ಗುರುಪದ-5
“ಜೀವಕ್ಕೆ ಹಿತಕರವಲ್ಲದ ಅನೇಕ ದುರಭ್ಯಾಸಗಳು ಮನುಷ್ಯರಲ್ಲಿ ಇರುತ್ತವೆ. ಅದನ್ನು ವರ್ಜಿಸಬೇಕೆ೦ಬ ಹಿರಿಯರ ಸ೦ದೇಶದ ಹೊರತಾಗಿಯೂ ಹೌದೆನಿಸಿದರೂ ಕ್ಷಣಿಕ ಆಕರ್ಷಣೆ ವಿವೇಕವನ್ನು ಕಳೆದುಕೊಳ್ಳುವ೦ತೆ ಮಾಡುತ್ತದೆ. ಚಪಲತೆಗಳು ಮನಸ್ಸಿನ ಸ೦ಯಮವನ್ನು ಕಳೆದು ಬಿಡುತ್ತವೆ. ಇದನ್ನು ಗೆಲ್ಲಲು ಧೀರತನ ಬೇಕು. ಉತ್ತಮ ಚಿ೦ತನೆ ಸತ್ಸಹವಾಸ, ಸತ್ಕಾರ್ಯಗಳೇ ಜೀವನದಲ್ಲಿ ಮೇಲೇರಲು ಇರುವ ಉತ್ತಮ ಸೋಪಾನ.”
Facebook Comments Box
October 19, 2011 at 7:50 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಒಂದು ಕ್ಷಣವಾದರೂ ಸತ್ಸಹವಾಸ ದೊರೆಯಬೇಕೆಂದರೆ ಅದೆಷ್ಟು ಜನ್ಮದ ಪುಣ್ಯ ಬೇಕೋ ಏನೋ… ನಮಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳೋಣ…
October 19, 2011 at 2:08 PM
sathsahavaasa , sathchinthane nanna usiraagali endu aashirvadisi samsthaana.
October 19, 2011 at 6:33 PM
ಮೇಲಿನ ಛಾಯಾ ಚಿತ್ರ ನೋಡಿ!
ಹಾಗೆಯೇ ಇಂದಿನ ನನ್ನ ಕಾಲನಿರ್ಣಯ (Calendar) ನಲ್ಲಿ ಹೀಗೆ ಬರೆದಿತ್ತು—
A Loving Soul is a loved Soul,
ಸಂಸ್ಥಾನ,
ಇದು ಗುರು ಶಿಷ್ಯರ ನಡುವೆ ಇರುವ ಬಾಂಧವ್ಯದ ಭಾವಚಿತ್ರವಲ್ಲದೇ ಮತ್ತೇನು?
ಸತ್ಸಂಗ ತರುವ ಪುಣ್ಯ ಎಲ್ಲ ಪಾಪಗಳನ್ನೂ ಗೆಲ್ಲುವುದಲ್ಲದೇ?
ಗುರುವಿನಿರುವಿಕೆ ನಮಗೆಲ್ಲಾ ಸರಿದಾರಿಯ ಸನಿಹಗೈವ ದಿವ್ಯ ಜ್ಯೋತಿಯ ಹಾಗೆ.
October 19, 2011 at 7:01 PM
ಯಾರದೀ ಸಂದೇಶ
ಯಾರ ಕಿವಿ ಮಾತು?
ಸರಿ ದಾರಿ, ಸರಿ ನಡಿಗೆ,
ಸರಿ ದಿಕ್ಕುದೆಸೆಗೆ।
ಕೈ ಪಿಡಿದು ನಾನಿರುವೆ
ಅಂತನಂತ ಭರವಸೆಗೆ॥
ನಿಶೆಯ ಸನಿಹದಲೊಂದು
ಉಷೆಯ ತರುವವರು।
ಹಸಿದ ಹಲವರಿಗೆಲ್ಲಾ
ದಿಷೆಯ ತೋರುವರು॥
ಯಾರದೀ ಸಂದೇಶ
ಯಾರ ಸವಿ ಮಾತು?
October 20, 2011 at 11:55 AM
ನಟ್ಟಡವಿಯಲಿ
ಕಷ್ತ ಕಾಲದಲಿ
ಬಿಟ್ಟು ಬಿಡದೆ
ಗಟ್ಟಿ ಹಿಡಿವ
ದಾರಿ ತಪ್ಪಿದ
ದೂರವಾಗಿಹ
ಕುವರರನು ಸರಿಪಡಿಸಲು
ಗುರುವಲ್ಲದೇ ಮತ್ತಿನ್ನಾರು
ಹರೇರಾಮ್,
October 21, 2011 at 12:22 PM
ಹರೇ ರಾಮ !
ಅನುಗ್ರಹ ದ ಮಾರ್ಗ ದರ್ಶನ…..
ಬೇಡುವ ಶಿಷ್ಯ…ನೀಡುವ ಗುರು….
ಸಹಜ ಪ್ರಕೃತಿ ಯ ಹಿನ್ನೆಲೆ ಯದು…..