ಮಂಗಳೂರು ಜನವರಿ 02: ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನ ಕಟ್ಟಡ ವಿಸ್ತರಣೆಯ ಶಂಕುಸ್ಥಾಪನೆಯು ಶ್ರೀ ಶ್ರೀ ರಾಘವೇಶ್ವರ ಮಹಾಸ್ವಾಮಿಗಳವರ ಕೃಪಾಶೀರ್ವಾದಗಳೊಂದಿಗೆ ವೈದಿಕ ಕಾರ್ಯಕ್ರಮಗಳ ಸಹಿತ ಇಂದು ನಡೆಯಿತು. ಶಂಕುಸ್ಥಾಪನೆಯನ್ನು ಕಾರ್ಪೋರೇಶನ್ ಬ್ಯಾಂಕಿನ ಉಪಮಹಾಪ್ರಭಂಧಕರಾದ ಶ್ರೀ ಎಂ. ನಾರಾಯಣ ಭಟ್ ಮಾಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾವು ಆದರ್ಶ ವ್ಯಕ್ತಿಗಳಾಗಿ ಎಲ್ಲಾ ವಿಚಾರಗಳಲ್ಲಿ ಮುಂದೆ ಬರಬೇಕು. ಮನಸ್ಸಿಗೆ ನಾವು ಒಳ್ಳೆಯದನ್ನು ಮಾಡಬೇಕೆಂಬ ಪ್ರೇರಣೆ ಬರಬೇಕು. ಶ್ರೀಗಳ ಸಂಕಲ್ಪ ಈಡೇರುವಲ್ಲಿ ನಾವು ಕಾರ್ಯನಿರ್ವಹಿಸಬೇಕು’ ಎಂದರು. ‘ಪಂಚಮಮ್ ಕಾರ್ಯ ಸಿದ್ದಿಃ ಎನ್ನುವಂತೆ ಐದು ಮಹಡಿಗಳ ಕಟ್ಟಡದ ವಿಸ್ತರಣೆಗೆ ಶಿಲಾನ್ಯಾಸವನ್ನು ಮಾಡಿದ್ದೇನೆ. ಯೋಚಿಸಿದ ಕೆಲಸ ನಿಗದಿಯ ಸಮಯಕ್ಕಿಂತ ಮೊದಲೇ ಆಗಲಿ ಎಂಬ ಮಹತ್ವಾಕಾಂಕ್ಷೆಯೊಂದಿಗೆ ಕಾರ್ಯಪ್ರವೃತ್ತರಾಗೋಣ.’ ಎಂದು ಕರೆ ನೀಡಿದರು.

ಸಭೆಯಲ್ಲಿ ಅಭ್ಯಾಗತರಾಗಿ ಭಾಗವಹಿಸಿದ್ದ ಕರ್ಣಾಟಕ ವಿಧಾನ ಸಭೆಯ ಸದಸ್ಯರು ಹಾಗೂ ಉಪಸಭಾಪತಿಗಳೂ ಆದ ಶ್ರೀ ಯೋಗೇಶ್ ಭಟ್ ಮಾತನಾಡುತ್ತಾ ‘ಸರಕಾರದಿಂದ ಆಗಬೇಕಾದ ಎಲ್ಲಾ ಸಹಕಾರಗಳನ್ನು ಶಾಸಕನ ನೆಲೆಯಲ್ಲಿ ಮಾಡುತ್ತೇನೆ. ಈ ಸಂಸ್ಥೆಯು ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಸನ, ನಾಯಕತ್ವ ನಿರ್ಮಾಣ, ಆಧ್ಯಾತ್ಮಿಕ ಮೌಲ್ಯಗಳನ್ನು ಕೂಡ ಅಳವಡಿಸಿಕೊಂಡು ರಾಘವೇಶ್ವರ ಶ್ರೀಗಳ ಆಶಯವನ್ನು ಈಡೇರಿಸಲಿ’ ಎಂದು  ಹಾರೈಸಿದರು. ಜೀವನಕಲೆಯನ್ನು ಚೆನ್ನಾಗಿ ನಿರ್ವವಹಿಸಲು ಅಗತ್ಯವಾದ ವಿಚಾರಗಳೋಂದಿಗೆ ವೈದಿಕನೆಲೆಯ ಭಾರತೀಯ ಶಿಕ್ಶಣ ನೀಡಬೇಕೆಂಬುದು ನನ್ನ ಆಶಯ ಈ ಬಗ್ಗೆ ಸಮಾಜ ಸಹಕಾರ ನೀಡಬೇಕೆಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವೈ. ವಿ. ಭಟ್ ಶ್ರೀಭಾರತೀ ಸಮೂಹಸಂಸ್ಥೆಗಳೆಂದರೆ ಶಿಕ್ಷಣ ಕ್ಷೇತ್ರದಲ್ಲಿ ಅನನ್ಯತೆಯ ಸಾಧನೆಗೆ ಉದ್ಯುಕ್ತವಾದ ಹೊಸದೊಂದು ಅಭಿಯಾನ. ಪರಮಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸ್ವಸ್ಥ ಸುಂದರ ಸಮಾಜ ಸಮುತ್ಥಾನದ ವಿಶ್ವಹಿತ ಚಿಂತನೆಯ ಹಿನ್ನೆಲೆ ಇದರದ್ದು. ಪರಮಪೂಜ್ಯರ ದಿಶಾನಿರ್ದೇಶನ ಮತ್ತು ದೈವಿಕ ನೇತೃತ್ವ ಸಂಸ್ಥೆಯ ವೈಶಿಷ್ಟ್ಯ. ಸಂಸ್ಥೆಯು ಶಾಲಾಪೂರ್ವಶಿಕ್ಷಣದಿಂದ ಆರಂಭಿಸಿ ಪದವಿಯವರೆಗಿನ ವಿವಿಧ ಶಿಕ್ಷಣಪ್ರಕಲ್ಪಗಳನ್ನು ಒಳಗೊಂಡಿದೆ. ರಾಜ್ಯ ಸರ್ಕಾರದ ಅನುಮತಿ ಪಡೆದ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವಶಿಕ್ಷಣ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಪದವಿ ಶಿಕ್ಷಣಗಳು ಇಲ್ಲಿ ಲಭ್ಯ. ಉದ್ಯೋಗನಿರತ ಪೋಷಕರಿಗೆ ಅನುಕೂಲವಾಗಲು ಸಂಸ್ಥೆಯು ಶಿಶುಮಂದಿರವನ್ನು ವ್ಯವಸ್ಥೆಗೊಳಿಸಿದೆ. ಮುಂದೆ ಸ್ನಾತಕೋತ್ತರ ಶಿಕ್ಷಣವನ್ನೂ ನೀಡುವಲ್ಲಿ ಚಿಂತಿಸಿಲಾಗಿದೆ. ಇದಕ್ಕೆ ಸಮಾಜಭಾಂಧವರ ಸಹಕಾರವನ್ನು ಬಯಸುತ್ತೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಸಮಿತಿಯ ಅಧ್ಯಕ್ಶರಾದ ಕೆ. ಎಸ್. ಭಟ್ ವಹಿಸಿದ್ದರು. ಮಂಗಳೂರು ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಸಂಸ್ಥೆಗೆ ಬೇಟಿಯಿತ್ತು ಶುಭ ಹಾರೈಸಿದರು. ಕಾರ್ಯಕ್ರಮದಲ್ಲ್ಲಿಶ್ರೀರಾಮಚಂದ್ರಾಪುರಮಠದ  ಆಡಳಿತ ಸಮಿತಿ ಕಾರ್ಯಾಧ್ಯಕ್ಷರಾದ ಶ್ರೀ ದಿವಾಕರ ಶಾಸ್ತ್ರಿ, ಸಮಿತಿ ಸದಸ್ಯಾರದ ಎನ್. ಜಿ. ಮೋಹನ್,  ಎಂ. ಬಿ. ಮುಳಿಯ, ಬಾಲಕೃಷ್ಣ ಭಟ್ ಕಾಕುಂಜೆ, ಗೋಪಾಲಕೃಷ್ಣ ಭಟ್, ಈಶ್ವರ ಭಟ್, ಎನ್ ಕೃಷ್ಣ ಭಟ್,  ಕರ್ಣಾಟಕ ಬ್ಯಾಂಕಿನ ಹಿರಿಯ ಪ್ರಭಂಧಕರಾದ ರವಿಂದ್ರನಾಥ್, ಶ್ರೀ ಜಿ. ಎನ್. ಭಟ್ ಉಪಸ್ತಿತರಿದ್ದರು. ಶ್ರೀ ಜಿ. ಕೆ. ಭಟ್ ಸ್ವಾಗತಿಸಿ ಶ್ರೀಮತಿ ಉಷಾದೇವಿ ವಂದನಾರ್ಪಣೆ ಮಾಡಿದ ಕಾರ್ಯಕ್ರಮವನ್ನು ಶ್ರೀಮತಿ ಮೋಹನಾ ನಿರ್ವಹಿಸಿದರು.

ಭಾವಚಿತ್ರಗಳು:

Facebook Comments