LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

23- ಅಗೋಸ್ತು-2013: ಉಪ್ಪಿನಪಟ್ಟಣ, ಮಿರ್ಜಾನ, ಕಾರವಾರ-ಅಂಕೋಲ ಹಾಗೂ ಗೋವಾ ವಲಯದವರಿಂದ ಗುರುಭಿಕ್ಷಾಸೇವೆ

Author: ; Published On: ಶುಕ್ರವಾರ, ಆಗಸ್ತು 23rd, 2013;

Switch to language: ಕನ್ನಡ | English | हिंदी         Shortlink:

ಪೆರಾಜೆ-ಮಾಣಿ ಮಠಃ23.8.2013, ಶುಕ್ರವಾರ

ಇಂದು ಕುಮಟಾ ಮಂಡಲದ ಉಪ್ಪಿನಪಟ್ಟಣ, ಮಿರ್ಜಾನ, ಕಾರವಾರ-ಅಂಕೋಲ ಹಾಗೂ ಗೋವಾ ವಲಯದವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀಕಾಂತ ಭಾಸ್ಕರ ಹೆಗಡೆಯವರು ಭಿಕ್ಷಾಂಗ ಕಾರ್ಯಗಳನ್ನು ನೆರವೇರಿಸಿದರು. ನಂತರ ನಡೆದ ವಲಯ ಸಭೆಯಲ್ಲಿ ವಲಯಗಳ ವಿಷಯಗಳನ್ನು ಶ್ರೀಪೀಠದ ಮುಂದಿಟ್ಟು ಶ್ರೀಗುರುಗಳಿಂದ ಮಾರ್ಗದರ್ಶನ ಪಡೆದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಚಂಡಿಕಾ ಹವನ, ಮಹಾಗಣಪತಿ ಹವನ ನವಗ್ರಹ ಶಾಂತಿ ಪಂಚಮಾರಿಷ್ಠ ಶಾಂತಿ, ಶುಕ್ರಾರ್ಕ ಸಂಧಿ ಕಲಶ ನವಗ್ರಹ ಪೂಜೆ ಉದಕಶಾಂತಿ ಸ್ನಾನಕಲಶ, ಸಂತಾನಗೋಪಾಲಕೃಷ್ಣ ಜಪ, ಆಂಜನೇಯನಿಗೆ ಸೀಯಾಳಾಭಿಷೇಕ, ಶ್ರೀರಾಮ ಪೂಜೆ, ಶ್ರೀರಾಮತಾರಕಯಜ್ಞ, ಗೋಪೂಜೆ, ರಾತ್ರಿಗೆ ದುರ್ಗಾ ಪೂಜೆ ನಡೆಯಿತು.

~

ಸಾಂಸ್ಕೃತಿಕ ಕಾರ್ಯಕ್ರಮಃ

ಶ್ರೀ ಗಣರಾಜ ಕುಂಬ್ಳೆ ನಿರ್ದೇಶನದ ಯಕ್ಷನಂದನ, ಗೋಕುಲನಗರದ ಮಹಿಳಾ ತಂಡ ಕೊಯ್ಲ ಇವರಿಂದ “ಶ್ರೀರಾಮ ದರ್ಶನ” ತಾಳಮದ್ದಳೆ ನಡೆಯಿತು.

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~*~

Leave a Reply

Highslide for Wordpress Plugin