LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

1- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಏಕಾದಶೀ

Author: ; Published On: ರವಿವಾರ, ಸೆಪ್ಟೆಂಬರ 1st, 2013;

Switch to language: ಕನ್ನಡ | English | हिंदी         Shortlink:

ಪೆರಾಜೆ-ಮಾಣಿ ಮಠಃ 1.9.2013, ಆದಿತ್ಯವಾರ

ಇಂದು ಏಕಾದಶೀ. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಶ್ರೀ ಎನ್ ಎನ್ ಕಿಣಿ ದೂರದರ್ಶನ ಚಂದನ, ಶ್ರೀ ಶಾಂತಾರಾಮ ಶೆಟ್ಟಿ ವಿಟ್ಲ, ಶ್ರೀ ಅನಂತಪ್ರಸಾದ್ ವಿಟ್ಲ, ಶ್ರೀ ದಯಾನಂದ ಕೊಡಂಗೆ, ಶ್ರೀ ರಾಮದಾಸ ಶೆಣೈ ವಿಟ್ಲ, ಶ್ರೀ ಪ್ರಮೋದ್ ಕುಮಾರ್ ರೈ ಪೂರ್ವ ನಿರ್ದೇಶಕರು ಕ್ಯಾಂಪ್ಕೋ, ಶ್ರೀ ಬಾಲಕೃಷ್ಣ ಶೆಟ್ಟಿ ಬೆಳ್ತಂಗಡಿ, ಶ್ರೀ ಭುಜಬಲಿ ಧರ್ಮಸ್ಥಳ, ಡಾ. ಶ್ರೀಪತಿ ರಾವ್, ಡಾ ಸುಧಾ ರಾವ್ ಪುತ್ತೂರು, ಶ್ರೀ ಶಿವಪ್ರಸಾದ ಕಾರ್ಯದರ್ಶಿಗಳು ವಿವೇಕಾನಂದ ವಿದ್ಯಾವರ್ಧಕ ಸಂಘ, ಶ್ರೀ ಜಯರಾಮ ಆಚಾರ್ ಪುತ್ತೂರು, ಶ್ರೀ ಪ್ರದೀಪ್ ಕಲ್ಕೂರ ಅಧ್ಯಕ್ಷರು ಕ.ಸಾ.ಪ, ಶ್ರೀ ಪಿ ಜಯರಾಮ ಕೃಷ್ಣ ಪೊಳಲಿ, ಶ್ರೀ ಜಯರಾಮ ತುಂಬೆ, ಶ್ರೀ ಗೋಪಾಲಕೃಷ್ಣ ತುಂಬೆ ಶ್ರೀ ಗುರುಗಳಿಂದ ಆಶೀರ್ವಾದ ಪಡೆದರು.

~

ಯಾಗಶಾಲೆಯಿಂದಃ

ತ್ರಿಕಾಲ ಪೂಜೆ, ಗಣಪತಿ ಹವನ, ಬಾಲಗಣಪತಿ ಹವನ, ಆಂಜನೇಯ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ, ಶ್ರೀರಾಮಪೂಜೆ, ಶ್ರೀರಾಮತಾರಕಯಜ್ಞ, ಗೋಪೂಜೆಗಳು ನಡೆದವು.

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥೆಃ

ಶ್ರೀಗುರುಗಳು ಸಪರಿವಾರ ಶ್ರೀರಾಮನಿಗೆ ಹಾಗೂ ಹನುಮನಿಗೆ ಪೂಜೆ ಸಲ್ಲಿಸಿ ವಿಜಯ ಚಾತುರ್ಮಾಸ್ಯದ ಮೂರನೇ ಹಾಗೂ ಅಂತಿಮ ಚರಣದ ರಾಮಕಥೆಯನ್ನು ಪ್ರಾರಂಭಿಸಿದರು. ಹನುಮ ಲಂಕೆಗೆ ಮಹೇಂದ್ರಪರ್ವತದಿಂದ ಹಾರಿ ಹೋದ ಘಟನೆಯಿಂದ ಪ್ರಾರಂಭಿಸಿದ ಪ್ರವಚನವು ಹನುಮ ರಾಮನ ಬಾಣನೇ ಆಗಿ ಲಂಕೆಗೆ ಧಾವಿಸಿದ ಎಂದು ವರ್ಣಿಸಿದರು. ಮಹೇಂದ್ರಕಾನನದ ಮರಗಿಡಗಳು ಹನುಮನನುಸರಿಸಿದವು ಎಂದು ಹನುಮ ಸಾಗಿದ ದಾರಿಯಲ್ಲಿ ಆದ ಘಟನೆಗಳನ್ನು ವಿವರವಾಗಿ ತಿಳಿಸಿದರು. ನಂತರ ದಾರಿ ಮಧ್ಯದಲ್ಲಿ ಮೈನಾಕ ಹನುಮನಿಗೆ ನೆರವಾಗಲು ಬಯಸಿದ ಕಥೆಯನ್ನು ಹೇಳುತ್ತಾರೆ. ಬಹಳ ಕಾಲ ಮೊದಲು ಹಾರುವ ಪರ್ವತಗಳ ಅಹಂಕಾರವನ್ನು ಕಳೆಯಲು ಇಂದ್ರ ವಜ್ರಾಯುಧವನ್ನು ಪ್ರಯೋಗಿಸುವಾಗ ಹನುಮನ ತಂದೆ ಮಾರುತ ಮೈನಾಕವನ್ನು ಎತ್ತಿ ಕೊಂಡೊಯ್ದು ಸಾಗರದಲ್ಲಿ ಮುಳುಗಿಸಿ ಇಂದ್ರನ ಪೆಟ್ಟಿನಿಂದ ತಪ್ಪಿಸುತ್ತಾನೆ. ಈ ಸಹಾಯವನ್ನು ನೆನೆಸಿ ಮೈನಾಕ ಹಾರುವ ಹನುಮನನ್ನು ಕೊಂಚ ವಿಶ್ರಮಿಸಿ, ತನ್ನ ಸೇವೆಯ ಅವಕಾಶವನ್ನು ಕೋರುತ್ತಾನೆ. ಶ್ರೀಗುರುಗಳ ಪ್ರವಚನದ ಸಾರವನ್ನು ರಾಮಕಥಾ ಕಲಾವಿದರ ತಂಡ ರೂಪಕದಲ್ಲಿ ಪ್ರಸ್ತುತ ಪಡಿಸಿತು. ಜೈ ಜೈ ರಾಮಕಥಾದೊಂದಿಗೆ ಇಂದಿನ ರಾಮಕಥೆ ಪರ್ಯವಸಾನವಾಯಿತು. ಇಂದಿನ ರಾಮಕಥೆಯ ಪ್ರಾಯೋಜಕರು ಶ್ರೀಗುಣವಂತೇಶ್ವರ ಕಾರ್ಕಳ, ಸಂಪತ್ತಿಲ ಡಾ. ಮಹಾಲಿಂಗ ಭಟ್ ಹಾಗೂ ಡಾ. ಲತಾ ಭಟ್. ಸಹಪ್ರಾಯೋಜಕರು ಶ್ರೀ ಆಚಳ್ಳಿ ಶಂಕರನಾರಾಯಣ ಶಾಸ್ತ್ರಿಗಳು, ನೂಚಿಲ ಸುಬ್ರಹ್ಮಣ್ಯ.  ಉಪ್ಪಿನಂಗಡಿ ವಲಯದವರು ರಾಮಕಥೆಯನ್ನು ಸಹಪ್ರಾಯೋಜಿಸಿದರು, ವಲಯದ ಪರವಾಗಿ ಶ್ರೀ ಮುಣ್ಚಿಕಾನ ವೆಂಕಟ್ರಮಣ ಭಟ್ ಉಪ್ಪಿನಂಗಡಿ ಶ್ರೀರಾಮಾಯಣ ಗ್ರಂಥಕ್ಕೆ ಪುಷ್ಪಾರ್ಚನೆ ಮಾಡಿದರು.

~

1 Response to 1- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಏಕಾದಶೀ

  1. DATTU, DOMBIVLI

    Hareraama,

    The subject of Sri Ramakatha started from 1st September in Mani Matha recollects the sweet memories of Dombivli Ramakatha days. Because the subject is same, offcourse, language is different.

    Dattu, Dombivli

    [Reply]

Leave a Reply

Highslide for Wordpress Plugin