Hare Raama

Official website of Shrimadjagadguru Shankaraachaarya
Shri Shri Raghaveshwara bharathi swamiji

Jagadguru shankaracharya mahasamsthanam
shri samsthana gokarna shriramachandrapuramath


CATEGORIES

SEARCH

NEWSLETTER

Share and Enjoy:
  • Facebook
  • Digg
  • del.icio.us
  • Google Bookmarks
  • Yahoo! Buzz
  • Twitter
  • LinkedIn
  • RSS
  • StumbleUpon
  • MSN Reporter
  • Live
  • email
  • Sphinn
  • Mixx
  • Blogplay
  • Upnews
  • MySpace
  • N4G

ಇರುವುದೆಲ್ಲವ ಬಿಟ್ಟು. . . !

Thursday, November 12th, 2009    Sri Samsthana    15 comments   

ಜುಲೈ ತಿಂಗಳಿಗೆ ಆ ಹೆಸರೇಕೆ ಬಂತು ಗೊತ್ತೇ. . ?
ರೋಮ್ ನ  ಚಕ್ರವರ್ತಿ ಜೂಲಿಯಸ್ ಸೀಸರ್ ರಾಜ್ಯವಾಳುತ್ತಿದ್ದ ಕಾಲದಲ್ಲಿ ತನ್ನ ಹೆಸರು ಶಾಶ್ವತವಾಗಲೆಂಬ ದೃಷ್ಟಿಯಿಂದ ತಿಂಗಳೊಂದಕ್ಕೆ ತನ್ನ ಹೆಸರಿರಿಸಿದ, ಅದೇ ’ಜುಲೈ’.
ತನ್ನ ಹೆಚ್ಚುಗಾರಿಕೆಗಾಗಿ ಒಂದು ದಿನವನ್ನೂ ಹೆಚ್ಚುಗೊಳಿಸಿದ.
ಹಾಗಾಗಿ ಜುಲೈ ತಿಂಗಳಲ್ಲಿ ಮೂವತ್ತೊಂದು ದಿನಗಳು.

ಮತ್ತೆ ಬಂದ ‘ಅಗಸ್ಟಸ್ ಸೀಸರ್’ – ತಾನೇನು ಕಡಿಮೆ ಎಂಬಂತೆ ಮುಂದಿನ ತಿಂಗಳಿಗೆ ತನ್ನ ಹೆಸರಿರಿಸಿದ.
ಮಾತ್ರವಲ್ಲ, ಆ ತಿಂಗಳಲ್ಲೂ ಒಂದು ದಿನವನ್ನು ವೃದ್ಧಿಗೊಳಿಸಿದ.
ಮೂವತ್ತೊಂದು ದಿನಗಳ ಆಗಸ್ಟ್ ತಿಂಗಳು ಚಾಲ್ತಿಯಲ್ಲಿ ಬಂದದ್ದು ಹೀಗೆ..!

ಪರಿಣಾಮವಾಗಿ, ಬಡಪಾಯಿ ಪೆಬ್ರವರಿ ತಿಂಗಳು ಎರಡು ದಿನಗಳನ್ನು ಕಳೆದುಕೊಂಡು ಇಪ್ಪತ್ತೆಂಟಕ್ಕೇ ನಿಂತು ಬಿಟ್ಟಿತು !
ನಾಚಿಕೆಗೇಡು..!!

ಕಾರಣವಿಷ್ಟೇ…
ಕಾಲನಿರ್ಣಯವಾಗಬೇಕಾದದ್ದು ಸೂರ್ಯಚಂದ್ರರ ಚಲನ-ವಲನಗಳ ಮೇಲೆಯೇ ಹೊರತು ವ್ಯಕ್ತಿಗಳ ಇಷ್ಟಾನಿಷ್ಟದ ಮೇಲಲ್ಲ
.

ಸಮಗ್ರ ಭಾರತೀಯ ಸಂಸ್ಕೃತಿಯನ್ನೇ ‘ಅಂಧಾನುಕರಣೆ’ ಎಂಬ ಒಂದೇ ಪದದಲ್ಲಿ ಹೀಗಳೆಯುವ ಪಾಶ್ವಾತ್ಯರೇ !!
ಈ ದೇಶದಲ್ಲಿಯೇ ವಾಸಿಸುವ ಅವರ ಮಾನಸ ಪುತ್ರರೇ !!
ಕಣ್ತೆರೆದು ನೋಡಿ !!
ಭಾರತೀಯ ಕಾಲಗಣನೆ ಅದೆಷ್ಟು ವೈಜ್ಞಾನಿಕ. .!!
ಅದೆಷ್ಟು ನಿಸರ್ಗ ಸಂವಾದಿ…!

ಪೂರ್ಣಿಮೆಯೆಂದರೆ,ಜುಲೈ-ಆಗಸ್ಟ್  ಗಳ ಹಾಗೆ ಹುಲು ಮಾನವರ ನಡುವಿನ ಒಡಂಬಡಿಕೆಯಲ್ಲ, ಖಗೋಳದಲ್ಲಿ ಅದಕ್ಕೆ ಆಧಾರವಿದೆ.

ಕಾಲ ಚಕ್ರ

ಕಾಲ ಚಕ್ರ

’ಮಾ’ ಎಂದರೆ ಚಂದ್ರ – ಪೂರ್ಣಿಮಾ ಎಂದರೆ ಚಂದ್ರ ಪೂರ್ಣ ನಾಗುವ ಸಮಯ.

ಗಗನದಲ್ಲಿ ಬೆಳಗುವ ಪೂರ್ಣಚಂದ್ರನೇ ‘ಪೂರ್ಣಿಮೆ’ಎಂಬ ವ್ಯವಹಾರಕ್ಕೆ ಆಧಾರ.
ಅಮಾವಾಸ್ಯೆಯೆಂಬುದು ಯಾವ ದೊರೆಯ ಹೆಸರಲ್ಲ.

’ಅಮಾ’ ಎಂದರೆ ಚಂದ್ರನಿಲ್ಲದಾಗುವ ಸಮಯ.
ಅಮಾವಾಸ್ಯೆಯೆಂಬ ವ್ಯವಹಾರಕ್ಕೆಚಂದ್ರನ ಅಭಾವವೇ ಆಧಾರ.
ಚಂದ್ರನ ಒಂದೊಂದೇ ಕಲೆಗಳು ವೃದ್ಧಿಯಾದಂತೆ, ಕ್ಷಯಿಸಿದಂತೆ ಪ್ರಥಮ, ದ್ವಿತೀಯ ಮೊದಲಾದ ತಿಥಿಗಳು ಉಂಟಾಗುತ್ತವೆ.

ಸೂರ್ಯ ಸಿಂಹರಾಶಿಯಲ್ಲಿ ಸಂಚರಿಸುವ ಮೂವತ್ತು ದಿನಗಳಿಗೆ ಸಿಂಹಮಾಸ ಎಂದು ಹೆಸರು.
ತಿಂಗಳ ಹುಣ್ಣಿಮೆಯಂದು ಚಂದ್ರ ಯಾವ ನಕ್ಷತ್ರದೊಂದಿಗೆ ಇರುತ್ತಾನೋ, ಆ ತಿಂಗಳ ಹೆಸರು ಆ ನಕ್ಷತ್ರದಿಂದಾಗಿ ಉಂಟಾಗುತ್ತದೆ.
ಉದಾಹರಣೆಗೆ: ಯಾವ ತಿಂಗಳ ಹುಣ್ಣಿಮೆಯಂದು ಚಂದ್ರ ಚಿತ್ರಾ ನಕ್ಷತ್ರದೊಡನೆ ಇರುತ್ತಾನೆಯೋ, ಅದು ಚೈತ್ರಮಾಸ…!

ಹೀಗೆಯೇ ವಿಶಾಖಾ ನಕ್ಷತ್ರ ದೊಡನೆ ಇದ್ದರೆ ವೈಶಾಖ ಮಾಸ.

ಜ್ಯೇಷ್ಠಾ ನಕ್ಷತ್ರದೊಡನೆ ಇದ್ದರೆ ಜ್ಯೇಷ್ಠ ಮಾಸ.
ಅಶ್ವಿನಿ ನಕ್ಷತ್ರದೊಡನೆ ಇದ್ದರೆ, ಆಶ್ವೀನ ಮಾಸ.

ಹೀಗೇ..


ನಮ್ಮ ಹುಣ್ಣಿಮೆ ಅಮಾವಾಸ್ಯೆಗಳನ್ನು ಆಕಾಶದಲ್ಲಿ ತೋರಿಸಬಹುದು,
ಆದರೆ, ಜುಲೈ ಆಗಸ್ಟ್ ಗಳನ್ನು ಸ್ಮಶಾನಗಳಲ್ಲಿ -ಗೋರಿಗಳಲ್ಲಿ ಹುಡುಕಬೇಕಾದೀತು!!

ನಮ್ಮ ಚೈತ್ರ-ವೈಶಾಖಗಳಿಗೆ, ಸಿಂಹ-ಧನುರ್ಮಾಸ ಗಳಿಗೆ ಖಗೋಳದಲ್ಲಿ ಆಧಾರವಿದೆ.
ಜನವರಿ ಫೆಬ್ರವರಿಗಳಿಗೆ ಆಧಾರವೆಲ್ಲೋ..?
ಭಾರತೀಯಕಾಲಗಣನೆ ಸೃಷ್ಟಿಯ ಮೇಲೆ ನಿಂತಿದೆ.
ಜುಲೈ-ಆಗಸ್ಟ್ ಗಳು ವ್ಯಕ್ತಿಗಳ ಮೇಲೆ ನಿಂತಿವೆ..!!

ಟೆಲಿಸ್ಕೋಪ್  ಗಳಂತಹ ಯಂತ್ರಗಳು ಬರುವುದಕ್ಕಿಂತ ಎಷ್ಟೋ ಮೊದಲು ಕುಳಿತಲ್ಲಿಂದಲೇ ಗ್ರಹಗತಿಗಳನ್ನು, ಗ್ರಹಣಗಳನ್ನು ಕರಾರುವಾಕ್ಕಾಗಿ ಅಳೆಯುತ್ತಿದ್ದ,
ಮಾನವ ಜೀವನದ ಮೇಲೆ ಅವುಗಳು ಬೀರುವ ಪರಿಣಾಮವನ್ನು ನಿಖರವಾಗಿ ತಿಳಿಯುತ್ತಿದ್ದ,
ನಮ್ಮ ಪೂರ್ವಜರ ಮೇಧಾಶಕ್ತಿಗೆ-ತಪಸ್ಸಿಗೆ ಅಪಚಾರವೆಸಗುತ್ತಿದ್ದೇವೆ .

ಹಾಗಲ್ಲವಾದರೆ……
ಪಂಚಾಂಗಗಳೇಕೆ  ಬೇಡ ?
ಗ್ರೆಗೊರಿ ಕ್ಯಾಲೆಂಡರ್ ಗಳೇ ಏಕೆ ಬೇಕು ?

ಶಾಲಿವಾಹನ -ವಿಕ್ರಮ ಶಕೆಗಳು ಮರೆತವೇಕೆ ?
ಕ್ರಿಸ್ತಶಕೆಯೇ ಎಲ್ಲೆಲ್ಲೂ ಮೆರೆಯುವುದೇಕೆ ?
ಖಂಡಿತವಾಗಿಯೂ ನಾವು ಕ್ರಿಸ್ತನ ವಿರೋಧಿಗಳೇನೂ ಅಲ್ಲ..
ಆದರೆ..
ದೋಷಗಳಿದ್ದರೆ ಯಾವುದನ್ನಾದರೂ ಬಿಡಬಹುದು..
ಗುಣಗಳಿದ್ದರೆ ಯಾವುದನ್ನಾದರೂ ಸ್ವೀಕರಿಸಬಹುದು..
ಹಾಗಿಲ್ಲದಿದ್ದಲ್ಲಿ ಅದು ‘ಅಂಧಾನುಕರಣೆ’ ಎನಿಸಿ ಕೊಳ್ಳುತ್ತದೆ.
ಭಾರತೀಯ ಕಾಲಗಣನೆಯನ್ನು ಬಿಡುವಾಗ ಅದರಲ್ಲಿ ನಾವು ಕಂಡ ದೋಷವಾದರೂ ಏನು ?
ಅನ್ಯಪದ್ಧತಿಗಳನ್ನು  ಆಶ್ರಯಿಸುವಾಗ ಅವುಗಳಲ್ಲಿ ಯಾವ ಗುಣವನ್ನು ಕಂಡೆವು ?
ಇದಲ್ಲವೇ ಅಂಧಾನುಕರಣೆ..!!??
ಕಣ್ ತೆರೆದು ನೋಡೋಣವೇ ಸೂರ್ಯ-ಚಂದ್ರರನ್ನು ?
ವ್ಯಕ್ತಿ ಪೂಜೆಯನ್ನು ದಾಟಿ ಇನ್ನಾದರೂ ಸೃಷ್ಟಿ ಪೂಜೆಗೆ ತೊಡಗೋಣವೇ?

ಕಾಲಾಯ ತಸ್ಮೈ ನಮಃ

|| ಹರೇ ರಾಮ ||

ಜುಲೈ ತಿಂಗಳಿಗೆ ಆ ಹೆಸರೇಕೆ ಬಂತು ಗೊತ್ತೇ?

ಜೂಲಿಯಸ್ ಸೀಜ಼ರ್ ರಾಜ್ಯವಾಳುತ್ತಿದ್ದ ಕಾಲದಲ್ಲಿ ತನ್ನ ಹೆಸರು ಶಾಶ್ವತವಾಗಲೆಂಬ ದೃಷ್ಟಿಯಿಂದ ತಿಂಗಳೊಂದಕ್ಕೆ ತನ್ನ ಹೆಸರಿರಿಸಿದ.

ಅದೇ ಜುಲೈ.

ತನ್ನ ಹೆಚ್ಚುಗಾರಿಕೆಗಾಗಿ ಒಂದು ದಿನವನ್ನೂ ಹೆಚ್ಚುಗೊಳಿಸಿದ.

ಹಾಗಾಗಿ ಜುಲೈ ತಿಂಗಳಲ್ಲಿ ಮೂವತ್ತೊಂದು ದಿನಗಳು.

ಮತ್ತೆ ಬಂದ, ಅಗಸ್ಟಿಸ್ ಸೀಜ಼ರ್ – ತಾನೇನು ಕಡಿಮೆ ಎಂಬಂತೆ ಮುಂದಿನ ತಿಂಗಳಿಗೆ ತನ್ನ ಹೆಸರಿರಿಸಿದ.

ಮಾತ್ರವಲ್ಲ, ಆ ತಿಂಗಳಲ್ಲೂ ಒಂದು ದಿನವನ್ನು ವೃದ್ಧಿಗೊಳಿಸಿದ.

ಮೂವತ್ತೊಂದು ದಿನಗಳ ಆಗಸ್ಟ್ ತಿಂಗಳು ಚಾಲ್ತಿಯಲ್ಲಿ ಬಂದದ್ದು ಹೀಗೆ,.

ಪರಿಣಾಮವಾಗಿ, ಬಡಪಾಯಿ ಪೆಬ್ರವರಿ ತಿಂಗಳು ಎರಡು ದಿನಗಳನ್ನು ಕಳೆದುಕೊಂಡು ಇಪ್ಪತ್ತೆಂಟಕ್ಕೇ ನಿತ್ತಿತು.

ಈ ಸಂಗತಿಯನ್ನು ಮೊಟ್ಟಮೊದಲ ಬಾರಿಗೆ ತಿಳಿದಾಗ,

ನಮ್ಮನ್ನು ನೋಡಿ ನಾವೇ ನಗುವಂತಾಯಿತು,.

ಕಾರಣವಿಷ್ಟೇ…

ಕಾಲನಿರ್ಣಯವಾಗಬೇಕಾದದ್ದು, ಸೂರ್ಯಚಂದ್ರರ ಮೇಲೆಯೇ ಹೊರತು ವ್ಯಕ್ತಿಗಳ ಇಶ್ಃಟಾನಿಷ್ಟದ ಮೇಲಲ್ಲ್.

ಸಮಗ್ರ ಭಾರತೀಯ ಸಂಸ್ಕೃತಿಯನ್ನೇ ಅಂಧಾನುಕರಣೆ ಎಂಬ ಒಂದೇ ಪದದಲ್ಲಿ ಹೀಗಳೆಯುವ ಪಾಶ್ವಾತ್ಯರು ಮತ್ತು ಈ ದೇಶದಲ್ಲಿಯೇ ವಾಸಿಸುವ ಅವರ ಮಾನಸ ಪುತ್ರರು,

ಕಣ್ತೆರೆದು ನೋಡಬೇಕಾದ ಸಂಗತಿಗಳು ಬಹಳ ಇದೆ.

ಉದಾಹರಣೆಗೆ ಭಾರತೀಯ ಕಾಲಗಣನೆಯನ್ನೇ ತೆಗೆದುಕೊಳ್ಳಿ..

ಅದೆಷ್ಟು ವೈಜ್ಞಾನಿಕ, ನಿಸರ್ಗ ಸಂವಾದಿ…?

ಹುಣ್ಣಿಮೆಯೆಂದರೆ, ಹುಲು ಮಾನವರ ನಡುವಿನ ಒಡಂಬಡಿಕೆಯಲ್ಲ.

ಖಗೋಳದಲ್ಲಿ ಅದಕ್ಕೆ ಆಧಾರವಿದೆ.

ಮಾ ಎಂದರೆ ’ಚಂದ್ರ’. ಪೂರ್ಣಿಮಾ ಎಂದರೆ ಚಂದ್ರ ಪೂರ್ಣ ನಾಗುವ ಸಮಯ.

ಅಮಾವಾಸ್ಯೆಯೆಂಬುದು ಯಾವ ದೊರೆಯ ಹೆಸರಲ್ಲ. ಅಮಾ’ ಚಂದ್ರನಿಲ್ಲದಾಗುವ ಸಮಯ.

ಚಂದ್ರನ ಒಂದೊಂದೇ ಕಲೆಗಳು ವೃದ್ಧಿಯಾದಂತೆ, ಕ್ಷಯಿಸಿದಂತೆ ಪ್ರಥಮ, ದ್ವಿತೀಯ – ತಿಥಿಗಳು ಉಂಟಾಗುತ್ತವೆ.

ಸೂರ್ಯ ಸಿಂಹರಾಶಿಯಲ್ಲಿ ಸಂಚರಿಸುವ ಮೂವತ್ತು ದಿನಗಳಿಗೆ ಸಿಂಹಮಾಸ ಎಂದು ಹೆಸರು.

ಯಾವ ತಿಂಗಳ ಹುಣ್ಣಿಮೆಯಂದು ಚಂದ್ರ ಕೃತ್ತಿಕಾ ನಕ್ಷತ್ರದ ಒಡನೆ ಇರುತ್ತಾನೆಯೋ, ಅದು ಕಾರ್ತಿಕ ಮಾಸ.

ಅಶ್ವಿನಿ ನಕ್ಷತ್ರದೊಡನೆ ಇದ್ದರೆ, ಆಶ್ವೀನ ಮಾಸ.

ಚಿರಾ ನಕ್ಷತ್ರದೊಡನೆ ಇದ್ದರೆ ಚೈತ್ರಮಾಸ.

ಹೀಗೇ..

ನಮ್ಮ ಕಾಲಗಣನೆ ಸೃಷ್ಟಿಯ ಮೇಲೆ ನಿಂತಿದೆಯೇ ಹೊರತು ವ್ಯಕ್ತಿಗಳ ಮೇಲಲ್ಲ.

ಹುಣ್ಣಿಮೆ ಅಮಾವಾಸ್ಯೆಗಳನ್ನು ಆಕಾಶದಲ್ಲಿ ತೋರಿಸಬಹುದು.

ಆದರೆ,

ಜುಲೈ ಆಗಸ್ಟ್ ಗಳನ್ನು ಸ್ಮಶಾನಗಳಲ್ಲಿ -ಗೋರಿಗಳಲ್ಲಿ ಹುಡುಕಬೇಕಾದೀತು!!

ನಾವೇಕೆ ಹೀಗಾದೆವು?

ನಮ್ಮ ಕಾಲಗಣನೆ ವಿಶ್ವದಲ್ಲಿಯೇ ಅತಿ ಪುರಾತನ.

ಆದರೆ, ನಿತ್ಯ ನೂತನ.

ಸಂಪೂರ್ಣ ವೈಜ್ಞಾನಿಕವಾದ ಸೃಷ್ಟಿ ಸಹಜವಾದ ಕಾಲ ನಿರ್ಣಯ ನಮ್ಮದು.

ಕುಳಿತಲ್ಲಿಂದಲೇ ಗ್ರಹಗತಿಗಳನ್ನು, ಗ್ರಹಣಗಳನ್ನು ಕರಾರುವಾಕ್ಕಾಗಿ ಅಳೆಯುತ್ತಿದ್ದ,

ಮಾನವ ಜೀವನದ ಮೇಲೆ ಅವುಗಳು ಬೀರುವ ಪರಿಣಾಮವನ್ನು ನಿಖರವಾಗಿ ತಿಳಿಯುತ್ತಿದ್ದ,

ನಮ್ಮ ಪೂರ್ವಜರ ಮೇಧಾಶಕ್ತಿಯ ಪ್ರತೀಕವೇ ಆಗಿರುವ,

ಪಂಚಾಂಗಗಳನ್ನೇಕೆ ನಾವು ಮರೆತೆವು?

ನಾವು ಖಂಡಿತವಾಗಿಯೂ ಕ್ರಿಸ್ತನ ವಿರೋಧಿಗಳೇನೂ ಅಲ್ಲ,

ಆದರೆ,

ಈ ಮಣ್ಣಿನ ಮಕ್ಕಳಾದ ಶಾಲಿವಾಹನ ವಿಕ್ರಮರ ಯಾವ ತಪ್ಪಿಗಾಗಿ ಅವರ ಹೆಸರಿನ ಶಕೆಗಳನ್ನು ನಾವು ಬಿಟ್ಟುಬಿಟ್ಟೆವು?

ಚಿಕ್ಕಂದಿನಲ್ಲಿ ನಿತ್ಯವೂ ಹೇಳಬೇಕಾಗಿದ್ದ ಬಾಯಿಪಾಟದ ನೆನಪು…

೧. ಪಾಡ್ಯ- ಯುಗಾದಿ ಪಾಡ್ಯ, ೨. ಬಿದಿಗೆ- ಭಾವನ ಬಿದಿಗೆ, ೩. ತದಿಗೆ – ಅಕ್ಷತ್ತದಿಗೆ ೪. ಚೌತಿ – ವಿನಾಯಕನ ಚೌತಿ.

ಪಂಚಮಿ – ನಾಗರ ಪಂಚಮಿ

೬ ಷಷ್ಟಿ – ಚಂಪಾ ಷಷ್ಠಿ,

೭ ಸಪ್ತಮಿ – ರಥ ಸಪ್ತಮಿ

೮ ಅಷ್ಟಮಿ – ಗೋಕುಲಾ

೯ ನವಮಿ -ರಾಮ

೧೦ ದಶಮಿ – ವಿದ್ಯಾ

೧೧. ಪ್ರಥಮ ಏಕಾದಶಿ

೧೨ ಉತ್ಥಾನ

೧೩ ಖನಿ

೧೪ ಅನಂತನ

೧೫ ನೂಲ ಹುಣ್ನಮೆ

ಎಳ್ಳಮಾವಾಸ್ಯೆ

ಭಾರತೀಯ ಸಂಸ್ಕೃತಿಯಲ್ಲಿ ಭಗವತ್ಸೇವೆಗೆ ಯೋಗ್ಯವಲ್ಲದ ದಿನವೇ ಇಲ್ಲ.

ವಾರಕ್ಕೊಮ್ಮೆ ಪ್ರಾರ್ಥನೆ ಮಾಡುವ ಸಂಸ್ಕೃತಿ ನಮ್ಮದಲ್ಲ.

ಇಲ್ಲಿ ಎಲ್ಲ ದಿನಗಳೂ ಹಬ್ಬವೇ..

ಸ್ವಾಮಿ ಶಿವಾನಂದರ ಆಶ್ರಮದಲ್ಲಿ ನಡೆದ ಒಂದು ಘಟನೆ:

ಸಂಸಾರದಲ್ಲಿ ವಿರಕ್ತಿಯನ್ನು ತಾಳಿ ಸನ್ಯಾಸವನ್ನು ಬಯಸಿ ಅನೇಕ ಶಿವಾನಂದರ ಬಳಿ ಬರುತ್ತಿದ್ದರು.

ಹಾಗೆ ಬಂದವರಿಗೆ ಶಿವಾನಂದರು ಒಮ್ಮೆಲೇ ಸನ್ಯಾಸ ದೀಕ್ಷೆ ಕೊಡುತ್ತಿರಲಿಲ್ಲ.

ಕೆಲ ಕಾಲ ಇಂಥವರನ್ನು ಪ್ರೊಬೆಷನರಿಗಳಾಗಿ ಇರಿಸಿ ಪರೀಕ್ಷಿಸಿ ವೈರಾಗ್ಯವನ್ನು ಧೃಡಪಡಿಸಿಕೊಂಡು ಮತ್ತೆ ಸನ್ಯಾಸವನ್ನು ನೀಡುತ್ತಿದ್ದರು.

ಕ್ಷಣಿಕ ಆವೇಶದಲ್ಲಿ ಮನೆಯವರ ಮೇಲೆ ಕೋಪಗೊಂಡು ಮನೆಬಿಟ್ಟು ಬಂದವರು ಆರು ತಿಂಗಳಾಗುವಾಗ ಮನೆಯ ಉಪಿನಕಾಯಿ ನೆನಪಾಗಿ ಬಂದ ದಾರಿಗೆ ಸುಂಕವಿಲ್ಲದಂತೆ ಮರ್ಳುವುದು ಸಾಮಾನ್ಯ ಸಂಗತಿಯಾಗಿದೆ.

ಆಶ್ರಮವಾಸಿಗಳೆಲ್ಲರೂ ಬೆಳಗಿನ ಜಾವ ನಾಲಕ್ಕು ಗಂಟೆಗೆ ಏಳಬೇಕೆಂಬ ನಿಯಮವಿದ್ದಿತು.

ಒಂದು ಭಾನುವಾರ ಏಳುಗಂಟೆಯಾದರೂ ಏಳದೇ ಮಲಗಿದ್ದ ಯುವಕನೊಬ್ಬನನ್ನು ಸ್ವತಃ ಸ್ವಾಮಿ ಶಿವಾನಂದರೇ ಎಬ್ಬಿಸಿದರು.

ನಿದ್ರೆಯ ಸವಿಯನ್ನು ತೊರೆಯಲೊಲ್ಲದ ಯುವಕ ಶಿವಾನಂದರಿಗೆ ನಿದ್ದೆಗಣ್ಣಿನಲ್ಲಿಯೇ ಹೇಳುತ್ತಾನೆ ’ಟುಡೇ ಈಸ್ ಹಾಲಿಡೇ, ಪ್ಲೆಅಸೆ ಲೆತ್ ಮೆ ಸ್ಲೀಪ್’…!

ಶಿವಾನಂದರು ಉತ್ತರಿಸಿದರು – ಥೆರೆ ಅರೆ ನೊ ಹೊಲಿದಯ್ಸ್, ಎವೆರ್ಯ್ದಯ್ ಇಸ್ ಹೊಲಿ ದಯ್.

ಹಾಲಿಡೇ ಮೋಜಿನಲ್ಲಿ ಮೈಮರೆತ ಇಂಡಿಯನರು (ಭಾರತೀಯರ)..

ಭಾರತದ ಹೋಲಿಡೇ ಗಳ ತಿರುಗಿ ನೋಡುವುದೆಂದು?

Share and Enjoy:
  • Facebook
  • Digg
  • del.icio.us
  • Google Bookmarks
  • Yahoo! Buzz
  • Twitter
  • LinkedIn
  • RSS
  • StumbleUpon
  • MSN Reporter
  • Live
  • email
  • Sphinn
  • Mixx
  • Blogplay
  • Upnews
  • MySpace
  • N4G

"ಇರುವುದೆಲ್ಲವ ಬಿಟ್ಟು. . . ! "ಗೆ ಈವರೆಗೆ 15 ಪ್ರತಿಕ್ರಿಯೆಗಳು

  1. Sharada Krishna

    bharatiya veda shastra, veda vijnanagalannu,
    ariyadavarenna bahudu paschatyarannu ,
    ariyabayasadavarenna bahude..nammavarannu?
    aritu nadedare balella chennu ennuva hiriyarannu,,
    maretu baluvava rannu e..nennabahudu bhagavantaneeninnu,

    andhanukarane ennuva bhavaneyanne tararu
    nammanaduvalliruva halavaru,
    ide.. indu bala madari yantagirdennuvaru,
    e..nendu helabahudu nondavaru

    Shreekant Hegde Reply:
      November 13th, 2009 at     %I:%M %p     

    ಶಾಮಕ್ಕಾ, ಕನ್ನಡ ಲಿಪಿಲೇ ಬರೆಯಕ್ಕಾ ಓದಲೆ ಕಷ್ಟ ಆವುತ್ತು ಈ ಕಂಗ್ಲಿಶು.

  2. shilpa purohith

    ಮಹಾ ದಾರ್ಶನಿಕ ನೊಬ್ಬ ಭಾರತದ ಬಗ್ಗೆ ಹೀಗೆ ಹೇಳಿದ್ದಾನೆ ,
    ಪ್ರಪಂಚದಲ್ಲಿ ಈಗ ಏನೇ ಇದ್ದರು
    ಅದು ಕಲೆ, ವಿಜ್ಞಾನ ,ಸಾಹಿತ್ಯ, ಔಶಧ,ಗಣಿತ, ಕ್ರೀಡೆ ,
    ಏನೇ ಆಗಿರಲಿ ಅದೆಲ್ಲವೂ ವಿಶ್ವಕ್ಕೆ ಭಾರತದ ಕೊಡುಗೆ ಅಂತ

  3. Anuradha Parvathi

    ಹರೇ ರಾಮ ಗುರುಗಳೇ,
    ನಮ್ಮ ಈಗಿನ ಶಿಕ್ಷಣ ಪದ್ದತಿಯೇ ಇದಕ್ಕೆ ಮುಖ್ಯ ಕಾರಣ ಅಂತ ನನಗೆ ಅನ್ನಿಸುತ್ತದೆ. ಜನವರಿ, ಫೆಬ್ರವರಿ ಅಂತ ಬಾಯಿಪಾಠ ಮಾಡೋದೇ ಸುಲಭ ಈಗಿನ ಮಕ್ಕಳಿಗೆ. ನಮಗೂ (ಹೆತ್ತವರಿಗೆ) ನಮ್ಮ ಮಕ್ಕಳು ಮೂರು ವರ್ಷಕ್ಕೆ ಇದನ್ನೆಲ್ಲ ಹೇಳ್ತಾನೆ/ಹೇಳ್ತಾಳೆ ಅಂತ ಹೇಳಲಿಕ್ಕೆ ಇಷ್ಟ. ಈಗಿನ trend ಅದುವೇ. ಎಲ್ಲಿ ಹೋದ್ರೂ ಮಕ್ಕಳು ಇಂಗ್ಲಿಷ್ ನಲ್ಲೆ ಮಾತಾಡ್ತಾರೆ. ಅದೇ ಸುಲಭ ಮತ್ತು ಅದೇ ಫ್ಯಾಷನ್.
    ನೀವು ವೊಮ್ಮೆ ಹೇಳಿದ್ದು ನೆನಪು. ನಮ್ಮ ಭಾಷೆ, ನೆಲ, ಸಂಸ್ಕೃತಿಯ ಬಗ್ಗೆ ಹೆಮ್ಮೆ ಇಲ್ಲದೇ ಇರುವವರಿಗೆ ತಮ್ಮ ಬಗ್ಗೆನೇ ಹೆಮ್ಮೆ ಇಲ್ಲ ಎಂದು. Self respect ಇಲ್ಲ ಎಂದು.

  4. Shreekant Hegde

    ಹರೇ ರಾಮ, ಗುರುಗಳೇ, ಅದ್ಭುತ ಯಥಾಪೂರ್ವಮ್, ಅರ್ಥಮಾಡಿಕೊಂಬ ಹೃದಯ ಬೇಕಷ್ಟೇ, http://www.speaksanskrit.org/vishvavani/vishvavANI_vol2_no1.pdf ಈ ಕೊಂಡಿಗೆ ಹೋಗಿ ನೋಡಿ ಗುರೂಜಿ, ಒಂದು ಚಾತುರ್ಮಾಸ್ಯ ಹೇಳಿ ಒಂದು ಕಥೆ ಇದ್ದು ಅದು ಇಂಗ್ಲಿಶ್ ತಿಂಗಳಿನ ಬಗ್ಗೆ ಕಲ್ಪಿತವಾದ್ರೂ ಚೆಲೋ ಇದ್ದು.

  5. shobha lakshmi

    ಗುರುದೇವಾ..ಇದನ್ನು ಓದುವಾಗ ಕಳಕೊಡದರ ಬಗ್ಗೆ ಪಶ್ಚತ್ತಾಪ ಆಗುತ್ತಿದೆ…ನಾವೆಲ್ಲಿದ್ದೇವೆ ಎನ್ನುವ ಆತ್ಮಾವಲೋಕನ ಎಲ್ಲೋರು ಮಾಡಬೇಕಿದೆ..

  6. Sharada Krishna

    kshamisu shreekantanna enage kannada type batte ille prayatna madi madi sakayidu aanu kaltu anantara madte alliayavarege kevala o..dutte sa..ku
    dhanyava..dagalu sham u

  7. Vishwa M S Maruthipura

    hare rama…. innadaru namage” february”tara agadirali hare rama

  8. Shaila Ramachandra

    Hare rama ,namma drushti innuu hotte mele iddu ,tale mele alla.Allada gurugale???????????

    Sri Samsthana Reply:
      November 14th, 2009 at     %I:%M %p     

    ಸರಿ..

  9. Raghavendra Narayana

    ಅದ್ಭುತ, ಎಂದಿನ ಹಾಗೆ, ಸ್ಪುಟ ಹಾಗು ಸ್ಪಷ್ಟ… ಗೋಕರ್ಣದ ಹತ್ತಿರ ಇರುವ ಸುಮಾರು ಜನ ಆತ್ಮ ಲಿಂಗ ನೋಡಿರುವುದಿಲ್ಲ, ಹಾಗೆ ಭಾರತದಲ್ಲೇ ಇರುವ ನಾವು ಭಾರತ ಅರಿತಿಲ್ಲ… ನಾವೆಲ್ಲಾ ವಿದೇಶಿಯರ ಹಿಂದೆ ಓಡಿ, ಅವರೆಲ್ಲಾ ಭಾರತದ ಹಿಂದೆ ಓಡಿಬಂದು, ನಾವೆಲ್ಲ ಇಲ್ಲೇನಿದೆ ಎಂದು ಆಶ್ಚರ್ಯದಿಂದ ತಿಳಿದುಕೊಳ್ಳಲು ಶುರು ಮಾಡುವ ಸಮಯಕ್ಕೆ ಶಿವನ ಪಾದ ಕಾಣಿಸಲು ಶುರುವಾಗಬಹುದು… ಸೃಷ್ಟಿಯ ಸಹಜ ಸೌಂದರ್ಯದ ಸ್ವಚ್ಛಂದ ಬಾನಿನ ಹಾರಾಟವನ್ನು ಮರೆತು ಬಂಗಾರದ ಪಂಜರದೊಳಗೆ ಎಮ್ಮೆಯ ಹಾಗೆ ಬಿದ್ದುಕೊಂಡಿದ್ದೇವೆ… ಮತ್ತೆ ಮರಳುವ ಬಗೆ ಹೇಗೆ ಗುರುಗಳೇ?

  10. Sri Samsthana

    ನಾವು ಎಲ್ಲಿಗೆ ಮರಳಬೇಕಿದೆಯೋ ಅದನ್ನು ಪ್ರೀತಿಸಲಾರಂಭಿಸಬೇಕು.. ಮತ್ತುಳಿದ ಬದಲಾವಣೆಗಳು ತಾನೇ ಆಗುತ್ತವೆ..

    Raghava Hegde Reply:
      November 22nd, 2009 at     %I:%M %p     

    Hareraama
    shirasashtanga pranamagalu.

  11. satyanarayana sharma

    pavitra gangeya thatadalliddaru snaanakke mane handey aneeru.
    sugrasa bhojana siddhavide,aadaru bhikshatane.
    sampatthina ಮೇಲೆ malagiddeve,adara arivilla.maneyadevarnnu maretu uuradevarige namana.belakannu sahisalaarade kanmucchida hathabhagya uluukaraada ನಾವು bhaaratharaaguvudu ಎಂದು ಪ್ರಭು?

  12. Raghavendra Narayana

    “guna avaguna” da bagge namage “vivek, vivechana, vishleshana” gunagalu iddidare ondalla saviraru vivekanandaru ee mannalli prajwalitutiddaro yeno.
    ‘guna avaguna” bahala varshada mele kelidantanisutide, namma smruthi pataladalli “guna avaguna” concept sthiravagi nillalli, gurugala anugrahavirali.

ಪ್ರತಿಕ್ರಿಯೆಗಾಗಿ

You must be logged in to post a comment.

Powered By Indic IME