ಜಗತ್ತಿನ ಅತಿದೊಡ್ಡ ರಥದ ವೀಕ್ಷಣೆ ಹಾಗೂ ಶಿಲ್ಪಪೂಜಾ ಕಾರ್ಯಕ್ರಮದಲ್ಲಿ ಶ್ರೀಗಳವರು ದಿವ್ಯಸಾನಿಧ್ಯವಿತ್ತು ರಾಜಶೇಕರ್ ಹೆಬ್ಬಾರ್ ಮತ್ತು ಕುಟುಂಬದವರಿಗೆ ಆಶೀರ್ವದಿಸಿದರು..

ಈ ಬ್ರಹಧೃಥವನ್ನು ಬಾದಾಮಿ ತಾಲೂಕಿನ ಶಿವಯೋಗ ಮಂದಿರದ ಶತಮಾನೋತ್ಸವಕ್ಕೆ ಶ್ರೀ ಡಿಸೈನ್ ನ ರಾಜಶೇಖರ ಹೆಬ್ಬಾರ್ ರವರು ಕೇವಲ ಐದುತಿಂಗಳಿನಲ್ಲಿ ಸುಮಾರು ೪೫೦೦೦ ಕಿ.ಗ್ರಾಂ ತೂಕವಿರುವ ಜಗತ್ತಿನ ಅತೀ ಎತ್ತರದ (೬೫ ಅಡಿ) ಏಕಾಹ ರಥವನ್ನು ನಿರ್ಮಿಸಿರುತ್ತಾರೆ..

ಈ ರಥವು ವರ್ಷದ ಪ್ರತೀಕವಾಗಿ ಒಂದು ಕಳಶ ,ಉತ್ತರಾಯನ – ದಕ್ಷಿಣಾಯನಗಳ ಸಂಕೇತವಾಗಿ ಎರಡು ಗೋಪುರಗಳು..
೧೨ ರಾಶಿಗಳ ಪ್ರತೀಕವಾಗಿ ೧೨ ಶರಣರ ಪ್ರತಿಮೆಗಳು.. ಕರುನಾಡಿನ ಶಿಲ್ಪಕಲಾ ವೈವಿಧ್ಯದ ಸ್ಮರಣೆಗೊಸ್ಕರ ಚಾಲುಕ್ಯ, ಹೊಯ್ಸಳ, ಬಹುಮನಿ ಮಂತಾದ ಶಿಲ್ಪಪ್ರಾಕಾರಗಳನ್ನೊಳಗೊಂಡಿರುತ್ತದೆ..

ಕಾರ್ಯಕ್ರಮಕ್ಕೆ ಪೇಜಾವರದ ಶ್ರೀವಿಶ್ವೇಶ ತೀರ್ಥ ಶ್ರೀಪಾದರು ಹಾಗೂ ಹೊರನಾಡಿನ ಶ್ರೀ ಭೀಮೇಶ್ವರ ಜೋಷಿ, ಉಡುಪಿಯ ಡಾ|| ವಿಜಯ್ ಬಲ್ಲಾಳ್ ಮುಂತಾದವರು ಆಗಮಿಸಿದ್ದರು..

ರಥ ವೀಕ್ಷಣೆಗೂ ಸ್ವಲ್ಪ ಮುನ್ನ ಪೆರ್ಡೂರಿನ ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ ಚಿತ್ತೈಸಿ ಪ್ರಭುವಿನ ದರ್ಶನವನ್ನು ಶ್ರೀಗಳು ಪಡೆದರು.

Facebook Comments