LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

6- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಸೀತಾಂಗೋಳಿ ಹಾಗೂ ಎಡನಾಡು ವಲಯದವರಿಂದ ಗುರುಭಿಕ್ಷಾಸೇವೆ

Author: ; Published On: ಬುಧವಾರ, ಆಗಸ್ತು 7th, 2013;

Switch to language: ಕನ್ನಡ | English | हिंदी         Shortlink:

ಪೆರಾಜೆ-ಮಾಣಿ ಮಠಃ 6.8.2013, ಮಂಗಳವಾರ

ಇಂದು ಸೀತಾಂಗೋಳಿ ಹಾಗೂ ಎಡನಾಡು ವಲಯದವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಕರಾರ್ಚಿತ ದೇವರುಗಳ ಪೂಜೆಯ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ವಲಯ ಸಭೆಯಲ್ಲಿ ಎರಡೂ ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಮುಂದಿಟ್ಟರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕ್ಯಾ. ಗಣೇಶ್ ಕಾರ್ಣಿಕ್ ಎಮ್ ಎಲ್ ಸಿ, ಶ್ರೀ ಮುರಳೀ ಕಡೆಕ್ಕಾರ್ ಉಡುಪಿ ಅಲ್ಲದೆ ಶ್ರೀಮಠದ ಪದಾಧಿಕಾರಿಗಳು ಮಹಾಸಭೆಯಲ್ಲಿ ಹಾಜರಿದ್ದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಸೇವಾ ರೂಪದ ಆಂಜನೇಯ ಹವನಗಳು, ಆಂಜನೇಯನಿಗೆ ಸೀಯಾಳಾಭಿಷೇಕ, ವೇದ ಪಾರಾಯಣ ಹವನ, ವೇದ ಪಾರಾಯಣ ಸಪ್ತಾಹ ಸಮಾಪ್ತಿ, ಗೋಪೂಜೆ, ಗೋತುಲಾಭಾರ, ಶ್ರೀರಾಮತಾರಕ ಯಜ್ಞ, ಶ್ರೀರಾಮಪೂಜೆ ನಡೆಯಿತು.

~

ಸಾಂಸ್ಕೃತಿಕ ಕಾರ್ಯಕ್ರಮಃ

ಕು. ಸನಿಹಾ ಕುಪ್ಪೆಟ್ಟಿ ಭರತನಾಟ್ಯ ಕಾರ್ಯಕ್ರಮವನ್ನು ನೀಡಿದರು. ನಂತರ ಶ್ರೀಮತಿ ದಿವ್ಯಾ ಮಹೇಶ್ ರಿಂದ ಕರ್ನಾಟಕ ಶಾಸ್ತ್ರೀಯ ಗಾಯನ ನಡೆಯಿತು. ಗಮಕ ಕಾವ್ಯ ವಾಚನದಲ್ಲಿ ಗಮಕಿಯಾಗಿ ಶ್ರೀ ಗಣಪತಿ ಪದ್ಯಾಣ ಹಾಗೂ ವ್ಯಾಖ್ಯಾನದಲ್ಲಿ ಶ್ರೀ ಮುಳಿಯ ಶಂಕರ ಭಟ್ ಕಾರ್ಯಕ್ರಮ ನೀಡಿದರು.

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

Leave a Reply

Highslide for Wordpress Plugin