|| ಹರೇ ರಾಮ ||

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ವಿಶಿಷ್ಟ ಕಲ್ಪನೆಯ ವಿಭಿನ್ನ ಕಾರ್ಯಗಳಲ್ಲಿ ಕಲಶಪ್ರಾಯವಾದದ್ದು ಶ್ರೀಚಂದ್ರಮೌಳೀಶ್ವರ ದೇವಸ್ಥಾನ. ಶ್ರೀರಾಮಚಂದ್ರಾಪುರಮಠದಲ್ಲಿ  ನಿರ್ಮಾಣಗೊಳ್ಳುತ್ತಿರುವ ಪರಶಿವನ ಈ ಪವಿತ್ರ ದೇಗುಲ ಅನನ್ಯವಾದದ್ದು. ಪುಣ್ಯನದಿ ಶರಾವತಿಯ ತಟದಲ್ಲಿ ದಿವ್ಯ ಸರೋವರದ ನಡುವೆ ಮಹಾ ಗಣಪತಿಯೊಂದಿಗೆ  ಚಂದ್ರಮೌಳೀಶ್ವರನ ಸನ್ನಿಧಿ ಇಲ್ಲಿ ರಾರಾಜಿಸಲಿದೆ. ಭರದಿಂದ ಸಾಗಿದ ಸಹಸ್ರಮಾನದ ನಿರ್ಮಿತಿಯ ಕಾರ್ಯ ಷಡಾಧಾರ ಪ್ರತಿಷ್ಠೆಗೆ ಬಂದು ನಿಂತಿದೆ.

ಶ್ರೀ ಖರನಾಮ ಸಂವತ್ಸರದ ಆಷಾಡ ಮಾಸದ ಶುಕ್ಷಪಕ್ಷದ ದ್ವಿತೀಯ ದಿನಾಂಕ 03-07-2011 ರ ಭಾನುವಾರ ಬೆಳಗ್ಗೆ ಮಿಥುನ ಲಗ್ನ ಇಷ್ಟಾಂಶದಲ್ಲಿ ಪರಮಪೂಜ್ಯ ಶ್ರೀಶ್ರೀಗಳವರ ಅಮೃತ ಹಸ್ತದಿಂದ ಷಡಾಧಾರ ಪ್ರತಿಷ್ಟೆಯಾಗಲಿದೆ. ತದಂಗವಾದ ಗರ್ಭನ್ಯಾಸ ದಿನಾಂಕ : 03-07-2011 ರ ಭಾನುವಾರ ರಾತ್ರಿ ಮೀನ ಲಗ್ನ ಇಷ್ಟಾಂಶದಲ್ಲಿ ನೆರವೇರಲಿದೆ. ಈ ದಿವ್ಯ  ಸಂದರ್ಭದಲ್ಲಿ ತಾವು ಉಪಸ್ಥಿತರಿದ್ದು, ಗುರುದೇವತಾ ಕೃಪೆಗೆ ಪಾತ್ರರಾಗಬೇಕೆಂದು ಮತ್ತು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕೆಂದು ವಿನಂತಿಸುತ್ತೇವೆ. ಜೀವನದ ಅಪರೂಪದ ಈ ಸದವಕಾಶ ನಮಗೆ ಮತ್ತೊಮ್ಮೆ ಸಿಗದು.

ಬನ್ನಿ                 ಭಾಗವಹಿಸಿ            ಭಾಗ್ಯವಂತರಾಗಿ

Facebook Comments Box