“ಸಂಕ್ರಾಂತಿ ಸಂಗಮ” ಕಾರ್ಯಕ್ರಮ – ಪುತ್ತೂರು ವಲಯ

ಪುತ್ತೂರು: 14.1.2015  ಬುಧವಾರ

ಉಪ್ಪಿನಂಗಡಿ ಮಂಡಲದ ಪುತ್ತೂರು ನಗರ ವಲಯದಿಂದ “ಸಂಕ್ರಾಂತಿ ಸಂಗಮ”ದ ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಶ್ರೀ ಪಿ. ಉದಯಕುಮಾರ, ನೂಜಿಯವರ ಬೊಳುವಾರು ಮನೆಯಲ್ಲಿ ಜರಗಿತು.
ಪುತ್ತೂರು ವಲಯ ಅಧ್ಯಕ್ಷೆ ಶ್ರೀಮತಿ ವಿದ್ಯಾಗೌರೀ ಪತ್ತಡ್ಕರವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಕಾರ್ಯಕ್ರಮವನ್ನು ಪುತ್ತೂರಿನ ಪ್ರಸಿದ್ಧ ನ್ಯಾಯವಾದಿ ಶ್ರೀ ಜಯಾನಂದ ಸೊಂದಿಯವರು ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಮೊದಲಿಗೆ ವೇ.ಮೂ.ಕೇಶವ ಭಟ್ಟ, ಕೇಕಾಣಾಜೆ ಅವರು ಮಕರ ಸಂಕ್ರಾಂತಿಯ ಮಹತ್ವದ ಬಗ್ಗೆ ಹಾಗೂ ಅದನ್ನು ಆಚರಿಸುವ ಅಗತ್ಯವನ್ನು ಸರಳವಾಗಿ ವಿವರಿಸಿದರು. ತದನಂತರ ಅಧ್ಯಕ್ಷೆ ಶ್ರೀಮತಿ ವಿದ್ಯಾಗೌರೀ ಅವರು ಮಾತನಾಡಿ, ಪುತ್ತೂರುವಲಯದ ಸುಮಾರು ಮುನ್ನೂರು ಮನೆಗಳ ಸಂಘಟನೆಯ ಬಗ್ಗೆ ಸ್ಥೂಲ ವಿವರ ನೀಡಿ, ಪ್ರತಿ ತಿಂಗಳೂ ವಲಯ ಸಭೆ ಸಮರ್ಪಕವಾಗಿ ನಡೆಯುತ್ತಿರುವುದನ್ನು ತಿಳಿಸಿದರು. ಹಾಗೆ ತಿಂಗಳಿಗೊಮ್ಮೆ ಎಲ್ಲ ಸಮಾಜಭಾಂದವರನ್ನು ಸೇರಿಸಿ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ವಿವಿಧ ವಿಚಾರಗಳ ಸಂವಾದ ಕಾರ್ಯಕ್ರಮ ನಡೆಸಲಿರುವುದಾಗಿ ತಿಳಿಸಿ, ಇದರ ಮೊದಲ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಇನ್ನು ಮುಂದಿನ ದಿನಗಳಲ್ಲಿ ಪ್ರತಿತಿಂಗಳು ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಲು ಉದ್ದೇಶಿಸಿರುವುದಾಗಿ ತಿಳಿಸಿದರು. ಈ ವರೆಗಿನ ವಲಯದ ಚಟುವಟಿಕೆಗಳನ್ನು ಸಭೆಯ ಗಮನಕ್ಕೆ ತಂದರು. ಇದರಲ್ಲಿ ಮುಖ್ಯವಾದವು, ಯೋಗ- ಧ್ಯಾನ ಶಿಬಿರಗಳು, ಅರೋಗ್ಯ ತಪಾಸಣಾ ಶಿಬಿರ, ಗವ್ಯಚಿಕಿತ್ಸೆ, ಕೌನ್ಸಿಲಿಂಗ್. ಈ ಬಾರಿ ವಿದ್ಯಾನಿಧಿಯಿಂದ ರೂ.26,500ನ್ನು ಆರು ಅರ್ಹ ವಿದ್ಯಾರ್ಥಿಗಳಿಗೆ ನೀಡಲಾಗಿದೆ, ಅಲ್ಲದೆ ಸಹಾಯನಿಧಿಯಿಂದ ಒಬ್ಬರಿಗೆ ಅರೋಗ್ಯಕ್ಕಾಗಿ ಧನಸಹಾಯ ನೀಡಲಾಗಿದೆ ಎಂದರು. ಮುಷ್ಟಿಅಕ್ಕಿ ಸಂಗ್ರಹದಲ್ಲಿ ಬಾರಿ ಯಶಸ್ಸು ಕಂಡಿದ್ದು, ಪುತ್ತೂರಿನ ಶ್ರೀರಾಮಕೃಷ್ಣ ಆಶ್ರಮಕ್ಕೆ ಪ್ರತಿ ತಿಂಗಳು ಅಕ್ಕಿನೀಡಲಾಗುತ್ತಿದೆ, ಎಂದರು.

ನಂತರ ಶ್ರೀಮತಿ ಶರಾವತಿ ರವಿನಾರಾಯಣ ಮತ್ತು ಶ್ರೀಮತಿ ವಿದ್ಯಾಗೌರೀ ಅವರು ಬಂದ ಎಲ್ಲರಿಗೆ ಪಿಕ್ ಏಂಡ್ ಅಕ್ಟ್ (pick and act) ಕಾರ್ಯಕ್ರಮವನ್ನು ನಡೆಸಿದರು. ಮಕ್ಕಳು ಭರತನಾಟ್ಯ, ಸಂಗೀತ, ಭಕ್ತಿಗೀತೆ ಮುಂತಾದ ಪ್ರತಿಭಾ ಪ್ರದರ್ಶನ ನೀಡಿದರು. ಎಪ್ಪತ್ತು ಜನ ಹಿರಿಯರು ನಲುವತ್ತು ಜನ ಮಕ್ಕಳು ಈ ಕಾರ್ಯಕ್ರಮದಲ್ಲಿ ಆನಂದ ಅನುಭವಿಸಿದರು.

ವಲಯ ಕಾರ್ಯದರ್ಶಿ ಶ್ರೀ ಸೀತಾರಾಮ ಶಾಸ್ತ್ರಿ ಅವರು ಎಲ್ಲರನ್ನೂ ವಂದಿಸಿ, ಅಭಿನಂದಿಸಿದರು. ಶ್ರೀ ಉದಯಕುಮಾರ, ಪದ್ಯಾಣ ಬೊಳುವಾರು ಇವರ ಕುಟುಂಬದವರು ಪ್ರಾಯೋಜಿಸಿದ ಉತ್ತರ ಕರ್ನಾಟಕ ಶೈಲಿಯ ಉಪಹಾರವನ್ನು ವಿತರಿಸಲಾಯಿತು. ಮುಂದಿನ ತಿಂಗಳು 22ನೆ ಪೆಬ್ರವರಿ ಆದಿತ್ಯವಾರ ಸಂಜೆ ಐದು ಗಂಟೆ ತೆಂಕಿಲದಲ್ಲಿರುವ ಶ್ರೀ ರವಿನಾರಾಯಣ ಮತ್ತು ಶ್ರೀಮತಿ ಶರಾವತಿ ಅವರ ಗೃಹದಲ್ಲಿ ತಿಂಗಳ ಕಾರ್ಯಕ್ರಮ ನಡೆಯುಲಿರುವುದರಿಂದ ಎಲ್ಲ ಹವ್ಯಕ ಭಾಂದವರು ಭಾಗವಹಿಸಲು ಅಧ್ಯಕ್ಷೆ ಶ್ರೀಮತಿ ವಿದ್ಯಾಗೌರೀ ವಿನಂತಿಸಿದರು.

~*~

ಸಂಕ್ರಾಂತಿ ಸಂಗಮ

ಸಂಕ್ರಾಂತಿ ಸಂಗಮ

ಸಂಕ್ರಾಂತಿ ಸಂಗಮ

ಸಂಕ್ರಾಂತಿ ಸಂಗಮ

Facebook Comments