ಬೆಂಗಳೂರು; ಅಕ್ಟೋಬರ್ ೨೫; ” ಸಂತ್ರಸ್ತರ ಬದುಕು ಹಾಗು ಜಾನುವಾರುಗಳ ಬದುಕು ಸಂಕಟಕ್ಕೆ ಸಿಲುಕಿರುವದಕ್ಕೆ ತಾವು ಅತಿಯಾಗಿ ನೊಂದಿದ್ದೀವೆ. ಅಂತವರು ಬದುಕಿನಲ್ಲಿ ಭರವಸೆ ಹಾಗು ಸಮಾದಾನ ಹೊಂದಿರುವಂತೆ ಮಾಡುವುದು ಉಳ್ಳವರ ಕರ್ತವ್ಯ, ಅದಕ್ಕಾಗಿ ಸಾವಿರ ಕಂಬಳಿ ನೀಡಲು ಯೋಚಿಸಿದ್ದು, ನಾಳೆ ಧಾರವಾಡದ ನೆರೆಪೀಡಿತ ಪ್ರದೇಶಕ್ಕೆ ಹೋಗುತ್ತಿದ್ದೇವೆ. ಉಳ್ಳವರ ಹಾಗು ಉದ್ಯಮಿಗಳ ನೆರವು ಪಡೆದು ಶಕ್ತಿಮೀರಿ ಆಶ್ರಯ ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದ್ದೇವೆ” ಎಂದು ಇಲ್ಲಿನ ಗಿರಿನಗರದಲ್ಲಿನ ಶ್ರೀ ಮಠದಲ್ಲಿ ತಮ್ಮನ್ನು ಭೇಟಿ ಮಾಡಿದ ರಾಜ್ಯದ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರಿಗೆ ಶ್ರೀ ಗಳವರು ಭರವಸೆ ನೀಡಿದರು.

Karnataka CM BSY with Swamiji

ಶ್ರೀ ಸ್ವಾಮೀಜಿಗಳೊಂದಿಗೆ ಮುಖ್ಯಮಂತ್ರಿಗಳು

ಸುಮಾರು ಇಪ್ಪತ್ತು ನಿಮಿಷಗಳ ಭೇಟಿಯಲ್ಲಿ  ಹಲವಾರು ವಿಷಯಗಳ ಕುರಿತು ಸಮಾಲೋಚಿಸಿದ ಮುಖ್ಯಮಂತ್ರಿಗಳು ಸಂತ್ರಸ್ತರ ಬದುಕಿನ ಹಲವಾರು ಚಿತ್ರಣವನ್ನು  ವಿವರಿಸಿದರು.  ಶ್ರೀಮಠದಿಂದ  ಈಗಾಗಲೇ ವಿತರಿಸಿದ ಮೇವಿನ ವಿಷ್ಯ ಹಾಗು ಕಾರ್ಯಕರ್ತರನ್ನು ನೆರೆಪೀಡಿತ ಪ್ರದೇಶಕ್ಕೆ ಕಳಿಸಿದ್ದನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು. ಶ್ರೀಮಠದ ವತಿಯಿಂದ ಸಮಾಜಮುಖಿಯಾಗಿ ನಡೆಯುವ ಅನೇಕ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ಸೂಚಿಸಿದ ಮುಖ್ಯಮಂತ್ರಿಗಳು ಶ್ರೀಗುರುಗಳಿಂದ ಆಶೀರ್ವಾದ- ಮಂತ್ರಾಕ್ಷತೆಯನ್ನು ಸ್ವೀಕರಿಸಿದರು.
ವರದಿ:
ಮಾಧ್ಯಮವಿಭಾಗ,
ಶ್ರೀ ರಾಮಚಂದ್ರಾಪುರ ಮಠ
Facebook Comments Box