಗಿದೆ.
ತುರ್ತು ಸಂಪರ್ಕ: 9449595201

ಶ್ರೀಮತಿ ಅನುರಾಧಾ ಪಾರ್ವತಿ ಕಳುಹಿಸಿಕೊಟ್ಟ ಕೆಲವು ಫೋಟೋಗಳು ಇಲ್ಲಿವೆ:

Facebook Comments Box