ಪೆರಾಜೆ-ಮಾಣಿ ಮಠಃ 26-7-2013, ಶುಕ್ರವಾರ

ಇಂದಿನ ಗುರುಭಿಕ್ಷಾಸೇವಾ ಕಾರ್ಯಕ್ರಮ ಪುತ್ತೂರು, ದರ್ಬೆ ಹಾಗೂ ಬೆಟ್ಟಂಪಾಡಿ ವಲಯದ ಶಿಷ್ಯರಿಂದ ನಡೆಯಿತು. ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಮೂರೂ ವಲಯಗಳ “ವಲಯ ಸಭೆ”ಯಲ್ಲಿ ವಲಯದ ಆಗು ಹೋಗುಗಳನ್ನು ಪೀಠದ ಮುಂದಿಡಲಾಯಿತು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಮಹಾಸಭೆಯಲ್ಲಿ ಪುತ್ತೂರು, ದರ್ಬೆ ಹಾಗೂ ಬೆಟ್ಟಂಪಾಡಿ ವಲಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶ್ರೀಗುರುಗಳು ಆಶೀರ್ವದಿಸಿದರು.  ಸಭೆಯಲ್ಲಿ ಶ್ರೀ ದಿನೇಶ್ ನಾಯಕ್ ವಿಟ್ಲ, ಶ್ರೀಮತಿ ಉಷಾ ಅಗರ್ ವಾಲ್, ಶ್ರೀಮತಿ ನೀರೂ ಭನ್ಸಲ್, ಶ್ರೀಮಠದ ಸರ್ವ ಪದಾಧಿಕಾರಿಗಳು, ಶಿಷ್ಯವರ್ಗ ಹಾಜರಿದ್ದರು.

~

ಆಶೀರ್ವಚನಃ

 

ಯಾಗಶಾಲೆಯಿಂದಃ

ಆಂಜನೇಯನಿಗೆ ಸೀಯಾಳಾಭಿಷೇಕ, ಆಂಜನೇಯ ಹವನ, ಗೋತುಲಾಭಾರ, ಗೋಪೂಜೆ, ಶ್ರೀರಾಮಪೂಜೆ, ಶ್ರೀರಾಮತಾರಕ ಯಜ್ಞ, ಕುಜರಾಹು ಸಂಧಿ ಶಾಂತಿ ಹೋಮ, ಸುಂದರಕಾಂಡ ಪಾರಾಯಣ ಸಮಾಪ್ತಿ ನಡೆಯಿತು.

ಸೂಃ ರಾಮತಾರಕ ಜಪವನ್ನು ಮಾಡಿ ಯಜ್ಞವೇದಿಕೆಯ ಬಳಿಯ ಕಾರ್ಯಾಲಯದಲ್ಲಿ ಸಂಖ್ಯಾನೋಂದಣಿ ಮಾಡಬೇಕೆಂದು ಯಾಗಶಾಲೆಯ ಸಮಿತಿಯಿಂದ ಹೇಳಿಕೆ ಕೊಟ್ಟಿರುತ್ತಾರೆ.
(ಒಂದು ಕಡೆ ಕುಳಿತು ಮಾಡಿದ ಜಪದ ಸಂಖ್ಯೆಗಳನ್ನಷ್ಟೇ ಕೊಡಬೇಕು)

ಸಾಂಸ್ಕೃತಿಕ ಕಾರ್ಯಕ್ರಮಃ

ಅಪರಾಹ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ವಿದುಷಿ ವಿದ್ಯಾ ಈಶ್ವರಚಂದ್ರ, ಪುತ್ತೂರು ಇವರ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯಿತು. ಮೃದಂಗ ವಾದನದಲ್ಲಿ ಶ್ರೀ ವಸಂತಕೃಷ್ಣ, ಕಾಂಚನ ಹಾಗೂ ವಯಲಿನ್ ನಲ್ಲಿ ವಿದ್ವಾನ್ ಪ್ರಭಾಕರ ಕುಂಜೂರು, ಕಾಸರಗೋಡು ಸಹಕರಿಸಿದರು.

ನಂತರ ಮನೋಜ್ ಎನ್ ನಡುವಡ್ಕ, ಬೆಟ್ಟಂಪಾಡಿ ಇವರಿಂದ ಏಕವ್ಯಕ್ತಿ ಯಕ್ಷಗಾನ ನಡೆಯಿತು. “ಗರುಡ ಗರ್ವಭಂಗ” ಪ್ರಸಂಗದ ಹನುಮಂತನಾಗಿ ಒಳ್ಳೆಯ ಪ್ರದರ್ಶನ ನೀಡಿದರು. ಈ ಕಾರ್ಯಕ್ರಮಕ್ಕೆ ಭಾಗವತರಾಗಿ ಶ್ರೀ ಶ್ಯಾಮ  ಭಟ್, ಮಜಲುಗದ್ದೆ,  ಮದ್ದಳೆಯಲ್ಲಿ ಶ್ರೀ ಗೋಪಾಲ್ ರಾವ್ ಐ.ಜಿ, ಚೆಂಡೆಯಲ್ಲಿ ಯೋಗೀಶ ಕಡಂಬಳಿತ್ತಾಯ, ವಾಣೀನಗರ, ನಿರ್ದೇಶನ ಮತ್ತು ಚಕ್ರತಾಳದಲ್ಲಿ ನಾಟ್ಯಾಚಾರ್ಯ ಶ್ರೀ ಸಬ್ಬಣಕೋಡಿ ರಾಮಭಟ್ (ಪಡ್ರೆ ಚಂದ್ರು ಸ್ಮಾರಕ ಯಕ್ಷಗಾನ ನಾಟ್ಯತರಬೇತಿ ಕೇಂದ್ರ- ಇದರ ನಿರ್ದೇಶಕರು), ಪ್ರಸಾಧನದಲ್ಲಿ ಶ್ರೀ ನರಸಿಂಹ ರೆಂಜ ಸಹಕರಿಸಿದರು.

ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀ ಶಿವರಾಮ ಕಜೆ, ಶ್ರೀ ಪ್ರಸನ್ನ ಎಸ್ ಭಟ್ ಬಲ್ನಾಡು ಹಾಗೂ ಶ್ರೀಮತಿ ಗೀತಾ ಕೋಂಕೋಡಿ ನಡೆಸಿಕೊಟ್ಟರು. ಕಲಾವಿದರಿಗೆ ಶ್ರೀ ಬಂಗಾರಡ್ಕ ಜನಾರ್ಧನ ಭಟ್ ಹಾಗೂ ಶ್ರೀ ಹಾರಕರೆ ನಾರಾಯಣ ಭಟ್ ರವರು ಪ್ರಶಸ್ತಿ ಹಾಗೂ ಸ್ಮರಣಿಕೆಗಳನ್ನಿತ್ತು ಗೌರವಿಸಿದರು.

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~*~

Facebook Comments