ಮುಳ್ಳೇರ್ಯ, 17.11.2013.

” ಅರೋಗ್ಯ ಕಳಕೊಂಡ ನಂತರ ತಲೆಕೆಡಿಸಿಕೊಂಡರೆ ಮತ್ತಷ್ಟೂ ಅರೋಗ್ಯ ಕೆಡುತ್ತದೆ. ಅದಕ್ಕಿಂತ ಮುಂಚಿತವಾಗಿ ಮುಂಜಾಗೃತೆ ಮಾಡಿಕೊಂಡರೆ ಸ್ವಾಸ್ಥ್ಯಯುಕ್ತ ಶ್ರೀಮಂತ ಬದುಕು ನಮ್ಮದಾಗುತ್ತದೆ. ಉತ್ತಮ ಆಹಾರ ಸೇವನೆ, ದಿನವೂ ಯಾವುದೇ ತರದ ವ್ಯಾಯಾಮ, ತಜ್ಞ ವೈದ್ಯರುಗಳಿಂದ ಸಲಹೆ ಮತ್ತು ಪರೀಕ್ಷೆ ಇದರಿಂದ ಆರೋಗ್ಯಯುಕ್ತ ಜೀವನವನ್ನು ಪಡಕೊಳ್ಳಬಹುದು. ಗ್ರಾಮೀಣ ಜನತೆಯಲ್ಲಿ ಈ ಅರಿವನ್ನು ಮೂಡಿಸಿ ಆಮೂಲಕ ಯೋಗ್ಯ ಸ್ವಾಸ್ಥ್ಯ ಸಮಾಜದ ರೂಪೀಕರಣವೇ ಅಲ್ಲಲ್ಲಿ ಇಂತಹ ಶಿಬಿರಗಳನ್ನು ಅಳವಡಿಸುವುದರ ಉದ್ದೇಶ ಆಗಿರುತ್ತದೆ ” ಎಂಬುದಾಗಿ ಡಾ | ಎ. ಗೋವಿಂದ ಪ್ರಕಾಶ M.D.( ಆಸ್ತಮಾ ಮತ್ತು ಡಯಾಬಿಟೀಸ್ ತಜ್ಞ) ಬೆಂಗಳೂರು – ಇವರು ಹೇಳಿದರು.

ರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಕೃಪಾಶ್ರಯದಲ್ಲಿರುವ ಮುಳ್ಳೇರ್ಯಮಂಡಲ ಚಂದ್ರಗಿರಿ ವಲಯ, ಶಿವ ಶಕ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್, ಮುಳ್ಳೇರ್ಯ, ಬ್ಲಡ್ ಬ್ಯಾಂಕ್, ಕಾಸರಗೋಡು ಜನರಲ್ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ “ಜಗನ್ಮಾತಾ” ಕೃಷ್ಣಾಮೆಟರ್ನಿಟೀ ನರ್ಸಿಂಗ್ ಹೋಂ , ಮುಳ್ಳೇರ್ಯದಲ್ಲಿ ಜರಗಿದ ರಕ್ತ ಗುಂಪು ನಿರ್ಣಯ , ರಕ್ತದಾನ, ಮಧುಮೇಹ ಹಾಗೂ ಆಸ್ತಮಾ ಉಚಿತ ಶಿಬಿರದಲ್ಲಿ ದೀಪಜ್ವಾಲನ ಮಾಡುತ್ತಾ ಉದ್ಘಾಟನಾ ಭಾಷಣದಲ್ಲಿ ನುಡಿದರು. ಡಾ |ವಿ. ವಿ. ರಮಣ ಅವರ ಮಾರ್ಗದರ್ಶನದಲ್ಲಿ ಶಿಬಿರ ಜರಗಿತು. ವೈ. ವಿ. ರಮೇಶ್ ಎತಡ್ಕ ಅವರು ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಹರಿಯಪ್ಪ ಭಟ್, ಬಾಲಕೃಷ್ಣ ಭಟ್. ಕೊಲ್ಲಂಪಾರೆ ನಾರಾಯಣ ಭಟ್ ಶುಭಾಶಂಸನೆಗಳತ್ತರು. ಡಾ | ಕೇಶವ ಪ್ರಸಾದ ಚಾಳಿತ್ತಡ್ಕ ಸಲಹೆ ಸೂಚನೆಗಳನ್ನಿತ್ತರು.

ಸಿಪ್ಲಾ ಕಂಪೆನಿ ಬೆಂಗಳೂರು ಇವರು ಶ್ವಾಸಕೋಶ ಮತ್ತು ಮಧುಮೇಹ ತಪಾಸಣೆಯನ್ನು ಉಚಿತವಾಗಿ ಮಾಡಿದರು. ಶಿವಪ್ರಸಾದ ಪೆರಿಯ ಅವರ ನೇತೃತ್ವದಲ್ಲಿ ಗವ್ಯ ಉತ್ಪನ್ನಗಳ ಮಾಹಿತಿ ಮತ್ತು ವಿತರಣೆ ಈ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆಯಿತು. ಗೋವಿಂದ ಬಳ್ಳಮೂಲೆ ಗವ್ಯ ಉತ್ಪನ್ನ ಮತ್ತು ಶಿಬಿರ ಮಾಹಿತಿಗಳನ್ನಿತ್ತರು. ಡಾ | ಶಿವಕುಮಾರ ಅಡ್ಕ ಅವರ ಸಂಯೋಜಕತ್ವದಲ್ಲಿ ಶಿಬಿರ ಜರಗಿತು.

ಶಿಬಿರಾರ್ಥಿಗಳ ವಿವರ:
ಆಸ್ತಮಾ ತಪಾಸಣೆ – 73,
ರಕ್ತಗುಂಪು ನಿರ್ಣಯ – 49
ರಕ್ತದಾನ – 34
ಮಧುಮೇಹ ತಪಾಸಣೆ – 59

(ವರದಿ: ಗೋವಿಂದ ಬಳ್ಳಮೂಲೆ)

Facebook Comments Box