19 ಜುಲೈ 2015 :
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಮುಳ್ಳೇರ್ಯ ಹವ್ಯಕ ಮಂಡಲದ ಪೆರಡಾಲ ವಲಯದ ವತಿಯಿಂದ ಕುಮಾರಮಂಗಲದ ಬಳಿ ಇರುವ ಮಧುರಕಾನನ ಕುಟುಂಬದವರು ಶ್ರೀ ಸಂಸ್ಥಾನಕ್ಕೆ ಸಮರ್ಪಣೆ ಮಾಡಿದ ಸ್ಥಳದಲ್ಲಿ ಅರ್ಘ್ಯ ಸೇವಾ ಯಜ್ಞವು ಜರಗಿತು.
ಬಾಲ ಮಧುರಕಾನನ ಅವರ ನಿವಾಸದಲ್ಲಿ ಜರಗಿದ ಸಭೆಯು ಶಂಖನಾದ ಗುರುವಂದನೆಯೊಂದಿಗೆ ಪ್ರಾರಂಭವಾಯಿತು. ಸಭೆಯಲ್ಲಿ ಶ್ರೀ ಗುರುಗಳ ಅರ್ಘ್ಯ ಸಂದೇಶವನ್ನು ಪ್ರಸಾರಮಾಡಲಾಯಿತು. ಬಳಿಕ ತೀರ್ಮಾನಿಸಿದ ಸ್ಥಳದಲ್ಲಿ ಪ್ರಕೃತಿದತ್ತ ಸಸ್ಯಸಂಕುಲವನ್ನು ಉಳಿಸಿ ಕಾಡುಗಿಡಗಳನ್ನು ಕಡಿದು ತೆರವು ಗೊಳಿಸಲಾಯಿತು.
ಸ್ಥಳದಲ್ಲಿರುವ ವಿರಳ ಮತ್ತು ವಿಶೇಷ ಸಸ್ಯಗಳಾದ ಅಗ್ನಿಮಂಥ, ಶತಾವರೀ, ಕಿರುತೇಕ್ ( ಬಾರಂಗಿ ) ಮೊದಲಾದ ಔಷಧೀಯ ಸಸ್ಯಗಳನ್ನು ಪರಿಚಯಿಸಿ ಅವನ್ನು ಸಂರಕ್ಷಣೆ ಮಾಡಿ ಪೋಷಿಸಲು ತೀರ್ಮಾನಿಸಲಾಯಿತು. ಪ್ರಸಿದ್ಧ ನಾಟೀ ವೈದ್ಯ ಶ್ರೀ ವೆಂಕಟ್ರಾಮ ದೈತೋಟ ಮತ್ತು ಡಾ | ಶಿವಕುಮಾರ ಅಡ್ಕ ಇವರನ್ನು ಸಲಹಾಗಾರರಾಗಿ ಆಯ್ಕೆಮಾಡಲಾಯಿತು.
ಶ್ರೀ ಬಾಲಮಧುರಕಾನನ, ಗಣೇಶ ಪಟ್ಟಾಜೆ, ಮುರಳಿ ಪಟ್ಟಾಜೆ, ವಿಷ್ಣು ಭಟ್, ಕೃಷ್ಣ ಭಟ್ ಮಡಿಪ್ಪು, ಸಾವಿತ್ರಿ ಮಧುರಕಾನನ ಉಪಸ್ಥಿತರಿದ್ದರು. ಮಂಡಲ ಪ್ರಸಾರ ಪ್ರಧಾನ ಗೋವಿಂದಬಳ್ಳಮೂಲೆ ಅರ್ಘ್ಯಸೇವಾಯಜ್ಞ ಕಾರ್ಯಕ್ರಮದ ಕುರಿತು ಮಾಹಿತಿಗಳನ್ನು ವಿವರಿಸಿದರು.

ಮುಳ್ಳೇರ್ಯ ಹವ್ಯಕ ಮಂಡಲ ವ್ಯಾಪ್ತಿಯ ಸರ್ವ ವಲಯಗಳ ನೇತೃತ್ವದಲ್ಲಿ ಅಮೃತಧಾರಾ ಗೋಶಾಲೆ ಪೆರ್ಲ, ಶ್ರೀ ಭಾರತೀ ವಿದ್ಯಾಪೀಠ ಮುಜಂಗಾವು, ಸ್ವಾಸ್ಥ್ಯ ಮಂದಿರ ಮುಜಂಗಾವು, ಶ್ರೀ ಭಾರತೀ ವಿದ್ಯಾಪೀಠ ಬದಿಯಡ್ಕ, ಶ್ರೀರಾಮಧಾಮ ಪಂಜಿಕ್ಕಲ್ಲು, ಧರ್ಮಾರಣ್ಯ ಸುಳ್ಯ – ಗಳಲ್ಲಿ ಅರ್ಘ್ಯ ಸೇವಾಯಜ್ನವು ಯಶಸ್ವಿಯಾಗಿ ಜರಗಿತು. ಮಂಡಲ ಸೇವಾ ಸಂಚಾಲಕರಾದ ಪಳ್ಳತ್ತಡ್ಕ ಚಂದ್ರಶೇಖರ ಭಟ್ ಕಾರ್ಯಕ್ರಮ ಸಂಯೋಜನೆ ಮಾಡಿದರು.
ಘೋರ ಮಳೆಯನ್ನೂ ಲೆಕ್ಕಿಸದೆ ಶ್ರೀ ಸಂಸ್ಥಾನದ ಭಕ್ತವೃಂದವು ಶ್ರದ್ಧಾ ಭಕ್ತಿಯಿಂದ ಉತ್ಸಾಹಭರಿತರಾಗಿ ನಿರ್ವಹಿಸಿದ ಕೆಲಸವು ಪ್ರಶಂಸೆಗೆ ಅರ್ಹವಾಯಿತು.

Arghya - Mullerya Mandala

Arghya – Mullerya Mandala

Facebook Comments