ಬೆಂಗಳೂರು 4. ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಕಳೆದ ಭಾನುವಾರದಿಂದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ರಾಮಕಥೆ ಆರಂಭಗೊಂಡಿದ್ದು. ಮುಂದಿನ ಭಾನುವಾರದ ವರೆಗೆ ನಡೆಯಲಿದೆ. ಪ್ರವಚನ, ಗಾಯನ, ವಾದನ, ಚಿತ್ರ-ರೂಪಕ, ದೃಶ್ಯವೈಭವಗಳನ್ನೋಳಗೊಂಡ ರಾಮನ ಕಥೆ ಇದಾಗಿದ್ದು, ಮರ್ಯಾದಾಪುರುಷೋತ್ತಮ ಶ್ರೀರಾಮನ ಜೀವನ ವೃತ್ತಾಂತವನ್ನು ಶ್ರೀಗಳವರು ಭಕ್ತರಿಗೆ ಬಿತ್ತಲಿಸಲಿದ್ದಾರೆ. ಶನಿವಾರ ಹನುಮಾವತಾರ ಮತ್ತು ಭಾನುವಾರ ಶ್ರೀರಾಮನ ಜನ್ಮೋತ್ಸವದ ಸಂಭ್ರಮಾಚರಣೆ ಇದ್ದು, ವಿಶೇಷ ಕಾರ್ಯಕ್ರಮಗಳು ಮೂಡಿಬರಲಿದೆ. ರಾಮಕಥೆಯ ಕೊನೆಯಲ್ಲಿ ಜೈ ಜೈ ರಾಮಕಥಾ ಎನ್ನುವ ಹಾಡಿಗೆ ಅಬಾಲ ವೃದ್ದರ ನೃತ್ಯ ಭಕ್ತಿ ಪರವಶತೆಗೆ ಸಾಕ್ಷಿಯಾಗಲಿದೆ.

Facebook Comments