ಕಾಮದುಘಾ – ಗೋಮಹೋತ್ಸವ – Festival of Cows – A Day for GouMatha :15/01/2016
ಭಾರತೀಯ ಸಂಸ್ಕೃತಿಯ ಮೂಲಾಧಾರವಾಗಿರುವ, ದೇಶದ ಆರ್ಥಿಕ – ಸಾಮಾಜಿಕ – ಧಾರ್ಮಿಕ ಜಗತ್ತಿನ ಬೆನ್ನೆಲುಬಾದ ಭಾರತೀಯ ಗೋವಿನ ಕುರಿತಾಗಿ ಜಾಗತಿಕಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿರುವ ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ಸಮಾಜದ ಸ್ವಾಸ್ಥ್ಯಕ್ಕಾಗಿ ಹತ್ತಾರು ಸಮಾಜಮುಖೀ ಯೋಜನೆಗಳನ್ನು ಸಂಕಲ್ಪಿಸಿದವರು. ಭಾರತೀಯ ಗೋವಂಶದ ಸಂರಕ್ಷಣೆ-ಸಂವರ್ಧನೆ-ಸಂಶೋಧನೆ-ಸಂಬೋಧನೆಗಳೆಂಬ ಮಹತ್ತರವಾದ ಆಶಯಗಳೋಂದಿಗೆ ಕಾರ್ಯಾಚರಿಸುತ್ತಿರುವ ‘ಕಾಮದುಘಾ’  ಪೂಜ್ಯ ಶ್ರೀಗಳ ಮಹತ್ವದ ಯೋಜನೆಗಳಲ್ಲೋಂದು. ಪ್ರಕೃತ ‘ಕಾಮದುಘಾ’ ತನ್ನ ವಾರ್ಷಿಕದಿನವನ್ನುದಿನಾಂಕ 15/01/2016ರಂದು ಸಂಕ್ರಾತಿಯ ಶುಭಸಂಧರ್ಭದಲ್ಲಿ ‘ಗೋಮಹೋತ್ಸವ’ವಾಗಿ ಆಚರಿಸಿಕೊಳ್ಳುತ್ತಿದೆ.
ಜನರ ಮನೆ-ಮನಗಳಿಂದ ದೂರವಾಗುತ್ತಿದ್ದ ಭಾರತೀಯ ಗೋವಂಶವನ್ನು ಗೋಯಾತ್ರೆ, ಗೋಸಂಸತ್,ವಿಶ್ವ ಗೋ ಸಮ್ಮೇಳನ, ವಿಶ್ವಮಂಗಲ ಗೋಗ್ರಾಮಯಾತ್ರೆ ಮುಂತಾದ ಕಾರ್ಯಕ್ರಮ ವೈವಿಧ್ಯಗಳಮೂಲಕ ಗೋವಿನ ಕುರಿತಾಗಿ ಅರಿವನ್ನು ಮೂಡಿಸಿ, ಜಾಗತಿಕ ಮಟ್ಟದ ಗೋಷ್ಠಿಗಳ ಮೂಲಕ ಗೋಜಾಗೃತಿಯನ್ನು ಉಂಟುಮಾಡಿ ಜನರ ಮನೆ-ಮನಗಳಲ್ಲಿ ಗೋವನ್ನು ಪುನಃಪ್ರತಿಷ್ಟಾಪಿಸಲು ಸಾಧ್ಯವಾದದ್ದು ಶ್ರೀಗಳು ಸಂಕಲ್ಪಿಸಿದ ‘ಕಾಮದುಘಾ’ಯೋಜನೆಯ ಮೂಲಕ.
ಈ ಬಾರಿ ಸಂಕ್ರಾಂತಿ ಹಬ್ಬದ ಮೆರುಗನ್ನು ಹೆಚ್ಚಿಸಲೋ ಎಂಬಂತೆ ಸಂಕ್ರಾಂತಿಯ ದಿನದಂದು ಕಾಮದುಘಾ ತನ್ನ ವಾರ್ಷಿಕದಿನವನ್ನು ಗೋಕೇಂದ್ರಿತ ಜೀವನಕ್ರಮವನ್ನು ಅನಾವರಣಗೋಳಿಸುವ ಸಲುವಾಗಿ “ಗೋಮಹೋತ್ಸವ”ವಾಗಿ ಆಚರಿಸಿಕೊಳ್ಳುತ್ತಿದ್ದು, ಸಾಂಸ್ಕೃತಿಕ-ಆರ್ಥಿಕ-ಧಾರ್ಮಿಕ ಜಗತ್ತಿನ ಜೀವನಾಡಿಯಾದ  ಗೋವುಗಳ ಪ್ರಾಮುಖ್ಯತೆಯನ್ನು ಜನಮಾನಸಕ್ಕೆ ಸಾರಿಹೇಳುವ ದಿಶೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
* ವೈವಿಧ್ಯಮಯವಾದ ಭಾರತೀಯ ಗೋತಳಿಗಳ ಅತ್ಯಾಕರ್ಷಕವಾದ ಗೋವುಗಳ ಪ್ರದರ್ಶನ.
* ಗೋವುಗಳಿಗೆ ಸಂಬಂಧಿಸಿದ ಪಾರಂಪರಿಕ ವಿವಿಧ ಅಮೂಲ್ಯ ವಸ್ತುಗಳ ಪ್ರದರ್ಶನ – ಗೋ ಮ್ಯೂಸಿಯಂ
* ವೈವಿಧ್ಯಮಯ ನಿತ್ಯೋಪಯೋಗಿ ಗವ್ಯೋತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಾ.
* ಶುದ್ಧ ಭಾರತೀಯ ತಳಿಯ ಗೋವುಗಳ ಹಾಲು,ತುಪ್ಪ,ಮಜ್ಜಿಗೆ ಇತ್ಯಾದಿಗಳಿಂದ ತಯಾರಿಸಲಾದ ಹತ್ತುಹಲವು ಬಗೆಯ ಸ್ವಾಧಿಸ್ಟವಾದ ರುಚಿಕರ ಆಹಾರಗಳ ಪ್ರದರ್ಶನ ಹಾಗೂ ಮಾರಾಟ – ಪಾಕೋತ್ಸವ
* ವಿವಿಧ ರೋಗಗಳಿಗೆ ಗವ್ಯಾಧಾರಿತವಾದ ಚಿಕಿತ್ಸೆ ಮತ್ತು ಮಾಹಿತಿ – ಗವ್ಯಚಿಕಿತ್ಸೆ
* ಶಾಲಾವಿಧ್ಯಾರ್ಥಿಗಳಿಗೆ ಗೋಸಂಬಂಧಿ ಹಾಡು-ಭಾಷಣ-ಚಿತ್ರಕಲೆ ಹಾಗೂ ಭಾರತೀಯ ಗೋತಳಿಗಳನ್ನು ಗುರುತಿಸುವ ಆಟ-ಸ್ಪರ್ಧೆಗಳು, ಸಾರ್ವಜನಿಕರಿಗೆ ಗೋಸಂಬಂಧಿತ ಗಾಯನ ಹಾಗೂ ರಸಪ್ರಶ್ನೆ ಸ್ಪರ್ಧೆಗಳು.
* ಗೋವಿನ ಕುರಿತಾಗಿ ಮನಮೋಹಕವಾದ ಜಾನಪದ ಹಾಡು- ನೃತ್ಯ – ರೂಪಕಗಳ ಪ್ರದರ್ಶನ.
* ಗೋವಿನ ಕುರಿತಾದ ವಿಚಾರ ಸಂಕಿರಣದಲ್ಲಿ NDRI ಸಂಸ್ಥೆಯ ವಿಜ್ಜಾನಿಗಳಾದ ಶ್ರೀ ಕೆ.ಪಿ ರಮೇಶ್ ಅವರು ‘ಆಧುನಿಕ ಜಗತ್ತಿನಲ್ಲಿ ಪಂಚಗವ್ಯ’ದ ಕುರಿತು, ಸುಶೃತ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಮಕೃಷ್ಣ ಅವರು ‘ಆರೋಗ್ಯಪೂರ್ಣ ಜೀವನಕ್ಕೆ ಗೋವು-ಗವ್ಯೋತ್ಪನ್ನಗಳ ಅಗತ್ಯತೆ’, ಆಂದ್ರಪ್ರದೇಶದ ಪಶುಪಾಲನಾ ಇಲಾಖೆಯ ಡಾ. ಸಾಯಿ ಬುಚತ್ ರಾವ್ ಅವರು’ ಕೃಷಿಯಲ್ಲಿ ಗೋವಿನ ಪ್ರಾಮುಖ್ಯತೆ’ಯ ಕುರಿತು ವಿಚಾರಗಳನ್ನು ಮಂಡಿಸುವರು. ಭಾರತೀಯ ಯೋಗಧಾಮದ ಶ್ರೀ ಕೆ ಎಲ್ ಶಂಕರನಾರಾಯಣ ಜೋಯ್ಸ್ ಅವರು ವಿಚಾರ ಮಂಥನ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸುವರು.
* ವಿಶೇಷವಾಗಿ ಅಲಂಕರಿಸಿದ ಎತ್ತಿನಗಾಡಿಯಲ್ಲಿ ಪ್ರಯಾಣ, ಮುದ್ದಾದ ಕರುಗಳೋಂದಿಗೆ ಮುದ್ದುಮಗುವಿನ ಚಿತ್ರ ಇತ್ಯಾದಿ  ಮಕ್ಕಳಿಗೆ ಆಕರ್ಷಣೀಯವಾದ ಕಾರ್ಯಕ್ರಮಗಳು.
 ವೈಶಿಷ್ಟ್ಯಪೂರ್ಣವಾದ ವೈಚಾರಿಕ- ಸಾಂಸ್ಕೃತಿಕ – ಧಾರ್ಮಿಕ ಕಾರ್ಯಕ್ರಮ ವಿಶೇಷಗಳಮೂಲಕ “ಗೋಮಹೋತ್ಸವ” ಸಂಪನ್ನವಾಗಲಿದ್ದು, ಈ ಎಲ್ಲಾ ವೈವಿಧ್ಯಭರಿತವಾದ ಕಾರ್ಯಕ್ರಮಗಳು ಮಕ್ಕಳಿಂದ ಹಿಡಿದು ವಯೋವೃದ್ಧರವರೆಗಿನ ಎಲ್ಲಾ ವಯೋಮಾನದವರ ಮನಸಿನಲ್ಲಿ ಗೋವಿನ ಚಿತ್ರಣವನ್ನು ಕಟ್ಟಿಕೊಡುವುದರ ಜೊತೆಗೆ, ಗೋ ಕೇಂದ್ರಿತವಾದ ಸಮಗ್ರ ಜೀವನಕ್ರಮವನ್ನು ಪರಿಚಯಿಸಲಿದೆ.

ಬನ್ನಿ ಭಾಗವಹಿಸಿ…

ಜೀವರಾಶಿಗಳ ಜನನಿ , ಧರಣಿಯ ಧಾರಿಣಿ  ಗೋಮಾತೆಗೆ ನಮಿಸೋಣ…
ಗೋಮಹೊತ್ಸವವನ್ನು ನಮ್ಮ ಹಬ್ಬವನ್ನಾಗಿ ಮಾಡಿಕೊಳ್ಳೋಣ…

 

IMG-20151223-WA0011 IMG-20151223-WA0012
IMG-20160103-WA0020 IMG-20160103-WA0021
Facebook Comments Box