ಪೆರಾಜೆ-ಮಾಣಿ ಮಠಃ11.9.2013, ಬುಧವಾರ

ಇಂದು ಮುಡಿಪು, ಕೋಳ್ಯೂರು ಹಾಗೂ ಕನ್ಯಾನ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ಶಂಕರ್ ಭಟ್ ಮಂಗಳ ಗಂಗೋತ್ರಿ ವಲಯಗಳ ಪರವಾಗಿ ಭಿಕ್ಷಾಕಾರ್ಯಗಳನ್ನು ನೆರವೇರಿಸಿದರು. ಶ್ರೀ ವಿನಯ ಹೆಗ್ಡೆ ನಿಟ್ಟೆ, ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ ಅನುವಂಶಿಕ ಮೊಕ್ತೇಸರರು ಶ್ರೀ ಕ್ಷೇತ್ರ ಕಟೀಲು, ಶ್ರೀ ಬಾವಿನ್ ಕುಮಾರ್, ಶ್ರೀ ಮಹಾಬಲಸ್ವಾಮಿ ಕಣಿಯೂರು ಚಾಮುಂಡೇಶ್ವರೀ ಕ್ಷೇತ್ರ, ಶ್ರೀ ಭೀಮೇಶ್ವರ ಜೋಶಿ ಧರ್ಮದರ್ಶಿಗಳು ಶ್ರೀಕ್ಷೇತ್ರ ಹೊರನಾಡು,  ಶ್ರೀ  ರಾಜೇಶ್ವರ  ಜೋಶಿ  ಹೊರನಾಡು,  ಶ್ರೀ  ವಿ  ಸುಧಾಕರ್  ಮಂಗಳೂರು,  ಶ್ರೀ ವಿಲಾಸ್ ನಾಯಕ್ ಸ್ಪಂದನ ವಾಹಿನಿ ಉಡುಪಿ ಶ್ರೀಗುರುಗಳಿಂದ ಆಶೀರ್ವಾದ ಪಡೆದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ನವಗ್ರಹ ಶಾಂತಿ ಪಂಚಮಾರಿಷ್ಟ ಶಾಂತಿ, ಗಣಪತಿ ಹವನ, ಸೇವಾರ್ಥ ಆಂಜನೇಯ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ, ಕಾಮಧೇನು ಹವನ, ಶ್ರೀರಾಮಪೂಜೆ, ಶ್ರೀರಾಮತಾರಕಯಜ್ಞ, ಗೋಪೂಜೆಗಳು ನಡೆದವು.
ಪಾದಪೂಜೆಃ ಶ್ರೀ ಗೋಪಾಲಕೃಷ್ಣ ಬೇತ, ಶ್ರೀ ಮುಂಡ್ರುಕಜೆ ವಿಶ್ವೇಶ್ವರ ಭಟ್ ಕುರುಡುಪದವುವೈಯಕ್ತಿಕಃ ಬನರಿ ಗಣೇಶ ಭಟ್ಟ ವಿಟ್ಲ, ಶ್ರೀ ಕೆ ಎಸ್ ಗೋಪಕುಮಾರ್ ಅಸೈಗೋಳಿ, ಡಾ. ಕೃಷ್ಣ ಭಟ್ಟ ಮಹಾಬಲಡ್ಕ ಜಾಲ್ಸೂರು.

~

ಸಾಂಸ್ಕೃತಿಕ ಕಾರ್ಯಕ್ರಮಃ

ಕರ್ನಾಟಕ ಸಂಗೀತ ಕಾರ್ಯಕ್ರಮಗಳಲ್ಲಿ ಕು. ಮಹಿಮಾ ಶಂಕರ ಸಾಮೆತ್ತಡ್ಕ ಪುತ್ತೂರು ಇವರಿಂದ ಕಾರ್ಯಕ್ರಮ ನಡೆಯಿತು. ನಂತರ ಶ್ರೀಮತಿ ಶ್ಯಾಮಸುಂದರೀ ಜಿ ಭಟ್ ಮಡಿಯಾಲ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಸಿಕೊಟ್ಟರು.

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

Facebook Comments