ಪೆರಾಜೆ-ಮಾಣಿ ಮಠಃ1.8.2013,  ಗುರುವಾರ

ಇಂದಿನ ದಿನ ಶ್ರೀ ನಾರಾಯಣ ಭಟ್ ಹಾರಕರೆಯವರ ಗುರುಭಿಕ್ಷಾಸೇವೆಯನ್ನು ನಡೆಸಿದರು.  ಶ್ರೀಗುರುಗಳ  ಕರಕಮಲಗಳಿಂದ  ಸಂಪನ್ನಗೊಂಡ  ಶ್ರೀರಾಮಾದಿ  ದೇವರುಗಳ  ಪೂಜೆಯ  ಬಳಿಕ  ಮಹಿಳೆಯರಿಂದ  ಕುಂಕುಮಾರ್ಚನೆ  ನಡೆಯಿತು.  ಶ್ರೀಕೃಷ್ಣ ಭಟ್ ಮತ್ತು ಪವಿತ್ರ ಗಂಗಾ ಸರವು, ಕೆ ಎಸ್ ಗುರುಮೂರ್ತಿ ಶಿಕಾರಿಪುರ  ಶಿವಮೊಗ್ಗ, ಕಲ್ಪನಾಜಿ, ಶ್ರೀ ಗೋಪಿನಾಥ ಶೆಟ್ಟಿ ಹಾಗೂ ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ ವೃಂದ ಪುತ್ತೂರು, ಹಾಗೂ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಯಾಗಶಾಲೆಯಿಂದಃ

ಆಂಜನೇಯ ಹವನಗಳು, ಆಂಜನೇಯನಿಗೆ ಸೀಯಾಳಾಭಿಷೇಕ, ಹನುಮನಿಗೆ ಇಂದಿನ ವಿಶೇಷ ಅಲಂಕಾರ – ಹೂವಿನ ಕಣಜ ಸೇವೆ ನಡೆಯಿತು.
ಗೋತುಲಾಭಾರ, ಗೋಪೂಜೆ, ಶ್ರೀರಾಮಪೂಜೆ, ಶ್ರೀರಾಮತಾರಕ ಯಜ್ಞ,  ಸಮಗ್ರ ಯಜುರ್ವೇದ ಪಾರಾಯಣ ನಡೆಯಿತು.
ಪಾದಪೂಜೆ:
ಶ್ರೀ. ಅಮೈ ವಸಂತಕುಮಾರ, ಶ್ರೀ. ಶ್ರೀಧರ ಭಟ್, ಸುರತ್ಕಲ್

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥೆಃ

ಈ ದಿನದ ರಾಮಕಥೆ ಶ್ರೀಗುರುಸ್ಮರಣೆಯೊಂದಿಗೆ ಆರಂಭವಾಯಿತು. ಶ್ರೀಗುರುಗಳು ಸಪರಿವಾರ ಶ್ರೀರಾಮನಿಗೆ ಆಂಜನೇಯನಿಗೆ ಪುಷ್ಪನಮನ ಸಲ್ಲಿಸಿ ರಾಮಕಥೆಯನ್ನು ಪ್ರಾರಂಭಿಸಿದರು.
ವಾಲಿ-ಸುಗ್ರೀವರ  ಕಥೆಯನ್ನು ಮುಂದುವರಿಸಿದ ಶ್ರೀಗುರುಗಳು ಮಾಯಾವಿಯನ್ನು ಕೊಲ್ಲಲು ವಾಲಿಯು ಗುಹಾಪ್ರವೇಶ ಮಾಡಿದ್ದ ಸಮಯದಲ್ಲಿ ಸುಗ್ರೀವ ಗುಹೆಯ ಬಾಗಿಲಿನಲ್ಲಿ ಬಂಡೆ ಇಟ್ಟು ಬಂದ ಕಥೆಯನ್ನು ಮುಂದುವರಿಸುತ್ತಾ ಗುಹೆಯಿಂದ  ಹೊರಬಂದ ವಾಲಿ, ಸುಗ್ರೀವನನ್ನು ಅರಮನೆಯಿಂದ, ರಾಜ್ಯದಿಂದ ಹೊರಗಟ್ಟುತ್ತಾನೆ. ವಾಲಿ, ಸುಗ್ರೀವನನ್ನು ಎಲ್ಲಿಯೂ ನಿಲ್ಲಲು ಬಿಡದೆ ಲೋಕವನ್ನೆಲ್ಲ ಸುತ್ತಿಸುತ್ತಾನೆ. ಸುಗ್ರೀವನೊಂದಿಗೆ ನಳ, ನೀಲ, ತಾರ, ಹನುಮಂತರೂ ಓಡುತ್ತಾರೆ. ಇಡೀ ಭೂಮಂಡಲವನ್ನು ಸುತ್ತಿ ಕೊನೆಗೆ ವಾಲಿಗೆ ಗುರುಶಾಪವಿದ್ದ ಮಾತಂಗಋಷಿಯ ಆಶ್ರಮಕ್ಕೆ ಹೋಗಿ ರಕ್ಷಣೆ ಪಡೆಯುತ್ತಾರೆ. ಋಷ್ಯಮೂಕದಲ್ಲಿ ಇರುವ ಸಮಯದಲ್ಲಿ ರಾವಣ ಸೀತೆಯನ್ನು ಅಪಹರಿಸುತ್ತಿರುವುದನ್ನು ಕಣ್ಣಾರೆ ಕಂಡರೂ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದರು. ಸೀತೆ ಹನುಮನನ್ನು ಕಂಡ ಆ ಕ್ಷಣದಲ್ಲಿ ತಾನು ಧರಿಸಿದ ತನ್ನ ಚಿನ್ನವನ್ನೆಲ್ಲ ಬಟ್ಟೆಯಲ್ಲಿ ಕಟ್ಟಿ ಹನುಮಂತನೆಡೆಗೆ ಎಸೆಯುತ್ತಾಳೆ. ಈ ಕಥಾನಕದೊಂದಿಗೆ, ಜೈ ಜೈ ರಾಮಕಥಾ ಇಂದಿನ ರಾಮಕಥೆ ಪರ್ಯಾವಸಾನವಾಯಿತು.ಇಂದಿನ ದಿನದ ಪ್ರಾಯೋಜಕತ್ವವನ್ನು ಶ್ರೀಮೋಹನದಾಸ ಶೆಟ್ಟಿ, ದಾಸ್ ಎಸೋಸಿಯೇಟ್ಸ್ ಮಂಗಳೂರು ಇವರು ವಹಿಸಿದ್ದರು. ಶ್ರೀ ನಳಿನ್ ಕುಮಾರ್ ಕಟೀಲ್ ಎಮ್.ಪಿ ಮಂಗಳೂರು, ಶ್ರೀ ಸಂಜೀವ ಮಠಂದೂರು ಸಭೆಯಲ್ಲಿ ಉಪಸ್ಥಿತರಿದ್ದರು.

~

Facebook Comments