ಬೆಂಗಳೂರಿನಲ್ಲಿ ರಾಘವೇಶ್ವರ ಶ್ರೀ  ಮನ್ಮಥ ಚಾತುರ್ಮಾಸ್ಯ 2015 – “ಛಾತ್ರ ಚಾತುರ್ಮಾಸ್ಯ”

ಹೊಸನಗರ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮನ್ಮಥ ಸಂವತ್ಸರದ ಚಾತುರ್ಮಾಸ್ಯವು ಬೆಂಗಳೂರು ಗಿರಿನಗರದಲ್ಲಿರುವ ಶಾಖಾ ಮಠ ಶ್ರೀರಾಮಾಶ್ರಮದಲ್ಲಿ ಜು.31ರಿಂದ ಸೆ.30ರವರೆಗೆ ನಡೆಯಲಿದೆ. ಈ ವರ್ಷದ ಬಗ್ಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ರವಿವಾರ ಶ್ರೀಗಳ ಸಮ್ಮುಖದಲ್ಲಿ ಅಧಿಕೃತವಾಗಿ ಪದಾಧಿಕಾರಿಗಳನ್ನು ಘೋಷಣೆ ಮಾಡಲಾಯಿತು.

ಶ್ರೀ  ಕಾರ್ಯದರ್ಶಿ ಮೋಹನ ಭಾಸ್ಕರ ಹೆಗಡೆ ಅವರು ಮಾತನಾಡಿ, ಈ ಬಾರಿ ಶ್ರೀಗಳ 22ನೇ ಚಾತುರ್ಮಾಸ್ಯ ವ್ರತಾಚರಣೆ ನಡೆಯಲಿದ್ದುಛಾತ್ರ ಚಾತುರ್ಮಾಸ್ಯ”ವೆಂದು ಕರೆಯಲಾಗುತ್ತಿದೆ. ಈ ಚಾತುರ್ಮಾಸ್ಯದಲ್ಲಿ ಮಕ್ಕಳನ್ನು ಕೇಂದ್ರೀಕರಿಸಲಾಗುತ್ತಿದ್ದು ಅದಕ್ಕಾಗಿ ಮೂರು ಪ್ರಮುಖ ಸಮಿತಿಗಳನ್ನು ರಚಿಸಿ, ಘೋಷಿಸಲಾಗಿದೆ.

ಶ್ರೀರಾಮಚಂದ್ರಾಪುರ ಮಠದ ಶ್ರೀಗಳವರ ಚಾತುರ್ಮಾಸ್ಯವು ಒಂದೊಂದು ತತ್ವದ ಮೇಲೆ ನಡೆಯುತ್ತ ಬಂದಿರುವುದು ವಿಶೇಷವಾಗಿದೆ. ಈ ಹಿಂದೆ ಹನುಮ ಹಾಗೂ ಗುರು ತತ್ವಗಳ ಮೇಲೆ ಚಾತುರ್ಮಾಸ್ಯ ನಡೆದಿರುವುದನ್ನು ಸ್ಮರಿಸಬಹುದು.
ಸಮ್ಮುಖ ಸರ್ವಾಧಿಕಾರಿ ಟಿ.ಮಡಿಯಾಲ್ ಹಾಗೂ ಶಿಷ್ಯ ಸಮಾಜದ ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದರು.

Facebook Comments