ಪೆರಾಜೆ-ಮಾಣಿ ಮಠಃ 8.9.2013, ಆದಿತ್ಯವಾರ

ಇಂದು ಮಂಗಳೂರು ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ವಲಯ ಸಭೆಯಲ್ಲಿ ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಮುಂದಿರಿಸಲಾಯಿತು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.  ಶ್ರೀ ಆರ್ ಎಸ್ ಅಗರ್ವಾಲ್, ಶ್ರೀಮತಿ ಉಷಾ ಅಗರ್ವಾಲ್, ಶ್ರೀ ಉಮೇಶ್ ಭಟ್ ಮಾಜಿ ಶಾಸಕರು ಅಂಕೋಲ, ಶ್ರೀ ಮಂಜುನಾಥ ಭಟ್ ಧಾರವಾಡ,  ಶ್ರೀ ಬಾಲಕೃಷ್ಣ ಭಟ್ ಕಾರ್ಯದರ್ಶಿಗಳು ಉಪಾಧಿವಂತ ಮಂಡಲ ಶ್ರೀಕ್ಷೇತ್ರ ಗೋಕರ್ಣ, ಶ್ರೀ ಮೋಹನ್ ನಾಯಕ್ ಚಲನಚಿತ್ರ ನಿರ್ಮಾಪಕರು ಶ್ರೀಗುರುಗಳಿಂದ ಆಶೀರ್ವಾದ ಪಡೆದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ ಆಂಜನೇಯ ಹವನಗಳು (೫), ಮಾಣಿ ಮಠದ ಆಂಜನೇಯನಿಗೆ ಪ್ರಭಾವಳಿ ಹಾಗೂ ಬೆಳ್ಳಿಕವಚ ಸಮರ್ಪಣೆಯ ಪ್ರಯುಕ್ತ ವೈದಿಕ ಕಾರ್ಯಕ್ರಮಗಳು, ಗಣಪತಿ ಹವನ ಆಂಜನೇಯ ಹವನ ನವಗ್ರಹ ಶಾಂತಿ, ಗಣಪತಿ ಹವನ ಮೇಧಾದಕ್ಷಿಣಾಮೂರ್ತಿ ಹವನಗಳು(೨),  6ತೆಂಗಿನಕಾಯಿ ಗಣಪತಿ ಹವನ, ಗಣಪತಿ ಪೂಜೆ 37 ತೆಂಗಿನಕಾಯಿ ಗಣಪತಿ ಹವನ 108 ಮೋದಕ ನೈವೇದ್ಯ, ನವಗ್ರಹ ಪೂಜೆ ಕಲಶ ಸ್ಥಾಪನೆ ಕುಜರಾಹು ದಶಾ ಸಂಧಿ ಕಲಶ, ಗಣಪತಿ ಹವನ ಗಣಪತಿ ಅಥರ್ವಶೀರ್ಷ ಹವನ, ದುರ್ಗಾಪೂಜೆ, ಗೌರೀಪೂಜೆ, ಆಶ್ಲೇಷ ಬಲಿ, ತ್ರಿಕಾಲ ದುರ್ಗಾಪೂಜೆ, ಶ್ರೀರಾಮಪೂಜೆ, ಆಂಜನೇಯನಿಗೆ ಸೀಯಾಳಾಭಿಷೇಕ, ಶ್ರೀರಾಮತಾರಕಯಜ್ಞ, ಗೋಪೂಜೆಗಳು ನಡೆದವು.

~

ಸಾಂಸ್ಕೃತಿಕ ಕಾರ್ಯಕ್ರಮಃ

ಹರಿಕಥೆ ‘ಶ್ರೀರಾಮನಿಜ ಪಟ್ಟಾಭಿಷೇಕ’ ಕು. ನಯನಗೌರೀ ಸೇರಾಜೆಯವರಿಂದ ನಡೆಯಿತು. ನಂತರ ಕು. ಸ್ವಾತೀ ಭಟ್ ಅಸೈಗೋಳಿ ಮತ್ತು ಬಳಗದವರಿಂದ ನೃತ್ಯರೂಪಕ ನಡೆಯಿತು. ಕಲಾವಿದರಿಗೆ ಪ್ರಶಸ್ತಿ ಹಾಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

Facebook Comments Box