ಶ್ರೀರಘೂತ್ತಮ ಮಠ ಕೆಕ್ಕಾರು : 29.07.2014, ಮಂಗಳವಾರ

ಇಂದು¸ ಸಾಗರ ಮಂಡಲದ ಸಾಗರ ಪೂರ್ವ, ಪಶ್ಚಿಮ ಹಾಗೂ ಆವಿನಹಳ್ಳಿ ವಲಯಗಳ ಗುರುಭಿಕ್ಷಾಂಗ ಪಾದಪೂಜೆ ಸೇವೆ ನಡೆಯಿತು. ಹಾಲಕ್ಕಿ ಸಮಾಜದ ಬಾಂಧವರು ಸುವಸ್ತುವನ್ನು ಶ್ರೀ ಸನ್ನಿಧಿಗೆ ಸಮರ್ಪಿಸಿ, ಶ್ರೀಗಳಿಂದ ಆಶೀರ್ವಾದ ಪಡೆದರು.

ಶ್ರೀ ಭಾರತೀ ಪ್ರಕಾಶನದ ಗುರುಗ್ರಂಥ ಮಾಲಿಕೆಯ 18 ನೇ ಕೃತಿಯಾದ ಮಹೇಶ ಎಳ್ಯಡ್ಕರವರು ಬರೆದ ಮಹರ್ಷಿವಿಶ್ವಾಮಿತ್ರ ಕೃತಿಯನ್ನು ಶ್ರೀಗಳವರು ಲೋಕಾರ್ಪಣೆಗೊಳಿಸಿದರು. ಪ್ರಾಯೋಜಕರಾದ ಪುತ್ತೂರಿನ ಶ್ರೀದೇವಿ ವಿಶ್ವನಾಥ ಹಾಜರಿದ್ದರು. ಶಂಕರ ಸೂಕ್ತಿ ಪಟವನ್ನು ಶ್ರೀ ನಾರಾಯಣ ಯಾಜಿ ಬಿಡುಗಡೆಗೊಳಿಸಿದರು.

ರಾಮನ ಜನ್ಮಕ್ಕೆ ಕಾರಣವಾದ ಪಾಯಸದ ಮೂಲ ದ್ರವ್ಯಗಳಾಗಿರುವ ಹಾಲು ಮತ್ತು ಅಕ್ಕಿಯನ್ನು ತಂದ ಹಾಲಕ್ಕಿಗಳು ರಾಮನಿಗೂ ಬಹಳ ಪ್ರಿಯರಾದವರು. ಆರ್ಥಿಕವಾಗಿ ಬಡ ಸಮಾಜವಾದರೂ ಸಜ್ಜನಿಕೆಯಿಂದ ಅತ್ಯಂತ ಸಿರಿವಂತ ಸಮಾಜ ಹಾಲಕ್ಕಿ ಸಮಾಜ. ಈ ಭಾಗದ ಹವ್ಯಕರು ಹಾಗೂ ಹಾಲಕ್ಕಿಗಳು ಹಾಲು ಅಕ್ಕಿಯಂತೆ ಬೆರೆತು ಜೀವಿಸುತ್ತಿದ್ದಾರೆ. ಸೇವೆಯ ಸರ್ವಜ್ಞರು ಅವರು. ಮೋಸ,ದ್ರೋಹ,ವಂಚನೆ ಗೊತ್ತಿಲ್ಲದ ಅಲ್ಪತೃಪ್ತ ಸಮುದಾಯ ಹಾಲಕ್ಕಿಗಳದು ಎಂದು ಶ್ರೀ ಶ್ರೀಗಳು ನುಡಿದರು.
~
ಯಾಗಶಾಲೆಃ
ಚಾತುರ್ಮಾಸ್ಯ ಸಮಿತಿಯವರು ಹಾಲಕ್ಕಿ ಸಮಾಜದ ಉನ್ನತಿಗಾಗಿ ರಾಮತಾರಕ ಹವನ ನೆರವೇರಿಸಿದರು. ಸೌಭದ್ರೆ ಹಾಗೂ ಜೈರಾಮ ಶ್ರೀಧರ ಶ್ಯಾನಭಾಗ ವಾಲಗಳ್ಳಿ ಅನ್ನಪೂರ್ಣಯಾಗದ ಪ್ರಾಯೋಜಕತ್ವ ವಹಿಸಿದ್ದರು.
~
ಸಾಂಸ್ಕೃತಿಕ ಕಾರ್ಯಕ್ರಮಃ
ವಿದ್ವಾನ ದತ್ತಮೂರ್ತಿ ಭಟ್ಟ ಮತ್ತು ಬಳಗದವರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು.

~

Facebook Comments