ಪೆರಾಜೆ- ಮಾಣಿ ಮಠಃ 31.7.2013, ಬುಧವಾರ

ವಿಜಯ ಚಾತುರ್ಮಾಸ್ಯದ ಈ ದಿನ ಡಾ. ಶ್ಯಾಮ ಭಟ್, ಬಡೆಕ್ಕಿಲ ಗುರುಭಿಕ್ಷಾಸೇವೆಯನ್ನು ನಡೆಸಿದರು. ಶ್ರೀಕರಾರ್ಚಿತ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ನಳಿನ್ ಕುಮಾರ್ ಕಟೀಲ್ (ಎಮ್ .ಪಿ ಮಂಗಳೂರು), ಶ್ರೀ ನರಸಿಂಹ ಹೆಗಡೆ ಕೆರೆಮನೆ, ಶ್ರೀ ಬಂಗಾರಡ್ಕ ವಿಶ್ವೇಶ್ವರ ಭಟ್, ಶ್ರೀ ವಿಶ್ವ ಪುಂಡಿತ್ತೂರು, ಮುರಳೀಕೃಷ್ಣ ಚಳ್ಳಂಗಾರು, ಮೋಹನ್ ದಾಸ್ ಶೆಟ್ಟಿ(ದಾಸ್ ಎಸೋಸಿಯೇಟ್ಸ್ ಮಂಗಳೂರು), ರಘು ಸಾಲ್ಯಾನ್ ಮಂಗಳೂರು, ಚೆನ್ನಪ್ಪ ಕೋಟ್ಯಾನ್ (ಜಿಲ್ಲಾ ಪಂಚಾಯತ್ ಸದಸ್ಯರು, ಮಾಣಿ), ದಿನೇಶ್ ಅಮ್ಟೂರು (ತಾಲೂಕು ಪಂಚಾಯತ್ ಸದಸ್ಯ ಮಾಣಿ), ಪಿ ಶರತ್ ಆಳ್ವ ಪುತ್ತೂರು ಶ್ರೀಗುರುಗಳ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು.

ಯಾಗಶಾಲೆಯಿಂದಃ

ಆಂಜನೇಯನಿಗೆ ಸೀಯಾಳಾಭಿಷೇಕ, ಆಂಜನೇಯ ಹವನಗಳು, ಹನುಮನಿಗೆ ಇಂದಿನ ವಿಶೇಷ ಅಲಂಕಾರ – ತರಕಾರಿ ಕಣಜ ಸೇವೆ ನಡೆಯಿತು.
ಗೋತುಲಾಭಾರ, ಗೋಪೂಜೆ, ಶ್ರೀರಾಮಪೂಜೆ, ಶ್ರೀರಾಮತಾರಕ ಯಜ್ಞ, ಧನ್ವಂತರಿ ಹವನ ನಡೆಯಿತು.  ಸಮಗ್ರ ಯಜುರ್ವೇದ ಪಾರಾಯಣ ಸಪ್ತಾಹ ಪ್ರಾರಂಭಗೊಂಡಿತು.

ಪಾದಪೂಜೆ:
ಉದಯಶಂಕರ ಕೊಡಿಪ್ಪಾಡಿ

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥೆಃ

ನಾಲ್ಕನೇ ದಿನದ ರಾಮಕಥೆಯಲ್ಲಿ ಶ್ರೀರಾಮಾದಿ ದೇವರುಗಳಿಗೆ ಪುಷ್ಪ ನಮನದೊಂದಿಗೆ ಆರಂಭಗೊಂಡಿತು. ಇಂದಿನ ರಾಮಕಥೆಯಲ್ಲಿ ಶ್ರೀಗುರುಗಳು ದುಂದುಭಿ  ಹಾಗೂ  ವಾಲಿಯ  ಕಾಳಗ,  ದುಂದುಭಿಯ ವಧೆ,  ಸತ್ತ  ದುಂದುಭಿಯ  ಶರೀರವನ್ನು  ತಿರುಗಿಸಿ ಎಸೆದಾಗ ಅದು ಬಿದ್ದದ್ದು ವಾಲಿಯ ಗುರುವಿನ ಆಶ್ರಮಕ್ಕೆ! ಆಶ್ರಮಕ್ಕಾದ ಹಾನಿಯನ್ನು ಕಂಡು ಮಾತಂಗ ಮುನಿಗಳು ವಾಲಿಗೆ ಶಾಪವನ್ನಿತ್ತರು.  ನಂತರ ಈ ಕಥೆಯನ್ನು ರೂಪಕದಲ್ಲಿ ಕಲಾವಿದರು ವೇದಿಕೆಯಲ್ಲಿ ಪ್ರಸ್ತುತಪಡಿಸಿದರು. ಜೈ ಜೈ ರಾಮಕಥಾದೊಂದಿಗೆ ಇಂದಿನ ರಾಮಕಥೆ ಸಮಾಪನಗೊಂಡಿತು. ಇಂದಿನ ರಾಮಕಥೆಯನ್ನು ಶ್ರೀ ಸೇರಾಜೆ ಸುಬ್ರಹ್ಮಣ್ಯ ಭಟ್, ಚಾತುರ್ಮಾಸ್ಯ ಸೇವಾ ಸಮಿತಿಯವರು ವಹಿಸಿಕೊಂಡಿದ್ದರು.

~

Facebook Comments