ಪೆರಾಜೆ ಮಾಣಿ ಮಠಃ16.8.2013, ಶುಕ್ರವಾರ

ಇಂದು ಶ್ರೀ ವಿಷ್ಣು ಭಟ್ ಬಾರಿಕೆ ಕುಟುಂಬದವರಿಂದ ಗುರುಭಿಕ್ಷಾ ಸೇವೆ ನಡೆಯಿತು. ಶ್ರೀವರಮಹಾಲಕ್ಷ್ಮೀ ವ್ರತದ ಶುಭದಿನದಂದು ಶ್ರೀಗುರುಗಳು ಶ್ರೀರಾಮಾದಿ ದೇವರುಗಳಿಗೆ ಪೂಜೆ ನಡೆದ ಬಳಿಕ 300 ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಬಾರಿಕೆ ಕುಟುಂಬದವರು ಶ್ರೀಗುರುಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ ಆಂಜನೇಯ ಹವನಗಳು, ಮಹಾಗಣಪತಿ ಹವನ ನವಗ್ರಹ ಶಾಂತಿ ಆಂಜನೇಯ ಹವನ, ಗಣಪತಿ ಹವನ ಸಹಿತ ಲಕ್ಷ್ಮೀನಾರಾಯಣ ಹೃದಯ ಹವನ. ಶ್ರೀಮಹಾಲಕ್ಷ್ಮೀಪೂಜೆ(400), ಶ್ರೀರಾಮ ಪೂಜೆ, ಶ್ರೀರಾಮತಾರಕ ಯಜ್ಞ, ಗೋಪೂಜೆ, ಗೋತುಲಾಭಾರ, ಆಂಜನೇಯನಿಗೆ ಸೀಯಾಳಭಿಷೇಕಗಳು ನಡೆದವು.

ಪಾದಪೂಜೆಃ ಎಮ್. ವೆಂಕಟ್ರಮಣ ಭಟ್ ಕರ್ಮಿನಡ್ಕ, ಶ್ರೀ ಸತ್ಯಶಂಕರ ಪೊನೂರುಕಜೆ ಬೆಂಗಳೂರು, ಶ್ರೀ ಕೆ ಗೋಪಾಲಕೃಷ್ಣ ಭಟ್ ದೇರಳಕಟ್ಟೆ, ಶ್ರೀ ಶ್ರೀಧರ ಗಣೇಶ ಹೆಗಡೆ ಬೆಂಗಳೂರು.

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥೆಃ

ಶ್ರೀಗುರುಗಳು ಶ್ರೀರಾಮನಿಗೆ ಹಾಗೂ ಆಂಜನೇಯನಿಗೆ ಪುಷ್ಪಾರ್ಚನೆ ಮಾಡಿ ಇಂದಿನ ರಾಮಕಥಾ ಮಾಲಿಕೆಯನ್ನು ಪ್ರಾರಂಭಿಸಿದರು. ಸೀತೆ ಇರುವ ಜಾಗದ ಸುಳಿವು ದೊರೆತರೂ ಅಲ್ಲಿಯವರೆಗೆ ತಲುಪುವ ಮಾರ್ಗ ಕಾಣದೆ ಸಾಗರ ದಾಟುವ ಯೋಚನೆಯನ್ನು ಮಾಡುವ ಕಥೆಯನ್ನು ಶ್ರೀಗುರುಗಳು ವಿವರಿಸಿದರು. ವಾನರ ಬಳಗದಲ್ಲಿ ಸಾಗರ ಹಾರುವ ಶಕ್ತಿ ಯಾರಿಗೂ ಇಲ್ಲದೆ ಮುಂದೇನು ಗತಿ ಎಂದು ಯೋಚಿಸುತ್ತಿರುವಾಗ,  ವಯೋವೃದ್ಧ, ಜ್ಞಾನವೃದ್ಧ ಜಾಂಬವಂತ ಹನುಮಂತನ ಶಕ್ತಿಯನ್ನು ಅವನಿಗೇ ಪರಿಚಯಿಸಿ ಸಾಗರವನ್ನು ಹಾರಲು ಪ್ರೇರೇಪಣೆ ಮಾಡಿ ಸುಗ್ರೀವಾಜ್ಞೆಯನ್ನು ಪಾಲಿಸಿ, ಸೀತೆಯನ್ನು ಹುಡುಕಿ ಶ್ರೀರಾಮನ ದೂತನಾಗುವ ಕಥಾಭಾಗವನ್ನು ಶಿಷ್ಯರಿಗೆ ವಿವರಿಸಿದರು. ಜೈ ಜೈ ರಾಮಕಥಾದೊಂದಿಗೆ ಇಂದಿನ ರಾಮಕಥೆಯು ವಿರಾಮ ಪಡೆಯಿತು. ರಾಮಕಥಾ ಕಲಾವಿದರು ಈ ಕಥೆಯನ್ನು ರೂಪಕದಲ್ಲಿ ಪ್ರಸ್ತುತ ಪಡಿಸಿದರು. ಇಂದಿನ ರಾಮಕಥೆಯ ಪ್ರಾಯೋಜಕರು ಪುತ್ತೂರು ದರ್ಭೆ ವಲಯ, ವಲಯದ ಪರವಾಗಿ ಶ್ರೀ ಕುತ್ತಿಗೆದ್ದೆ ಜನಾರ್ಧನ ಜೋಯಿಸ ದಂಪತಿಗಳು ಶ್ರೀರಾಮಾಯಣ ಗ್ರಂಥಕ್ಕೆ ಫಲಸಮರ್ಪಣೆ ಮಾಡಿದರು.

~

Facebook Comments Box