ಪೆರಾಜೆ-ಮಾಣಿ ಮಠಃ 10.9.2013, ಮಂಗಳವಾರ

ಇಂದು ಕಲ್ಲಡ್ಕ, ಕೇಪು ಹಾಗೂ ವಿಟ್ಲ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ವಿ ವಿ ಹೆಗಡೆ ಹೊನ್ನಾವರ, ಶ್ರೀ ಎಮ್ ಎಸ್ ಮಹಮ್ಮದ್ ಪುಣಚ, ಶ್ರೀ ಯು ಪಿ ಪೌಲೋಸ್ ಬೆಳ್ತಂಗಡಿ, ಶ್ರೀ ಅಶೋಕ ಆರ್ ಭಟ್ ಹೊನ್ನಾವರ, ಡಾ. ಬಿ ಆರ್ ಹೇರಳೆ ಬೆಳ್ತಂಗಡಿ, ಶ್ರೀ ಹರ್ಷೇಂದ್ರಕುಮಾರ್ ದಂಪತಿ, ಶ್ರೀ ಎಮ್ ಬಿ ಪುರಾಣಿಕ್ ಶ್ರೀಗುರುಗಳಿಂದ ಆಶೀರ್ವಾದ ಪಡೆದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ ಆಂಜನೇಯ ಹವನಗಳು, ಗಣಪತಿ ಹವನಗಳು(೩), ಪಂಚಗವ್ಯ ಹವನ(೪), ನವಗ್ರಹ ಶಾಂತಿ(೨), ಮೃತ್ಯುಂಜಯ ಶಾಂತಿ ಹವನ(೨), ತ್ರ್ಯಂಬಕ ಶಾಂತಿ ಹವನ(೨), ರಾಮಾಯಣ ಪಾರಾಯಣ, ಶ್ರೀ ಸತ್ಯನಾರಾಯಣ ಪೂಜೆ, ಕನ್ಯಾಸಂಸ್ಕಾರ ಹವನ, ಶ್ರೀರಾಮಪೂಜೆ, ಶ್ರೀರಾಮತಾರಕಯಜ್ಞ, ಗೋಪೂಜೆಗಳು ನಡೆದವು.

ಪಾದಪೂಜೆಃ ಶ್ರೀ ಸತ್ಯನಾರಾಯಣ ಶಾಸ್ತ್ರೀ ದಂಬೆ ಮನೆ, ಶ್ರೀ ಕೆ ರವಿಶಂಕರ ರಾಯಿ, ಶ್ರೀ ಉದಯಶಂಕರ ಅಮೈ, ಶ್ರೀ ವಿಶ್ವನಾಥ ಭಟ್ಟ ಅರಸಳಿಕೆ,  ಶ್ರೀ ಬಿ ಕೆ ಸುಬ್ರಹ್ಮಣ್ಯ ಭತ್ ಹೈದರಾಬಾದ್, ಡಾ. ಅರವಿಂದ ವಿಟ್ಲ, ಶ್ರೀ ಮಹಾಬಲೇಶ್ವರ ಭಟ್ ದೇವಸ್ಯ.

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

 

Facebook Comments