ಹರೇರಾಮ,

ದಾಸಶ್ರೇಷ್ಠ, ಮರ್ಯಾದಾಪುರುಷೋತ್ತಮನಾದ ಪ್ರಭು ಶ್ರೀರಾಮಚಂದ್ರನ ಚರಣಸೇವೆಗೈದು ರಾಮಾಲಿಂಗನ ಪಡೆದ, ರಾಮಭಕ್ತ ಆಂಜನೇಯನ ಜನ್ಮೋತ್ಸವವು ಈ ಬಾರಿ ಮಾಲೂರಿನ ಗೋಶಾಲೆಯ ಸುಂದರ ಪರಿಸರದಲ್ಲಿ ಬಹುವಿಜೃಂಭಣೆಯಿಂದ ಜರುಗಲಿದೆ. ಪರಮಪೂಜ್ಯ ಶ್ರೀಸಂಸ್ಥಾನದವರು ದಿವ್ಯಸಾನ್ನಿಧ್ಯ ವಹಿಸಿ ನಮ್ಮೆಲ್ಲರನ್ನು ಅನುಗ್ರಹಿಸಲಿದ್ದಾರೆ. ಈ ದಿನದಂದು ಹನುಮನಿಗೆ ವಿವಿಧ ಪೂಜೆಗಳು ಹಾಗು ಗೋಸೇವೆಗಳಿಗೂ ಹಲವು ರೀತಿಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಗುರು-ಗೋವು-ಹನುಮರ ಸೇವಾಭಾಗ್ಯ ಏಕಕಾಲದಲ್ಲಿ ಲಭಿಸಲಿದೆ.
ಬನ್ನಿ..
ಅಂದು ಯಾವ ಪ್ರಭುವನ್ನು ಹನುಮ ಎದೆಯೊಳಿಟ್ಟು ಪೂಜಿಸಿದನೋ, ಇಂದೂ ಕೂಡ ಅದೇ ರಾಮನನ್ನು ಉಸಿರಾಗಿಸಿಕೊಂಡು ಪೂಜಿಸುವ ನಮ್ಮ ಪ್ರೀತಿಯ ಶ್ರೀಸಂಸ್ಥಾನದವರ ಸನ್ನಿಧಿಯಲ್ಲಿ ಸಂಪನ್ನವಾಗುವ ಈ ಪುಣ್ಯಪರ್ವದಲ್ಲಿ ನಾವೆಲ್ಲ ಪಾಲ್ಗೊಂಡು ಕೃತಾರ್ಥರಾಗೋಣ.

ದೇಶ: ಮಾಲೂರು ಗೋಶಾಲೆ, ಯಶವಂತಪುರ
ಕಾಲ: ಮನ್ಮಥ ಸಂವತ್ಸರ, ಚೈತ್ರ ಶುಕ್ಲ ಪೂರ್ಣಿಮಾ (04-04-2015)

Facebook Comments Box