ಭಾವ-ಭಜನೆ ಧ್ವನಿಮುದ್ರಿಕೆ (ಸಿ.ಡಿ)

ಗುರುವಾರ, ಜೂನ್ 2nd, 2011 - - 7 Comments

ಭಾವ-ಭಜನೆ

ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ – ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಭಜನೆಗಳು

ಸಾಹಿತ್ಯ: ಶ್ರೀ ತೆಕ್ಕೆಕೆರೆ ಸುಬ್ರಮಣ್ಯ ಭಟ್, ಶತಾವಧಾನಿ ಶ್ರೀ ಆರ್. ಗಣೇಶ್ (ವಾಲ್ಮೀಕಿ ವೇದವಂದ್ಯ), ಶ್ರೀಮತಿ ಪ್ರೇಮಲತಾ ದಿವಾಕರ್ (ಕುಸುಮದಾರತಿಯ), ಶ್ರೀಮತಿ ಸರಸ್ವತಿ ಹೆಗಡೆ (ರಾಮ ರಾಮ ಎನ್ನಿರೋ)
ರಾಗ ಸಂಯೋಜನೆ: ಶ್ರೀಮತಿ ಪ್ರೇಮಲತಾ ದಿವಾಕರ
ಗಾಯನ: ಶ್ರೀಮತಿ ಪ್ರೇಮಲತಾ ದಿವಾಕರ ಹಾಗು ‘ರಾಗಾಂಜಲಿ’ ಕಲಾಶಾಲೆಯ ವಿದ್ಯಾರ್ಥಿಗಳು
ವಾದ್ಯ ಸಹಕಾರ: ಶ್ರೀ ವೆಂಕಟೇಶ್ ಹಾಗು ವರುಣ್
ಧ್ವನಿಮುದ್ರಣ: ಶ್ರೀ ಅರವಿಂದ ಸ್ಟುಡಿಯೋ, ಹನುಮಂತನಗರ, ಬೆಂಗಳೂರು
ಸೇವೆ: ವಾಸಂತಿ ಹೆಗಡೆ, ಸೀತಾಲಕ್ಷ್ಮಿ ಹೆಗಡೆ, ಸುನಂದ ಹೆಗಡೆ, ಮಹಾದೇವಿ ಹೆಗಡೆ, ಮಹಾಲಕ್ಷ್ಮಿ ತಿಮ್ಮಪ್ಪ, ಗೀತಾ ಮಂಜಪ್ಪ

.

1. ಶ್ರೀ ಗಣೇಶ ವಿಘ್ನ ವಿನಾಶಾ

ಶ್ರೀ ಗಣೇಶ ವಿಘ್ನ ವಿನಾಶಾ |
ಕರುಣಿಸು ಸರ್ವೇಶಾ ದೇವಾ ||ಪ||

ಪಾವನ ಸಲಿಲ ಶರಾವತಿ ತೀರದ |
ರಾಮಚಂದ್ರಾಪುರ ಶ್ರೀ ಮಠದ ||
ರಾಘವೇಶ್ವರ ಶ್ರೀ ಮಹಾಗುರುವಿಗೆ |
ಕಾಮಿತವೀಯುವ ಶ್ರೀ ಗಣಪತಿಯೆ ||

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

.

2. ರಾಮನ ಭಜಿಸೊ ನಿರಂತರ

ರಾಮನ ಭಜಿಸೊ ನಿರಂತರ |
ಇಹ ಪರ ಗತಿಗಿದು ಮೂಲಾಧಾರ ||

ಭವಭಯರೋಗ ನಿವಾರಣಕಾರಿ |
ಆಜನ್ಮಾಂತರ ಪಾಪ ವಿದೂರಿ ||
ರಾಮಚಂದ್ರಾಪುರದಿ ಸನ್ನಿಧಿಯ ತೋರಿ |
ಶ್ರೀರಾಘವೇಶ್ವರ ಚಿತ್ತ ವಿಹಾರಿ ||

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

.

3. ಶ್ರೀರಾಮಚಂದ್ರೋ ದಯಾಲೋ ದಯಾಲೋ |

ಶ್ರೀರಾಮಚಂದ್ರೋ ದಯಾಲೋ ದಯಾಲೋ |
ಕಾರುಣ್ಯ ಸಿಂಧೋ ಕೃಪಾಲೋ ಕೃಪಾಲೋ ||
ಮಾರಾರಿ ಮಿತ್ರಹರಿ ಶ್ಯಾಮಲ ಶರೀರಿ |
ಶ್ರೀರಾಮ ಜಿತವೈರಿ ದಾಶರಥಿ ಶೌರಿ ||

ಉತ್ತಮೋತ್ತಮ ರೂಪ ಕಾರುಣ್ಯ ದೀಪ |
ಚಿತ್ತವಲ್ಲಭ ಭಕ್ತ ಜನ ಮಂದಹಾಸ ||
ಶ್ರೀರಾಮಚಂದ್ರಾಪುರ ರತ್ನದೀಪ |
ಶ್ರೀರಾಘವೇಶ್ವರನ ಅಮೂರ್ತ ರೂಪ ||

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

.

4. ದಯಮಾಡು ದಯಮಾಡು ಚಂದ್ರಮೌಳೀಶ

ದಯಮಾಡು ದಯಮಾಡು ಚಂದ್ರಮೌಳೀಶ
ಶ್ರೀರಾಮಚಂದ್ರಪುರ ಮಂದಿರ ನಿವಾಸ ||ಪ||

ರಾಜೇಶ್ವರೀಪ್ರೀತ ರಾಮಚಂದ್ರಸಮೇತ |
ರಾಗ ಸುಸ್ವರ ನಾಟ್ಯ ಸಂಗೀತ ಲೋಲ ||
ರಾಘವೇಶ್ವರ ಪೂಜಿತಾಂಘ್ರಿ ಕಮಲ ವಿಶೇಷ |
ರಾಜಶಂಕರ ನಿನಗೆ ಶರಣೆಂಬೆನಯ್ಯ ||

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

.

5. ಹನುಮನ ನೆನೆ ಮಾನಸವೆ

ನೆನೆ ನೆನೆ ನೆನೆ ನೆನೆ ನೆನೆ ಮಾನಸವೆ
ಹನುಮನನುದಿನ ನೆನೆ ಮಾನಸವೆ ||ಪ||

ರಾಮನ ಬಂಟನ ಲೋಕದ ನಂಟನ |
ಕಾಮಿತ ಫಲವೀವ ಸಂಜೀವರಾಯನ ||
ರಾಮಚಂದ್ರಾಪುರ ಶ್ರೀ ರಾಘವೇಶ್ವರ |
ಸ್ವಾಮಿಗಳನುದಿನ ಪೂಜಿಪ ವರದನ ||

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

.

6. ಪುಣ್ಯಕೋಟಿಯೆ ಪುಣ್ಯಕೋಟಿಯೆ

ಪುಣ್ಯಕೋಟಿಯೆ ಪುಣ್ಯಕೋಟಿಯೆ | ನಿನ್ನ ನೆನೆಯುವೆ ತಾಯಿಯೆ ||
ಘನ್ನವಾಗಿಹ ಕೋಟಿ ಪುಣ್ಯದ | ಚೆನ್ನ ಹಾದಿಯ ತೋರಿದೆ ||ಪ||

ನಿನ್ನನನುದಿನ ನೆನೆವ ರೈತನು | ಹೊನ್ನನೇ ತಾ ಬೆಳೆವನು |
ನನ್ನಿಯಲಿ ಗುರು ರಾಘವೇಶ್ವರನು | ಸನ್ಮತಿಯ ಹರಿಕಾರನು ||

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

.

7. ರಾಮ ರಾಮ ರಾಮ ರಾಮ ಪಾಹಿ

ರಾಮ ರಾಮ ರಾಮ ರಾಮ ಪಾಹಿ |
ರಾಮ ಕೋದಂಡರಾಮ ರಾಮ ಪಾಹಿ ||
ರಾಮ ಪಾಹಿ ಶ್ರೀರಾಮ ಪಾಹಿ |
ರಾಮಚಂದ್ರಾಪುರದ ರಾಮ ಪಾಹಿ ||

ಪಟ್ಟಾಭಿರಾಮ ಶ್ರೀ ಜಯರಾಮ |
ರಾಮಚಂದ್ರಾಪುರ ಸಂಸ್ಥಿತ ರಾಮ ||
ಶ್ರೀರಾಘವೇಶ್ವರಭಾರತೀ ರಾಮ |
ಜಯ ಜಯ ಜಯ ಜಯ ಮಂಗಳ ನಾಮ||

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

.

8. ಪಾಲಿಸೆಮ್ಮನು ತಾಯೆ ರಾಜೇಶ್ವರಿ

ಪಾಲಿಸೆಮ್ಮನು ತಾಯೆ ರಾಜೇಶ್ವರಿ |
ಶ್ರೀರಾಜರಾಜೇಶ್ವರಿ ||
ನಿರುತ ನಂಬಿದೆ ನಿನ್ನ ಕರುಣದಿ ಪೊರೆಯೆಮ್ಮ |
ದುರಿತ ದೂರವ ಮಾಡಿ ಹರುಷವ ನೀಡುತ್ತ ||

ರಾಮಚಂದ್ರಾಪುರ ಶ್ರೀ ರಾಘವೇಶ್ವರ |
ನಿಜಕರ ಪೂಜಿತೆ ಸುಜನ ಶಂಕರಿಯೆ ||

ಶ್ರೀರಾಘವೇಶ್ವರ ಕೀರ್ತನ ಶಂಕರಿ |
ಜಗದಧಿದೇವತೆ ಭಕುತರ ಪಾಲಿಸೆ ||

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

.

9. ಕಾಯೌ ಗೋಮಾತೆ ಜಗವನು ಕಾಯೌ ಗೋಮಾತೆ

ಕಾಯೌ ಗೋಮಾತೆ ಜಗವನು ಕಾಯೌ ಗೋಮಾತೆ |
ಕಾಮಧೇನು ಕುಲ ಸಂವರ್ಧಿನಿಯೇ ಕಾಯೌ ಗೋಮಾತೆ ||ಪ||

ಅನ್ನೌಷಧ ಸವಿ ಅಮೃತ ನೀಡುವ | ಅನ್ನಪೂರ್ಣೆ ನೀನೆ ||
ನಿನ್ನ ಹೊರತು ಎಮ್ಮನ್ನು ಸಲಹುವರ ಅನ್ಯರ ನಾ ಕಾಣೆ ||

ನಿನ್ನುಳಿದೆಮ್ಮಯ ದಿನ ಬಲು ಬನ್ನವು | ಸನ್ಮುನಿ ಪೂಜಿತಳೇ ||
ಸನ್ನುತ ಗುರು ಶ್ರೀ ರಾಘವೇಶ್ವರನ | ಸಂಪನ್ನ ಸಮ್ಮಾನಿತಳೇ ||

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

.

10. ವಾಲ್ಮೀಕಿ ವೇದ ವಂದ್ಯ

ವಾಲ್ಮೀಕಿ ವೇದ ವಂದ್ಯ | ವಾತಾತ್ಮಜಾಭಿನಂದ್ಯ ||
ಆದರ್ಶ ರಾಜ್ಯಪಾಲ | ಅಸ್ತೋಭ ಸಾಧುಶೀಲ ||

ಆಲೇಖ್ಯ ರಮ್ಯ ರೂಪ | ಆತ್ಮೀಯ ಭಾವದೀಪ ||
ಸೀತಾನುರಾಗ ಸಾಂದ್ರ | ಶ್ರೀ ರಾಮ ರಾಮಚಂದ್ರ ||

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

.

11. ಶಂಕರ ಶಂಕರ ಆದಿಗುರೊ

ಶಂಕರ ಶಂಕರ ಆದಿಗುರೊ | ಜಯ ರಾಘವೇಶ್ವರ ಜಗದ ಗುರೊ ||
ಶಂಕರ ಶಂಕರ ಈಶಗುರೊ | ಜಯ ರಾಘವೇಶ್ವರ ರಾಜ ಗುರೊ ||

ಶಂಕರ ಶಂಕರ ಭಗವತ್ಪಾದ | ಜಯ ರಾಘವೇಶ್ವರ ಶ್ರೀಪಾದ ||
ಶಂಕರ ಶಂಕರ ಶಿವರೂಪ | ಜಯ ರಾಘವೇಶ್ವರ ಭವನಾಶ ||
ಶಂಕರ ಶಂಕರ ಪರಮೇಶ | ಜಯ ರಾಘವೇಶ್ವರ ಯೋಗೇಶ ||

ಶಂಕರ ಶಂಕರ ಸ್ವಾನುಭವ| ಜಯ ರಾಘವೇಶ್ವರ ನೀಡಭಯ ||
ಶಂಕರ ಶಂಕರ ಗುರುರಾಜ | ಜಯ ರಾಘವೇಶ್ವರ ರವಿತೇಜ ||
ಶಂಕರ ಶಂಕರ ಶಾಸ್ತ್ರನುತ | ಜಯ ರಾಘವೇಶ್ವರ ಭಕ್ತನುತ ||

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

.

12. ರಾಮ ರಾಮ ಎನ್ನಿರೋ

ರಾಮ ರಾಮ ಎನ್ನಿರೋ
ಇಂಥ ಸ್ವಾಮಿಯ ನಾಮವ ಮರೆಯದಿರೋ ||ಪ||

ದಶರಥ ನಂದನ ರಾಜಾರಾಮ
ದಶಶಿರ ಭಂಜನ ಸೀತಾರಾಮ
ದೀನೋದ್ಧಾರ ರಾಜಾರಾಮ
ದಿನಕರ ತೇಜ ಸೀತಾರಾಮ

ಅಯೋಧ್ಯ ಒಡೆಯ ರಾಜಾರಾಮ
ಅಸುರ ಸಂಹಾರಕ ಸೀತಾರಾಮ
ಅಹಲ್ಯೆ ಶಾಪ ವಿಮೋಚನ ರಾಮ
ಅಗಣಿತ ಗುಣಮಣಿ ಸೀತಾರಾಮ

ಕರುಣಾ ಸಾಗರ ರಾಜಾರಾಮ
ಕೋಮಲ ಹೃದಯ ಸೀತಾರಾಮ
ಕೌಸಲ್ಯತನಯ ರಾಜಾರಾಮ
ಕೋದಂಡರಾಮ ಸೀತಾರಾಮ

ಭಕುತ ರಕ್ಷಕ ರಾಜಾರಾಮ
ಭವಭಯ ಹರಣ ಸೀತಾರಾಮ
ಪುರಜನ ವಂದಿತ ರಾಜಾರಾಮ
ಭಕ್ತಿಯ ನೀಡೋ ಸೀತಾರಾಮ

ಆಪದ್ಭಾಂದವ ರಾಜಾರಾಮ
ಆಶ್ರಿತ ರಕ್ಷಕ ಸೀತಾರಾಮ
ಆನಂದ ಮೂರುತಿ ರಾಜಾರಾಮ
ಆತ್ಮಾನಂದ ಸೀತಾರಾಮ

ರಘುಕುಲ ತಿಲಕ ರಾಜಾರಾಮ
ರಕ್ಷಿಪ ಭಜಕರ ಸೀತಾರಾಮ
ರಮಾರಮಣ ರಾಜಾರಾಮ
ರಂಜಿಪ ಮನವನು ಸೀತಾರಾಮ

ಕಾಮಧೇನುವಿನ ಪುತ್ರಿ ಪ್ರಸಾದಿತ
ರಘುವಂಶ ಚಂದ್ರ ರಾಜಾರಾಮ
ಗೋವಂಶ ಮಹಿಮೆಯ ಸುಂದರ ಕಥೆಯೆ
ರಾಘವರಾಮ ಮಹಾಮಹಿಮ

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

.

13. ಪಾಹಿ ಜಗಜ್ಜನನಿ ಭವಾನಿ

ಪಾಹಿ ಜಗಜ್ಜನನಿ ಭವಾನಿ ದೇವಿ |
ಪಾಹಿ ಜನನಿ ಶ್ರೀರಾಜರಾಜೇಶ್ವರಿ ||ಪ||

ಶ್ರೀಶರಾವತಿ ತಟಿ ವಿಲಾಸಿನಿ |
ರಾಮಚಂದ್ರಾಪುರ ನಿವಾಸಿನಿ ||
ರಾಘವೇಶ್ವರಭಾರತೀ ಕರಕಮಲ |
ಸೇವಾಮೋದಿನಿ ದೇವೀ ಭವಾನಿ ||

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

.

14. ಕುಸುಮದಾರತಿಯ ಬೆಳಗೀರೇ ಕೋದಂಡರಾಮನಿಗೆ

ಕುಸುಮದಾರತಿಯ ಬೆಳಗೀರೇ ಕೋದಂಡರಾಮನಿಗೆ |
ಮುತ್ತಿನ ಆರತಿಯ ಬೆಳಗೀರೇ ಶ್ರೀರಾಮಚಂದ್ರನಿಗೆ ||ಪ||

ಜ್ಞಾನಮಯ ಶ್ರೀರಾಮನಿಗೆ | ಪ್ರೇಮಮಯ ಶ್ರೀರಾಮನಿಗೆ ||
ಕಾಮಿತಾರ್ಥಗಳ ಈವನಿಗೆ | ಕಾಮಪಿತ ಶ್ರೀರಾಮನಿಗೆ ||

ದಶರಥಾತ್ಮಜ ರಾಮನಿಗೆ | ದೀನರಕ್ಷಕ ರಾಮನಿಗೆ ||
ಕುಶಿಕಮುನಿಪ್ರಿಯ ರಾಮನಿಗೆ | ಪಿತೃವಾಕ್ಯ ಪರಿಪಾಲನಿಗೆ ||

ಕ್ಷಾಮಹಾರಕ ರಾಮನಿಗೆ | ಕ್ಷೇಮದಾಯಕ ರಾಮನಿಗೆ ||
ಹನುಮನೊಡೆಯ ಸುರಸುಂದರಗೆ | ಭವಬಂಧನಹರ ಚಂದಿರಗೆ ||

ನಾಮಸಾಸಿರವುಳ್ಳ ನಿತ್ಯಾತ್ಮಗೆ | ಕಾರುಣ್ಯ ಮೂರುತಿ ಲಾವಣ್ಯಗೆ ||
ಧರ್ಮಾತ್ಮ ಧರಣೀಶ ಶ್ರೀರಾಮಗೆ | ಅಘನಾಶ ರವಿವಂಶ ಸೋಮನಿಗೆ ||

ಘನವಂತ ಗುಣವಂತ ಧೀಮಂತಗೆ | ಶಾಂತ ಮೂರುತಿ ಶ್ರೀರಾಮಗೆ |
ಶಬರಿಯ ಪ್ರೀತಿಗೆ ಸೋತವಗೆ | ಪರಮ ಗಂಭೀರಗೆ ದೇವನಿಗೆ ||

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

.

  • http://hareraama.in/members/ravipriya/ RAVINDRA BHATT T L

    ಪಾವನ ಸಲಿಲ ಶರಾವತಿ ತೀರದ ಶ್ರೀ ರಾಮಚಂದ್ರಾಪುರದ ಶ್ರೀ ರಾಘವೇಶ್ವರ ಗುರು ಸನ್ನಿಧಿಯ ತೋರಿ,
    ಕಾಮಿತವೀಯುವ ಗಣಪತಿಗೆ ವಂದಿಸುತ,
    ಹನುಮನ ನೆನದು ಮಾನಸದಿ,
    ಆತ್ಮೀಯ ಭಾವದೀಪ
    ರಾಮಚಂದ್ರ ದಯಾಳುವಿಗೂ,
    ಶ್ರೀ ರಾಘವೇಶ್ವರ ಕೀರ್ತನ ಶಂಕರಿ
    ಜಗದಂಬೆ ಭವಾನಿ ಶ್ರೀ ರಾಜ ರಾಜೇಶ್ವರಿಗೂ,
    ಶ್ರೀ ರಾಘವೇಶ್ವರ ಪೂಜಿತಾಂಘ್ರಿ ರಾಜಶಂಕರ ಶ್ರೀ ಚಂದ್ರಮೌಳೀಶ್ವರಗೂ,
    ಕುಸುಮದಾರತಿಯ ಬೆಳಗುತ,
    ಅನ್ನೌಷಧದ ಸವಿ ಅಮೃತವ ನೀಡುವ ಪುಣ್ಯಕೋಟಿಯ ನೆನೆಯುವೆ.

    ಎಲ್ಲಾ ಹಾಡುಗಳೂ – ಗೀತಗುಚ್ಚವಾಗಿಯೂ, ಸಂಗೀತಗುಚ್ಚವಾಗಿಯು ಸುಮದುರವಾಗಿ ಮೂಡಿಬಂದಿವೆ. ಅದನ್ನು ಜಗಕ್ಕಿತ್ತ ತಾಯಿಂದರೆಲ್ಲರಿಗೂ ನನ್ನ ನಮನಗಳು.

    ನನಗೆ ಆಪ್ಯಾಯಮಾನವಾಗಿ ಮತ್ತೆ ಮತ್ತೆ ಕಾಡಿದ್ದು ಈ ಕೆಳಗಿನ ಸಾಲುಗಳುಃ-
    ” ನಿನ್ನನನುದಿನ ನೆನೆವ ರೈತನು। ಹೊನ್ನನೇ ತಾ ಬೆಳೆವನು।
    ನನ್ನಿಯಲಿ ಗುರು ರಾಘವೇಶ್ವರ । ಸನ್ಮತಿಯ ಹರಿಕಾರನು॥

    ಕವಿ ಹೃದಯಕೆ ನನ್ನೀ ನಮನ…………

  • Jayashree Neeramoole

    ಗುರುಚರಣಗಳಿಗೆ ಅನಂತ ಪ್ರಣಾಮಗಳು…

    ಎಲ್ಲರಿಗೂ ಅನಂತಾನಂತ ಧನ್ಯವಾದಗಳು…

  • http://hareraama.in/members/manglurmani/ ಮಂಗ್ಳೂರ ಮಾಣಿ…

    ಭಜನೆಗಳನ್ನು ಕೇಳಿ ತುಂಬಾ ಸಂತೋಷವಾಯಿತು :)
    ಧನ್ಯವಾದ.

    • http://hareraama.in/members/khegde/ Krishnamurthy Hegde

      ಭಜನೆಗಳನ್ನು ಆನಂದಿಸಿದ ಎಲ್ಲರಿಗೂ ಧನ್ಯವಾದಗಳು…

      ಇದನ್ನು ಇನ್ನೂ ಹೆಚ್ಛು ಉಪಯುಕ್ತಗೊಳಿಸಲು ನಿಮ್ಮ ಸಲಹೆಗಳಿದ್ದರೆ ಅವುಗಳಿಗೆ ಸ್ವಾಗತ.

      –”ಹರೇ ರಾಮ” ತಂಡದ ಪರವಾಗಿ

  • Anuradha Parvathi

    ಅದ್ಭುತ ಭಜನೆಗಳು. ನನ್ನ ಎರಡೂ ಮಕ್ಕಳ all time favourite. ಈ ಭಜನೆಗಳನ್ನು ಬರೆದ, ರಾಗ ಸಂಯೋಜಿಸಿದ ಹಾಗೂ ಹಾಡಿದ ಎಲ್ಲರಿಗೂ ಹೃದಯ ಪೂರಕ ಧನ್ಯವಾದಗಳು.

  • http://hareraama.in/members/rnarayana/ Raghavendra Narayana

    “ಶ್ರೀರಾಮಚಂದ್ರೋ ದಯಾಲೋ ದಯಾಲೋ” and few other Bhajans says “File Not Found”.
    Can it be fixed please?
    .
    Shri Gurubhyo Namaha.

  • Praveenpadukare

    ಗುರುಚರಣಗಳಿಗೆ ಅನಂತ ಪ್ರಣಾಮಗಳು

    ಈ ಭಜನೆಗಳನ್ನು ಬರೆದ, ರಾಗ ಸಂಯೋಜಿಸಿದ ಹಾಗೂ ಹಾಡಿದ ಎಲ್ಲರಿಗೂ ಹೃದಯ ಪೂರಕ ಧನ್ಯವಾದಗಳು.
    I want one bahajana that is

    Hare rama rama namo megha shyaama,
    sadaa needu kshema prabho saarva bhouma,
    raja rama.

    If you have the same with you kindly update here..
    With Regards,
    Praveen

Powered By Indic IME