ಪೆರಾಜೆ-ಮಾಣಿ ಮಠಃ10.8.2013, ಶನಿವಾರ

ಇಂದು ಟಿ. ಶ್ಯಾಮ ಭಟ್ ಬೆಂಗಳೂರು ಇವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳ ಶ್ರೀರಾಮಾದಿ ಪೂಜೆಗಳ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು.  ವೈದಿಕರ ಸಮಾವೇಶದಲ್ಲಿ ಶ್ರೀಗುರುಪೀಠದ ಬಹುತೇಕ ವೈದಿಕವರ್ಗ ಪಾಲ್ಗೊಂಡು ಸಮಾಜದಲ್ಲಿ ಈಗಿನ ಪಾಲ್ಗೊಳ್ಳುವಿಕೆಯ ಬಗ್ಗೆ ಚರ್ಚೆಗಳನ್ನು ನಡೆಸಿದರು. ಶ್ರೀ ಅಂಗಾರ ಶಾಸಕರು ಸುಳ್ಯ ಕ್ಷೇತ್ರ, ಶ್ರೀ ಟಿ ಶ್ಯಾಮ ಭಟ್ (ಬಿ ಡಿ ಎ ಆಯುಕ್ತರು, ಬೆಂಗಳೂರು), ಶ್ರೀ ಅಶೋಕ್ ಭಟ್ ಉಡುಪಿ,  ಶ್ರೀ ಸುಧೀರ್ ಕೆ ಜೋಷಿ ಚಾಮರಾಜಪೇಟೆ ಬೆಂಗಳೂರು, ಪತ್ರಕರ್ತರಾದ ಶ್ರೀ ಕಿಶೋರ್ ಕೆ ಮಂಗಳೂರು, ಶ್ರೀ ಲತೇಶ್ ಶೆಟ್ಟಿ ಪುತ್ತೂರು, ಶ್ರೀ ಹರೀಶ್ ಮಾಂಬಾಡಿ ಮಂಗಳೂರು, ಶ್ರೀ ನಿಶಾಂತ ಬಿಲ್ಲಂಪದವು ವಿಟ್ಲ ಹಾಗೂ ಶ್ರೀಮಠದ ಸರ್ವ ಪದಾಧಿಕಾರಿಗಳು, ವೈದಿಕ ವರ್ಗ ಸಭೆಯಲ್ಲಿ ಉಪಸ್ಥಿತರಿದ್ದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ, ಪಂಚದೇವತಾ ಯಜ್ಞ, ಏಕಾಕ್ಷರ ಗಣಪತಿ ಹವನ, ಶನೈಶ್ಚರ ವ್ರತ, ಗರುಡ ಪಂಚಾಕ್ಷರೀ ಜಪ, ಗೋಪೂಜೆ, ಗೋತುಲಾಭಾರ, ಶ್ರೀರಾಮ ಪೂಜೆ, ಶ್ರೀರಾಮತಾರಕ ಯಜ್ಞಗಳು ನಡೆದವು.
ಪಾದಪೂಜೆಃ

ನೆಲ್ಲಿಕಳಯ ವಿಶ್ವೇಶ್ವರ ಭಟ್, ಎಮ್ ಪಿ ಭಟ್ ವಕೀಲರು ಅಂಕೋಲ, ಶ್ರೀ ನಾರಾಯಣ ಶಾಸ್ತ್ರೀ ಚಕ್ರಕೋಡಿ ಮಂಗಳೂರು, ಶ್ರೀ ರಮೇಶ ಹೆಗಡೆ ಕೋರಮಂಗಲ ಬೆಂಗಳೂರು, ಶ್ರೀ ದತ್ತಾತ್ರೇಯ ವೆಂಕಪ್ಪ ಹೆಗಡೆ ಸಿದ್ಧಾಪುರ

~

ಸಾಂಸ್ಕೃತಿಕ ಕಾರ್ಯಕ್ರಮಃ

ವಿದುಷಿ ಶಾಲಿನಿ ಆತ್ಮಭೂಷಣ (ನೃತ್ಯೋಪಾಸನಾ ಕೇಂದ್ರ ಪುತ್ತೂರು) ಇವರ ಶಿಷ್ಯರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ನಟುವಾಂಗದಲ್ಲಿ ಶ್ರೀಮತಿ ಶಾಲಿನಿ, ಹಾಡುಗಾರಿಕೆಯಲ್ಲಿ ಶ್ರೀ ವಸಂತ ಗೋಪಾಡ, ಮೃದಂಗದಲ್ಲಿ ಶ್ರೀ ಗೀತೇಶ್ ಹಾಗೂ ವಯಲಿನ್ ನಲ್ಲಿ ಶ್ರೀ ಬಾಲರಾಜ್ ಸಹಕರಿಸಿದರು. ನೃತ್ಯದಲ್ಲಿ ಆಕರ್ಷ, ಶ್ರೀದೇವಿ, ಗೌತಮಿ, ಮಧುರಾ, ಅಪರ್ಣಾ, ಅನನ್ಯ, ಅನುಶ್ರೀ, ಶ್ರದ್ಧಾ, ಶ್ರೇಯಾ, ನಿಶಾ ಮತ್ತು ಮಹಿಮಾ ಕಾರ್ಯಕ್ರಮ ನೀಡಿದರು.

ಕಲಾವಿದರಿಗೆ ಶ್ರೀ ಸುಬ್ರಹ್ಮಣ್ಯ ಸೇರಾಜೆ ಸ್ಮರಣಿಕೆ ಹಾಗೂ ಪ್ರಶಸ್ತಿಯನ್ನು ನೀಡಿದರು. ಶ್ರೀ ಶಿವರಾಮ ಕಜೆ ಕಾರ್ಯಕ್ರಮ ನಿರ್ವಹಣೆಯನ್ನು ಮಾಡಿದರು.

ನಂತರ ನಡೆದ ಯಕ್ಷಗಾನ “ಅತಿಕಾಯ ಮೋಕ್ಷ”ದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಉಂಡೆಮನೆ ಕೃಷ್ಣಭಟ್ ಮತ್ತು ಶ್ರೀ ಮುರಾರಿ ಪಂಜಿಗೆದ್ದೆ, ಚೆಂಡೆ ಶ್ರೀ ದಿವಾಣ ಶಂಕರ ಭಟ್, ಮದ್ದಳೆ ಶ್ರೀ ಅಂಬೆಮೂಲೆ ಶಿವಶಂಕರ್ ಭಟ್, ಚಕ್ರತಾಳ ಶ್ರೀ ಈಶಾನ್ಯ ಪದ್ಯಾಣ ಹಾಗೂ ಮುಮ್ಮೇಳದಲ್ಲಿ ಶ್ರೀರಾಮನಾಗಿ ಶ್ರೀ ರಾಮಚಂದ್ರ ಭಟ್ ದೇವರಗುಂಡಿ, ಲಕ್ಷ್ಮಣನಾಗಿ ಶ್ರೀ ಶಶಾಂಕ ನೆಲ್ಲಿತ್ತಾಯ, ವಿಭೀಷಣನಾಗಿ ಚಿ. ಪ್ರಣವ ಕೆ ವಿ, ಹನುಮಂತನಾಗಿ ಶ್ರೀ ಸೊಂದಿ ಜಯಾನಂದ, ಸುಗ್ರೀವನಾಗಿ ಶ್ರೀ ಶಿವರಾಮ ಶರ್ಮ ಕೆದಿಲ, ರಾವಣನಾಗಿ ಶ್ರೀ ಶಿವಶಂಕರ ಭಟ್ ಮಣಿಲ, ದೂತನಾಗಿ ಶ್ರೀ ರಮೇಶ್ ಭಟ್ ಕಜೆ, ಅತಿಕಾಯನಾಗಿ ಡಾ. ಗೋವಿಂದಪ್ರಸಾದ್ ಕಜೆ, ಸಾರಥಿಯಾಗಿ ಶ್ರೀ ಕಜೆ ರಮೇಶ್ ಭಟ್, ವೇಶಭೂಷಣ ಗುರುನರಸಿಂಹ ಕಲಾ ಮಂಡಳಿ ಆರ್ಯಾಪು ಪುತ್ತೂರು. ಶ್ರೀ ವಿ ಜಿ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಗೋಪಾಲಕೃಷ್ಣ ಪಕಳಕುಂಜ ಕಲಾವಿದರಿಗೆ ಪ್ರಶಸ್ತಿ ಹಾಗೂ ಸ್ಮರಣಿಕೆಗಳನ್ನು ನೀಡಿದರು.

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ಶ್ರೀಶ್ರೀ ಆಶೀರ್ವಚನಃ

ವೈದಿಕ ಸಮಾವೇಶದ ಸಂದರ್ಭದಲ್ಲಿ ಶ್ರೀಗುರುಗಳು ಶಿಷ್ಯರನ್ನುದ್ದೇಶಿಸಿ ನೀಡಿದ ಪ್ರವಚನ


~*~

Facebook Comments