ಪೆರಾಜೆ-ಮಾಣಿ ಮಠಃ8.8.2013, ಗುರುವಾರ

ಇಂದು ಕಾಸರಗೋಡು, ಚಂದ್ರಗಿರಿ ಹಾಗೂ ಈಶ್ವರಮಂಗಲ ವಲಯದವರಿಂದ ಗುರುಭಿಕ್ಷಾಸೇವೆ ನಡೆಯಿತು. ವಲಯಗಳ ಸಭೆಯಲ್ಲಿ ಈ ಮೂರೂ ವಲಯಗಳ ಸಮಗ್ರ ವಿಷಯಗಳನ್ನು ಶ್ರೀಪೀಠದ ಮುಂದಿಟ್ಟರು. ನೂತನ ಪದಾಧಿಕಾರಿಗಳನ್ನು  ಆಯ್ಕೆ ಮಾಡಲಾಯಿತು. ಶ್ರೀ ಕೆ ಸಿ ನಾಯಕ್ (ಮಹಾಬಲೇಶ್ವರ ಕನ್ ಸ್ಟ್ರಕ್ಷನ್ಸ್, ಮಂಗಳೂರು ಹಾಗೂ ಧರ್ಮದರ್ಶಿಗಳು, ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಶಕ್ತಿನಗರ), ಶ್ರೀ ಪ್ರಭಾಕರ ಭಟ್ ಕಲ್ಲಡ್ಕ (ಸಂಚಾಲಕರು, ಶ್ರೀರಾಮ ವಿದ್ಯಾಕೇಂದ್ರ, ಕಲ್ಲಡ್ಕ), ಶ್ರೀಮಠದ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ, ಶುಕ್ರಾರ್ಕದಶಾ ಸಂಧಿಶಾಂತಿಗಳು, ಗಾನವಿದ್ಯಾಪ್ರದ ಚಿತ್ರಸೇನಾಗಂಧರ್ವ ಹವನ, ಗೋಪೂಜೆ, ಗೋತುಲಾಭಾರ, ಶ್ರೀರಾಮತಾರಕಯಜ್ಞ, ಶ್ರೀರಾಮಪೂಜೆ ನಡೆಯಿತು.

~

ಸಾಂಸ್ಕೃತಿಕ ಕಾರ್ಯಕ್ರಮಃ

ಕು. ಸ್ವಸ್ತಿಕ್ ಹಾಗೂ ಕು. ಸಾತ್ವಿಕಾ ಈಶ್ವರಮಂಗಲ ಇವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯಿತು. ವಯಲಿನ್ ನಲ್ಲಿ ಶ್ರೀಮತಿ ಜ್ಯೋತಿಲಕ್ಷ್ಮೀ ಅಮೈ ಹಾಗೂ ಮೃದಂಗದಲ್ಲಿ ಕು. ರಕ್ಷಾ ಸಹಕರಿಸಿದರು. ನಂತರದ ಗಾಯನದಲ್ಲಿ ಕು. ಸುಕೃತಿ ಭಟ್ ಸಾಮೆತ್ತಡ್ಕ ಕಾರ್ಯಕ್ರಮ ನೀಡಿದರು. ವಯಲಿನ್ ನಲ್ಲಿ ಶ್ರೀಮತಿ ಜ್ಯೋತಿಲಕ್ಷ್ಮೀ ಅಮೈ ಹಾಗೂ ಶ್ರೀ ಪ್ರಸನ್ನ ಎಸ್ ಬಲ್ನಾಡು ಸಹಕರಿಸಿದರು. ಸಂಗೀತ-ಕುಂಚ ಕಾರ್ಯಕ್ರಮದಲ್ಲಿ ಕು. ಸೀತಾಪ್ರಜ್ಞಾ ಹಾಗೂ ಕು. ಪ್ರದೀಶ್ ಕೆ ಭಟ್ ಶೃಂಗೇರಿ ಗಾನಚಿತ್ರ ಪ್ರದರ್ಶನ ನೀಡಿದರು. ಮೃದಂಗದಲ್ಲಿ ಶ್ರೀ ಪ್ರಭಾಕರ ಭಟ್ ಹಾಗೂ ವಯಲಿನ್ ನಲ್ಲಿ ಶ್ರೀಮತಿ ಜ್ಯೋತಿಲಕ್ಷ್ಮೀ ಅಮೈ ಸಹಕರಿಸಿದರು. ಕಲಾವಿದರಿಗೆ ಶ್ರೀ ಹೇರಂಭ ಶಾಸ್ತ್ರೀ, ಶ್ರೀ ಸಿ ಎಚ್ ಎಸ್ ಭಟ್ ಹಾಗೂ ಶ್ರೀ ನಾರಾಯಣ ಭಟ್ ಹಾರಕರೆ ಸ್ಮರಣಿಕೆ ಹಾಗೂ ಪ್ರಶಸ್ತಿಗಳನ್ನು ನೀಡಿದರು.

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~*~

Facebook Comments Box