ಹರೇ ರಾಮ
||ಶ್ರೀ ಶಂಕರಾಚಾರ್ಯ ವಿರಚಿತ ಏಕಶ್ಲೋಕೀ ಗಣಪತಿ ಸ್ತೋತ್ರಮ್||
ಗಳದ್ದಾನ ಗಂಡಂ ಮಿಳದ್ಭೃಂಗ ಖಂಡಂ |
ಚಲಚ್ಚಾರುಶುಂಡಂ ಜಗತ್ರಾಣಶೌಂಡಮ್ ||
ಲಸದ್ದಂತಕಾಂಡಂ ವಿಪದ್ಭಂಗಚಂಡಂ |
ಶಿವಪ್ರೇಮ ಪಿಂಡಂ ಭಜೇ ವಕ್ರ ತುಂಡಮ್ ||
(ಯಾರ ಗಲ್ಲದಿಂದ ಮದೋದಕವು ಸುರಿಯುತ್ತಿರುವುದೋ, (ಆ ವಾಸನೆಗೆ) ಭ್ರಮರವು ಗುಂಪಾಗಿ ಮುತ್ತಿರುವುದೋ, ಯಾರ ಸುಂದರ ಸೊಂಡಿಲು ಚಲಿಸುತ್ತಿರುವುದೋ, ಜಗತ್ತನ್ನು ರಕ್ಷಿಸುವಲ್ಲಿ ಕುಶಲನೋ, ಕೋರೆಯ ಹಲ್ಲು ಶೋಭಾಯಮಾನವಾಗಿರುವುದೋ, ವಿಪತ್ತನ್ನು ಭಂಗಗೊಳಿಸುವಲ್ಲಿ ಮಹಾಪರಾಕ್ರಮಿಯೋ, ಶಿವನ ಪ್ರೇಮದ ಖನಿಯಾದ ವಕ್ರತುಂಡನನ್ನು ಭಜಿಸುತ್ತೇನೆ.)
Facebook Comments Box
September 1, 2011 at 6:54 AM
“ಶಿವಪ್ರೇಮ ಪಿಂಡಂ ಭಜೇ ವಕ್ರ ತುಂಡಮ್ ||”
.
ಎಲ್ಲರೂ ಪ್ರೀತಿಸುವ ಗಣಪ, ವ೦ದಿಪೆ,
ಪ್ರಥಮ ವ೦ದನೆಸಲ್ಲಿಸಿ ಅಲ್ಲಿಯೆ ಬಿಟ್ಟು ಹೊರಡಲಾರೆ,
ಜೊತೆಯಿರು, ಅಡೆತಡೆ ಇಲ್ಲಿ ಹೆಜ್ಜೆಹೆಜ್ಜೆಗೆ,
ಗೆಜ್ಜೆಯ ಕಟ್ಟಿ ಎಲ್ಲ ತಡೆಗಳನ್ನು ನೃತ್ಯದ ನಲಿವಿನಲಿ ದಾಟುವ ನಿನ್ನೊ೦ದಿಗೆ ಕುಣಿಯಲೆತ್ನಿಸುವೆವು,
ಎದೆಯಲ್ಲಿ ಭಯವಿರದು ಎದುರಲಿ ಗಣಪನಿರಲು,
ದಣಿವಿರದು ಮನನೆಡುವುದು ವಕ್ರತು೦ಡ ಪರಬ್ರಹ್ಮ ತತ್ತ್ವಗಳ ಅರುಹಿತಿರಲು.
.
ಶ್ರೀ ಗುರುಭ್ಯೋ ನಮಃ
September 1, 2011 at 7:08 AM
“Ajam Nirvikalpam Niraakaaramekam
Neraanandhamanandham Adhvaitha Poornam
Param Nirgunam Nirvisesham Nireeham
ParaBrahma roopam Ganesham Bhajema.”
.
Shri Gurubhyo Namaha
September 1, 2011 at 12:14 PM
ಹರೇ ರಾಮ..
September 1, 2011 at 12:25 PM
ಹರೇರಾಮ. ಶ್ರೀ ಗುರುಭ್ಯೋ ನಮಃ.
September 1, 2011 at 11:05 PM
ಹರೇ ರಾಮ
ಮುದದಿಂದ ನಿನ್ನ ಕೊಂಡಾಡುವೆನನವರತ
ಮದವೂರ ವಿಘ್ನೇಶ…
September 2, 2011 at 2:04 PM
ಹರೇ ರಾಮ, ಶ್ಲೋಕದ ಪೂರ್ಣಪಾಠದ ’ಲಿಂಕು’ ಆಸಕ್ತರಿಗೆ
http://www.vignanam.org/veda/lyrics/Shiva_Bhujangam_Kannada_Large.pdf
September 6, 2011 at 10:35 AM
ಹರೇರಾಮ್,
ಗಣೇಶ ನಮ್ಮನು ಪೊರೆಯಲಿ ಅನವರತ
ಗುರು ನಮ್ಮಯ ಪೊರೆ ಕಳಚಲಿ ನಿರತ
ಕೊಡಿ ನಮಗೆ ಸದಾ ನಿಮ್ಮ ಸೇವಾವ್ರತ
ಕೂಡಿನಮ್ಮೊಳಗಿರಿ ಪೂರ್ಣಾವ್ರತ