ಪೆರಾಜೆ-ಮಾಣಿ ಮಠಃ11.8.2013, ಆದಿತ್ಯವಾರ

ಇಂದು ದೊಂಬಿವಿಲಿ ವಲಯ ಮುಂಬೈ ಯವರ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಕರಾರ್ಚಿತ ಶ್ರೀರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ದೊಂಬಿವಿಲಿ ವಲಯದ ಶ್ರೀ ರಾಮಕೃಷ್ಣ ಛಾತ್ರ ಗುರುಭಿಕ್ಷಾಸೇವೆ ನಡೆಸಿದರು. ಶ್ರೀ ಎ ವಿ ನಾರಾಯಣ ಭಟ್, ಶ್ರೀಮತಿ ವತ್ಸಲಾರಾಜ್ಞೀ, ಶ್ರೀಮತಿ ಪ್ರೇಮಲತಾ ರಾವ್, ಡಾ. ಶ್ಯಾಮ ಭಟ್, ಶ್ರೀ ಜಯರಾಮ ಭಟ್ (ಎಮ್ ಡಿ ಕರ್ನಾಟಕ ಬ್ಯಾಂಕ್), ಶ್ರೀ ಮಹಾಬಲೇಶ್ವರ ಭಟ್ (ಜಿ. ಎಮ್ ಕರ್ನಾಟಕ ಬ್ಯಾಂಕ್) ಶ್ರೀ ಮಾಂಕಾಳೆ ಎಸ್ ವೈದ್ಯ (ಎಮ್ ಎಲ್ ಎ ಭಟ್ಕಳ) ಶ್ರೀಗುರುಗಳಿಂದ ಆಶೀರ್ವಾದ ಪಡೆದರು.
~
ಯಾಗಶಾಲೆಯಿಂದ:

ಸುಬ್ರಹ್ಮಣ್ಯ ಭುಜಂಗ ಹವನ, ಆಂಜನೇಯ ಹವನಗಳು, ಆಂಜನೇಯನಿಗೆ ಸೀಯಾಳಾಭಿಷೇಕ, ಶ್ರೀರಾಮಪೂಜೆ, ಶ್ರೀರಾಮತಾರಕಯಜ್ಞ, ಗೋಪೂಜೆ, ಗೋತುಲಾಭಾರ ನಡೆದವು.
ಪಾದಪೂಜೆ:
ಕೃಷ್ಣಕಿಶೋರ ಬಿಜೈ ಮಂಗಳೂರು, ರಾಮಚಂದ್ರ ಭಟ್ ಅಡ್ಕತ್ತಿಮಾರು, ವಿಜಯಕುಮಾರ್ ಬೆಂಗಳೂರು

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥಾ:
ಶ್ರೀಗುರುಗಳಿಂದ  ಸಪರಿವಾರ ಶ್ರೀರಾಮಚಂದ್ರನಿಗೆ ಹಾಗೂ ಹನುಮನಿಗೆ ಪುಷ್ಪಾರ್ಚನೆಯ ಮೂಲಕ ಇಂದಿನ ರಾಮಕಥೆ ಆರಂಭಗೊಂಡಿತು. ಶ್ರೀರಾಮ, ಲಕ್ಷ್ಮಣರನ್ನು ಪರಿಚಯ ಮಾಡಿಕೊಂಡು ತನ್ನ ಜೊತೆ ಕರೆತಂದ ಹನುಮ ಸುಗ್ರೀವನಿಗೆ ಅವರನ್ನು ಪರಿಚಯಿಸಿ ಸ್ನೇಹಿತರನ್ನಾಗಿ ಮಾಡುವ ಸನ್ನಿವೇಶವನ್ನು ವಿವರವಾಗಿ ಶ್ರೀಗುರುಗಳು ವಿವರಿಸಿದರು. ಶ್ರೀರಾಮನ ಜೊತೆ ಸಖ್ಯ ಮಾಡಿಕೊಂಡ ಸುಗ್ರೀವ, ಶ್ರೀರಾಮನಿಂದಾಗಿ ತನ್ನ ರಾಜ್ಯವನ್ನು ಮರಳಿ ಪಡೆದರೂ, ಕಳೆದುದು ಮರಳಿ ಪಡೆದ ಸಂತೋಷದಲ್ಲಿ ಸೀತೆಯನ್ನು ಹುಡುಕಿಸಿ ಕೊಡುವ ತನ್ನ ವಚನವನ್ನು ಮರೆಯುತ್ತಾನೆ. ವರ್ಷಾಕಾಲದ ಅಂತ್ಯದ ವೇಳೆಗೆ ಸುಗ್ರೀವನ ವಚನಭ್ರಷ್ಟತೆಯನ್ನು ಕಂಡು ಕ್ರೋಧದಿಂದ ಲಕ್ಷ್ಮಣ ಅವನರಮನೆಗೆ ತೆರಳಿ ಸುಗ್ರೀವನಿಗೆ ಅವನ ವಚನವನ್ನು ನೆನಪಿಸುತ್ತಾನೆ. ಸುಗ್ರೀವನಿಗೆ ತನ್ನ ತಪ್ಪಿನ ಅರಿವಾಗಿ ಸಕಲ ಕಪಿವೀರರನ್ನು ಒಟ್ಟು ಸೇರಿಸಿ ಸಕಲ ದಿಕ್ಕುಗಳಲ್ಲಿ ಸೀತೆಯನ್ನು ಹುಡುಕಿ ತರಲು ಕಳಿಸುವ ಕಥಾಭಾಗವನ್ನು ವಿವರಿಸಿದರು. ಪ್ರವಚನದೊಡನೆ ರೂಪಕವು ಮೂಡಿ ಬಂತು. ನೀರ್ನಳ್ಳಿ ಗಣಪತಿಯವರ ಚಿತ್ರವೂ ಹಾಡುಗಳಿಗೆ ಪೂರಕವಾಗಿ ಮೆರುಗು ಕೊಟ್ಟಿತು. ಜೈ ಜೈ ರಾಮಕಥಾದೊಂದಿಗೆ ಇಂದಿನ ರಾಮಕಥೆ ಪರ್ಯವಸಾನವಾಯಿತು. ಇಂದಿನ ದಿನದ ಪ್ರಾಯೋಜಕರು ಡಾ. ಪುರುಷೋತ್ತಮ ಕೊಲ್ಲಂಪಾರೆ ಮತ್ತು ಮನೆಯವರು. ಸಹಪ್ರಾಯೋಜಕರು ಡಾ. ಮುದ್ರಜೆ ಗಣೇಶ್ ಪ್ರಸಾದ್ ಹಾಗೂ ಶ್ರೀ ಸುಬ್ರಹ್ಮಣ್ಯ ಟಿ ಎಸ್ ಪುತ್ತೂರು.

~

Facebook Comments