‘ಮಾತೃವಾತ್ಸಲ್ಯ ಅಭಿಯಾನ ಮತ್ತು ಜಯಪ್ರಕಾಶ ವಲಯೋತ್ಸವ’

ಬೆಂಗಳೂರು, ಅಕ್ಷಯನಗರ: 1.2.2015

ಬೆಂಗಳೂರಿನ ಅಕ್ಷಯನಗರದ ವಾದಿರಾಜ ಕಲಾಭವನದಲ್ಲಿ ಫೆ 1ರಂದು ಹವ್ಯಕ ಮಾಹಾಮಂಡಲದ ಕಾರ್ಯಕ್ರಮದ ಅಂಗವಾದ ‘ಮಾತೃವಾತ್ಸಲ್ಯ ಅಭಿಯಾನ ಮತ್ತು ಜಯಪ್ರಕಾಶ ವಲಯೋತ್ಸವ’ ನಡೆಯಿತು. ಕುಂಕುಮಾರ್ಚನೆ, ಏಕಾದಶ ರುದ್ರ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಂಚರತ್ನ ಕೀರ್ತನೆಗಳು ಮತ್ತು ಭದ್ರಾಚಲ ರಾಮದಾಸರ ಕೀರ್ತನೆಗಳನ್ನು ಹಾಡಲಾಯಿತು.

ಈ ಸಂದರ್ಭದಲ್ಲಿ ಆಶೀರ್ವಚನದಲ್ಲಿ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಮಾತಾಡಿ, “ಇಂದು ಜಯಪ್ರಕಾಶ ವಲಯೋತ್ಸವ. ಎಲ್ಲ ಬದುಕಿಗೆ ಅರ್ಥ ಕೊಡುವಂತ ಶಬ್ದಗಳು. ’ಜಯ’, ’ಪ್ರಕಾಶ’ ’ಉತ್ಸವ’. ಉತ್ಸವ ಎಂದರೆ ಆನಂದ. ಎಲ್ಲಿ ಆನಂದದ ಆವಿರ್ಭಾವ ಇದೆಯೋ ಅದನ್ನೇ ಉತ್ಸವ ಎಂದು ಕರೆಯುವುದು. ನೀವೆಲ್ಲ ಸಂತೋಷದಲ್ಲಿ ಇದ್ದೀರಿ. ಆನಂದದಲ್ಲಿ ಇದ್ದೀರಿ. ಒಂದೊಮ್ಮೆ ಸಂತೋಷದಲ್ಲಿ ಇಲ್ಲದಿದ್ದರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂತೋಷವಾಗಿರುತ್ತದೆ. ಎಲ್ಲರೂ ಇರುವುದು ಸಂತೋಷಕ್ಕಾಗಿ ಆನಂದಕ್ಕಾಗಿ. ಈಗ ಅನುಭವಿಸುತ್ತ ಇರುವ ಆನಂದ ಸಾತ್ವಿಕವಾದ, ತಾತ್ತ್ವಿಕವಾದ ಆನಂದ. ನಾವೀಗ ಎಲ್ಲ ಸೇರಿ ಹಾಡಿ ಸಂತೋಷಪಡುತ್ತಿದ್ದೇವೆ. ಒಂದಾಗಿ, ಹಾಡುವಂತದ್ದು, ಪೂಜೆ ಮಾಡುವಂತದ್ದು, ಗುರು ದರ್ಶನ ಮಾಡುವಂತದ್ದು, ಸಮಾಜದ ಚಿಂತೆ ಮಾಡುವಂತದ್ದು ಎಲ್ಲಾ ಸರಿಯಾದ ಕಾರ್ಯಗಳು. ಎಲ್ಲರಿಗೂ ’ಜಯ’ವಾಗಲಿ ಮತ್ತು ಬದುಕು ’ಪ್ರಕಾಶ’ಮಾನವಾಗಿಲಿ” ಎಂದು ಆಶೀರ್ವದಿಸಿದರು.

 ರಾಮಚಂದ್ರಾಪುರಮಠದ ಸಿ ಇ ಓ ಕೆ.ಜಿ ಭಟ್, ಕಾರ್ಯದರ್ಶಿ ಆಯ ಕೆಕ್ಕಾರು ರಾಮಚಂದ್ರಭಟ್, ಮಹಾಮಂಡಲದ ಕೋಶಾಧ್ಯಕ್ಷ ಜೆ. ರಾಮಚಂದ್ರ ಭಟ್, ಉಪಾಧ್ಯಕ್ಷ ಸೀತಾರಾಮ ಭಟ್, ಮಂಡಲಾಧ್ಯಕ್ಷ ದಿವಾಣ ಕೇಶವಕುಮಾರ ಉಪಸ್ಥಿತರಿದ್ದರು.

Facebook Comments Box