Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Tag

Hareraama

ಕಾಮದುಘಾ – ಗೋಮಹೋತ್ಸವ – Festival of Cows – A Day for GouMatha :15/01/2016

ಕಾಮದುಘಾ – ಗೋಮಹೋತ್ಸವ – Festival of Cows – A Day for GouMatha :15/01/2016 ಭಾರತೀಯ ಸಂಸ್ಕೃತಿಯ ಮೂಲಾಧಾರವಾಗಿರುವ, ದೇಶದ ಆರ್ಥಿಕ – ಸಾಮಾಜಿಕ – ಧಾರ್ಮಿಕ ಜಗತ್ತಿನ ಬೆನ್ನೆಲುಬಾದ ಭಾರತೀಯ ಗೋವಿನ ಕುರಿತಾಗಿ ಜಾಗತಿಕಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿರುವ ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ಸಮಾಜದ ಸ್ವಾಸ್ಥ್ಯಕ್ಕಾಗಿ ಹತ್ತಾರು ಸಮಾಜಮುಖೀ ಯೋಜನೆಗಳನ್ನು ಸಂಕಲ್ಪಿಸಿದವರು. ಭಾರತೀಯ… Continue Reading →

ಗುರುಶಿಷ್ಯರು ಸೂರ್ಯ ಚಂದ್ರರಂತೆ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಗೋಕರ್ಣ: ಅಮಾವಾಸ್ಯೆಯಂದು ಸೂರ್ಯಚಂದ್ರರ ಸಂಗಮವಾಗುತ್ತದೆ. ಅಂದು ಚಂದ್ರನು ಸೂರ್ಯನಿಂದ ತಾನು ಬೆಳಗಲು ಅಗತ್ಯವಾದ ಪ್ರಕಾಶವನ್ನು ಪಡೆಯುತ್ತಾನೆ. ಇಲ್ಲಿ ಸೂರ್ಯ ಪರಮಾತ್ಮನ ಸಂಕೇತವಾದರೆ ಚಂದ್ರ ಜೀವರ ಪ್ರತೀಕ. ಚಂದ್ರನನ್ನು ನಮ್ಮ ಪ್ರಾಚೀನರು ಮನಃಕಾರಕ ಎಂದೇ ಗುರುತಿಸಿದ್ದಾರೆ. ಸೂರ್ಯನೆಂದರೆ ಪೂರ್ಣಪ್ರಭೆ. ಲೋಕಕ್ಕೆ ಅಗತ್ಯವಾದ ಬಲವನ್ನು ನೀಡುವ ಶಕ್ತಿಕೇಂದ್ರ. ಜೀವ ಪರಮಾತ್ಮನ ಬಳಿ ಹೋಗಿ ಶರಣಾಗಿ ಅಲ್ಲಿಂದ ಬದುಕಿನ ಸಾಮರ್ಥ್ಯವನ್ನು… Continue Reading →

ಅಪೂರ್ವ ಸಿದ್ಧಿ ಕ್ಷೇತ್ರ ಗೋಕರ್ಣ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಗೋಕರ್ಣ: ರಾಜಾ ಭಗೀರಥ. ಪ್ರಹ್ಲಾದ ಮೊದಲಾದ ರಾಜರ್ಷಿಗಳ, ವ್ಯಾಸ ವಸಿಷ್ಠ ಮೊದಲಾದ ಮಹರ್ಷಿಗಳ ತಪೋಭೂಮಿಯಾಗಿದ್ದ ಸಿದ್ಧಿಕ್ಷೇತ್ರವಾದ ಗೋಕರ್ಣವು ಲೋಕಶಂಕರನಾದ ಶಿವನಿಗೂ ತಪಃಸ್ಥಳವಾಗಿತ್ತು. ಯುಗ, ಯುಗಗಳ ಪೂರ್ವದಲ್ಲಿ ಪರಶಿವನೂ ಸೃಷ್ಟಿಕಾರ್ಯವನ್ನುಕೈಗೊಳ್ಳಲು ತಪಸ್ಸನ್ನಾಚರಿಸಿದ ಪುಣ್ಯಭೂಮಿಯಾದ ಈ ಕ್ಷೇತ್ರ ಶ್ರೀರಾಮನ, ಆಂಜನೇಯನ ಜನನಕ್ಕೆ ಕಾರಣವಾದ ಪ್ರದೇಶವೂ ಹೌದು. ಇಂದು ಸಾರ್ವಭೌಮ ಮಹಾಬಲೇಶ್ವರನ ಆತ್ಮಲಿಂಗದಿಂದ ಭೂಷಿತವಾಗಿದ್ದರೂ ಅದಕ್ಕಿಂತ ಮೊದಲು ಇಲ್ಲಿ ಆರಾಧ್ಯನಾಗಿದ್ದವ… Continue Reading →

ಜೀವನ ನದಿಗೆ ಸೀತಾರಾಮರೇ ದಡಗಳು – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಗೋಕರ್ಣ: ಈ ನಮ್ಮ ಜೀವನ ಒಂದು ನದಿಯಂತೆ. ಅದರ ಎರಡು ದಡಗಳೇ ಸೀತಾರಾಮಚಂದ್ರರು, ಪ್ರವಾಹದಲ್ಲಿ ಕೊಚ್ಚಿಹೋಗದಂತೆ, ಮುಳುಗದಂತೆ ನಮ್ಮನ್ನು ರಕ್ಷಿಸುವವರು. ಈ ಎರಡು ದಡಗಳಲ್ಲಿ ಯಾವುದನ್ನು ಆಶ್ರಯಿಸಿದರೂ ನಾವು ಸುರಕ್ಷಿತವಾಗಿ ನಮ್ಮ ಬಾಳಿನ ನೌಕೆಯನ್ನು ಗುರಿಯತ್ತ ಸಾಗಿಸಬಹುದು ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಶ್ರೀಗಳವರು ಅಭಿಪ್ರಾಯಪಟ್ಟರು. ಇಂದು ಸಮೀಪದ ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾದ ರಾಮಕಥಾದಲ್ಲಿ… Continue Reading →

ರಾಕ್ಷಸತ್ವದ ನಾಶಕ್ಕೆ ಶ್ರೀರಾಮ ಬೇಕು – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಗೋಕರ್ಣ: ಸಾತ್ವಿಕತೆ ದೈವೀಗುಣ. ಇದು ಲೋಕೋಪಕಾರಕ. ಆದರೆ ಕಾಲದ ಮಹಿಮೆಯಿಂದಲೋ ಅಥವಾ ವ್ಯಕ್ತಿಯ ಪೂರ್ವದೋಷಗಳಿಂದಲೋ ಒಮ್ಮೊಮ್ಮೆ ಸಾತ್ವಿಕ ಕುಲದಲ್ಲಿ ಹುಟ್ಟಿದ ವ್ಯಕ್ತಿಗಳೂ ಆಸುರೀ ಸ್ವಭಾವವನ್ನು ಹೊಂದಿ ಲೋಕಕಂಟಕರಾಗಿ ಪರಿವರ್ತನೆ ಹೊಂದುವುದುಂಟು. ವಿಷ್ಣುವಿನ ಅಂತರಂಗಭಕ್ತರಾಗಿದ್ದೂ ತಮ್ಮ ಅಪರಾಧದಿಂದ ಶಾಪಗ್ರಸ್ತರಾಗಿ ಭೂಮಿಗೆ ಬಿದ್ದು ರಾವಣ, ಕುಂಭಕರ್ಣರಾಗಿ ಜನಿಸಿದ ಜಯವಿಜಯರೇ ಇದಕ್ಕೆ ಉದಾಹರಣೆ. ತಂದೆ ಪರಮತಪಸ್ವಿಯಾದ ವಿಶ್ರವಸ್. ಅಣ್ಣ ಮಾನವನಾಗಿ… Continue Reading →

ಲೋಕಹಿತಚಿಂತೆ ಸತ್ಪುರುಷರಲ್ಲಿ ಸ್ಥಾಯೀ ಭಾವ- ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಗೋಕರ್ಣ: ಪರಮಾತ್ಮನ ಅನುಗ್ರಹದಿಂದ ಈ ಲೋಕದಲ್ಲಿ ಜನಿಸಿದ ಜೀವಿ ಕೇವಲ ತನಗಾಗಿ ಬದುಕದೆ ಅನ್ಯರ ನೋವು, ನಲಿವುಗಳಲ್ಲಿಯೂ ಪಾಲ್ಗೊಳ್ಳಬೇಕು. ಸಮಾಜದ ಋಣವನ್ನು ತೀರಿಸಬೇಕು. ಮರಗಿಡಗಳೂ. ನದಿ, ಗೋವುಗಳೂ ಇಂತಹ ಆದರ್ಶಕ್ಕೆ ಮಾದರಿಯಾಗಿವೆ. ಯಾವ ನದಿಯೂ ತನ್ನ ನೀರನ್ನು ತಾನೇ ಕುಡಿಯುವುದಿಲ್ಲ. ಲೋಕದಲ್ಲಿ ಯಾವ ಮರವೂ ತನ್ನ ಹಣ್ಣನ್ನು ತಾನೇ ತಿನ್ನುವುದಿಲ್ಲ. ಇಂತಹ ಪರೋಪಕಾರಿ ಬದುಕು ನಮ್ಮದಾದರೆ ಜೀವನ… Continue Reading →

ಬಿಂದು, ಸಿಂಧುಗಳ ಸಂಗಮವೇ ವೈಕುಂಠ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಗೋಕರ್ಣ. ಜು. ೧೮: ವೈಕುಂಠ ವೆಂದರೆ ಗಮನದ ಕೊನೆ. ಅದನ್ನು ಸೇರಿದ  ಮೇಲೆ ಮುಂದೆ ಗತಿಯಿಲ್ಲ. ಸರ್ವಜೀವಿಗಳ ಶಾಶ್ವತಾನಂದದ ಚರಮಲಕ್ಷ್ಯವದು. ಜೀವರು ಸತತಸಾಧನೆಯ ಬಲದಿಂದ ತದೇಕಪ್ರವಣತೆಯಿಂದ ಪಡೆಯಬಹುದಾದ ಪರಮಪದ. ಸುಖದ ಪರ್ಯಾಯವಾದ ಆನಂದದ ಅನ್ವೇಷಣೆಯೇ ನಮ್ಮ ಬದುಕು. ನಮ್ಮ ಮೂಲನೆಲೆಯಾದ ಅದನ್ನು ಪಡೆಯುವವರೆಗೂ ನಮ್ಮ ಹುಡುಕಾಟ, ಚಡಪಡಿಕೆ ತಪ್ಪುವುದಿಲ್ಲ. ಯಾವಾಗ ಬಿಂದುರೂಪರಾದ ನಾವು ಮಹಾಸಿಂಧುಸದೃಶವಾದ ಆ… Continue Reading →

ಇಂದು – 6.12.2010

ಸೂರ್ಯೋದಯ: ೬-೪೨ ಸೂರ್ಯಾಸ್ತ: ೫-೫೮ ಪಕ್ಷ – ಶುಕ್ಲ     ತಿಥಿ-ಪಾಡ್ಯ ಪ್ರಾತಃಕಾಲ ೦೯-೦೦ ರಿಂದ ೧೦-೦೦ರವರೆಗೆ    ಶ್ರಿಕರಾರ್ಚಿತ ಪೂಜೆ ೧೨-೧೫ ರಿಂದ ಪೀಠಕ್ಕೆ.  ತೀರ್ಥ,ಮಂತ್ರಾಕ್ಷತೆ. ಭಿಕ್ಷಾಸೇವೆ- ಅಕ್ಕಲ್ ಕೊಟೇ ಮಾವುಲಿ ಮಹಾರಾಷ್ಟ್ರ ಅವರಿಂದ ೨-೦೦ ರಿಂದ ೫-೦೦ ಪ್ರವಚನ ವಿಷಯ- ವಾಲ್ಮಿಕಿ ರಾಮಾಯಣ ಸಾಯಂಕಾಲ ೭-೦೦ ರಿಂದ 0೭-೪೫ ಶ್ರಿಕರಾರ್ಚಿತ ಪೂಜೆ

ಶಿವಾನಂದ ಲಹರಿ – ಭಾಗ 3 (22-ಅಗೋಸ್ತು-2010)

ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಶಂಕರಾಚಾರ್ಯ ಕೃತ ಶಿವಾನಂದ ಲಹರೀ ಪ್ರವಚನ ಮಾಲಿಕೆ. ಭಾಗ 3: Audio: Download: Link

ಭರತ 2/2 (21-ಅಗೋಸ್ತು-2010)

21-ಅಗೋಸ್ತು-2010 ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ. ವಿಷಯ: ಭರತ (ಭಾಗ 2) Audio: Download: Link

© 2017 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin