LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಚಾತುರ್ಮಾಸ್ಯ – 3-7-2012

Author: ; Published On: ಮಂಗಳವಾರ, ಜುಲಾಯಿ 3rd, 2012;

Switch to language: ಕನ್ನಡ | English | हिंदी         Shortlink:

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ ..3-7-2012

ನಮ್ಮ  ಸನಾತನ ಪರಂಪರೆಯಲ್ಲಿ ಗುರು ವಿಗೆ ಮಹತ್ತರವಾದ ಸ್ಥಾನ ವಿದೆ. ಗುರು ಎಂದರೆ ದೊಡ್ಡದು. ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ಬೆಳಕನ್ನು ತೋರುವವನು ಗುರು. ಶಿಷ್ಯನ ಅತ್ಮೊದ್ಧಾರ ಮಾಡುವವನು. ಅಂತಹ ಗುರು ತನ್ನ ಬಾಹ್ಯ ಸಂಚಾರವನ್ನು ನಿಲ್ಲಿಸಿ ಅಂತರಂಗದಲ್ಲಿ  ಸಂಚರಿಸುವ ದಿನಗಳೇ  ಚಾತುರ್ಮಾಸ್ಯ. ನಾಲ್ಕು ತಿಂಗಳು ಅಥವಾ ನಾಲ್ಕು ಪಕ್ಷಗಳನ್ನೂ ಒಂದೆಡೆ ಜಪ ತಪ ಸಾಧನಗಳನ್ನು ಮಾಡುವ ಪರಿಪಾಠವಿದೆ. ವ್ಯಾಸ ಪೂರ್ಣಿಮೆಯ ದಿನದಿಂದ ಭಾದ್ರಪದ ಪೂರ್ಣಿಮೆಯವರೆಗಿನ ಕಾಲ. ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳು ಬೆಂಗಳೂರು ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ನಂದನ ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿದ್ದು , ಅಧಿಕ ಮಾಸವಿರುವುದರಿಂದ ಈ ವರ್ಷ ೯೦ ದಿನಗಳ ಪರ್ಯಂತ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ರಾಮಕಥೆಗಳು ನಡೆಯಲಿದೆ.

ಈ ಸಂದರ್ಭದಲ್ಲಿ ನಲವತ್ತು ಸಾವಿರ ಶಿಷ್ಯರ ಮನೆಗಳಿಗೆ ಕೊಡಮಾಡುವ ಶಂಕರ ಭಗವತ್ಪಾದರ ಭಾವ ಚಿತ್ರವನ್ನು ಲೋಕಾರ್ಪಣೆ ಗೊಳಿಸಿದರು.

9 Responses to ಚಾತುರ್ಮಾಸ್ಯ – 3-7-2012

 1. yashoda12

  shrigurubhyonamaha gurupoornimage bappalagaddaroo photo noodidhanyatheyabhava manasinge aathu:)

  [Reply]

 2. Athrijalu

  shree gurubhyo namaha,,,,

  [Reply]

 3. Hegde_gs

  Hareram,
  please arrange to send the Photo of Shankar bhagwatpad.

  [Reply]

 4. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಶಂಕರಾಚಾರ್ಯರು ತಮ್ಮ ಭಾವಚಿತ್ರವನ್ನು ತಾವೇ ನೋಡುತ್ತಿರುವಂತೆ ಭಾಸವಾಗುವ ಆ ಭಾವಚಿತ್ರ ತುಂಬಾ ಚೆನ್ನಾಗಿದೆ.

  [Reply]

 5. Raghavendra Narayana

  ಸದ್ವಿಚಾರ ಸತ್ಸ೦ಗ ಸದ್ಗುರುಗಳ ಸತ್ಪಥದ ಆಶೀರ್ವಾದ ಶುಭಾಶೀರ್ವಾದಗಳು. ಅ೦ಗದ ಸ೦ಗದ ಸದ್ವಿನಿಯೋಗ, ಸ೦ಸಾರಸಾಗರ ದಾಟಲು ನೆನಪಿನದೋಣಿ ಅಗತ್ಯ? ಪರತತ್ತ್ವವೆ೦ಬ ಸ್ನೇಹಗಾಳಿ ಅತ್ತ ಬೀಸಿದರು ಇತ್ತ ಬೀಸಿದರು ಅತ್ತಿತ್ತ ಪರಮಾತ್ಮನೆ ಕಾ೦ಬ. ಒ೦ದೇ ಒ೦ದು ಕೈ ಅ೦ತರ, ಕೈ ಚಾಚುವ.
  ಗುರುಗಳ ವಾತ್ಸಲ್ಯ ಮಲಿನವಾಗದ ಆತ್ಮ-ಅಮೃತ-ಗ೦ಗೆ. ಹೆಕ್ಕು-ದಕ್ಕುಗಳ ಸಿಕ್ಕುಗಳೇಕೆ, ಗುರುಗಳ ವಾತ್ಸಲ್ಯ ಬಿಕ್ಕುವುದು ಎಲ್ಲರ ಹೃದಯ೦ಗಳದಲ್ಲೆ.
  .
  ತಾಯಿಹಕ್ಕಿ ತಾ ಉಕ್ಕಿ ಬಿಕ್ಕಿ ಹೆಕ್ಕಿ ತನ್ನ ಮಕ್ಕಳ ಬಾಯಿಗೆ ಬಿಕ್ಕಿದ೦ತೆ, ದಕ್ಕದೇ ಹೋಗುವುದೆ?
  .
  ಅಲ್ಲಾಡದಿರಲಿ ಹೊರನೇತ್ರ ಒಳನೋಟ ಒಳಹರಿವು ಒಳ-ಅರಿವು.
  ಸದಾ ಉರಿಯುವ ಅರಿವು, ಆಕರ್ಷಿತರಾಗೋಣ.
  ಪರಿಪೂರ್ಣಸುಖವನೆಳಸುವನು ತನ್ನೊಳಗಡೆಗೆ |
  ತಿರುಗಿಸಲಿ ತನ್ನ ದೃಷ್ಟಿಯನು ನಿರ್ಮಲದಿ೦ ||
  ನಿರತಿಶಯ ಸುಖವಲ್ಲಿ, ವಿಶ್ವಾತ್ಮವೀಕ್ಷೆಯಲಿ |
  ಪತಸತ್ತ್ವಶಾ೦ತಿಯಲಿ – ಮ೦ಕುತಿಮ್ಮ ||
  .
  ಶ್ರೀ ಗುರುಭ್ಯೋ ನಮಃ

  [Reply]

 6. Raghavendra Narayana

  Would be great if we get the recordings of daily Aashirvachana. Need blessings from Gurugalu.

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಹೌದು… ಮಾಯೆಯು ಎಲ್ಲೆಲ್ಲೋ ಸೆಳೆದೊಯ್ಯುತಿದೆ. ಎಷ್ಟು ಕೂಗಿದರೂ,ಕರೆದರೂ ಕೇಳಿಸದೆ ರಾವಣನು ಹೊತ್ತೊಯ್ದಂತಾಗಿದೆ ಮನಸಿನ ಭಾವ. ಅಶೀರ್ವಚನಗಳು ಅಗತ್ಯವಾಗಿ ಕೇಳಬೇಕೆನ್ನಿಸುತಿದೆ.

  [Reply]

 7. Raghavendra Narayana

  ಒ೦ದು ಚಾತುರ್ಮಾಸ್ಯ ಬದರಿನಾಥಲ್ಲಿ ನಡೆದರೆ ಹೇಗೆ? ಅದಕ್ಕೆ ಬೇಕಾದ ಭಾವ-ಹಣ ಈಗಿ೦ದಲೆ ಹನಿಹನಿ ಕೂಡಿಸುವ, ಬದರಿನಾರಾಯಣನಿಗೆ ನೀಡುವ, ಅವ ವ್ಯವಸ್ಥಾಪಿಸುವ.
  .
  ಶ್ರೀ ಗುರುಭ್ಯೋ ನಮಃ

  [Reply]

 8. Raghavendra Narayana

  ಭ್ರೂಮಧ್ಯದಲಿ ಮಾತ್ರ ಪರಮಾತ್ಮನ ಅಸ್ತಿತ್ತ್ವಭಾವ..?
  ಸುತ್ತಲು ಸುತ್ತದ, ತೇಲಿದ೦ತಲು ಅನಿಸದ, ಏರಿದ೦ತಲು ಅನಿಸದ, ಅಸ್ತಿತ್ತ್ವದ ತೋರಿಕೆಯ ಭಾವ.
  ರಾಗದ್ವೇಶಗಳು ಇಲ್ಲದ, ಸೋಲುಗೆಲುವುಗಳು ಸಲ್ಲದ, ವರ್ಣಿಸಲು ಏನು ಇಲ್ಲ ಎ೦ದು ತೋರಿಸುವ ಭಾವ,
  ಪ್ರೇಮ ಶಾ೦ತಿ ನೆಮ್ಮದಿ ಸಕಲ ಭಾಷಾ ಪದಗಳಿಗೂ ಮೀರಿದ, ಮೆರೆಯದ, ಮರೆಯದ..? ಎ೦ದಿಗೂ ನೆನಪೆ ಮಾಡಿಕೊಳ್ಳದ ಸ್ವನಾ೦ದ ಶಾ೦ತಿ ಭಾವದ ತೋರುಭಾವ…ಅತೀತ..
  .
  ಶ್ರೀ ಗುರುಭ್ಯೋ ನಮಃ

  [Reply]

Leave a Reply

Highslide for Wordpress Plugin