ಪೆರಾಜೆ-ಮಾಣಿ ಮಠಃ27.8.2013, ಮಂಗಳವಾರ

ಇಂದು ಹೊನ್ನಾವರ ಮಂಡಲದ ಭಟ್ಕಳ, ಮರವಂತೆ, ಭವತಾರಿಣಿ ಹಾಗೂ ಮುಗವ ವಲಯಗಳ ಗುರುಭಿಕ್ಷಾ ಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ವಲಯ ಸಭೆಯಲ್ಲಿ ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಮುಂದಿಟ್ಟರು. ಶ್ರೀ ಆರ್. ಎಮ್ ಮಂಜುನಾಥ ಗೌಡ ಅಧ್ಯಕ್ಷರು ಎಪೆಕ್ಸ್ ಬ್ಯಾಂಕ್, ಶ್ರೀ ಮಠದ ಪದಾಧಿಕಾರಿಗಳು, ಶಿಷ್ಯವರ್ಗ ಶ್ರೀಗುರುಗಳಿಂದ ಆಶೀರ್ವಾದ ಪಡೆದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ರಾಮಾಯಣ ಪಾರಾಯಣ, ಗಣಪತಿ ಹವನ-ನವಗ್ರಹ ಶಾಂತಿ- ಕುಜರಾಹು ಸಂಧಿಶಾಂತಿ ಮೃತ್ಯುಂಜಯ, ಸೇವಾರ್ಥ ಆಂಜನೇಯ ಹವನಗಳು, ಜಾತವೇಧಸೇ 108 ಜಪ, ಗರುಡ ಪಂಚಾಕ್ಷರೀ  1008 ಜಪ,  ಸಪ್ತಶತೀಪಲ್ಲವ ಪಾರಾಯಣ, ಶ್ರೀರಾಮಪೂಜೆ, ಶ್ರೀರಾಮತಾರಕ ಯಜ್ಞ, ಗೋಪೂಜೆ, ರಾತ್ರಿಗೆ ದುರ್ಗಾ ಪೂಜೆ ನಡೆದವು.

~

ಸಾಂಸ್ಕೃತಿಕ ಕಾರ್ಯಕ್ರಮಃ

ಕು. ಶಶಾಂಕ ಸುಬ್ರಹ್ಮಣ್ಯ ಮಂಗಳೂರು ಇವರಿಂದ ಕೊಳಲು ಹಾಗೂ ಕೀಬೋರ್ಡ್ ವಾದನ ನಡೆಯಿತು. ರಿದಮ್ ಪ್ಯಾಡ್ ನಲ್ಲಿ ಶ್ರೀ ಹರಿಪ್ರಸಾದ್ ಗುರುಪುರ ಹಾಗೂ ತಬಲಾದಲ್ಲಿ ಶ್ರೀ ಸುಬ್ರಾಯ ಪ್ರಭು ಮಂಗಳೂರು ಸಹಕರಿಸಿದರು. ನಂತರ ಕು. ನಿಶಾ ಭಟ್ ಸುಬ್ರಹ್ಮಣ್ಯ, ಕು. ಸಂಧ್ಯಾಶ್ರೀ, ಮಾ. ಶಂಕರ್ ಭಟ್ ಇವರಿಂದ ಜಾನಪದ ನೃತ್ಯ ನಡೆಯಿತು. ಶ್ರೀ ಶಿವರಾಮ ಕಜೆ ಸ್ವಾಗತಿಸಿ, ಶ್ರೀ ಶಂಕರಪ್ರಸಾದ್ ಧನ್ಯವಾದವಿತ್ತರು. ಕಲಾವಿದರಿಗೆ ಸ್ಮರಣಿಕೆ ಹಾಗೂ ಪ್ರಶಸ್ತಿಪತ್ರ ನೀಡಲಾಯಿತು.

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~*~

Facebook Comments