’ಅರ್ಘ್ಯ’ ಶ್ರಮಾದಾನ ಕಾರ್ಯಕ್ರಮದ ವರದಿ

’ನೀನಿತ್ತ ಬಾಳು ನಿನಗರ್ಪಿತ’ ಎಂಬ ಆಶಯದೋಂದಿಗೆ ಶ್ರೀ ರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ’ಅರ್ಘ್ಯ’ ಎಂಬ ಹೆಸರಿನೋಂದಿಗೆ ಕರೆನೀಡಿದ್ದ ಶ್ರಮಾದಾನ ಸ್ವಚ್ಛತಾ ಆಂದೋಲನಕ್ಕೆ ಗೋಕರ್ಣಮಂಡಲಾದ್ಯಂತ ನೂರಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಇದಕ್ಕು ಮೋದಲು ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು, ಭಗವಂತ ನಮಗೆ ಕೊಟ್ಟ ಶಕ್ತಿಯನ್ನು  ಶ್ರಮಾದಾನದ ಮುಖಾಂತರ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಭಗವಂತನಿಗೆ ’ಅರ್ಘ್ಯ’ವಾಗಿ ಅರ್ಪಿಸೋಣ, ವರ್ಷದಲ್ಲಿ ಕೆಲದಿನವಾದರು ಸ್ವಾರ್ಥವನ್ನು ಮರೆತು ಸಮಾಜಮುಖಿಯಾದ ಕಾರ್ಯದಮೂಲಕ ಸಾರ್ಥಕ ದಿನವಾಗಿ ಆಚರಿಸಿರಿ ಎಂದು ಎಲ್ಲಾ ಸೇವಾಬಿಂದುಗಳಿಗೆ ಸಂದೇಶವನ್ನಿತ್ತರು.

ಶ್ರೀಮಠದ ಸೇವಾವಾಹಿನಿಯ ನೇತೃತ್ವದಲ್ಲಿ, ಇಂದು ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಶ್ರೀಮಠದ ಎಲ್ಲಾ ಶಾಖಾ ಮಠಗಳು, ದೇವಾಲಯಗಳು, ಗೋಶಾಲೆಗಳು ಹಾಗು ಇನ್ನಿತರ ಎಲ್ಲಾ ಅಂಗಸಂಸ್ಥೆಗಳಲ್ಲಿ ಸಾವಿರಾರು ಕಾರ್ಯಕರ್ತರು ಶ್ರಮಾದಾನದಲ್ಲಿ ಭಾಗವಹಿಸಿದರು. ಕರ್ನಾಟಕದಲ್ಲಷ್ಟೇ ಅಲ್ಲದೆ ಮುಂಬೈ ಸಮೀಪದ ಕೋಲ್ಹಾಡದ ಅಮೃತಧಾರಾ ಗೋ ಶಾಲೆಯ ಪರಿಸರದಲ್ಲೂ ಹೆಚ್ಚಿನ ಕಾರ್ಯಕರ್ತರು ಶ್ರಮಾದಾನವನ್ನು ಮಾಡಿದರು. ಶ್ರೀಗಳ ಕರೆಗೆ ಒಗುಟ್ಟು ಪರಿಸರ ಸ್ವಚ್ಚತಾ ಕಾರ್ಯ, ವೃಕ್ಷಾರೋಹಣ ಮುಂತಾದ ಸಮಾಜಮುಖಿಯಾದ ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗು ಯುವಜನತೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಷೇಶವಾಗಿತ್ತು.

 

 

ವಿವಧ ಸ್ಥಳಗಳಲ್ಲಿ ನೆಡೆದ ಶ್ರಮಾದಾನದ ಕೆಲವು ಚಿತ್ರಗಳು:

 

ಸಾಗರದ ಶ್ರೀ ರಾಘವೇಶ್ವರ ಸಭಾಭವನದ ಪರಿಸರದಲ್ಲಿ ಸ್ವಚ್ಚತಾ ಕಾರ್ಯ

ಸಾಗರದ ಶ್ರೀ ರಾಘವೇಶ್ವರ ಸಭಾಭವನದ ಪರಿಸರದಲ್ಲಿ ಸ್ವಚ್ಚತಾ ಕಾರ್ಯ

ಸಾಗರದ ಶ್ರೀ ರಾಘವೇಶ್ವರ ಸಭಾಭವನದ ಸಮೀಪ ವೃಕ್ಷಾರೋಹಣ

ಸಾಗರದ ಶ್ರೀ ರಾಘವೇಶ್ವರ ಸಭಾಭವನದ ಸಮೀಪ ವೃಕ್ಷಾರೋಹಣ

ಮಾಣಿಮಠದಲ್ಲಿ ಸೇವಾನಿರತ ಮಾತೆಯರು

ಮಾಣಿಮಠದಲ್ಲಿ ಸೇವಾನಿರತ ಮಾತೆಯರು

ಮಾಣಿಮಠ ಪರಿಸರದಲ್ಲಿ ಸ್ವಚ್ಚತಾ ಕಾರ್ಯ

ಮಾಣಿಮಠ ಪರಿಸರದಲ್ಲಿ ಸ್ವಚ್ಚತಾ ಕಾರ್ಯ

ಗಿರಿನಗರದ ಶ್ರೀರಾಮಾಶ್ರಮ

ಗಿರಿನಗರದ ಶ್ರೀರಾಮಾಶ್ರಮ

ಮ್ಂಗಳೂರಿನ ಮಾಣಿಮಠ

ಮ್ಂಗಳೂರಿನ ಮಾಣಿಮಠ

ಕಾಸರಗೋಡು ಸಮೀಪದ ಬಜಕೋಡ್ಲು ಗೋಶಾಲೆಯ ಪರಿಸರಲ್ಲಿ ಕಾರ್ಯಕರ್ತರು

ಕಾಸರಗೋಡು ಸಮೀಪದ ಬಜಕೋಡ್ಲು ಗೋಶಾಲೆಯ ಪರಿಸರಲ್ಲಿ ಕಾರ್ಯಕರ್ತರು

ಕೋಲ್ಹಾಡದ ಅಮೃತಧಾರಾ ಗೋ ಶಾಲೆಯಲ್ಲಿ ಶ್ರಮಾದಾನ -ವೃಕ್ಷಾರೋಹಣ

ಕೋಲ್ಹಾಡದ ಅಮೃತಧಾರಾ ಗೋ ಶಾಲೆಯಲ್ಲಿ ಶ್ರಮಾದಾನ -ವೃಕ್ಷಾರೋಹಣ

ಪ್ರಧಾನಮಠ, ಹೊಸನಗರ

ಪ್ರಧಾನಮಠ, ಹೊಸನಗರ

ಮುಂಬೈ ಸಮೀಪದ ಕೋಲ್ಹಾಡ್ ಗೋಶಾಲೆ

ಮುಂಬೈ ಸಮೀಪದ ಕೋಲ್ಹಾಡ್ ಗೋಶಾಲೆ

Facebook Comments