LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

15- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಏಕಾದಶೀ-“ಒಪ್ಪಣ್ಣ ಸಮಾವೇಶ”(ಯುವ ಸಮಾವೇಶ)

Author: ; Published On: ರವಿವಾರ, ಸೆಪ್ಟೆಂಬರ 15th, 2013;

Switch to language: ಕನ್ನಡ | English | हिंदी         Shortlink:

ಪೆರಾಜೆ-ಮಾಣಿ ಮಠಃ 15.9.2013, ಆದಿತ್ಯವಾರ

ಇಂದು ಏಕಾದಶೀ. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಇಂದು “ಒಪ್ಪಣ್ಣ ಸಮಾವೇಶ”(ಯುವ ಸಮಾವೇಶ).
ಭಾಗವಹಿಸಿದ ಒಟ್ಟು ಒಪ್ಪಣ್ಣಂದಿರ ಸಂಖ್ಯೆ 556. ಮಂಡಲವಾರು ಭಾಗವಹಿಸಿದವರ ವಿವರ-
ಉಪ್ಪಿನಂಗಡಿ ಮಂಡಲ- 214, ಮಂಗಳೂರು ಮಂಡಲ- 141, ಮುಳ್ಳೇರಿಯಾ ಮಂಡಲ- 128,  ರಾಮಚಂದ್ರಾಪುರ  ಮಂಡಲ-  51, ಇತರ ಮಂಡಲಗಳಿಂದ-  22.
ಶ್ರೀಗುರುಗಳ ಅನುಗ್ರಹಪೂರಕ ಮಾರ್ಗದರ್ಶನದ ಧಾರೆಯಲ್ಲಿ ನಮ್ಮ ಹುಡುಗರು ಹಲವು ಮಾಹಿತಿಗಳನ್ನು ಪಡೆದು ಕೊಂಡರು. ನಂತರ ಸಂವಾದ ಕಾರ್ಯಕ್ರಮ ನಡೆಯಿತು. ಇಂದಿನ ಪುಣ್ಯ ದಿನ ಗೋಲೋಕಕ್ಕೆ ಹೊಸ ಜೀವದಾನ ಮಾಡಿ ನಮ್ಮ ಕಣ್ಮರೆಯಾದ ಶ್ರೀರಾಮಚಂದ್ರಾಪುರ ಮಠದ ಮುಕುಟಮಣಿ ಮಹಾನಂದಿಯ ನೆನಪಿಗಾಗಿ “ಗೋರಾಷ್ಟ್ರದ ಅನಭಿಷಿಕ್ತ ಸಾಮ್ರಾಟ ಮಹಾನಂದಿ” ಎಂಬ ಮಹಾನಂದಿಯ ಜೀವನದಾರಿಯ ಒಂದು ಪುಸ್ತಕ ಶ್ರೀಗುರುಗಳಿಂದ ಲೋಕಾರ್ಪಣಗೊಂಡಿತು. ಲಕ್ಷ್ಮೀ ಭಟ್ ಕಿರುತೆರೆ ಕಲಾವಿದೆ, ಶ್ರೀ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ, ಒಪ್ಪಣ್ಣಂದಿರು, ಶ್ರೀಮಠದ ಶಿಷ್ಯರು ಶ್ರೀಗುರುಗಳಿಂದ ಆಶೀರ್ವಾದ ಪಡೆದರು.

~

ಯಾಗಶಾಲೆಯಿಂದಃ

ಆಂಜನೇಯ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ, ಆಂಜನೇಯನಿಗೆ ಅಕ್ಕಿ ಕಣಜ, ಕಾರ್ತವೀರ್ಯಾರ್ಜುನ ಹವನ, ಗಣಪತಿ ಹವನ ಕುಜರಾಹುದಶಾ ಸಂಧಿ ಶಾಂತಿ, ವೇದಮಂತ್ರ ಜಪ, ಭಾಗವತ ಪಾರಾಯಣ, ಕನ್ಯಾಸಂಸ್ಕಾರ ಪಂಚಗವ್ಯ ಹವನ, ಗುರುಪರಂಪರಾಪೂಜೆ, ಶ್ರೀರಾಮಪೂಜೆ, ಶ್ರೀರಾಮತಾರಕ ಯಜ್ಞ, ಗೋಪೂಜೆ, ಸಾಯಂಕಾಲ ಸತ್ಯನಾರಾಯಣಪೂಜೆ, ದುರ್ಗಾಪೂಜೆಗಳು ನಡೆದವು.

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

6 Responses to 15- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಏಕಾದಶೀ-“ಒಪ್ಪಣ್ಣ ಸಮಾವೇಶ”(ಯುವ ಸಮಾವೇಶ)

 1. K....P....

  Hare Raama
  Missed “ಯುವ-ಸಮಾವೇಶ”!
  Hare Raama

  [Reply]

 2. K....P....

  Hare Raama
  Dear Admin,
  Is Audio available of this program ???
  Please Upload Once available

  Hare Raama

  [Reply]

 3. ನಂದ ಕಿಶೋರ ಬೀರಂತಡ್ಕ

  ಹರೇ ರಾಮ!
  ಅದ್ಭುತವಾಗಿತ್ತು ಸಮಾವೇಶ. ಇದರ ಧ್ವನಿಮುದ್ರಿಕೆಯನ್ನು ಹಾಕುವಿರೇ? ಅದರೊಂದಿಗೆ “ಹವ್ಯಕರ ಭವ್ಯತೆಯ” ಗೀತೆಯ lyricsನ್ನೂ ಹಾಕಿ… please.. :)

  [Reply]

 4. maya

  hareraama dhvani mudrike haakuviraa????

  [Reply]

 5. drdpbhat

  hareraama.
  oppanna samaveshada audio siguvante madi..please.
  harerama.

  [Reply]

 6. gshegde

  harerama

  [Reply]

Leave a Reply

Highslide for Wordpress Plugin