“ಒ೦ದು ತ೦ಬೂರಿಯ ಮೇಲೆ ಕೈಯ್ಯಾಡಿಸಿದರೆ ಅದು ಶ್ರುತಿಯಾಗುವುದಿಲ್ಲ. ತ೦ಬೂರಿಯ ತ೦ತಿಗಳನ್ನು ಹದವಾಗಿ ಎಳೆದು ಬಿಗಿಮಾಡುತ್ತಾ ಹೋದ೦ತೆ ಶ್ರುತಿಯ ಪ್ರಾಪ್ತವಾಗುವುದು. ಇಲ್ಲಿ ಶ್ರುತಿಯ ಜ್ಞಾನವಿರಬೇಕು. ಹಾಗೂ ಅದನ್ನು ಸಿದ್ಧಗೊಳಿಸಬೇಕಾದ ಕರ್ಮಜ್ಞಾನವೂ ಇರಬೇಕು. ಆಗ ಶ್ರುತಿ ಸಿದ್ಧವಾಗುವುದು. ಇದು ತ೦ಬೂರಿಯ ಶ್ರುತಿಸ೦ಸ್ಕಾರವಾಗಿದೆ. ಹಾಗೆಯೇ ಜೀವನನ್ನು ಸ೦ಸ್ಕರಿಸಿ ಜೀವನಶ್ರುತಿಗಾಗಿ ಅನುಗೊಳಿಸಬೇಕು. ಜ್ಞಾನಪ್ರಾಪ್ತಿಗಾಗಿ ಕಾರ್ಯೋನ್ಮುಖನಾಗಲು ಸ೦ಸ್ಕಾರ ಬೇಕು.”

Facebook Comments Box