LIVE Channel

Recent Updates

Subscribe

22/05/2016: ಮಾಲೂರಿನ ಗೋಶಾಲೆಯಲ್ಲಿ ‘ಗೋ-ಪಾಲ್’ ಟೆಕ್ಕಿಗಳು

Author: ; Published On: Monday, May 23rd, 2016;

Switch to language: ಕನ್ನಡ | English | हिंदी         Shortlink:

     22/05/2016: ಮಾಲೂರಿನ ಗೋಶಾಲೆಯಲ್ಲಿ ‘ಗೋ-ಪಾಲ್’ ಟೆಕ್ಕಿಗಳು

Go Pals (A Group of IT Professionals in Gou Seva) ವತಿಯಿಂದ 22/05/2016 ರಂದು ಮಾಲೂರು ಗೋಶಾಲೆಯಲ್ಲಿ “ವೃಕ್ಷ ಜನನಿ” ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಗೋಶಾಲೆಯ ಪರಿಸರವನ್ನು ಸ್ವಚ್ಛಗೊಳಿಸಿ, ಗಿಡಗಳನ್ನು ನೆಡಲಾಯಿತು. ಆನಂತರ ನಡೆದ ವಿಚಾರಸಂಕಿರಣದಲ್ಲಿ ಸ್ವದೇಶಿ ಚಳುವಳಿಯಶ್ರೀ ಆನಂದ್ ಅವರು ದೇಶೀ ಗೋವು ಮತ್ತು ಸಾವಯವ ಕೃಷಿ ವಿಚಾರವಾಗಿ ಮಾತನಾಡಿದರು,ಡಾ.ಸೀತಾರಾಮ ಪ್ರಸಾದ್ ಅವರು ಆರೋಗ್ಯದಲ್ಲಿ ದೇಶೀ ಗೋವಿನ ಮಹತ್ವದ ಬಗ್ಗೆ  ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಸುಮಾರು 120 ತಂತ್ರಜ್ಞರು ಬರುವ ನಿರೀಕ್ಷೆಯನ್ನು ಸಂಘಟಕರು ಹೊಂದಿದ್ದರು. ಆದರೆ, ಸುಮಾರು 180 ತಂತ್ರಜ್ಞರು ಭಾಗವಹಿಸಿ ತಮಗಿರುವ ಗೋಪ್ರೇಮವನ್ನು ಮೆರೆದರು. ದಿನನಿತ್ಯದ ಕೆಲಸದೊತ್ತಡದಿಂದ ಮಾನಸಿಕವಾಗಿ ಬಳಲಿದ ಸಾಫ್ಟ್ವೇರ್ ಇಂಜಿನಿಯರುಗಳು ಕಾರ್ಯಕ್ರಮದಲ್ಲಿ ಭಾವಹಿಸಿ ಹೊಸ ಅನುಭವ ಪಡೆದರು. ಮಕ್ಕಳು  ಪುಟ್ಟ ಕರುಗಳೊಂದಿಗೆ ಆನಂದದಿಂದ ಸಮಯ ಕಳೆದರು. ಮನಸ್ಸಿನ ಒತ್ತಡ ಕಳೆಯಲು ಡಾ.ಶ್ಯಾಮಪ್ರಸಾದ್ ಅವರು ನಡೆಸಿದ ಸಾಮೂಹಿಕ ಹಾಡು-ಕುಣಿತ ಎಲ್ಲರನ್ನೂ ರಂಜಿಸಿತು.

Go Pals ತಂಡ :

EMC, Infosys, Wipro, IBM ಮುಂತಾದ ಪ್ರತಿಷ್ಠಿತ ಸಾಫ್ಟವೇರ್ ಕಂಪನಿಗಳಲ್ಲಿ ಉದ್ಯೋಗಿಗಳಾಗಿರುವ ತಂತ್ರಜ್ಞರ ತಂಡ “Go Pals” (A Group of IT Professionals in Gou Seva) ಎಂಬ ಅಭಿಧಾನದೊಂದಿಗೆ ವಾರದ ರಜಾ ದಿನಗಳಲ್ಲಿ ಗೋಸೇವೆಯಲ್ಲಿ ತೊಡಗಿಕೊಳ್ಳುತ್ತಿದ್ದು, ಶ್ರೀರಾಮಚಂದ್ರಾಪುರ ಮಠದ  ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಗೋಸಂರಕ್ಷಣೆಯ ಕಾರ್ಯದಿಂದ ಪ್ರೇರಣೆ ಪಡೆದು ೨-೩ ಜನರಿಂದ ಆರಂಭಗೊಂಡ ಈ ಗೋಪಾಲ್ಸ್ ತಂಡದಲ್ಲಿ, ಕರ್ನಾಟಕದವರಷ್ಟೇ ಅಲ್ಲದೇ ತಮಿಳುನಾಡು – ಆಂಧ್ರಪ್ರದೇಶ ಮೂಲದವರು ಇರುವುದು ವಿಶೇಷ.

ಗೋಪಾಲ್ಸ್ ತಂಡದ ಹಿರಿಯ ಸದಸ್ಯರಾದ ರಾಮ್ ಸುಬ್ರಹ್ಮಣ್ಯ ಅವರು ಹೇಳುವಂತೆ, ಶ್ರೀಗಳ ಗೋಸಂರಕ್ಷಣೆಯ ಯೋಜನೆಗಳಿಂದ ಪ್ರೇರಣೆಗೊಂಡು ಈ ತಂಡ ಕಾರ್ಯಾಚರಿಸುತ್ತಿದ್ದು, ವಾರವಿಡೀ ಕಾರ್ಯೋತ್ತಡದಲ್ಲಿ ಇರುವ ತಂತ್ರಜ್ಞರಿಗೆ  ವಾರದ ರಜೆಯನ್ನು ಗೋಸೇವೆಗೆ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಶಾಂತಿಯ ಜೊತೆಗೆ ದಿನವನ್ನು ಸಾರ್ಥಕವಾಗಿ ಕಳೆದ ಧನ್ಯತಾಭಾವ ಲಭ್ಯವಾಗುತ್ತಿದೆ.

ಗೋಶಾಲೆಯಲ್ಲಿನ ಶ್ರಮಾದಾನವು ದೇಹಕ್ಕೆ ವ್ಯಾಯಾಮ ಮತ್ತು  ಮಾನಸಿಕವಾಗಿ ನೆಮ್ಮದಿಯನ್ನು ಕೊಡುವುದರ ಮೂಲಕ ಉದ್ಯೋಗದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಯಿತು ಎಂಬ ಅನುಭವದ ಮಾತು ಗೋಪಾಲ್ಸ್ ತಂಡದ ಉತ್ಸಾಹೀ ಕಾರ್ಯಕರ್ತ ವಿಷ್ಣು ಹಾಗು ಇತರ ಸದಸ್ಯರದ್ದು.

ವಾರದ ರಜಾದಿನಗಳಲ್ಲಿ ಇತರರಂತೆ ಕಾಲಕಳೆಯದೇ, ಸಮಾಜಮುಖಿಯಾಗಿ ಗೋಸಂರಕ್ಷಣೆಯ ಕಾರ್ಯಕ್ಕೆ ನೆರವಾಗುತ್ತಿರುವ, ಯುವ ಉತ್ಸಾಹಿಗಳಿಂದ ಕೂಡಿದ ಗೋಪಾಲ್ಸ್ ತಂಡ ನಿಜಕ್ಕೂ ಸಮಾಜಕ್ಕೆ ಮಾದರಿ.

IMG-20160523-WA0023 IMG-20160523-WA0006 IMG-20160523-WA0021 IMG-20160523-WA0028 IMG-20160523-WA0003 IMG-20160523-WA0004

1 Response to 22/05/2016: ಮಾಲೂರಿನ ಗೋಶಾಲೆಯಲ್ಲಿ ‘ಗೋ-ಪಾಲ್’ ಟೆಕ್ಕಿಗಳು

  1. shankar.Bhat Panvel

    Hare Raama.
    Idu nijavagiyu itararige madari.

    [Reply]

Leave a Reply

Highslide for Wordpress Plugin