LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

7- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಸುಳ್ಯ, ಗುತ್ತಿಗಾರು ಹಾಗೂ ಕೊಡಗು ವಲಯದವರಿಂದ ಗುರುಭಿಕ್ಷಾಸೇವೆ

Author: ; Published On: ಬುಧವಾರ, ಆಗಸ್ತು 7th, 2013;

Switch to language: ಕನ್ನಡ | English | हिंदी         Shortlink:

ಪೆರಾಜೆ-ಮಾಣಿ ಮಠಃ7.8.2013, ಬುಧವಾರ

ಇಂದು ಸುಳ್ಯ, ಗುತ್ತಿಗಾರು ಹಾಗೂ ಕೊಡಗು ವಲಯದವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳು ಶ್ರೀರಾಮಾದಿ ದೇವರುಗಳಿಗೆ ಪೂಜೆ ಸಲ್ಲಿಸಿದ ನಂತರ ಮಾತೆಯರು ಕುಂಕುಮಾರ್ಚನೆ ನಡೆಸಿದರು. ವಲಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಡಾ. ಎಸ್ ಎಮ್ ಶರ್ಮಾ ಸಂಪತ್ತಿಲ, ಶ್ರೀ ಪ್ರದೀಪ ದ ನಾಯಕ್ (ಜಿ.ಪಂ. ಸದಸ್ಯರು ಗೋಕರ್ಣ, ಧರ್ಮದರ್ಶಿಗಳು ಶ್ರೀ ಕೆಂಗಳ ಪರಮೇಶ್ವರೀ ದೇವಸ್ಥಾನ ಆಡಳಿತ ಮಂಡಳಿ, ದೇವರಬಾವಿ, ತೊರ್ಕೆ), ಶ್ರೀ ಜಿ ಎಸ್ ಮೂಡಂಬಡಿತ್ತಾಯ ಬೆಂಗಳೂರು, ಶ್ರೀ ಹರೀಶ್ ವಿಟ್ಲ (ಅಧ್ಯಕ್ಷ, ಯುವಸೇನಾ) ಶ್ರೀಗುರುಗಳ ಆಶೀರ್ವಾದ ಪಡೆದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ ಹಾಗೂ ನವಗ್ರಹ ಶಾಂತಿಪೂರ್ವಕ ಆಂಜನೇಯ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ, ಆಶ್ಲೇಷಾ ಬಲಿ, ಗೋಪೂಜೆ, ಗೋತುಲಾಭಾರ, ಶ್ರೀರಾಮತಾರಕ ಯಜ್ಞಗಳು ನಡೆದವು.

~

ಸಾಂಸ್ಕೃತಿಕ ಕಾರ್ಯಕ್ರಮಃ

ಶ್ರೀ ಸುಬ್ರಹ್ಮಣ್ಯ ಪ್ರಸಾದ ಮಾಣಿ ಯವರಿಂದ ಯೋಗಾಸನ ಪ್ರಾತ್ಯಕ್ಷಿಕೆ ನಡೆಯಿತು.

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~*~

1 Response to 7- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಸುಳ್ಯ, ಗುತ್ತಿಗಾರು ಹಾಗೂ ಕೊಡಗು ವಲಯದವರಿಂದ ಗುರುಭಿಕ್ಷಾಸೇವೆ

  1. DATTU, DOMBIVLI

    HARERAMA,

    MANNY MANNY THANKS FOR GIVING THE PHOTOS OF EVERY DAYS FUNCTION.

    DATTU, DMBVLI

    [Reply]

Leave a Reply

Highslide for Wordpress Plugin