ನಕಲಿ ಅಶ್ಲೀಲ ಸಿಡಿ ಪ್ರಕರಣ ಹಿಂಪಡೆದಿದ್ದನ್ನು ಖಂಡಿಸಿ ಸಾಗರ ಉಪವಿಭಾಗಾಧಿಕಾರಿಗಳಿಗೆ ಮನವಿ

ಸಾಗರ  25/11/2015

ಶ್ರೀ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳ ತೇಜೋವಧೆಯ ಉದ್ದೇಶದಿಂದ ಕೋಟ್ಯಾಂತರ ರೂಪಾಯಿ ವೆಚ್ಚದ ಸಾಪ್ಟವೇರ್ ಬಳಸಿ ನಕಲಿ ಅಶ್ಲೀಲ ಸಿಡಿ ತಯಾರಿಸಿ, ಪೋಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಕರಣವನ್ನು ಸರ್ಕಾರ ಏಕಾಏಕಿ  ಯಾವುದೇ ಕಾರಣವನ್ನು ನೀಡದೆ ಹಿಂತೆಗೆದುಕೊಂಡಿರುವುದು ಖಂಡನೀಯ.

ಆರೋಪಿತರ ಮೇಲೆ ಆರೋಪಪಟ್ಟಿ ಸಲ್ಲಿಕೆಯಾಗಿ ನ್ಯಾಯಾಲಯದಲ್ಲಿ ವಿಚಾರಣೆ ನೆಡೆಯುತ್ತಿರುವ ಪ್ರಕರಣವನ್ನು ಹಿಂತೆಗೆದು ಕೊಂಡಿರುವುದು ಶ್ರೀಗಳ ಮೇಲೆ ದೊಡ್ಡ ಮಟ್ಟದ ಷಡ್ಯಂತ್ರ ನೆಡೆಯುತ್ತಿದೆ ಎಂಬುದಕ್ಕೆ ಒಂದು ಸ್ಪಷ್ಟವಾದ ಉದಾಹರಣೆ. ಸರ್ಕಾರ ಕೂಡಲೆ ಆದೇಶವನ್ನು ಹಿಂಪಡೆದು ನ್ಯಾಯಯುತ ತನಿಖೆ ನೆಡೆಸಲು ಅನುವುಮಾಡಿಕೊಡಬೇಕು ಎಂದು ಆಗ್ರಹಿಸಿ ಸಾಗರ ಮಂಡಲದ ಪ್ರಮುಖರ ನೇತೃತ್ವದಲ್ಲಿ ಸಾಗರ ಉಪವಿಭಾಗಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಅಹವಾಲನ್ನು ಸಲ್ಲಿಸಲಾಯಿತು.

ಸಾಗರ ಮಂಡಲದ ಅಧ್ಯಕ್ಷರಾದ ಸಿ ಎಸ್ ಗಣಪತಿ, ಕಾರ್ಯದರ್ಶಿಗಳಾದ ಮುರಳಿ, ಮುಖಂಡರಾದ ಯು ಹೆಚ್ ರಾಮಪ್ಪ , ಸ್ವಾಮಿದತ್ತ ಹಕ್ರೆ, ಮಂಡಲ – ವಲಯಗಳ ಪದಾಧಿಕಾರಿಗಳು  ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಮನವಿ

ಮನವಿ

 ಮನವಿ ಸಲ್ಲಿಕೆ

ಮನವಿ ಸಲ್ಲಿಕೆ

ಸಾಗರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಕೆ

ಸಾಗರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಕೆ

Facebook Comments Box