ಪೆರಾಜೆ-ಮಾಣಿಮಠಃ 12.9.2013, ಗುರುವಾರ

ಇಂದು ಶ್ರೀರಾಮಚಂದ್ರಾಪುರಮಂಡಲದ ಭೀಮನ ಕೋಣೆ, ಕಾನಗೋಡು ಹಾಗೂ ಪುರಪ್ಪೆಮನೆ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳ ಕರಕಮಲಗಳಿಂದ ಶ್ರೀರಾಮಾದಿ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ವಲಯಗಳ ಪರವಾಗಿ ಶ್ರೀ ಎಲ್ ಎ ಲಕ್ಷ್ಮೀನಾರಾಯಣ ಭಿಕ್ಷಾಕಾರ್ಯಗಳನ್ನು ನೆರವೇರಿಸಿದರು. ಶ್ರೀ ಸುಬ್ರಹ್ಮಣ್ಯ ಭಟ್ ಕಜಂಪಾಡಿ, ಶ್ರೀ ಸಂಜಯ್ ದೇಶ್ ಮುಖ್ ಪೂನಾ, ಶಿಲ್ಪಾ ಸೋನಿಕಾ ಶ್ರೀಗುರುಗಳಿಂದ ಆಶೀರ್ವಾದ ಪಡೆದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ ಆಂಜನೇಯ ಹವನಗಳು(೨), ಗುರುಪರಂಪರಾಪೂಜೆ, ಕನ್ಯಾಸಂಸ್ಕಾರ(೩), ಗಣಪತಿ ಹವನ ನವಗ್ರಹ ಶಾಂತಿ ಶನಿ ಶಾಂತಿ, ಬಾಲಾಸರಸ್ವತೀ ಪೂಜೆ, ಗಣಪತಿ ಹವನ ಪುರುಷ ಸೂಕ್ತ ಹವನ ಸಂತಾನಗೋಪಾಲಕೃಷ್ಣ ಹವನ, ಗಣಪತಿ ಹವನ ನವಗ್ರಹ ಶಾಂತಿ ಗೋಪ್ರಸವ ಶಾಂತಿ ಪಂಚಮಾರಿಷ್ಟ ಶಾಂತಿ, ಸರಸ್ವತೀ ಪೂಜೆ ಅಕ್ಷರಾರಂಭ, ರಾಮಾಯಣ ಪಾರಾಯಣ, ಸುಂದರಕಾಂಡ ಪಾರಾಯಣ, ಶ್ರೀಮಾಣಿ ಮಠದ ಗಣಪತಿಗೆ ವಿಶೇಷ ಸೇವೆ ಗಂಧಾಲಂಕಾರ ಹಾಗೂ ಪಂಚಭಕ್ಷ್ಯ ಸೇವೆ, ಆಂಜನೇಯನಿಗೆ ಸೀಯಾಳಾಭಿಷೇಕ. ಶ್ರೀರಾಮ ಪೂಜೆ, ಶ್ರೀರಾಮತಾರಕಯಜ್ಞ, ಗೋಪೂಜೆ, ರಾತ್ರಿಗೆ ದುರ್ಗಾಪೂಜೆಗಳು ನಡೆದವು.  ಸಾಯಂಕಾಲ ಶ್ರೀಗುರುಕರಕಮಲಗಳಿಂದ ಚೌತಿ ದಿನ ಪ್ರತಿಷ್ಠಿತ ಗಣಪತಿಗೆ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ತೆರಳಿ ವಿಸರ್ಜಿಸಲಾಯಿತು.

ಪಾದಪೂಜೆಃ ಶ್ರೀ ವಿಶ್ವೇಶ್ವರ ಎಮ್ ಎನ್, ಶ್ರೀ ಶಂಭು ಭಟ್ಟ, ಅಂಬಿಗ ಮತ್ತು ಹರಿಕಾಂತ ಸಮಾಜದಿಂದ ಅಧ್ಯಕ್ಷರಾದ ಶ್ರೀ ಜಟ್ಟಿ ಹರಿಕಾಂತ, ಶ್ರೀ ಶಿವಕುಮಾರ ಪಾಣಾಜೆ, ಶ್ರೀ ಸುರೇಶ ಕೆಮ್ಮಾಯಿ, ಶ್ರೀಮತಿ ಪಿ ಸರಸ್ವತೀ ಪುತ್ತೂರು, ಶ್ರೀ ರಾಮ ಭಟ್ಟ ಮುಳಿಯಾಲ, ಶ್ರೀ ಶಂಕರನಾರಾಯಣ ಭಟ್ ಪಿದಮಲೆ, ಶ್ರೀ ರಾಮಮೂರ್ತಿ ಜೋಯಿಸ್ ಕೊಪ್ಪ.

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ಸಾಂಸ್ಕೃತಿಕ ಕಾರ್ಯಕ್ರಮಃ

ಇಂದು ಶ್ರೀಮಠದಲ್ಲಿ  ಯಕ್ಷಗಾನ ಕಾರ್ಯಕ್ರಮ ನಡೆಯಿತು. ಕಲಾವಿದರಿಗೆ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.

~

Facebook Comments