ಪೆರಾಜೆ-ಮಾಣಿಮಠಃ14.8.2013, ಬುಧವಾರ

ಇಂದು ಶ್ರೀ ಪರ್ತಜೆ ಕುಮಾರಸ್ವಾಮಿ ವರ್ಮುಡಿಯವರ ಕುಟುಂಬದವರಿಂದ ಗುರುಭಿಕ್ಷಾ ಸೇವೆ ನಡೆಯಿತು. ಶ್ರೀಗುರುಗಳು ಸಪರಿವಾರ ಶ್ರೀರಾಮದೇವರ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ವರ್ಮುಡಿ ಕುಟುಂಬದವರು,  ಶ್ರೀ  ಬಾವಿನ್  ಕುಮಾರ್  ಜಾಮ್ನಗರ,  ಡಾ.  ಹರಿಕೃಷ್ಣ  ಪಾಣಾಜೆ,  ಡಾ.  ಗಣೇಶ್  ಮುದ್ರಜೆ,  ಡಾ.  ಎಸ್  ಎಂ  ಭಟ್ ಸಂಪತ್ತಿಲ, ಶ್ರೀ ಕೃಷ್ಣ ಶೆಟ್ಟಿ ಕೊಡಂಗಡಿ ಶ್ರೀಗುರುಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ ಆಂಜನೇಯ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ,  ಶ್ರೀರಾಮಪೂಜೆ, ಶ್ರೀರಾಮತಾರಕ ಯಜ್ಞ, ಗೋಪೂಜೆ, ಗೋ ತುಲಾಭಾರಗಳು ನಡೆದವು.

ಪಾದಪೂಜೆಃ ಶ್ರೀ ನರಸಿಂಹ ಭಟ್ ಕಿಡೆಂಜಿ, ಪೆರಡಾಲ

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥೆಃ

ಶ್ರೀಗುರುಗಳು ಶ್ರೀರಾಮನಿಗೆ ಹಾಗೂ ಆಂಜನೇಯನಿಗೆ ಪುಷ್ಪಾರ್ಚನೆ ಮಾಡಿದ ಬಳಿಕ ಇಂದಿನ ರಾಮಕಥೆ ಆರಂಭಗೊಂಡಿತು. ಕಡಲತಡಿಯನ್ನು ಸೇರಿದ ವಾನರರ ಎದುರಿದ್ದುದು ಸಾಗರ ರಾಶಿ. ಅದನ್ನು ಪಾರಾಗಿ ಹೋಗುವ ದಾರಿ ಕಾಣದೆ, ಸುಗ್ರೀವಾಜ್ಞೆಯನ್ನು ನೆನೆಸಿ ಭಯಗೊಂಡು ಎಲ್ಲರ ಮನದಲ್ಲಿ ಬಂದ ಭಾವನೆಗಳ ಸಾಗರವನ್ನು ವಿವರಿಸಿದರು. ಜೈ ಜೈ ರಾಮಕಥೆಯೊಂದಿಗೆ ಇಂದಿನ ರಾಮಕಥೆ ಪರ್ಯವಸಾನಗೊಂಡಿತು. ಇಂದಿನ ದಿನದ ರಾಮಕಥೆಯನ್ನು ಪ್ರಾಯೋಜಿಸಿದವರು ಶ್ರೀ ನಿತಿನ್ ಪಟೇಲ್, ಶ್ರೀ ಬಾವಿನ್ ಕುಮಾರ್ ಸೌಜಾನ್.

~

Facebook Comments