ಪೆರಾಜೆ-ಮಾಣಿ ಮಠಃ7.9.2013, ಶನಿವಾರ

ಇಂದು ಶ್ರೀ ಅರುಣ ಹೆಗಡೆ ದಾವಣಗೆರೆಯವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳಿಂದ ಶ್ರೀರಾಮಾದಿ ದೇವರುಗಳ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ನಳಿನ್ ಕುಮಾರ್ ಕಟೀಲ್, ಶ್ರೀಮತಿ ಮಲ್ಲಿಕಾ ಪ್ರಸಾದ್, ಶ್ರೀ ಗೋಪಾಲಕೃಷ್ಣ ಹೇರಳೆ, ಶ್ರೀ ಸಾಜ ರಾಧಾಕೃಷ್ಣ ಆಳ್ವ, ಶ್ರೀಕ್ಷೇತ್ರ ಒಡಿಯೂರಿನ ಮಾತಾನಂದಮಯಿ,  ರಾಮಕೃಷ್ಣ  ಮಿಶನ್  ನ  ಯತಿಗಳಾದ  ಶ್ರೀ ವಿವೇಕಾನಂದಜೀ,  ಶ್ರೀ  ಆರ್  ಎಸ್  ಅಗರ್  ವಾಲ್,      ಶ್ರೀಮತಿ ಉಶಾ ಅಗರ್ ವಾಲ್,  ಶ್ರೀ ಸೋನಿಕಾ ಶ್ರೀಗುರುಗಳಿಂದ ಆಶೀರ್ವಾದ ಪಡೆದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ ಆಂಜನೇಯ ಹವನಗಳು(೩), ಮಹಾಗಣಪತಿ ಹವನ ನವಗ್ರಹ ಶಾಂತಿ ಕುಜಶಾಂತಿ ಮೃತ್ಯುಂಜಯ ಹವನ, ಮಹಾಗಣಪತಿ ನವಗ್ರಹ ಶಾಂತಿ ಪೂರ್ವಕ ಕುಜರಾಹು ಸಂಧಿಶಾಂತಿ, ತಿಲಾಹೋಮ ಪೂರ್ವಕ ನಾರಾಯಣಬಲಿ, ಪಂಚಗಮ್ಯ ಹವನ, ರಾಮಾಯಣ ಪಾರಾಯಣ, ಗೋಪೂಜೆ, ಶ್ರೀರಾಮಪೂಜೆ, ಶ್ರೀರಾಮತಾರಕ ಯಜ್ಞ ನಡೆದವು.

ಪಾದಪೂಜೆಃ ಎನ್ ಕೆ ಈಶ್ವರ ಭಟ್ ಕನ್ಯಾನ, ಡಾ. ಎ ಆರ್ ರಾಜಾರಾಮ ಮಡಿಕೇರಿ, ಶ್ರೀ ಎಮ್ ಸದಾಶಿವ ಕಲ್ಮಡ್ಕ, ಶ್ರೀ ಸುಬ್ರಹ್ಮಣ್ಯ ಭಟ್ ಕಾರಡ್ಕ ಕಾಸರಗೋಡು, ಶ್ರೀ ಗೋಪಾಲಕೃಷ್ಣ ಭಟ್ ನೆಟ್ಟಾರು.

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥೆಃ

ರಾಮಕಥೆಯ ಅಂತಿಮ ಚರಣದ ಅಂತಿಮ ದಿನದ ರಾಮಕಥೆಗೆ ಶ್ರೀಗುರುಗಳು ಶ್ರೀರಾಮನಿಗೆ ಹನುಮನಿಗೆ ಪುಷ್ಪಾರ್ಚನೆ ನಡೆಸಿ ಆರಂಭಿಸಿದರು. ರಾವಣನ ಅರಮನೆಯಲ್ಲಿ ಕಂಡುದು ಸೀತಯಲ್ಲವೆಂದು ತಿಳಿದಾಗ ಹನುಮ ಯೋಚನೆಗೊಳಗಾಗುತ್ತಾನೆ. ಜೀವನದಲ್ಲಿ ಬಂದುದನ್ನು  ಸ್ವೀಕರಿಸಬೇಕು  ಎಂದು  ಕಥೆಯನ್ನು   ಆರಂಭಿಸಿದ  ಶ್ರೀಗಳು  ಹನುಮನೂ  ಆ  ಸಂದರ್ಭದಲ್ಲಿ  ಬಂದ  ಯೋಚನೆಯನ್ನು  ಸ್ವೀಕರಿಸಿ,  ಸೀತೆಯ  ಇರುವಿಕೆಯ  ಜಾಗವನ್ನು ಆಲೋಚಿಸಿದ.  ಯಾವ ಗಾಳಿಯೋ ಸೋಕಿ ಹನುಮನಿಗೆ ಸೀತೆಯ ಇರವನ್ನು ನೆನಪಿಸಿತು. ಅವನ ಮನಸ್ಸು ಅಶೋಕವನವನ್ನು ನೆನಪಿಸಿತು. ಅಶೋಕಾವನಕ್ಕೆ ಹೋದ ಹನುಮ ಅದರ ಚೆಲುವನ್ನು ನೋಡಿದ. ನಂತರ ಅವನ ಕಣ್ಣಿಗೆ ಬಿದ್ದವರು ಬಗೆ ಬಗೆಯ ರೂಪದ ರಕ್ಕಸಿಯರು!ಪ್ರಕೃತಿಯನ್ನು ನೋಡುವ ಮೊದಲು ಹನುಮ ವಿಕೃತಿಗಳನ್ನು ಕಂಡ. ಈ ವಿಕೃತಿಗಳ ನಡುವೆ ಸೀತೆಯನ್ನು ಕಂಡ ಹನುಮನಿಗೆ ತನ್ನ ಅಮ್ಮನಾದ ಅಂಜನೆಯನ್ನೇ ಕಂಡಂತಾಯಿತು. ರಾವಣನನ್ನು ಕಾಣುವ ಸಲುವಾಗಿ ಹನುಮ ಅಶೋಕವನವನ್ನು ಹಾಳುಗೈದು ರಾವಣನ ಆಸ್ಥಾನ ತಲುಪುತ್ತಾನೆ. ಅಲ್ಲಿ ಹನುಮನ ಬಾಲಕ್ಕೆ ಬಟ್ಟೆಗಳನ್ನು ಸುತ್ತಿ ಬೆಂಕಿ ಕೊಟ್ಟು ಬಿಟ್ಟಾಗ ಹನುಮ ರಾವಣನ ಲಂಕೆಯನ್ನು ಸುಡುತ್ತಾನೆ. ತನ್ನ ತಾಯಿಯಿರುವ ಅಶೋಕವನವನ್ನು ಬಿಟ್ಟು ಬಾಕಿ ಉಳಿದ ಜಾಗವನ್ನು ಉಳಿಸಿಕೊಡುವಂತೆ ಅಗ್ನಿಯನ್ನು ಬೇಡಿಕೊಳ್ಳುತ್ತಾನೆ ಈ ವ್ಯಾಖ್ಯಾನದೊಂದಿಗೆ ಶ್ರೀಗುರುಗಳು ಅಂತ್ಯಹಾಡುವಾಗ ಇಪ್ಪತ್ತೊಂದು ದಿನದ ರಾಮಕಥೆಗೆ ಅಂತಿಮದಿನವಾದ ದಿನ ಇಂದು ಮಾಣಿಮಠದಲ್ಲಿ ಜನಸಾಗರವೇ ಸೇರಿತ್ತು! ಶ್ರೀಗುರುಗಳ ಹನುಮನ ಈ ವಿಜಯ ಯಾತ್ರೆಯನ್ನು ವಿಜಯ ಚಾತುರ್ಮಾಸ್ಯದ ಈ ಸುಸಂದರ್ಭದಲ್ಲಿ ವಿವರಿಸಿದರು. ಕಲಾವಿದರು ರೂಪಕದಲ್ಲಿ ಲಂಕಾದಹನವನ್ನು ಪ್ರಸ್ತುತ ಪಡಿಸಿದರು. ಇಡೀ ಸಭೆಗೆ ಪುಷ್ಪವೃಷ್ಟಿಯ ನಡುವೆ ಜೈ ಜೈ ರಾಮಕಥಾದೊಂದಿಗೆ ಈ ಚಾತುರ್ಮಾಸ್ಯದ ರಾಮಕಥೆಯ ಪೂರ್ಣವಿರಾಮವಾಯಿತು. ಇಂದಿನ ರಾಮಕಥೆಯ ಪ್ರಾಯೋಜಕರು ಶ್ರೀ ನಳಿನ್ ಕುಮಾರ್ ಕಟೀಲ್ (ಎಮ್ ಪಿ ಮಂಗಳೂರು), ಶ್ರೀ ಪಡೀಲು ಮಹಾಬಲೇಶ್ವರ ಭಟ್ಟ, ಶ್ರೀ ಎಡಕ್ಕಾನ ಶ್ಯಾಮ ಭಟ್. ಗೌರವ ಪ್ರಾಯೋಜಕರು ಶ್ರೀ ನಿತಿನ್ ಪಟೇಲ್ ಮತ್ತು ಶ್ರೀ ಬಾವಿನ್ ಕುಮಾರ್ ಸೌಜಾನ್. ಸಹಪ್ರಾಯೋಜಕರು ಶ್ರೀ ಶಿವರಾಮ ಚಂದ್ರ ಶಿವಾಲ ಕೊಲ್ಲಮೊಗ್ರ, ಶ್ರೀ ಯೋಗೀಶ್ ಪೂಜಾರಿ ಮೊಗ್ರು, ಶ್ರೀ ಗೋಪಾಲಕೃಷ್ಣ ಭಟ್ಟ ಕಾರ್ಮಾರ್, ಶ್ರೀ ಬೋನಂತಾಯ ಶಿವಶಂಕರ ಭಟ್ಟ ಪುತ್ತೂರು.

~

Facebook Comments